Asianet Suvarna News Asianet Suvarna News

ರಾಹುಲ್, ಗಾಂಧಿ ಕುಟುಂಬವನ್ನು ಕಾನೂನು ವಿಶೇಷವಾಗಿ ಪರಿಗಣಿಸಬೇಕು, ಕಾಂಗ್ರೆಸ್ ನಾಯಕ ವಿವಾದ!

ಕಾನೂನು ಎಲ್ಲರಿಗೂ ಒಂದೇ. ಆದರೆ  ರಾಹುಲ್ ಗಾಂಧಿ ಹಾಗೂ ಗಾಂಧಿ ಕುಟುಂಬವನ್ನು ವಿಶೇಷವಾಗಿ ಪರಿಗಣಿಸಬೇಕು. ಸಾಮಾನ್ಯರಂತೆ ನೋಡಬಾರದು ಎಂದು ಕಾಂಗ್ರೆಸ್ ನಾಯಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Defamation Case conviction Rahul and Gandhi family should treat differently by law says Congress MP Pramod tiwary ckm
Author
First Published Mar 25, 2023, 10:10 PM IST

ನವದೆಹಲಿ(ಮಾ.25): ಭಾರತದಲ್ಲಿ ಕಾನೂನು ಎಲ್ಲರಿಗೂ ಒಂದೇ. ಕಾನೂನಿನ ಮುಂದೆ ಆಸ್ತಿ, ಅಂತಸ್ತು, ಸ್ಥಾನಮಾನ ಯಾವೂದು ಲೆಕ್ಕಕ್ಕಿಲ್ಲ. ಕಾಂಗ್ರೆಸ್ ರಾಜ್ಯಸಭಾ ಸದಸ್ಯನ ಮಾತು ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ರಾಹುಲ್ ಗಾಂಧಿ ಹಾಗೂ ಗಾಂಧಿ ಕುಟುಂಬವನ್ನು ಕಾನೂನು ವಿಶೇಷವಾಗಿ ಪರಿಗಣಿಸಬೇಕು ಎಂದು ಕಾಂಗ್ರೆಸ್ ರಾಜ್ಯಸಭಾ ಸಂಸದ ಪ್ರಮೋದ್ ತಿವಾರಿ ಹೇಳಿದ್ದಾರೆ. ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿ ಎಂದು ನ್ಯಾಯಲಯ ತೀರ್ಪು ಉಲ್ಲೇಖಿಸಿ ಮಾತನಾಡಿದ ಪ್ರಮೋದ್ ತಿವಾರಿ, ಇತರಿಗೆ ಶಿಕ್ಷೆ ವಿಧಿಸುವಂತೆ, ಇತರರನ್ನು ನೋಡುವಂತೆ ಗಾಂಧಿ ಕುಟುಂಬವನ್ನು ಕಾನೂನು ನೋಡಬಾರದು ಎಂದು ತಿವಾರಿ ಹೇಳಿದ್ದಾರೆ.

ರಾಹುಲ್ ಗಾಂಧಿ ಕುಟುಂಬ ಈ ದೇಶಕ್ಕಾಗಿ ತ್ಯಾಗ ಮಾಡಿದೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಈ ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ.ಕಾನೂನಾತ್ಮಕವಾಗಿ ಯಾವುದೇ ಆದೇಶ ಅಥವಾ ಏನೇ ನಿರ್ಧಾರ ಕೈಗೊಳ್ಳವು ಮೊದಲು ಗಾಂಧಿ ಕುಟುಂಬದ ಹಿನ್ನಲೆಯನ್ನು ಪರಿಗಣಿಸಿಬೇಕು ಎಂದು ತಿವಾರಿ ಹೇಳಿದ್ದಾರೆ. ಕಾನಾನು ಗಾಂಧಿ ಕುಟುಂಬವನ್ನು ಭಿನ್ನವಾಗಿ ಪರಿಗಣಿಸಬೇಕು. ಕುಟುಂಬದ ಬಲಿದಾನ ಪರಿಗಣಿಸಿ ರಾಹುಲ್ ಗಾಂಧಿಗೆ ಅತ್ಯಂತ ಕಡಿಮೆ ಶಿಕ್ಷೆ ವಿಧಿಸಬೇಕು. ಆದರೆ ಬಿಜೆಪಿಗೆ ಕಳ್ಳರು ಸಿಕ್ಕಿಹಾಕಿಕೊಳ್ಳುತ್ತಾರೆ ಅನ್ನೋ ಭಯ. ಹೀಗಾಗಿ ರಾಹುಲ್ ಗಾಂಧಿಯನ್ನು ಸಿಲುಕಿಸುವ ಪ್ರಯತ್ನ ಮಾಡಲಾಗಿದೆ ಎಂದಿದ್ದಾರೆ.

