ಎಚ್ಚರ ಎಚ್ಚರ : ಸುರಿಯುವ ಮಳೆಗೆ ಶೂ ಒಳಗೆ ಬೆಚ್ಚಗೆ ಮಲಗಿದ ನಾಗರಹಾವು

ಶೂಗಳು ಹಾವುಗಳ ಮೊದಲ ಆಯ್ಕೆ . ಹಾಗಾಗಿ ಶೂ ಧರಿಸುವವರು ಬಹಳ ಜಾಗರೂಕ ಆಗಿರಬೇಕು. ಅದರಲ್ಲೂ ಮಳೆಗಾಲದಲ್ಲಿ ಶೂ ಧರಿಸುವ ಮುನ್ನ ಅದನ್ನೊಮ್ಮೆ ಪರಿಶೀಲಿಸದೇ ಧರಿಸಿದರೆ ಪರಲೋಕ ಸೇರೋದು ಗ್ಯಾರಂಟಿ.

cobra entered into shoes video goes viral akb

ಶೂಗಳು ಹಾವುಗಳ ಮೊದಲ ಆಯ್ಕೆ . ಹಾಗಾಗಿ ಶೂ ಧರಿಸುವವರು ಬಹಳ ಜಾಗರೂಕ ಆಗಿರಬೇಕು. ಅದರಲ್ಲೂ ಮಳೆಗಾಲದಲ್ಲಿ ಶೂ ಧರಿಸುವ ಮುನ್ನ ಅದನ್ನೊಮ್ಮೆ ಪರಿಶೀಲಿಸದೇ ಧರಿಸಿದರೆ ಪರಲೋಕ ಸೇರೋದು ಗ್ಯಾರಂಟಿ. ಹಾವುಗಳು ಶೂಗಳೊಳಗೆ ಬೆಚ್ಚಗೆ ಅಡಗಿ ಕುಳಿತ ಹಲವು ಘಟನೆಗಳು ಈ ಹಿಂದೆ ನಡೆದಿವೆ. ಅದೇ ರೀತಿ ಈಗ ಹಾವೊಂದು ಶೂವೊಳಗೆ ಸೇರಿಕೊಂಡಿದ್ದು, ಮಹಿಳೆಯೊಬ್ಬರು ಹಾವನ್ನು ಹೊರ ತೆಗೆದು ರಕ್ಷಣೆ ಮಾಡಿದ್ದಾರೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ. ಹಾವು ಹಿಡಿಯುತ್ತಿರುವ ಮಹಿಳೆ ಹಿಂದಿ ಭಾಷೆ ಮಾತನಾಡುತ್ತಿದ್ದು, ಇದು ಬಹುಶಃ ಉತ್ತರ ಭಾರತದ ಯಾವುದು ರಾಜ್ಯದಿರಬಹುದು ಎಂದು ಊಹೆ ಮಾಡಲಾಗಿದೆ. 

ಮಳೆಗಾಲದಲ್ಲಿ ಹೊರಗಡೆ ಧೋ ಎಂದು ಮಳೆ ಸುರಿಯುತ್ತಿದ್ದರೆ, ಮನುಷ್ಯರೇನೋ ಬೆಚ್ಚಗೆ ಮನೆಯೊಳಗೆ ಕುಳಿತು ಬಿಸಿ ಬಿಸಿ ಬಜ್ಜಿ ಬೊಂಡ ಹಲಸಿನ ಕಾಯಿ ಹಪ್ಪಳ ತಿನ್ನುತ್ತಾ ಕೂರುತ್ತಾರೆ. ಆದರೆ ಇದೇ ಸಮಯದಲ್ಲಿ ಹಾವು ಹಲ್ಲಿ ಹುಳ ಹುಪ್ಪಟೆಗಳು ಆಶ್ರಯಕ್ಕಾಗಿ ಮನೆ ಒಳಗೆ ಸೇರುವ ಪ್ರಯತ್ನ ಮಾಡುತ್ತವೆ. ಅದರಲ್ಲೂ ವಿಶೇಷವಾಗಿ ಹಾವುಗಳು ಎಲ್ಲೆಡೆ ತುಂಬಿ ಹರಿಯುತ್ತಿರುವ ನೀರಿನಿಂದಾಗಿ ಜೀವ ಉಳಿಸಿಕೊಳ್ಳಲು ನಿರ್ಜನ ಕತ್ತಲಿನ ಬೆಚ್ಚಗಿನ ಜಾಗಗಳನ್ನು ಹಾವುಗಳು ಹುಡುಕುತ್ತಿರುತ್ತವೆ. ಕೆಲವೊಮ್ಮೆ ಹೊರಗೆ ನಿಲ್ಲಿಸಿದ ವಾಹನಗಳು ಕಾರು ಬೈಕ್‌ಗಳ ಒಳಗೆಯೂ ಹಾವುಗಳು ಸೇರಿಕೊಳ್ಳುವುದಿದೆ.  ಅದೇ ರೀತಿ ಇಲ್ಲೂ ಹಾವೊಂದು ಶೂ ಒಳಗೆ ಸೇರಿಕೊಂಡಿದ್ದು, ಶೂ ಧರಿಸಲೆಂದು ಹೊರಗೆ ತೆಗೆದಾಗ ಶೂ ಮಾಲೀಕ ಶಾಕ್ ಆಗಿದ್ದಾನೆ. 

