ಬಿಪಿನ್‌ ರಾವತ್‌ರನ್ನು 'ರಸ್ತೆ ಬದಿಯ ಗೂಂಡಾ' ಎಂದಿದ್ದ ಕಾಂಗ್ರೆಸ್‌ಗೆ ಮುಷರಫ್‌ ಶಾಂತಿಧೂತ!

1999ರ ಕಾರ್ಗಿಲ್‌ ಯುದ್ಧಕ್ಕೆ ಕಾರಣನಾದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಹಾಗೂ ಸರ್ವಾಧಿಕಾರಿ ಜನರಲ್‌ ಪರ್ವೇಜ್‌ ಮುಷರಫ್‌ ಭಾನುವಾರ ದುಬೈನ ಆಸ್ಪತ್ರೆಯಲ್ಲಿ ನಿಧನರಾದರು. ಅವರ ನಿಧನಕ್ಕೆ ಶಶಿ ತರೂರ್‌ ಹಾಕಿರುವ ಸಂತಾಪ ಸಂದೇಶ ಈಗ ವಿವಾದಕ್ಕೆ ಕಾರಣವಾಗಿದೆ.
 

Pervez Musharraf force for peace says Shashi Tharoor BJP Rajeev Chandrasekhar Slams

ನವದೆಹಲಿ (ಫೆ.5): ಹಿರಿಯ ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಶಶಿ ತರೂರ್‌ ಭಾನುವಾರ, ಪಾಕಿಸ್ತಾನದ ಮಾಜಿ ಅಧ್ಯಕ್ಷ ಹಾಗೂ ಸರ್ವಾಧಿಕಾರಿಯಾಗಿದ್ದ ಜನರಲ್‌ ಪರ್ವೇಜ್‌ ಮುಷರಫ್‌ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಮಾಡಿರುವ ಟ್ವೀಟ್‌ ವಿವಾದಕ್ಕೆ ಕಾರಣವಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಬಹಿರಂಗಪಡಿಸದ ಕಾಯಿಲೆಯ ಕಾರಣದಿಂದಾಗಿ ದುಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಮುಷರಫ್‌, ಭಾನುವಾರ ನಿಧನರಾದರು.  2002 ರಿಂದ 2007ರವರೆಗಿನ ಅವಧಿಯಲ್ಲಿ ಭಾರತದ ಅತ್ಯಂತ ವೈರಿ ಎನಿಸಿಕೊಂಡಿದ್ದ ಮುಷರಫ್‌, ಬಳಿಕ ಶಾಂತಿಗಾಗಿ ನಿಜವಾದ ಶಕ್ತಿ ಎನಿಸಿಕೊಂಡಿದ್ದರು ಎಂದು ಟ್ವೀಟ್‌ ಮಾಡಿದ್ದರು. ಇನ್ನು ಮುಷರಫ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿಸ ಶಶಿ ತರೂರ್‌ ಮಾಡಿರುವ ಟ್ವೀಟ್‌ನಲ್ಲಿ ಅವರನ್ನು ಶಾಂತಿಧೂತ ಎನ್ನುವ ಅರ್ಥದಲ್ಲಿ ಕರೆದಿದ್ದು ಬಿಜೆಪಿ ನಾಯಕರ ಕಣ್ಣು ಕೆಂಪಗಾಗಿಸಿದೆ. ಕಾಂಗ್ರೆಸ್ ಪಕ್ಷ ಇಂದಿಗೂ ಪಾಕಿಸ್ತಾನವನ್ನು ಧ್ಯಾನ ಮಾಡುತ್ತಿದೆ ಎನ್ನುವುದು ಇದರಲ್ಲೇ ಗೊತ್ತಾಗುತ್ತಿದೆ ಎಂದು ಟೀಕಿಸಿದೆ. 


'ಪರ್ವೇಜ್ ಮುಷರಫ್, ಮಾಜಿ ಪಾಕಿಸ್ತಾನಿ ಅಧ್ಯಕ್ಷ, ಅಪರೂಪದ ಕಾಯಿಲೆಯಿಂದ ನಿಧನರಾದರು': ಒಮ್ಮೆ ಭಾರತದ ಅತ್ಯಂತ ಕೆಟ್ಟ ವೈರಿ ಎನಿಸಿದ್ದ, ಅವರು 2002-2007 ರ ಶಾಂತಿಗಾಗಿ ನಿಜವಾದ ಶಕ್ತಿಯಾದರು," ಎಂದು ತರೂರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ವಿಶ್ವಸಂಸ್ಥೆಯಲ್ಲಿದ್ದ ದಿನಗಳಲ್ಲಿ ನಾನು ಅವರನ್ನು ವಾರ್ಷಿಕವಾಗಿ ಭೇಟಿಯಾಗುತ್ತಿದೆ. ಸ್ಪಷ್ಟವಾದ, ಕಾರ್ಯತಂತ್ರಗಳಲ್ಲಿ ಅಷ್ಟೇ ಚುರುಕಾಗಿ ಅವರು ತೊಡಗಿಸಿಕೊಳ್ಳುತ್ತಿದ್ದದ್ದು ನನಗೆ ವಿಶೇಷ ಎನಿಸಿತ್ತು. ಅವರ ಆತ್ಮಕ್ಕೆ ಶಾಂಸಿ ಸಿಗಲಿದೆ ಎಂದು ತರೂರ್‌ ಬರೆದಿದ್ದರು.

 


ಶಶಿ ತರೂರ್ ಅವರ ಟ್ವೀಟ್ ಅನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ರೀ ಟ್ವೀಟ್‌ ಮಾಡಿದ್ದಾರೆ, ಪಾಕಿಸ್ತಾನದ ಸರ್ವಾಧಿಕಾರಿ ಜನರಲ್‌ಗಳು ಜಗತ್ತಿಗೆ ನಷ್ಟವನ್ನು ಉಂಟುಮಾಡಿದ್ದಾರೆ. ಇದರೊಂದಿಗೆ, ಪಾಕಿಸ್ತಾನದ ಸರ್ವಾಧಿಕಾರಿ ಜನರಲ್‌ಗಳಿಗೆ ಶಾಂತಿಯ ಶಕ್ತಿಯಾಗುವುದು ಅಥವಾ ಸ್ಪಷ್ಟವಾದ ಕಾರ್ಯತಂತ್ರದ ಚಿಂತನೆಯನ್ನು ಅಭಿವೃದ್ಧಿಪಡಿಸುವಂಥದ್ದೂ ಏನೂ ಆಗಿಲ್ಲ ಎಂದು ಅವರು ಬರೆದಿದ್ದಾರೆ. ಈ ಜನರಲ್‌ಗಳಿಂದಾಗಿ ಅನೇಕ ಜೀವಗಳು ಕಳೆದುಹೋದವು. ಅಂತರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಲಾಗಿದೆ ಪ್ರಾದೇಶಿಕ ಶಾಂತಿಯನ್ನು ಹಾನು ಮಾಡಲಾಯಿತು. ಈ ಜನರಲ್‌ಗಳಿಗೆ ಭಾರತದಲ್ಲೂ ಅಭಿಮಾನಿಗಳಿದ್ದಾರೆ ಎಂದು ಟೀಕೆ ಮಾಡಿದ್ದಾರೆ.

ಬಿಜೆಪಿ ವಕ್ತಾರ ಶೆಹಜಾಬ್‌ ಪೊನ್‌ವಾಲಾ ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, 'ಪರ್ವೇಜ್‌ ಮುಷರಫ್‌ ಕಾರ್ಗಿಲ್‌ ಯುದ್ಧದ ಸೂತ್ರಧಾರಿ, ಸರ್ವಾಧಿಕಾರಿ, ಮಾನವ ಜನಾಂಗದ ಭೀಕರ ಅಪರಾಧ ಆರೋಪಗಳನ್ನು ಹೊತ್ತಿರುವ ವ್ಯಕ್ತಿ. ತಾಲಿಬಾನ್‌ ಹಾಗೂ ಒಸಾಮಾನನ್ನು ತನ್ನ ಸಹೋದರರು ಹೀರೋಗಳು ಎಂದ ವ್ಯಕ್ತಿ. ತನ್ನದೇ ದೇಶದ ಸೈನಿಕರ ಶವಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ ವ್ಯಕ್ತಿ. ಇಂಥವನನ್ನು ಕಾಂಗ್ರೆಸ್‌ ಹೊಗಳುತ್ತಿದೆ. ನಿಮಗೆ ಅಚ್ಚರಿಯಾಯಿತೇ? ಇದು ಕಾಂಗ್ರೆಸ್‌ನ ಸ್ಪಷ್ಟವಾದ ಪಾಕ್‌ ಧ್ಯಾನ ಎಂದು ಟೀಕೆ ಮಾಡಿದ್ದಾರೆ.