Rahul Gandhi Disqualified: ಹೈಕೋರ್ಟ್‌ಗೆ ಮೇಲ್ಮನವಿ ಮಾಡೋ ಮುನ್ನವೇ ಈ ಕ್ರಮ ಎಷ್ಟು ಸರಿ?

ಅದಾನಿ ಪ್ರಕರಣ ಕುರಿತು ಬಿಜೆಪಿ ಸರ್ಕಾರ ಮೌನವಾಗಿದೆ. ಅದಾನಿ ಯಾವುದೇ ಆತಂಕವಿಲ್ಲದೆ ತಿರುಗಾಡುತ್ತಿದ್ದಾರೆ. ಆದರೆ ರಾಹುಲ್ ಗಾಂಧಿಗೆ ಶಿಕ್ಷೆ, ಸಂಸದ ಅನರ್ಹಗೊಳಿಸುವ ಶಿಕ್ಷೆ ನೀಡಲಾಗಿದೆ. ಇವೆಲ್ಲ ಬೆಜೆಪಿ ಕುತಂತ್ರ ಎಂದಿದ್ದಾರೆ. ತಿವಾರಿ ಮಾತಿಗೆ ಬಿಜೆಪಿ ತಿರುಗೇಟು ನೀಡಿದೆ. ಕಾನೂನು ಎಲ್ಲರಿಗೂ ಒಂದೇ. ವಿಶಷವಾಗಿ ಪರಿಗಣಿಸಲು ರಾಹುಲ್ ಗಾಂಧಿ ದೊರೆಯೇ? ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ ಪ್ರಶ್ನಿಸಿದ್ದಾರೆ.

 

 

ರಾಹುಲ್‌ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದರ ಹಿಂದೆ ಯಾವುದೇ ರಾಜೕಯವಿಲ್ಲ. ಇದು ನ್ಯಾಯಾಲಯದ ಆದೇಶ. ದೇಶದಲ್ಲಿ ಕಾನೂನಿನ ಎದುರು ಎಲ್ಲರೂ ಸಮಾನರು ಎಂದು ಬಿಜೆಪಿ ರಾಹುಲ್‌ ಅನರ್ಹತೆಯನ್ನು ಸಮರ್ಥಿಸಿಕೊಂಡಿದೆ. ಅಲ್ಲದೇ ರಾಹುಲ್‌ ವಿರುದ್ಧ ಕಾಂಗ್ರೆಸ್‌ನೊಳಗೇ ಒಳಸಂಚು ನಡೆಯುತ್ತಿದೆ ಎಂದು ವ್ಯಂಗ್ಯವಾಡಿದೆ.

ರಾಹುಲ್ ಗಾಂಧಿ To ಲಾಲೂ ಪ್ರಸಾದ್, ಸಂಸದ, ಶಾಸಕ ಸ್ಥಾನದಿಂದ ಅನರ್ಹಗೊಂಡ ನಾಯಕರ ಲಿಸ್ಟ್!

‘ಇದು ನ್ಯಾಯಾಲಯದ ನಿರ್ಧಾರವಾಗಿದೆ. ಇದು ಯಾವುದೋ ರಾಜಕೀಯ ಪಕ್ಷ ತೆಗೆದುಕೊಂಡಿರುವ ನಿರ್ಧಾರವಲ್ಲ. ಹಾಗಾಗಿ ಕಾಂಗ್ರೆಸ್‌ ಯಾರ ವಿರುದ್ಧ ಪ್ರತಿಭಟಿಸುತ್ತಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಬೇಕು. ನಿರ್ಧಾರ ಹೊರಬೀಳುತ್ತಿದ್ದಂತೆ ಕಾಂಗ್ರೆಸ್‌ ಪ್ರತಿಭಟನೆ ಆರಂಭಿಸಿದೆ. ಈ ಮೂಲಕ ನ್ಯಾಯಾಲಯದ ವಿರುದ್ಧ ದನಿ ಎತ್ತಿದೆ. ನಮ್ಮ ವ್ಯವಸ್ಥೆ ಕಾನೂನಿನ ಆಧಾರದಲ್ಲಿ ನಡೆಯುತ್ತದೆ. ಇಲ್ಲಿ ಕಾನೂನಿನ ಎದುರು ಎಲ್ಲರೂ ಸಮಾನರು’ ಎಂದು ಕೇಂದ್ರ ಸಚಿವ ನ್ಯಾ ಎಸ್‌.ಪಿ.ಎಸ್‌.ಬಘೇಲ್‌ ಹೇಳಿದ್ದಾರೆ

Follow Us:
Download App:
  • android
  • ios