ಭಾರತೀಯ ಅರಣ್ಯ ಸೇವೆ ಅಧಿಕಾರಿ ದೀಪಾಂಶು ಕಬ್ರಾ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಚಪ್ಪಲಿ ಸ್ಟ್ಯಾಂಡ್ ಮೇಲೆ ಇರುವ ಶೂವಿನಿಂದ ಹಾವೊಂದು ಹೆಡೆ ಎತ್ತಿ ನಿಂತಿದ್ದು, ಉರಗ ಸ್ನೇಹಿ ಮಹಿಳೆಯೊಬ್ಬರು ಅದನ್ನು ಹೊರ ತೆಗೆದು ರಕ್ಷಣೆ ಮಾಡಿದ್ದಾರೆ. ಈ ವಿಡಿಯೋವನ್ನು ಸಾವಿರಾರು ಜನ ರಿಟ್ವಿಟ್ ಮಾಡಿದ್ದಾರೆ. ಹೀಗಾಗಿ ಮಳೆಗಾಲದ ಸಮಯದಲ್ಲಿ ಶೂಗಳನ್ನು ಮನೆಯ ಹೊರಗೆ ಇಡುವ ಮುನ್ನ ಯೋಚಿಸುವುದೊಳಿತು. ಜೊತೆಗೆ ಹಾವು ಹುಳಗಳು ಸೇರದ ಜಾಗದಲ್ಲಿ ಇರಿಸಿದರೆ ಬೆಸ್ಟ್‌, ಇಲ್ಲದಿದ್ದರೆ ಅನಾಹುತ ಎದುರಾಗುವುದಂತೂ ಖಚಿತ. 

ಮನೆಯೊಳಗೆ ಹಾವು ಬಂದರೆ ಏನರ್ಥ? ನೀವೇನು ಮಾಡಬೇಕು?

ಬಟ್ಟೆ ನುಂಗಿದ ಹಾವು
ಕೆಲ ದಿನಗಳ ಹಿಂದೆ ಬಟ್ಟೆಯೊಂದನ್ನು ನಾಗರಹಾವು ನುಂಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಶಾಲೆತಡ್ಕದಲ್ಲಿ ನಡೆದಿತ್ತು.  ಇವರ ಮನೆಯ ಕೊಟ್ಟಿಗೆಯ ಬದಿಯಲ್ಲಿ ಸುಮಾರು 4 ಅಡಿ ಉದ್ದದ ನಾಗರ ಹಾವು ಬಟ್ಟೆಯೊಂದನ್ನು ನುಂಗಿದೆ. ಇದನ್ನು ಗಮನಿಸಿದ ಮನೆಯವರು ಸ್ನೇಕ್ ಅಶೋಕ್ ಲಾಯಿಲ ಇವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು ತಕ್ಷಣ ಸ್ಥಳಕ್ಕೆ ಬಂದ ಅವರು ನಾಗರಹಾವನ್ನು ಹಿಡಿದು ಅದು ನುಂಗಿದ್ದ ಬಟ್ಟೆಯನ್ನು ಹೊರತೆಗೆದು ನಂತರ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದರು. 

ಹಾವು ಕಚ್ಚೋ ಕನಸು ನಿಮ್ಮ ಎಚ್ಚರಿಕೆ ಗಂಟೆ! ಇಗ್ನೋರ್ ಮಾಡ್ಬೇಡಿ..

ಹಾವೇ ಹಾರವಾಯ್ತು
ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ (Maharashtra) ಬೀಡ್ (Beed) ಜಿಲ್ಲೆಯ ದೂರದ ಹಳ್ಳಿಯಲ್ಲಿ ದಂಪತಿ ಹೂ ಹಾರದ ಬದಲು ಹಾವನ್ನೇ ಹಾರವಾಗಿಸಿಕೊಂಡು ಮದುವೆಯಾದ ಸುದ್ದಿ ಸಾಕಷ್ಟು ವೈರಲ್ ಆಗಿತ್ತು. ವೀಡಿಯೋದಲ್ಲಿ ಕಾಣಿಸುವಂತೆ  ದಂಪತಿಗಳು ಬಿಳಿ ಬಟ್ಟೆಗಳನ್ನು ಧರಿಸಿ, ಪರಸ್ಪರರ ಕುತ್ತಿಗೆಗೆ ಹಾವುಗಳನ್ನು ಹಾಕುತ್ತಾರೆ. ವಧುವಾಗಲಿ ವರನಾಗಲಿ ಹಾವನ್ನು (snake) ಕಂಡು ಹೆದರುವುದಿಲ್ಲ. ವಧು ಮೊದಲು ವರನ ಕುತ್ತಿಗೆಗೆ ದೊಡ್ಡ ಹಾವನ್ನು ಹಾಕುತ್ತಾಳೆ. ನಂತರ ವರನ ಸರದಿ ಬಂದಾಗ, ಅವನು ದೊಡ್ಡ ಹೆಬ್ಬಾವನ್ನು ತಂದು ವಧುವಿನ ಕುತ್ತಿಗೆಗೆ ಹಾಕುತ್ತಾನೆ. ಅದರ ನಂತರ ದಂಪತಿಗಳು ಫೋಟೋಗಳಿಗೆ ಪೋಸ್ ನೀಡುತ್ತಾರೆ. ಈ ಮದುವೆಯಲ್ಲಿ ಪಾಲ್ಗೊಳ್ಳಲು ಅಪಾರ ಜನಸ್ತೋಮವೇ ನೆರೆದಿತ್ತು. ಗಮನಾರ್ಹ ವಿಚಾರ ಎಂದರೆ ಇಬ್ಬರು ಸ್ಥಳೀಯ ವನ್ಯಜೀವಿ ಇಲಾಖೆ ನೌಕರರಾಗಿದ್ದರು. 

Latest Videos
Follow Us:
Download App:
  • android
  • ios