ನೀವು ಪೋಷಕರನ್ನು ಆರಿಸಿಕೊಳ್ಳುವಾಗಿ ಬುದ್ದಿವಂತಿಕೆಯಿಂದ ಆರಿಸಿಕೊಳ್ಳಿ, ನಿಮ್ಮ ವರ್ಚಸ್ಸು, ತೇಜಸ್ಸು, ಹೊಳಪು ನಿಮ್ಮದಾಗಲಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಉತ್ತರ, ನಾಗಾಲ್ಯಾಂಡ್ ಯುವ ಸಮೂಹ ನಗೆಗಡಲಲ್ಲಿ ತೇಲಿದ ಘಟನೆ ನಡೆದಿದೆ. ಶಶಿ ತರೂರ್ ಭಾಷಣದ ಹೈಲೈಟ್ಸ್ ಇಲ್ಲಿದೆ.
ನಾಗಾಲ್ಯಾಂಡ್(ಮಾ.06): ನೀವು ಪೋಷಕರನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ. ನಾಗಾಲ್ಯಾಂಡ್‌ನಲ್ಲಿ ಯುವ ಸಮೂಹದ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಶಶಿ ತರೂರ್, ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ಶಶಿ ತರೂರ್ ಅಭಿಯಾನಿ ಯುವತಿಯೊಬ್ಬಳು ತರೂರ್ ಪ್ರಶ್ನಿಸಿದ್ದಾರೆ. ಒರ್ವ ವ್ಯಕ್ತಿ ಸದಾ ಕಾಲ ತೇಜಸ್ಸು, ವರ್ಚಸ್ಸು ಜೊತೆಗೆ ಅದ್ಭುತ ಶಬ್ದಕೋಶ ಹಾಗೂ ಬುದ್ದಿವಂತನಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಶಶಿ ತರೂರ್, ನೀವು ಹೇಗೆ ಕಾಣಬೇಕು ಅನ್ನೋದನ್ನು ನಿರ್ಧರಿಸಬೇಕಾದರೆ ನೀವು ಪೋಷಕರನ್ನು ಬುದ್ದಿವಂತಿಕೆಯಿಂದ ಆಯ್ಕೆಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಶಶಿ ತರೂರ್ ಮಾತಿಗೆ ಇಡಿ ಯುವ ಸಮೂಹ ನಗೆಗಡಲಲ್ಲಿ ತೇಲಿದೆ.
ಯುವತಿಯ ಪ್ರಶ್ನೆ ಕೇಳುತ್ತಿದ್ದಂತೆ ಶಶಿ ತರೂರ್ ನಕ್ಕಿದ್ದಾರೆ. ಬಳಿಕ ಅಷ್ಟೆ ಉತ್ತಮ ಉತ್ತರ ನೀಡಿದ್ದಾರೆ. ನೀವು ತುಂಬಾ ಸ್ವೀಟ್ ಹಾಗೂ ಕರುಣಾಮಯಿಯಾಗಿದ್ದೀರಿ. ನೀವು ಹೇಗೆ ಕಾಣಬೇಕು, ಚೆಂದವಾಗಿರುಬೇಕು ಅನ್ನೋದು ನಿಮ್ಮ ಪೋಷಕರ ಜೀನ್‌ನಿಂದ ಬರುತ್ತದೆ. ಅದರಲ್ಲಿ ನಮ್ಮ ಪಾತ್ರ ಏನೂ ಇಲ್ಲ. ಆದರೆ ಜ್ಞಾನ, ಮಾತುಗಾರಿಕೆ, ವಿಷಗಳ ಅರ್ಥೈಸುವಿಕೆ, ಓದುವಿಕೆ ಇವೆಲ್ಲವೂ ನಮ್ಮ ಪ್ರಯತ್ನ. ನಾನು ಹೆಚ್ಚು ಓದುತ್ತೇನೆ. ಪ್ರತಿ ದಿನ ಓದುತ್ತೇನೆ. ಓದುವಿಕೆ ಹವ್ಯಾಸ ಮಾಡಿಕೊಂಡಿದ್ದೇನೆ. ಓದಿ, ಬಳಿಕ ಜನರ ಬಳಿಕ ಮಾತನಾಡಿ. ನೀವು ಮನೆಯಲ್ಲಿ ಕನ್ನಡಿ ಮುಂದೆ ಮಾತನಾಡಿದರೆ ಸಾಧ್ಯವಾಗುವುದಿಲ್ಲ. ಹೊರಗಡೆ ಜನರನ್ನು ಭೇಟಿಯಾಗಿ ಮಾತನಾಡಿ. ಹಲವು ಬಾರಿ ನಿಮ್ಮ ಮಾತುಗಳು, ನಿಮ್ಮ ಆಲೋಚನೆಗಳಿಗೆ ಉತ್ತಮ ಸ್ಪಂದನೆ ಸಿಗಬಹುದು. ಇನ್ನೂ ಹಲವು ಬಾರಿ ಸಿಗುವುದಿಲ್ಲ. ಆದರೆ ಇವೆಲ್ಲವನ್ನು ತುಲನೆ ಮಾಡಿ ಮುಂದೆಕ್ಕೆ ಸಾಗಬೇಕು ಎಂದು ಶಶಿ ತರೂರ್ ಹೇಳಿದ್ದಾರೆ. ಶಶಿ ತರೂರ್ ಈ ವಿಡಿಯೋ ಇದೀಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗೆ ಹೆಚ್ಚು ಪ್ರತಿಕ್ರಿಯೆಗಳು ಬರುತ್ತಿವೆ.
