ಹಾವು ಕಚ್ಚೋ ಕನಸು ನಿಮ್ಮ ಎಚ್ಚರಿಕೆ ಗಂಟೆ! ಇಗ್ನೋರ್ ಮಾಡ್ಬೇಡಿ..

ಹಾವಿನ ಕಡಿತದ ಕನಸು ಎಷ್ಟು ಭಯ ಹುಟ್ಟಿಸುತ್ತದೆಯೋ ಅಷ್ಟೇ ಸಾಮಾನ್ಯವಾದುದೂ ಹೌದು. ಅಂಥ ಕನಸುಗಳು ನಿಮಗೆ ಬರಲಿರುವ ಅಪಾಯದ ಕುರಿತ ಮುನ್ಸೂಚನೆ ಎಂದು ಗೊತ್ತೇ?

Dream Interpretation Of Snake Bites skr

ಕೆಟ್ಟ ಕನಸುಗಳು(bad dreams) ನಿದ್ರೆಯಲ್ಲೇ ಬೆವರುವಂತೆ ಮಾಡುತ್ತವೆ. ಅದರಲ್ಲೂ ಕನಸಿನಲ್ಲಿ ಹಾವು ಕಂಡರೆ ಮಲಗಿದಲ್ಲೇ ಬೆಚ್ಚಿ ಹಾರುವಂತಾಗುತ್ತದೆ. ಹಾವುಗಳು ಅಟ್ಟಿಸಿಕೊಂಡು ಬಂದಂತೆ, ಕಚ್ಚಿದಂತೆ(snake bite) ಅಥವಾ ನೀವೇ ಹಾವನ್ನು ಸಾಯಿಸಿದಂತೆ- ಹಾವಿಗೆ ಸಂಬಂಧಿಸಿದ ಸಾಕಷ್ಟು ಕನಸುಗಳು ಬೀಳಬಹುದು. ಅವೆಲ್ಲವನ್ನೂ ಕೇವಲ ಕನಸು ಎಂದು ಕಡೆಗಣಿಸುವಂತಿಲ್ಲ. ಏಕೆಂದರೆ, ಹಾವು ಕಚ್ಚಿದಂತೆ ಕನಸಿನಲ್ಲಿ ಕಂಡರೆ ಅದು ನೀವು ನಿರ್ಲಕ್ಷಿಸುತ್ತಿರುವ ಪ್ರಮುಖ ವಿಷಯಗಳ ಕುರಿತ ಎಚ್ಚರಿಕೆಯಾಗಿರಬಹುದು. ಅಥವಾ ಬರಲಿರುವ ಅಪಾಯದ ಮುನ್ಸೂಚನೆಯಾಗಿರಬಹುದು. 

ಹೌದು, ಹಾವುಗಳು ಕಚ್ಚುವ ಕನಸು ನಿಮ್ಮ ಜೀವನದಲ್ಲಿ ವಿಷಕಾರಿ ಜನರನ್ನು ಪ್ರತಿನಿಧಿಸುತ್ತದೆ. ಅವರು ನಿಮ್ಮ ಮೇಲೆ ದಾಳಿ ಮಾಡಲು ಸರಿಯಾದ ಕ್ಷಣಕ್ಕಾಗಿ ಕಾಯುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಈ ವಾಸ್ತವದೊಂದಿಗೆ ನೀವು ಎಚ್ಚರಗೊಳ್ಳಬೇಕು. ನೀವು ಕೆಲವು ಸಮಯದಿಂದ ನಿರ್ಲಕ್ಷಿಸಿರುವ ಪ್ರಮುಖವಾದುದರ ಬಗ್ಗೆ ಲಕ್ಷ್ಯ ಸೆಳೆಯುತ್ತದೆ ಹಾವಿನ ಕನಸು. ಅಲ್ಲದೆ, ಹಾವಿನ ಕಚ್ಚುವಿಕೆಯ ಕನಸು ನಿಮ್ಮ ಜೀವನದಲ್ಲಿ ನಿಮಗೆ ತಿಳಿದಿಲ್ಲದ ಸಂಕೀರ್ಣ ಪರಿಸ್ಥಿತಿಯನ್ನು ಸಂಕೇತಿಸುತ್ತದೆ. ಹಾವು ಕಚ್ಚಿದೆ ಎಂದು ಕನಸು ಕಾಣುವುದು ಶೀಘ್ರದಲ್ಲೇ ಏನಾದರೂ ಕೆಟ್ಟದಾಗಲಿದೆ ಎಂಬ ಸಂದೇಶವಾಗಿದೆ. 

ಪ್ರತಿಯೊಂದು ಕನಸೂ ಅನನ್ಯವಾಗಿದೆ, ಮತ್ತು ಪ್ರತಿಯೊಂದು ಸಣ್ಣ ವಿವರವೂ ವಿಭಿನ್ನ ತೀರ್ಮಾನಗಳಿಗೆ ಕಾರಣವಾಗಬಹುದು. ಹಾಗಾಗಿ, ಹಾವಿನ ಕುರಿತ ಯಾವ ರೀತಿಯ ಕನಸಿನ ಅರ್ಥ ಏನು ನೋಡೋಣ. 

