2019ರ ಚುನಾವಣೆಯ ಫಲಿತಾಂಶವನ್ನು 2024ರಲ್ಲಿ ಮತ್ತೊಮ್ಮೆ ತೋರಲು ಬಿಜೆಪಿಗೆ ಅಸಾಧ್ಯವಾಗಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಕಳೆದುಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಶನಿವಾರ ಹೇಳಿದ್ದಾರೆ.

ಕಲ್ಲಿಕೋಟೆ: 2019ರ ಚುನಾವಣೆಯ ಫಲಿತಾಂಶವನ್ನು 2024ರಲ್ಲಿ ಮತ್ತೊಮ್ಮೆ ತೋರಲು ಬಿಜೆಪಿಗೆ ಅಸಾಧ್ಯವಾಗಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಕಳೆದುಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಶನಿವಾರ ಹೇಳಿದ್ದಾರೆ. ಇಲ್ಲಿ ನಡೆದ ಕೇರಳ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಕಳೆದ ಚುನಾವಣೆ ವೇಳೆ ನಡೆದ ಪುಲ್ವಾಮ ದಾಳಿ (Pulwama attack) ಮತ್ತು ಬಾಲಕೋಟ್‌ ದಾಳಿಯ (Balakot attack) ಲಾಭ ಪಡೆದು ಅತಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿದರು. ಆದರೆ ಅದು ಈ ಬಾರಿ ಸಾಧ್ಯವಾಗುವುದಿಲ್ಲ. ಬಿಜೆಪಿಯ ಗ್ರಾಫ್‌ ದೇಶದಲ್ಲಿ ಕುಸಿಯುತ್ತಿದೆ. 2024ರಲ್ಲಿ ಬಿಜೆಪಿ ಬಹುಮತ ಕಳೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಬಿಜೆಪಿ ಬಹುತೇಕ 50 ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಇದು ಒಟ್ಟಾರೆ ವಿಪಕ್ಷಗಳ ಗಳಿಕೆಯಾಗಲಿದೆ ಎಂದು ಅವರು ಹೇಳಿದರು.

ಕಳೆದ ಸಲ ಗುಜರಾತ್‌ (Gujarat), ಹರಿಯಾಣ, ರಾಜಸ್ಥಾನದಲ್ಲಿ(Rajasthan) ಎಲ್ಲ ಸೀಟು ಹಾಗೂ ಮಧ್ಯಪ್ರದೇಶ, ಬಿಹಾರ, ಮಹಾರಾಷ್ಟ್ರದಲ್ಲಿ ಬಿಜೆಪಿ ಬಹುತೇಕ ಸೀಟು ಗೆದ್ದಿತ್ತು. ಈ ಬಾರಿ ಇದು ಅಸಾಧ್ಯ ಎಂದು ತರೂರ್‌ ಹೇಳಿದರು.