ಅಂಬಾನಿ ಮಗನ ಮದ್ವೆಯಲ್ಲಿ ಭಾಗಿಯಾಗಿ ಸೋಶಿಯಲ್ ಗ್ಯಾದರಿಂಗ್ ಅಂತ ಫೋಟೋ ಶೇರ್: ಡಿಕೆಶಿ ಫುಲ್ ಟ್ರೋಲ್
ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆ. ಶಿವಕುಮಾರ್ ತಮ್ಮ ಪತ್ನಿ ಸಮೇತರಾಗಿ ಅಂಬಾನಿ ಮಗನ ಮದ್ವೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡುವ ವೇಳೆ ಅಂಬಾನಿ ಮಗನ ಮದ್ವೆ ಎನ್ನುವ ಬದಲಾಗಿ ಸೋಶಿಯಲ್ ಗ್ಯಾದರಿಂಗ್ ಅಂತ ಹೇಳಿಕೊಳ್ಳುವ ಮೂಲಕ ನೆಟ್ಟಿಗರಿಂದ ಸಖತ್ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಮುಂಬೈ: ರಾಜ್ಯದ ನಾಯಕ, ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆ. ಶಿವಕುಮಾರ್ ತಮ್ಮ ಪತ್ನಿ ಸಮೇತರಾಗಿ ಅಂಬಾನಿ ಮಗನ ಮದ್ವೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡುವ ವೇಳೆ ಅಂಬಾನಿ ಮಗನ ಮದ್ವೆ ಎನ್ನುವ ಬದಲಾಗಿ ಸೋಶಿಯಲ್ ಗ್ಯಾದರಿಂಗ್ ಅಂತ ಹೇಳಿಕೊಳ್ಳುವ ಮೂಲಕ ನೆಟ್ಟಿಗರಿಂದ ಸಖತ್ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಅಂಬಾನಿ ಮನೆಯ ಮದ್ವೆ ಹಾಗೂ ವಿವಾಹಪೂರ್ವ ಕಾರ್ಯಕ್ರಮಗಳು ಕಳೆದೊಂದು ವರ್ಷದಿಂದ ದೇಶದಲ್ಲಿ ಸದ್ದು ಮಾಡುತ್ತಲೇ ಇದೆ. ದೇಶದೆಲ್ಲೆಡೆಯ ರಾಜಕಾರಣಿಗಳು, ಗಣ್ಯರು, ಉದ್ಯಮಿಗಳು, ಸಿನಿಮಾ ನಟರು ಕ್ರೀಡಾಪಟುಗಳು ಹಾಗೂ ವಿದೇಶದ ರಾಜಕಾರಣಿಗಳು, ಮಾಜಿ ಪ್ರಧಾನಿಗಳು, ಹಾಲಿವುಡ್ ಬಾಲಿವುಡ್ ನಟರು ಹೀಗೆ ಯಾರೊಬ್ಬರನ್ನು ಬಿಡದೇ ಅಂಬಾನಿ ಕುಟುಂಬ ಗಣ್ಯರನ್ನು ಮದುವೆಗೆ ಆಹ್ವಾನಿಸಿದೆ. ಹೀಗಿರುವಾಗ ರಾಜ್ಯದ ಕಾಂಗ್ರೆಸ್ ನಾಯಕ ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಅವರಿಗೂ ಕೂಡ ಈ ವಿವಾಹ ಸಮಾರಂಭಕ್ಕೆ ಆಹ್ವಾನ ಸಿಕ್ಕಿದೆ. ಅವರು ಹೋಗಿದ್ದಾರೆ ಕೂಡ. ಅಲ್ಲಿ ಅವರು ಯುಕೆ ಮಾಜಿ ಪ್ರಧಾನಿ ಟೋನಿ ಬ್ಲೇರ್ ಅವರನ್ನು ಭೇಟಿಯಾಗಿ ಅವರೊಂದಿಗೆ ಫೋಟೋವನ್ನು ಕೂಡ ತೆಗೆಸಿಕೊಂಡಿದ್ದಾರೆ.