2024ರಲ್ಲಿ ಬಿಜೆಪಿ ಬಹುಮತ ಕಳೆದುಕೊಳ್ಳಲಿದೆ: ಶಶಿ ತರೂರ್
ಶಶಿ ತರೂರ್ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ನಿಲುವುಗಳನ್ನು ಟೀಕಿಸುವಲ್ಲೂ ಅದ್ಭುತ ಭಾಷೆ ಬಳಸುತ್ತಾರೆ. ಹೀಗಾಗಿ ಶಶಿ ತರೂರ್ ಟೀಕೆಗಳು ದೇಶ ವಿದೇಶದಲ್ಲಿ ಸುದ್ದಿಯಾಗುತ್ತವೆ. ಇತ್ತೀಚೆಗೆ ತರೂರ್ ಪ್ರಧಾನಿ ಮೋದಿ ಭಾಷಣದ ಸಾಲುಗಳನ್ನು ಉಲ್ಲೇಖಿಸಿ ಬಿಜೆಪಿಯನ್ನು ಕುಟುಕಿದ್ದರು. ಭ್ರಷ್ಟಾಚಾರ ವಿರುದ್ಧವಾಗಿ ಪ್ರಧಾನಿ ನರೇಂದ್ರ ಮೋದಿ ಬಳಕೆ ಮಾಡುವ ‘ನಾ ಖಾವೂಂಗಾ, ನಾ ಖಾನೇ ದೂಂಗಾ’ ಘೋಷಣೆ ಕೇವಲ ಗೋಮಾಂಸಕ್ಕಷ್ಟೇ ಸೀಮಿತವಾಗಿರಬೇಕು ಎಂದು ಶಶಿ ತರೂರ್ ಹೇಳಿದ್ದರು.
ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಎಲ್ಲಾ ವಿಪಕ್ಷಗಳ ಅಭ್ಯರ್ಥಿಗಳು ಒಂದಾಗಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೆಣೆಸಾಡಿದರೆ ಬಿಜೆಪಿಗೆ ಕಷ್ಟವಾಗಲಿದೆ ಎಂದು ಶಶಿ ತರೂರ್ ಹೇಳಿದ್ದರು. ಬಿಜೆಪಿ 2019ರ ಚುನಾವಣೆಯ ತಂತ್ರವನ್ನು 2024ರಲ್ಲೂ ಪಾಲಿಸುವುದು ಅಸಾಧ್ಯವಾಗಿದೆ ಎಂದೂ ಹೇಳಿದ್ದಾರೆ. ಬಿಜೆಪಿಯನ್ನು ಹೊರತುಪಡಿಸಿ ಕಾಂಗ್ರೆಸ್‌ಗೆ ರಾಷ್ಟ್ರೀಯ ಪಕ್ಷ ನೆಲೆಯಿದೆ. ಆದರೆ ಕೇರಳ, ತಮಿಳುನಾಡು ಇನ್ನು ಕೆಲವು ರಾಜ್ಯಗಳಲ್ಲಿ ಬಿಜೆಪಿಗಿಂತ ಹೆಚ್ಚು ಕಾಂಗ್ರೆಸ್ ಬಲಿಷ್ಠವಾಗಿದೆ. ಕಳೆದ 2 ಚುನಾವಣೆಗಳಲ್ಲಿ ವಿಪಕ್ಷಗಳ ಒಡಕಿನಲ್ಲಿ ಬಿಜೆಪಿ ಕೈವಾಡವಿದೆ. ಮತಗಳನ್ನು ಒಡೆಯುವ ಯೋಜನೆ ಬಿಜೆಪಿಯದ್ದಾಗಿತ್ತು ಎಂದರು.
ಬಿಪಿನ್ ರಾವತ್‌ರನ್ನು 'ರಸ್ತೆ ಬದಿಯ ಗೂಂಡಾ' ಎಂದಿದ್ದ ಕಾಂಗ್ರೆಸ್‌ಗೆ ಮುಷರಫ್ ಶಾಂತಿಧೂತ!