ಹಾವುಗಳು ಇತರರನ್ನು ಕಚ್ಚುವ ಕನಸು(Dreams of snakes biting others)
ನಿಮ್ಮ ಕನಸಿನಲ್ಲಿ ಹಾವು ಮತ್ಯಾರಿಗೋ ಕಚ್ಚಿದಂತೆ ಕಂಡುಬಂದರೆ, ಆ ವ್ಯಕ್ತಿಯ ಬಗ್ಗೆ ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತಿರುವ ಸೂಚನೆ ಇದಾಗಿದೆ. ನೀವು ಈ ವ್ಯಕ್ತಿಯನ್ನು ನಿರ್ಲಕ್ಷಿಸಿದರೆ ಅಥವಾ ಅವರಿಗೆ ನಿಮ್ಮ ಸಂಪೂರ್ಣ ಗಮನವನ್ನು ನೀಡದಿದ್ದರೆ, ಇದು ಅನಗತ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮ್ಮ ಕುಟುಂಬ, ಸಂಗಾತಿ, ಮಕ್ಕಳೊಂದಿಗೆ ನಿಕಟವಾಗಿರಿ. ನಿಮ್ಮ ಗಮನ ಅಗತ್ಯವಿರುವ ಜನರನ್ನು ಖಂಡಿತಾ ನಿರ್ಲಕ್ಷಿಸಬೇಡಿ. 

ಈ ವಾರ ನಿಮ್ಮ ಭವಿಷ್ಯದಲ್ಲೇನಿದೆ? ಟ್ಯಾರೋ ಕಾರ್ಡ್ ಸೂಚಿಸೋದೇನು?

ದೊಡ್ಡ ಹಾವು ನಿಮ್ಮನ್ನು ಕಚ್ಚುವ ಕನಸು(Dream of a big snake biting you)
ನಿಮ್ಮ ಆದ್ಯತೆಯ ವಿಷಯಗಳು ಯಾವುವೋ ಇರುತ್ತವೆ. ಆದರೆ ಕೆಲವು ಕಾರಣಗಳಿಗಾಗಿ ನೀವು ಅದನ್ನು ನಿರ್ಲಕ್ಷಿಸುತ್ತೀರಿ. ದೊಡ್ಡ ಹಾವಿನ ಕಡಿತವು ನಿಮ್ಮ ಆದ್ಯತೆಗಳನ್ನು ನಿಮಗೆ ನೆನಪಿಸುತ್ತದೆ. ನಿಮ್ಮ ಜೀವನದಲ್ಲಿ ಯಾರಾದರೂ ಅಥವಾ ಏನಾದರೂ ನಿಮ್ಮ ಶಾಂತಿ ಮತ್ತು ಸಮತೋಲನವನ್ನು ತೊಂದರೆಗೊಳಿಸಲು ಸಜ್ಜಾಗಿದ್ದಾರೆ. ದೈಹಿಕವಾಗಿ ಅಥವಾ ಭಾವನಾತ್ಮಕವಾಗಿ ನಿಮಗೆ ನೇರವಾಗಿ ಹಾನಿಯಾಗುವುದು ಎಂದು ಅದು ಹೇಳಬಹುದು. ಹಾವಿನ ಗಾತ್ರವು ನೀವು ನೀವು ನಿರ್ಲಕ್ಷಿಸುತ್ತಿರುವ ಸಮಸ್ಯೆಯ ಗಾತ್ರವನ್ನು ಪ್ರತಿನಿಧಿಸುತ್ತದೆ. 

ಸಣ್ಣ ಹಾವು ನಿಮ್ಮನ್ನು ಕಚ್ಚುವ ಕನಸು(Dream of a small snake that bit you)
ಕನಸಿನಲ್ಲಿ ನಿಮ್ಮನ್ನು ಕಚ್ಚುವ ಹಾವು ಚಿಕ್ಕದಾಗಿದ್ದರೆ, ಈ ಕನಸು ಒಂದು ನಿರ್ದಿಷ್ಟ ರೀತಿಯಲ್ಲಿ ನಿಮ್ಮನ್ನು ನೋಯಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಯನ್ನು ಪ್ರತಿನಿಧಿಸುತ್ತದೆ, ಬಹುಶಃ ಕೆಲಸದಲ್ಲಿ ಅಥವಾ ನಿಮ್ಮ ಪ್ರೀತಿಯ ಸಂಬಂಧದಲ್ಲಿ ನಿಮಗೆ ಕಿರುಕುಳ ನೀಡ ಬಯಸುವ ವ್ಯಕ್ತಿ ಬಗ್ಗೆ ಎಚ್ಚರಿಸುತ್ತದೆ. ಆದರೆ, ಈ ವಿಷಕಾರಿ ವ್ಯಕ್ತಿಯು ದೈಹಿಕವಾಗಿ ಅಥವಾ ಭಾವನಾತ್ಮಕವಾಗಿ ನಿಮ್ಮನ್ನು ಹಾನಿಗೊಳಿಸಲು ವಿಫಲನಾಗುತ್ತಾನೆ.