ಹೋಗ್ಬಾರ್ದು ಅನ್ಕೊಂಡಿದ್ದೆ ಆದ್ರೆ... ಅಂಬಾನಿ ಪುತ್ರನ ಮದ್ವೆಗೆ ಹೊರಟ ಮಮತಾ ಬ್ಯಾನರ್ಜಿ
ಆದರೆ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡುವಾಗ ಏನನಿಸಿತೋ ಏನೋ ಅಂಬಾನಿ ಮಗನ ಮದ್ವೆಯಲ್ಲಿ ಭಾಗಿಯಾಗಿ ಯುಕೆ ಪ್ರಧಾನಿ ಟೋನಿ ಬ್ಲೇರ್ ಅವರನ್ನು ಭೇಟಿಯಾದೆ ಎಂದು ಬರೆದು ಪೋಸ್ಟ್ ಮಾಡುವ ಬದಲು ಅವರು ಮುಂಬೈನಲ್ಲಿ ನಡೆದ ಸೋಶಿಯಲ್ ಗ್ಯಾದರಿಂಗ್‌ನಲ್ಲಿ ಯುಕೆ ಮಾಜಿ ಪ್ರಧಾನಿ ಟೋನಿ ಬ್ಲೇರ್ ಹಾಗೂ ಅವರ ಪತ್ನಿ ಚೆರ್ರಿ ಬ್ಲೇರ್ ಅವರನ್ನು ಭೇಟಿಯಾದೆ ಎಂದು ಬರೆದುಕೊಂಡಿದ್ದಾರೆ.
ಆದರೆ ಇದು ಸೋಶೀಯಲ್ ಮೀಡಿಯಾ ಯುಗ ಜನ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ತೇಲಾಡುತ್ತಿರುತ್ತಾರೆ. ಸಾಮಾಜಿಕ ಬದುಕಿನಲ್ಲಿರುವ ಜನರ ಮೇಲೆ ಜನ ಹದ್ದಿನ ಕಣ್ಣಿಟ್ಟಿರುವಾಗ ಇವರು ಸೋಶಿಯಲ್ ಗ್ಯಾದರಿಂಗ್ ಎಂದು ಬರೆದರೆ ನಂಬಲು ಜನರೂ ಮೂರ್ಖರೇ. ಕೂಡಲೇ ಇದು ಸೋಶಿಯಲ್ ಗ್ಯಾದರಿಂಗ್ ಅಲ್ಲ, ಅಂಬಾನಿ ಮಗನ ಮದ್ವೆ ಎಂಬುದನ್ನು ಜನ ಗುರುತಿಸಿದ್ದಾರೆ. ಇದೇ ಕಾರಣಕ್ಕೆ ಸಖತ್ ಟ್ರೋಲ್ ಆಗ್ತಿದ್ದಾರೆ ಡಿಕೆ ಶಿವಕುಮಾರ್,
ನೆಟ್ಟಿಗರ ರಿಯಾಕ್ಷನ್ ಹೇಗಿದೆ ನೋಡಿ?
ಅಂಬಾನಿ ಅವರ ಕುಟುಂಬದ ಮದುವೆಯಿಂದ ದೂರ ಉಳಿಯುವ ಅವರ ನಿಲುವು ರಾಜಕೀಯವಾಗಿ ಸರಿ ಇರಬಹುದು. ಆದರೆ ಅಂಬಾನಿ ಮದ್ವೆಗೆ ಹಾಜರಾಗಿಯೂ ಹೀಗೆ ಪೋಸ್ಟ್ ಮಾಡಿರುವುದು ನೆಟ್ಟಿಗರು ನಗುವಂತೆ ಮಾಡಿದೆ.
ಸೋನಿಯಾ ಗಾಂಧಿ ನಿವಾಸಕ್ಕೆ ಉದ್ಯಮಿ ಮುಖೇಶ್ ಅಂಬಾನಿ ಭೇಟಿ: ಮಗನ ಮದ್ವೆಗೆ ಆಹ್ವಾನ?
ಬಹುಶಃ ಅಂಬಾನಿ ಅವರು, ತಮ್ಮ ಕಾರ್ಯಕರ್ತರ ಬಳಿ 'ಹೈಕಮಾಂಡ್ ನನ್ನನ್ನು ಮುಂಬೈಗೆ ಕರೆದಿದ್ದಾರೆ. ಮೀಟಿಂಗ್ ಮುಗಿಸಿ ಬರುತ್ತೇನೆ ಎಂದು ಹೇಳಿರಬಹುದು. ಹೈಕಮಾಂಡ್ ಲೋಕೇಷನ್ ಜಿಯೋ ವರ್ಲ್ಡ್ ಸೆಂಟರ್, ಅಂಬಾನಿ ನಿವಾಸ್ ಎಂದು ಒಬ್ಬರು ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ. ಇದು ಸೋಶಿಯಲ್ ಗ್ಯಾದರಿಂಗ್ ಅಲ್ಲ, ನೀವು ಅಂಬಾನಿ ಮಗನ ಮದ್ವೆಗೆ ಹೋಗಿದ್ದೀರಿ, ಅದನ್ನು ಇಲ್ಲಿ ಹೇಳಿಕೊಳ್ಳುವುದಕ್ಕೆ ನೀವು ಹೆದರುವುದು ಏಕೆ? ನೀವು ನಿಮ್ಮ ಬಾಸ್‌ಗೆ ಹೆದರುತ್ತಿದ್ದೀರಾ ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ನಾವು ಶಾಲೆಗೆ ಹೋಗುತ್ತಿದ್ದಾಗ ಪೋಷಕರ ಬಳಿ ಸ್ಪೆಷಲ್ ಕ್ಲಾಸ್ ಇದೆ ಎಂದು ಹೇಳಿ ಸಿನಿಮಾಗೆ ಹೋಗುತ್ತಿದ್ದೆವು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ಅಂಬಾನಿ ಮಗನ ಮದ್ವೆ ಎಂದು ಬರೆಯುವ ಬದಲು ಸೋಶಿಯಲ್ ಗ್ಯಾದರಿಂಗ್ ಎಂದು ಬರೆಯುವ ಮೂಲಕ ನೀವು ಕನ್ನಡಿಗರ ಮರ್ಯಾದೆ ತೆಗೆಯುತ್ತಿದ್ದೀರಿ? ಮೂರು ಬಾರಿ ಸೋತ ಸಾಮ್ರಾಜ್ಯಕ್ಕೆ ನೀವು ಹೆದರುವ ಮೂಲಕ ಕನ್ನಡಿಗರನ್ನು ಅವಮಾನಿಸುತ್ತಿದ್ದೀರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ದೋ ಟಕೀಲ ಶಾಟ್ ಪ್ಲೀಸ್: ಅಂಬಾನಿ ಮದ್ವೆಯಲ್ಲಿ ಟಕೀಲ ಕೇಳ್ತಿರುವ ಪಾಂಡ್ಯ ವೀಡಿಯೋ ವೈರಲ್
ಬಹುಶಃ ಡಿಕೆ ಶಿವಕುಮಾರ್ ಅವರು ಹೀಗೆ ಪೋಸ್ಟ್ ಹಾಕುವುದಕ್ಕೆ ಕಾರಣ ಏನಿರಬಹುದು ಎಂದು ಹುಡುಕಲು ಹೊರಟರೆ ತಮ್ಮ ಪಕ್ಷದ ಹೈಕಮಾಂಡ್ ಅವರು ಅಂಬಾನಿ, ಅದಾನಿ ಕುಟುಂಬಗಳನ್ನು ನಿರಂತರವಾಗಿ ದೂಷಿಸುತ್ತಾ ಬಂದಿರುವುದು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿಯನ್ನು ಬೈಯುವ ಭರದಲ್ಲಿ ಈಗಾಗಲೇ ರಾಹುಲ್ ಗಾಂಧಿ ಹಲವು ಬಾರಿಅದಾನಿ ಅಂಬಾನಿ ವಿರುದ್ಧ ಸದನವೂ ಸೇರಿದಂತೆ ಹೋದಲೆಲ್ಲಾ ಟೀಕಿಸುತ್ತಾ ಬಂದಿದ್ದಾರೆ. ಬರೀ ಕಾಂಗ್ರೆಸ್ ಮಾತ್ರವಲ್ಲದೇ ಇಂಡಿಯಾ ಕೂಟದ ಇತರ ನಾಯಕರಾದ ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಹೀಗೆ ಬಹುತೇಕರು, ದೇಶವನ್ನು ದಿವಾಳಿ ಮಾಡಿದರು, ದೇಶದ ಏರ್‌ಪೋರ್ಟ್‌ಗಳನ್ನು ಅದಾನಿ ಅಂಬಾನಿಗೆ ಮಾರಿದರು ಎಂದು ಟೀಕಿಸುತ್ತಲೇ ಬಂದಿದ್ದಾರೆ. ಆದರೆ ಮುಕೇಶ್, ನೀತಾ ಅಂಬಾನಿ ದಂಪತಿ ಮಾತ್ರ ಇದ್ಯಾವುದನ್ನು ತಲೆಗೆ ಹಾಕಿಕೊಳ್ಳದೇ ತಮ್ಮನ್ನು ಹೊಗಳಿದವರನ್ನು ತೆಗಳಿದವರನ್ನು ಬಿಡದೇ ಎಲ್ಲಾ ಗಣ್ಯರನ್ನು ತಮ್ಮ ಮನೆಯ ಕಿರಿಯ ಮಗನ ಮದುವೆಗೆ ಅತ್ಯಂತ ಗೌರವದಿಂದ ಆಹ್ವಾನಿಸಿದ್ದಾರೆ.
ಅಂದಹಾಗೆ ಅಂಬಾನಿ ಮಗನ ಮದ್ವೆಯಲ್ಲಿ ಇಂಡಿಯಾ ಕೂಟದ ನಾಯಕರಾದ, ಟಿಎಂಸಿಯ ಮಮತಾ ಬ್ಯಾನರ್ಜಿ, ಲಾಲುಪ್ರಸಾದ್ ಯಾದವ್, ಸಮಾಜವಾದಿ ಪಾರ್ಟಿಯ ಅಖಿಲೇಶ್ ಯಾದವ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.