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ನಿಧನ

ಒಂದು ಕಾಲದಲ್ಲಿ ಮುಷರಫ್‌, ರಾಹುಲ್‌ ಗಾಂಧಿಯನ್ನು ಜಂಟಲ್‌ಮನ್‌ ಎಂದು ಕರೆದಿದ್ದರು. ಈ ಕಾರಣಕ್ಕಾಗಿಯೇ ಕಾಂಗ್ರೆಸ್‌ ಇಂದು ಮುಷರಫ್‌ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿರಬಹುದು. 370ನೇ ವಿಧಿ ರದ್ದರಿ, ಸರ್ಜಿಕಲ್‌ ಸ್ಟ್ರೈಕ್‌ ಕೊಲೆನೆ ಬಾಲಾಕೋಟ್‌ ವಿಚಾರದವರೆಗೂ ಕಾಂಗ್ರೆಸ್‌ ಅನುಮಾನ ಪಡುವ ಮೂಲಕ ಪಾಕ್‌ನಂತೆಯೇ ಯೋಚನೆ ಮಾಡಿತ್ತು.  ಈಗ ಮುಷರಫ್‌ ಅವರನ್ನು ಹೊಗಳುತ್ತಿದೆ. ಇದೇ ಕಾಂಗ್ರೆಸ್‌ ನಮ್ಮದೇ ದೇಶದ ಸೇನಾ ಮುಖ್ಯಸ್ಥನನ್ನು ರಸ್ತೆ ಬದಿಯ ಗೂಂಡಾ ಎಂದು ಹೇಳಿತ್ತು ಎಂದು ಪೂನಾವಾಲಾ ನೆನಪಿಸಿದ್ದಾರೆ.

ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ, ಸುದ್ದಿ ವೈರಲ್

ಇನ್ನೊಂದು ಟ್ವೀಟ್‌ನಲ್ಲಿ ಬಿಜೆಪಿ ನಾಯಕರೊಬ್ಬರು ಮುಷರಫ್‌ನ ಹಳೆಯ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. ಪಾಕಿಸ್ತಾನದ ಪ್ರಧಾನಿಯಾಗಿದ್ದ ಸಮಯದಲ್ಲಿ ದೆಹಲಿ ಭೇಟಿಯ ವೇಳೆ ಮುಷರಫ್‌ ಹಾಗೂ ಅವರ ಪತ್ನಿ, ಸಹೋದರ ಹಾಗೂ ಮಕ್ಕಳಿಗೆ ರಾಹುಲ್‌ ಗಾಂಧಿ ಆಹ್ವಾನ ನೀಡಿದ್ದರು. ಮಾಜಿ ಪ್ರಧಾನಿಯಾಗಿರುವ ಮನಮೋಹನ್‌ ಸಿಂಗ್‌ ಅವರೊಂದಿಗೆ ಭೋಜನ ಕೂಟಕ್ಕೂ ಕರೆದಿದ್ದಾಗಿ ಅವರು ತಿಳಿಸಿದ್ದರು. 1999 ರ ಕಾರ್ಗಿಲ್ ಯುದ್ಧಕ್ಕೆ ಕಾರಣವಾದ ವ್ಯಕ್ತಿಯಾಗಿದ್ದ ಮುಷರಫ್, 79ನೇ ವಯಸ್ಸಿನಲ್ಲಿ ಅಮಿಲೋಯ್ಡೋಸಿಸ್ನಿಂದ ಬಳಲುತ್ತಿದ್ದರು, ಇದು ದೇಹದಾದ್ಯಂತ ಅಂಗಗಳು ಮತ್ತು ಅಂಗಾಂಶಗಳಲ್ಲಿ ಅಮಿಲಾಯ್ಡ್ ಎಂಬ ಅಸಹಜ ಪ್ರೋಟೀನ್‌ ರಚನೆಯಿಂದ ಉಂಟಾಗುವ ಅಪರೂಪದ ಕಾಯಿಲೆಯಾಗಿದೆ.

Latest Videos
Follow Us:
Download App:
  • android
  • ios