ತಮಿಳುನಾಡು ಸರ್ಕಾರ ಹಾಗೂ ರಾಜ್ಯಪಾಲರು ನಡುವಿನ ಶೀತಲ ಸಮರ ಈಗ ವಿಕೋಪಕ್ಕೆ ತಿರುಗಿದೆ. ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದದೇ ತಮಿಳುನಾಡು ರಾಜ್ಯಪಾಲರು ವಿಧಾನಸಭೆ ಕಲಾಪದಿಂದ ಹೊರ ನಡೆದಿದ್ದಾರೆ. 

ಚೆನ್ನೈ: ತಮಿಳುನಾಡು ಸರ್ಕಾರ ಹಾಗೂ ರಾಜ್ಯಪಾಲರು ನಡುವಿನ ಶೀತಲ ಸಮರ ಈಗ ವಿಕೋಪಕ್ಕೆ ತಿರುಗಿದೆ. ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದದೇ ತಮಿಳುನಾಡು ರಾಜ್ಯಪಾಲರು ವಿಧಾನಸಭೆ ಕಲಾಪದಿಂದ ಹೊರ ನಡೆದಿದ್ದಾರೆ. ಈ ಹಿಂದೆ ಕೇರಳ ಗವರ್ನರ್ ಆರೀಫ್ ಅಹ್ಮದ್ ಕೂಡ ಇದೇ ರೀತಿ ಮಾಡಿದ್ದರು. ತಮಿಳುನಾಡು ವಿಧಾನಸಭೆಯ ಈ ವರ್ಷದ ಮೊದಲ ಕಲಾಪ ಇಂದು ಆರಂಭವಾಗಿದ್ದು, ಕಲಾಪಕ್ಕೆ ಬಂದ ತಮಿಳುನಾಡು ಗವರ್ನರ್ ಎಂ. ಎನ್. ರವಿ ಅವರು ರಾಜ್ಯದ ಗವರ್ನರ್ ಆಗಿ ಮಾಡಬೇಕಿದ್ದ ಸಂಪ್ರದಾಯಿಕ ಭಾಷಣವನ್ನು ಮಾಡದೇ ಸದನದಿಂದ ಹೊರ ನಡೆದಿದ್ದಾರೆ. 

Add Asianetnews Kannada as a Preferred SourcegooglePreferred

ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರ ಹಾಗೂ ತಮಿಳುನಾಡು ರಾಜ್ಯಪಾಲ ಎಂ. ಎನ್. ರವಿ ಅವರ ಮಧ್ಯೆ ಈ ಹಿಂದಿನಿಂದಲೂ ನಿರಂತರ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ನಂತರದಲ್ಲಿ ತಮಿಳುನಾಡು ರಾಜ್ಯಪಾಲರು ತಮಿಳುನಾಡು ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದರು. ಹಾಗೆಯೇ ತಮಿಳುನಾಡು ಸರ್ಕಾರವೂ ಕೂಡ ರಾಜ್ಯಪಾಲರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿತ್ತು. ಆದರೆ ಈಗ ರಾಜ್ಯಪಾಲರು ಭಾಷಣ ಓದದೇ ಸದನದಿಂದ ತೆರಳುವುದರೊಂದಿಗೆ ಈ ಸಮರ ಇನ್ನೊಂದು ಹಂತ ತಲುಪಿದೆ.

ರಾಜ್ಯಪಾಲ ರವಿ ರಾಜ್ಯದ ಶಾಂತಿಗೆ ಅಪಾಯಕಾರಿ: ರಾಷ್ಟ್ರಪತಿಗೆ ತಮಿಳುನಾಡು ಸಿಎಂ ಸ್ಟಾಲಿನ್‌ ಪತ್ರ

ರಾಜ್ಯಪಾಲರ ಭಾಷಣ ವಾಡಿಕೆಯಂತೆ ರಾಜ್ಯ ಸರ್ಕಾರದ ಕೆಲ ಯೋಜನೆಗಳು ಹಾಗೂ ಕಾರ್ಯವೈಖರಿ ಹಾಗೂ ಕಲಾಪದ ಆಜೆಂಡಾನ್ನು ಹೊಂದಿತ್ತು. ಸಂಪ್ರದಾಯದಂತೆ ತಮಿಳುನಾಡು ಸರ್ಕಾರ ಸಿದ್ಧಪಡಿಸಿದ ಈ ಭಾಷಣದ ಭಾಷಾಂತರವನ್ನು ರಾಜ್ಯಪಾಲರು ಓದಬೇಕಿತ್ತು. ನಂತರ ರಾಜ್ಯ ಸರ್ಕಾರವು ತನ್ನ ಕಾರ್ಯವನ್ನು ಪರಿಶೀಲಿಸಿದ ಮತ್ತು ಅಧಿವೇಶನದ ಕಾರ್ಯಸೂಚಿಯನ್ನು ರೂಪಿಸಿದ ಈ ಭಾಷಣದ ಅನುವಾದವನ್ನು ತಮಿಳುನಾಡು ಸ್ಪೀಕರ್ ಎಂ.ಅಪ್ಪಾವು ಅವರು ಓದಿದರು. ಆದರೆ ರಾಜ್ಯಪಾಲರು ಭಾಷಣದ ಕೊನೆಯಲ್ಲಿ ರಾಷ್ಟ್ರಗೀತೆಗೂ ಕಾಯದೆ ಗದ್ದಲದಿಂದ ಕೂಡಿದ ಸದನದಿಂದ ಸೀದಾ ಹೊರ ನಡೆದರು.

ರಾಜ್ಯಪಾಲರು ರಾಜಕೀಯ ಮಾತನಾಡಬಾರದು: ತಮಿಳುನಾಡು ಗವರ್ನರ್‌ ವಿರುದ್ಧ ಅಣ್ಣಾಮಲೈ ಕಿಡಿ

ಡಿಎಂಕೆಯ ಹಿರಿಯ ಸಚಿವ ದುರೈ ಮುರುಗನ್ ಅವರು ಸರ್ಕಾರದ ಬಗ್ಗೆ ರಾಜ್ಯಪಾಲರ ಟೀಕೆಗಳನ್ನು ದಾಖಲಿಸಬಾರದು ಎಂಬ ನಿರ್ಣಯವನ್ನು ಸದನದಲ್ಲಿ ಮಂಡಿಸಿದಾಗ ರಾಜ್ಯಪಾಲರು ಸದನದಿಂದ ಹೊರನಡೆದಿದ್ದಾರೆ.