ಕಾಂಗ್ರೆಸ್‌ಗೆ ದೇಶದ ಆತ್ಮವೇ ಅರ್ಥವಾಗಿಲ್ಲ, ಮಂದಿರ ಬಿಜೆಪಿ ಕಾರ್ಯಕ್ರಮ ಆರೋಪಕ್ಕೆ ಟ್ರಸ್ಟ್ ಸ್ಪಷ್ಟನೆ!
ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆ ಬಿಜೆಪಿ ಆರ್‌ಎಸ್ಎಸ್ ಕಾರ್ಯಕ್ರಮ, ಇದರಲ್ಲಿ ರಾಜಕೀಯ ಮಾಡಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗುತ್ತಿದೆ. ಇದೀಗ ರಾಮಜನ್ಮಭೂಮಿ ಟ್ರಸ್ಟ್ ಮೊದಲ ಬಾರಿಗೆ ಈ ಆರೋಪಗಳಿಗೆ ಉತ್ತರ ನೀಡಿದೆ. ಕಾಂಗ್ರೆಸ್‌ಗೆ ಇದ್ದಷ್ಟು ಶ್ರೀರಾಮ ಮಂದಿರ ಕಟ್ಟುವ ಅವಕಾಶ ಇನ್ಯಾವ ಪಕ್ಷಕ್ಕೂ ಇರಲಿಲ್ಲ, ಆದರೆ ಕಾಂಗ್ರೆಸ್‌ಗೆ ಈ ದೇಶದ ಆತ್ಮವೇ ಅರ್ಥವಾಗಿಲ್ಲ ಎಂದಿದೆ.
ಆಯೋಧ್ಯೆ(ಜ.17) ಭವ್ಯ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆಯ ಪೂಜಾ ವಿಧಿವಿಧಾನಗಳು ನಡೆಯುತ್ತಿದೆ. ಆಯೋಧ್ಯೆ ಸಿಂಗಾರಗೊಂಡಿದೆ. ದೇಶದೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಆದರೆ ಪ್ರಾಣಪ್ರತಿಷ್ಠೆ ಬಿಜೆಪಿ ಕಾರ್ಯಕ್ರಮ, ಪ್ರಧಾನಿ ಮೋದಿ ಶ್ರೀರಾಮ ಮಂದಿರವನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಆಹ್ವಾನ ತಿರಸ್ಕರಿಸಿದೆ. ಇತ್ತ ಕಮ್ಯೂನಿಸ್ಟ್ ಪಾರ್ಟಿ ಸೇರಿದಂತೆ ಹಲವು ವಿಪಕ್ಷಗಳ ನಿಲುವು ಇದೆ. ಪ್ರತಿ ದಿನ ರಾಮ ಮಂದಿರ ಪ್ರಾಣಪ್ರತಿಷ್ಠೆ ಬಿಜೆಪಿ ಕಾರ್ಯಕ್ರಮ ಅನ್ನೋ ಸತತ ಆರೋಪಕ್ಕೆ ಇದೀಗ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಪಷ್ಟನೆ ನೀಡಿದೆ. ಇದು ಅಸಂಖ್ಯಾತ ಹಿಂದೂಗಳು 500 ವರ್ಷಗಳಿಂದ ಕಾಯುತ್ತಿದ್ದ ಕಾರ್ಯಕ್ರಮ. ತ್ಯಾಗ ಬಲಿದಾನ, ಹೋರಾಟದ ಫಲವಾಗಿ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಈ ಹೋರಾಟದಲ್ಲಿ ಬಿಜೆಪಿ ಕೂಡ ಪಾಲ್ಗೊಂಡಿದೆ. ಇತರ ಎಲ್ಲಾ ಪಕ್ಷಕ್ಕಿಂತ ಕಾಂಗ್ರೆಸ್ ಶ್ರೀರಾಮ ಮಂದಿರವನ್ನು ಕಟ್ಟುವ ಅವಕಾಶ ಹೆಚ್ಚಿತ್ತು. ಮಂದಿರ ಕಟ್ಟಿ ಸಂಪೂರ್ಣ ಕ್ರೆಡಿಟ್ ತೆಗೆದುಕೊಳ್ಳಬಹುದಿತ್ತು. ಆದರೆ ಕಾಂಗ್ರೆಸ್‌ಗೆ ಈ ದೇಶದ ಆತ್ಮವೇ ಅರ್ಥವಾಗಿಲ್ಲ ಎಂದು ಟ್ರಸ್ಟ್ ಸದಸ್ಯ ಚಾಮೇಶ್ವರ ಚೌಪಾಲ್ ಹೇಳಿದ್ದಾರೆ.
