ಗಡಿ ನಿಯಂತ್ರಣ ರೇಖೆಯಲ್ಲಿ ಭೂಗತ ಬಂಕರ್‌ ಸೇರಿದಂತೆ ಹಲವು ಮಿಲಿಟರಿ ಮೂಲಸೌಕರ್ಯ ನಿರ್ಮಾಣ, ದೂರ ಸಂಪರ್ಕ ಟವರ್‌ ಸ್ಥಾಪನೆ ಹಾಗೂ ಭೂಗತ ಕೇಬಲ್‌ ಎಳೆಯುವ ಕಾರ್ಯವನ್ನು ಚೀನಾ ಮಾಡುತ್ತಿದೆ. ಜತೆಗೆ ವೈಮಾನಿಕ ನೌಕೆಗಳು ಹಾಗೂ ವೈಮಾನಿಕ ಯುದ್ಧ ವಾಹನಗಳು, ಸಾಧನಗಳನ್ನು ಕೂಡ ಕೊಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ (ಜೂನ್ 26, 2023): ಭಾರತದ ಬದ್ಧ ವೈರಿಯಾಗಿರುವ ಪಾಕಿಸ್ತಾನಕ್ಕೆ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ಹಲವು ಮೂಲಸೌಕರ್ಯ ಕಲ್ಪಿಸಿಕೊಡುವ ಕೆಲಸದಲ್ಲಿ ಚೀನಾ ವ್ಯಸ್ತವಾಗಿದೆ. ತನ್ಮೂಲಕ ಭಾರತಕ್ಕೆ ಮತ್ತೊಮ್ಮೆ ಸಡ್ಡು ಹೊಡೆದಿದೆ.

ಗಡಿ ನಿಯಂತ್ರಣ ರೇಖೆಯಲ್ಲಿ ಭೂಗತ ಬಂಕರ್‌ ಸೇರಿದಂತೆ ಹಲವು ಮಿಲಿಟರಿ ಮೂಲಸೌಕರ್ಯ ನಿರ್ಮಾಣ, ದೂರ ಸಂಪರ್ಕ ಟವರ್‌ ಸ್ಥಾಪನೆ ಹಾಗೂ ಭೂಗತ ಕೇಬಲ್‌ ಎಳೆಯುವ ಕಾರ್ಯವನ್ನು ಚೀನಾ ಮಾಡುತ್ತಿದೆ. ಜತೆಗೆ ವೈಮಾನಿಕ ನೌಕೆಗಳು ಹಾಗೂ ವೈಮಾನಿಕ ಯುದ್ಧ ವಾಹನಗಳು, ಸಾಧನಗಳನ್ನು ಕೂಡ ಕೊಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಯುದ್ಧಕ್ಕೆ ಸಿದ್ಧವಾಗುವ ರೀತಿ ಉಗ್ರರು ಇಟ್ಟಿದ್ದ ಶಸ್ತ್ರಾಸ್ತ್ರ ವಶ: ಪಾಕ್‌, ಚೀನಾ ನಿರ್ಮಿತ ಮದ್ದು ಗುಂಡು ವಶಕ್ಕೆ

ತನ್ನ ಸರ್ವಋತು ಮಿತ್ರ ದೇಶಕ್ಕೆ ಮತ್ತಷ್ಟು ನೆರವು ನೀಡುವುದರ ಜತೆಗೆ, ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್‌ನಡಿಯ ರಸ್ತೆ ಹಾಗೂ ಜಲವಿದ್ಯುತ್‌ ಯೋಜನೆಗಳಿಗಾಗಿ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಚೀನಾ ನೆಲೆಗಳನ್ನು ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಈ ಕಾಯಕದಲ್ಲಿ ಚೀನಾ ತೊಡಗಿದೆ ಎಂದು ಹೇಳಲಾಗಿದೆ.

ಇದೇ ವೇಳೆ, ಚೀನಾ ಇತ್ತೀಚೆಗೆ ಅಭಿವೃದ್ಧಿಪಡಿಸಿರುವ ಎಸ್‌ಎಚ್‌-15 ಎಂಬ ಹೌವಿಟ್ಜರ್‌ ಗನ್‌ಗಳು ಕೂಡ ಎಲ್‌ಒಸಿಯ ಪಾಕಿಸ್ತಾನದ ಬದಿಯಲ್ಲಿ ವಿವಿಧೆಡೆ ಕಂಡುಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಗಡಿ ಒಳನುಸುಳುವಿಕೆ ಹೆಚ್ಚಿಸಲು ಪಾಪಿ Pakistan ಪ್ಲ್ಯಾನ್‌: ಗುಪ್ತಚರ ಸಂಸ್ಥೆ ಎಚ್ಚರಿಕೆ

ಚೀನಾ ಕಿತಾಪತಿ ಏನು?

  • ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಇನ್ನಷ್ಟು ಪ್ರಚೋದನೆ ನೀಡಲು ಗಡಿಯಲ್ಲಿ ಷಡ್ಯಂತ್ರ
  • ಸಶಸ್ತ್ರ ದಾಳಿಗೆ ಬೇಕಾದ ಮೂಲಸೌಕರ್ಯ ನಿರ್ಮಾಣಕ್ಕೆ ಪಾಕಿಸ್ತಾನಕ್ಕೆ ಭಾರೀ ನೆರವು
  • ಚೀನಾ-ಪಾಕ್‌ ಆರ್ಥಿಕ ಕಾರಿಡಾರ್‌ನ ರಸ್ತೆ, ಜಲವಿದ್ಯುತ್‌ ಯೋಜನೆಗೂ ಸಹಾಯ
  • ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಚೀನಾದ ನೆಲೆಗಳನ್ನು ರಕ್ಷಣೆ ಮಾಡಿಕೊಳ್ಳಲು ಕ್ರಮ
  • ಚೀನಾ ಇತ್ತೀಚೆಗೆ ಅಭಿವೃದ್ಧಿಪಡಿಸಿದ ಹೌವಿಟ್ಜರ್‌ ಗನ್‌ಗಳು ಎಲ್‌ಒಸಿಯಲ್ಲಿ ಪತ್ತೆ

ಇದನ್ನೂ ಓದಿ: ಎಲ್‌ಎಸಿ ಬಳಿ ಚೀನಾ ಕುತಂತ್ರಕ್ಕೆ ಟಕ್ಕರ್‌: ಅತಿ ಹಗುರ ಹೊವಿಟ್ಜರ್ ಕ್ಯಾನನ್ ನಿರ್ಮಿಸಲು ಭಾರತ, ಅಮೆರಿಕ ಪ್ಲ್ಯಾನ್‌

ಇದನ್ನೂ ಓದಿ: ಸ್ಟಾರ್‌ವಾರ್‌ ಶೈಲಿ ಯುದ್ಧನೌಕೆಗೆ ಚೀನಾ ಸಜ್ಜು: ಇತರೆ ದೇಶಗಳಿಗಿಂತ 100 ವರ್ಷ ಮುಂದೆ ಹೋಗಲು ಪ್ಲ್ಯಾನ್!