Asianet Suvarna News Asianet Suvarna News

ಜ.23ರಿಂದ ರಾಮ ಮಂದಿರ ಸಾರ್ವಜನಿಕರಿಗೆ ಮುಕ್ತ, ಆಯೋಧ್ಯೆಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಸುದ್ದಿಗೋಷ್ಠಿ!

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ನೀಡಿದ್ದಾರೆ. ಜನವರಿ 22ರಂದು ಪ್ರಾಣಪ್ರತಿಷ್ಠೆ ನಡೆಯಲಿದೆ. ಜನವರಿ 23ರಿಂದಲೇ ಸಾರ್ವಜನಿಕ ಪ್ರವೇಶಕ್ಕೆ ರಾಮ ಮಂದಿರ ಮುಕ್ತವಾಗಲಿದೆ ಎಂದಿದ್ದಾರೆ.
 

Ayodhya Ram Mandir open for General public Darshan from jan 23rd says Secretary champat rai ckm
Author
First Published Jan 15, 2024, 4:50 PM IST

ಆಯೋಧ್ಯೆ(ಜ.15) ಶ್ರೀರಾಮ ಮಂದಿರ ಉದ್ಘಾಟನೆ ತಯಾರಿ ಭರದಿಂದ ಸಾಗಿದೆ. ಜ.22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ ನಡೆಯಲಿದೆ. ಜನವರಿ 16ರಿಂದಲೇ ಪೂಜಾ ಕೈಂಕರ್ಯಗಳು ಆರಂಭಗೊಳ್ಳುತ್ತಿದೆ. ಜನವರಿ 21ರ ವರೆಗೆ ಪೂಜೆಗಳು ನಡಯಲಿದೆ. ಜನವರಿ 22ರಂಂದು ಪ್ರಾಣಪ್ರತಿಷ್ಠೆ ಹಾಗೂ ಉದ್ಘಾಟನೆ ನಡೆಯಲಿದೆ. ಇನ್ನು ಜನವರಿ 23ರಿಂದಲೇ ಭವ್ಯ ರಾಮ ಮಂದಿರ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.

ಜನವರಿ 22ರಂದು ಆಹ್ವಾನಿತ ಗಣ್ಯರು, ವಿವಿಧ ಕ್ಷೇತ್ರಗಳ ಸಾಧಕರು ಆಗಮಿಸುವ ಕಾರಣ ಭಾರಿ ಬಿಗಿ ಭದ್ರತೆ ನೀಡಲಾಗುತ್ತದೆ. ಸ್ಥಳವಕಾಶ, ಭದ್ರತೆ ಸೇರಿದಂತೆ ಹಲವು ಕಾರಣಗಳಿಂದ ಸರ್ವಜನಿಕರ ತಮ್ಮ ಸ್ಥಳೀಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ. ಮನೆಯಲ್ಲಿ ದೀಪ ಬೆಳಗಿ ಶ್ರೀರಾಮ ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳಿ ಎಂದು ಚಂಪತ್ ರಾಯ್ ಹೇಳಿದ್ದಾರೆ. ಜನವರಿ 23ರಿಂದಲೇ ಸಾರ್ವಜನಿಕರಿಗೆ ದೇವಸ್ಥಾನ ಮುಕ್ತವಾಗಲಿದೆ. ಹೀಗಾಗಿ ಜನವರಿ 23ರಿಂದ ಸಾರ್ವಜನಿಕರು ಶ್ರೀರಾಮನ ದರ್ಶನ ಪಡೆಯಲು ಸಾಧ್ಯವಿದೆ. ಸಾರ್ವಜನಿಕರಿಗೆ ಟ್ರಸ್ಟ್ ವತಿಯಿಂದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂದಿದ್ದಾರೆ.

ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಪ್ರಧಾನಿ ಮೋದಿ 11 ದಿನ ಕಠಿಣ ವೃತ, ಜೊತೆಗೊಂದು ಸಂದೇಶ!