1949ರಲ್ಲಿ ರಾಮ ಜನ್ಮಭೂಮಿಯಲ್ಲಿ ರಾಮಲಲ್ಲಾ ಮೂರ್ತಿ ಇಟ್ಟು ಪೂಜೆ ನಡೆದಿತ್ತು. ಆದರೆ ಭಾರಿ ಆಕ್ರೋಶಗೊಂಡಿದ್ದ ಪ್ರಧಾನಿ ಜವಾಹರ್ ಲಾಲ್ ನೆಹರೂ ಮೂರ್ತಿ ತೆಗೆದು ಮುಸ್ಲಿಮರ ನಮಾಜ್‌ಗೆ ಅವಕಾಶ ಮಾಡಿಕೊಡುವಂತೆ ನೆಹರೂ ಸೂಚಿಸಿದ್ದರು. ಈ ವೇಳೆ ಯಾವ ಕಾಂಗ್ರೆಸಿಗ್ಗ ಕೂಡ ನಹೆರೂ ವಿರುದ್ದ ಒಂದು ಮಾತು ಆಡಲಿಲ್ಲ. 1947ರಿಂದ 2013ರ ವರೆಗೆ ಶ್ರೀರಾಮ ಮಂದಿರ ಕಟ್ಟಲು ಕಾಂಗ್ರೆಸ್ ಸರ್ಕಾರಕ್ಕೆ ಇದ್ದಷ್ಟು ಅವಕಾಶ ಇನ್ಯಾವುದೇ ಪಕ್ಷಕ್ಕೆ ಸಿಗಲಿಲ್ಲ. ಆದರೆ ಕಾಂಗ್ರೆಸ್ ರಾಮ ಮಂದಿರ ನಿರ್ಮಾಣದ ಕುರಿತು ಒಂದು ಮಾತು ಆಡಲಿಲ್ಲ ಎಂದು ಚೌಪಾಲ್ ಹೇಳಿದ್ದಾರೆ.
ಜ.23ರಿಂದ ರಾಮ ಮಂದಿರ ಸಾರ್ವಜನಿಕರಿಗೆ ಮುಕ್ತ, ಆಯೋಧ್ಯೆಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಸುದ್ದಿಗೋಷ್ಠಿ!
1986ರಲ್ಲಿ ರಾಮ ಲಲ್ಲಾ ಮೂರ್ತಿ ಎದುರಿದ್ದ ಬಾಗಿಲು ತೆರೆದ ಕಾಂಗ್ರೆಸ್ ಮಂದಿರ ನಿರ್ಮಿಸುವ ಸಾಹಸಕ್ಕೆ ಕೈಹಾಕಲಿಲ್ಲ. ಮಹಾತ್ಮಾ ಗಾಂಧಿ ಶ್ರೀರಾಮ, ಕೃಷ್ಣ ಹಾೂ ಶಂಕರ ದೇವಸ್ಥಾನ ಮಹತ್ವ ಅರಿತಿದ್ದು. ಆದರೆ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಗೆ ಭಾರತದ ಆತ್ಮವೇ ಅರ್ಥವಾಗಿಲ್ಲ. ಈ ದೇಶದ ಆತ್ಮ ಅರ್ಥವಾಗದ ಹೊರತು ನಿಮಗೆ ಈ ದೇಶದ ಸಂಸ್ಕೃತಿ, ಪರಂಪರೆ ಅರ್ಥವಾಗಲ್ಲ. ಶ್ರೀರಾಮ, ಶ್ರೀಕೃಷ್ಣ, ಕಾಶಿ ವಿಶ್ವನಾಥ ಈ ದೇಶದ ಆತ್ಮ. ಹಿಂದೂಗಳ ಆತ್ಮವೇ ಈ ಮೂರು ದೇವಸ್ಥಾನದಲ್ಲಿದೆ.ಈ ದೇಶದ ಅಸ್ಮಿತೆ, ಸಂಸ್ಕೃತಿ ಎಲ್ಲದರ ಮೂಲ. ಆದರೆ ವಿವಾದವನ್ನೂ ಮತ್ತಷ್ಟು ಹೆಚ್ಚು ಮಾಡಿದ ಕಾಂಗ್ರೆಸ್ ಬಗೆಹರಿಸಿ ಮಂದಿರ ಕಟ್ಟುವ ಪ್ರಯತ್ನ ಮಾಡಲೇ ಇಲ್ಲ ಎಂದು ಚೌಪಾಲ್ ಹೇಳಿದ್ದಾರೆ.
ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆ, ಆಹ್ವಾನ, ಆಯೋಜನೆ, ಕಾರ್ಯಕ್ರಮ, ಪೂಜೆ ಎಲ್ಲವೂ ಟ್ರಸ್ಟ್ ನಿರ್ಧಾರ. ಶ್ರೀರಾಮ ಮಂದಿರ ನಿರ್ಮಾಣದಲ್ಲಿ ಬಿಜೆಪಿಯ ಕೂಡುಗೆಯೂ ಅಪಾರ. ಆದರೆ ಇದು ಬಿಜೆಪಿಯ ಕಾರ್ಯಕ್ರಮವಲ್ಲ. ಈ ದೇಶದ ಜನರು ಕಾಯುತ್ತಿದ್ದ ಕಾರ್ಯಕ್ರಮ ಎಂದು ಚೌಪಾಲ್ ಹೇಳಿದ್ದಾರೆ.
ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಪ್ರಧಾನಿ ಮೋದಿ 11 ದಿನ ಕಠಿಣ ವೃತ, ಜೊತೆಗೊಂದು ಸಂದೇಶ!