ನಿಮ್ಮ ಬೆನ್ನನ್ನು ಕಚ್ಚುವ ಹಾವಿನ ಕನಸು(Dream of a snake biting your back)
ಹಾವುಗಳು ನಿಮ್ಮ ಬೆನ್ನನ್ನು ಕಚ್ಚುವ ಕನಸುಗಳು  ಯಾವುದೋ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ವೈಫಲ್ಯದ ಭಯವನ್ನು ಪ್ರತಿನಿಧಿಸುತ್ತವೆ. ಜನರು ನಿಮ್ಮಿಂದ ಬಹಳಷ್ಟು ಫಲಿತಾಂಶಗಳನ್ನು ನಿರೀಕ್ಷಿಸುತ್ತಿದ್ದಾರೆ, ಮತ್ತದನ್ನು ಪೂರೈಸಲು ಸಾಧ್ಯವಾಗದೆ ಹೋದರೆ ಎಂಬ ನಿಮ್ಮೊಳಗಿನ ಅಂಜಿಕೆಯನ್ನು ಇದು ಪ್ರತಿನಿಧಿಸುತ್ತದೆ. 

ಕಚ್ಚಲು ಪ್ರಯತ್ನಿಸುತ್ತಿರುವ ಹಾವಿನ ಕನಸು(Dream of a snake trying to bite)
ಹಾವು ನಿಮ್ಮ ಮೇಲೆ ದಾಳಿ ಮಾಡುವುದಾಗಿ ಬೆದರಿಸುತ್ತಾ ಹಿಂದೆ ಹಿಂದೆ ಬರುತ್ತಿದ್ದರೆ, ಪದೇ ಪದೆ ಕಚ್ಚಲು ಪ್ರಯತ್ನಿಸುತ್ತಿರುವಂತೆ, ಆದರೆ ಹೇಗೋ ವಿಫಲವಾದಂತೆ ಕನಸು ಬಿದ್ದರೆ ಇದು ನೀವು ನಿರ್ಲಕ್ಷಿಸುವ ವಿಷಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಹೇಳುತ್ತದೆ. ನೀವು ನಿಮ್ಮ ಕುಟುಂಬಕ್ಕೆ ಸಮಯ ನೀಡದ ಉದ್ಯಮಿಗಳಾಗಿದ್ದರೆ, ಈ ಬೆದರಿಕೆ ತೀವ್ರ ಎಚ್ಚರಿಕೆಯಾಗಿದೆ. ಮತ್ತೊಂದೆಡೆ, ಈ ಕನಸು ಶತ್ರುವನ್ನು ಕೂಡಾ ಪ್ರತಿನಿಧಿಸುತ್ತದೆ. ಅವರು ನಿಮ್ಮನ್ನು ನೋಯಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಅವರು ಯಾರೆಂಬುದು ನಿಮಗೆ ತಿಳಿಯುತ್ತದೆ. 

ಈ ರಾಶಿಯವರು ಯಾವತ್ತೂ ತಕ್ಷಣ ರಿಪ್ಲೈ ಮಾಡಲ್ಲ, ತಮ್ಮ ಲವರ್‌ನೇ ಇಗ್ನೋರ್ ಮಾಡ್ತಾರೆ!

ನಿಮ್ಮನ್ನು ಕಚ್ಚುವ ಹಾವನ್ನು ಕೊಲ್ಲುವ ಕನಸು(Dream of killing a snake that bites you)
ನಿಮ್ಮನ್ನು ಕಚ್ಚಲು ಬರುವ ಹಾವನ್ನು ಕೊಲ್ಲುವ ಕನಸು ನೀವು ಜೀವನದ ದುಃಖವನ್ನು ಜಯಿಸುತ್ತಿದ್ದೀರಿ ಎಂದು ಸೂಚಿಸುತ್ತದೆ. ನೀವು ಹಾವನ್ನು ಕೊಂದರೆ, ನಿಮ್ಮ ಸುತ್ತಲಿನ ಇತರರಿಗಿಂತ ಮುಂದೆ ಹೋಗಲು ನಿಮಗೆ ಉತ್ತಮ ಅವಕಾಶವಿದೆ ಎಂದರ್ಥ. ಇದು ನಿಮ್ಮನ್ನು ತಡೆಯುವ ಎಲ್ಲ ಅಡೆತಡೆಗಳನ್ನು ಜಯಿಸುವಿರಿ ಎಂದು ತಿಳಿಸುವ ಕನಸು.

Latest Videos
Follow Us:
Download App:
  • android
  • ios