ರಾಮ ಮಂದಿರ ಪ್ರಾಣಪ್ರತಿಷ್ಠೆ ಹಾಗೂ ಉದ್ಘಾಟನೆ ಕುರಿತು ಸುದ್ದಿಗೋಷ್ಠಿ ನಡೆಸಿದ ಚಂಪತ್ ರಾಯ್, ಹಲವು ಮಾಹಿತಿಗಳನ್ನು ನೀಡಿದ್ದಾರೆ.  'ಪ್ರಾಣ ಪ್ರತಿಷ್ಠಾ' ಮಾಡಲಾಗುವ ವಿಗ್ರಹವು ಸುಮಾರು 150-200 ಕೆಜಿಯಷ್ಟು ಇರಬಹುದೆಂದು ನಿರೀಕ್ಷಿಸಲಾಗಿದೆ ಎಂದಿದ್ದಾರೆ. ಜನವರಿ 18ರಂದು ವಿಗ್ರಹವನ್ನು ರಾಮ ಮಂದರದ ಗರ್ಭಗುಡಿಯಲಿ ಇರಿಸಲಾಗುತ್ತದೆ.  ರಾಮಲಲ್ಲಾ ಪ್ರಾಣಪ್ರತಿಷ್ಠೆ ನಡೆಯುವ ವೇಳೆ ಗರ್ಭ ಗುಡಿಯಲ್ಲಿ ಪ್ರಧಾನಿ ಮೋದಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ನೃತ್ಯ ಗೋಪಾಲ್ ಜಿ ಮಹರಾಜ್, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಹಾಗೂ ರಾಮಜನ್ಮಭೂಮಿ ಟ್ರಸ್ಟಿಗಳು ಇರಲಿದ್ದಾರೆ ಎಂದಿದ್ದಾರೆ.

ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಸಂತರು, ವಿವಿಧ ಕ್ಷೇತ್ರಗಳ ತಜ್ಞರು, ಪದ್ಮಪ್ರಶಸ್ತಿ ಪುರಸ್ಕೃತರನ್ನು ಆಹ್ವಾನಿಸಲಾಗಿದೆ ಎಂದಿದ್ದಾರೆ. ರಾಮ ಮಂದಿರ ಲೋಕಾರಪಣೆಗೆ ಕಾರ್ಯಗಳು ಪ್ರಗತಿಯಲ್ಲಿದೆ. ಪೂಜಾ ಕೈಂಕರ್ಯಳಿಗೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. ಈ ಐತಿಹಾಸಿಕ ಕ್ಷಣಕ್ಕಾಗಿ ಭಾರತೀಯರು ಕಾತರರಾಗಿದ್ದಾರೆ. ರಾಮ ಮಂದಿರ ಪ್ರಾಣಪ್ರತಿಷ್ಟೆ ಹಾಗೂ ಉದ್ಘಾಟನೆಯನ್ನು ಸೂಸೂತ್ರವಾಗಿ ನೆರವೇರಿಸಲು ಉತ್ತರ ಪ್ರದೇಶ ಸರ್ಕಾರದ ಜೊತೆಗೆ ಈಗಾಗಲೇ ಸಭೆ ನಡೆಸಿದ್ದೇವೆ. ಭದ್ರತೆ, ಟ್ರಾಫಿಕ್, ವ್ಯವಸ್ಥೆಗಳ ಕುರಿತು ಚರ್ಚಿಸಲಾಗಿದೆ ಎಂದು ಚಂಪತ್ ರಾಯ್ ಹೇಳಿದ್ದಾರೆ.

 

ಶ್ರೀರಾಮ ನನ್ನ ಕನಸಿನಲ್ಲಿ ಬಂದು ಜ.22ಕ್ಕೆ ಆಯೋಧ್ಯೆ ಬರಲ್ಲ ಎಂದ, ಬಿಹಾರ ಸಚಿವರ ವಿಡಿಯೋ ವೈರಲ್!
 

Follow Us:
Download App:
  • android
  • ios