ಸ್ಟಾರ್‌ವಾರ್ ಶೈಲಿ ಯುದ್ಧನೌಕೆಗೆ ಚೀನಾ ಸಜ್ಜು: ಇತರೆ ದೇಶಗಳಿಗಿಂತ 100 ವರ್ಷ ಮುಂದೆ ಹೋಗಲು ಪ್ಲ್ಯಾನ್!
ಹೊಸ ನೌಕೆ ಚೀನಾ ನೌಕಾಪಡೆಯ 100 ವರ್ಷದ ಇತಿಹಾಸವನ್ನು ಸಂಪೂರ್ಣವಾಗಿ ಬದಲಾಯಿಸುವುದರ ಜೊತೆಗೆ, ಇತರೆ ದೇಶಗಳಿಗಿಂತ 100 ವರ್ಷ ಮುನ್ನಡೆ ಸಾಧಿಸಲು ನೆರವಾಗಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಸೌತ್ ಚೈನಾ ಮಾರ್ನಿಂಗ್ ಪೋಸ್ಟ್’ ವರದಿ ಮಾಡಿದೆ.
ಬೀಜಿಂಗ್ (ಜೂನ್ 17, 2023): ಅಮೆರಿಕ, ಭಾರತ, ಆಸ್ಪ್ರೇಲಿಯಾ, ಜಪಾನ್ ಸೇರಿದಂತೆ ಹಲವು ದೇಶಗಳೊಂದಿಗೆ ಸಮುದ್ರ ವಲಯದಲ್ಲಿ ಭಾರೀ ಸಂಘರ್ಷ ನಡೆಸುತ್ತಿರುವ ಕಮ್ಯುನಿಸ್ಟ್ ದೇಶವಾದ ಚೀನಾ, ಇದೀಗ ಹಾಲಿವುಡ್‌ನ ಸ್ಟಾರ್‌ವಾರ್ ಸಿನೆಮಾಗಳ ಮಾದರಿಯ ಅತ್ಯಾಧುನಿಕ ಯುದ್ಧನೌಕೆ ನಿರ್ಮಾಣಕ್ಕೆ ಮುಂದಾಗಿದೆ ಎಂದು ವರದಿಯೊಂದು ತಿಳಿಸಿದೆ.
ಹೊಸ ಪ್ರಸ್ತಾವಿತ ನೌಕೆ, ಒಂದು ದೇಶದ ಇಡೀ ನೌಕಾಪಡೆ ನಡೆಸುವ ನಡೆಸಬಹುದಾದ ಕೆಲಸವನ್ನು ತಾನು ಏಕಾಂಗಿಯಾಗಿ ನಡೆಸಬಲ್ಲದು. ಜೊತೆಗೆ ಹೊಸ ನೌಕೆ ಚೀನಾ ನೌಕಾಪಡೆಯ 100 ವರ್ಷದ ಇತಿಹಾಸವನ್ನು ಸಂಪೂರ್ಣವಾಗಿ ಬದಲಾಯಿಸುವುದರ ಜೊತೆಗೆ, ಇತರೆ ದೇಶಗಳಿಗಿಂತ 100 ವರ್ಷ ಮುನ್ನಡೆ ಸಾಧಿಸಲು ನೆರವಾಗಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಸೌತ್ ಚೈನಾ ಮಾರ್ನಿಂಗ್ ಪೋಸ್ಟ್’ ವರದಿ ಮಾಡಿದೆ.
ಇದನ್ನು ಓದಿ: ಭಾರತ ಯಾವುದೇ ದೇಶದ ಮಿಲಿಟರಿ ಮೈತ್ರಿಯ ಭಾಗವಾಗಿಲ್ಲ: ಅಮೆರಿಕ ಜತೆಗಿನ ಸಂಬಂಧದ ಬಗ್ಗೆ ಚೀನಾಗೆ ಸ್ಪಷ್ಟನೆ
ಪ್ರಸ್ತಾವಿತ ನೌಕೆಯ ನೀಲನಕ್ಷೆಯನ್ನು ಇತ್ತೀಚೆಗೆ ರಿಯರ್ ಅಡ್ಮಿರಲ್ ಮಾ ವೇಮಿಂಗ್ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ನೌಕೆಯು ಎಲೆಕ್ಟ್ರೋ ಮ್ಯಾಗ್ನೆಟಿಕ್ ಶಸ್ತ್ರಾಸ್ತ್ರಗಳು, ಪರಮಾಣು ಇಂಧನ ಚಾಲಿತ ಎಲೆಕ್ಟ್ರಿಕಲ್ ಸಿಸ್ಟಮ್, ರೈಲ್ ಗನ್, ಕಾಯಿಲ್‌ಗನ್, ರಾಕೆಟ್ ಲಾಂಚರ್, ಲೇಸರ್ ಶಸ್ತ್ರಾಸ್ತ್ರ, ಅತ್ಯಧಿಕ ಸಾಮರ್ಥ್ಯದ ಮೈಕ್ರೋವೇವ್‌ಗಳನ್ನು ಒಳಗೊಂಡಿರಲಿದೆ.
ಅಡ್ಮಿರಲ್ ಮಾ ವೇಮಿಂಗ್, ಚೀನಾ ನೌಕಾಪಡೆಗೆ ಆಧುನಿಕ ಸ್ಪರ್ಶ ನೀಡಿದ ವ್ಯಕ್ತಿ ಎಂಬ ಹಿರಿಮೆ ಹೊಂದಿದ್ದು, ಹೊಸ ನೌಕೆಯ ಕುರಿತು ಕಂಪ್ಯೂಟರ್‌ನಲ್ಲಿ ಸೃಷ್ಟಿಸಲಾದ ನೌಕೆಯನ್ನು ಹಿರಿಯ ರಾಜಕೀಯ ನಾಯಕರ ಮುಂದೆ ಪ್ರದರ್ಶಿಸಿದ್ದಾರೆ. ಈ ವೇಳೆ ರೈಲ್‌ಗನ್‌ಗಳು ಶಬ್ಧಕ್ಕಿಂತ 7 ಪಟ್ಟು ವೇಗದಲ್ಲಿ ಚಲಿಸಿ ದಾಳಿ ನಡೆಸುವ ದೃಶ್ಯಗಳು, ಆಟೋಮೆಟಿಕ್ ರೈಫಲ್ ರೀತಿ ಎಲೆಕ್ಟ್ರೋಮ್ಯಾಗ್ನೆಟಿಕ್ ವ್ಯವಸ್ಥೆ ಕ್ಷಿಪಣಿ ಉಡಾವಣಾ ವ್ಯವಸ್ಥೆಗಳು ಭಾರೀ ಗಮನ ಸೆಳೆದಿವೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಚೀನಾದ ರಕ್ಷಣಾ ಬಜೆಟ್ 18 ಲಕ್ಷ ಕೋಟಿಗೆ ಏರಿಕೆ: ಭಾರತಕ್ಕಿಂತ 3 ಪಟ್ಟು ಹೆಚ್ಚು ರಕ್ಷಣಾ ಬಜೆಟ್
ಈ ಶಸ್ತ್ರಾಸ್ತ್ರಗಳು ನೌಕೆಗೆ ಯಾವುದೇ ರೀತಿಯ ವಾಯುದಾಳಿ ತಡೆಯಲು, ಸಬ್‌ಮರೀನ್ ದಾಳಿ ತಡೆಯಲು, ಕ್ಷಿಪಣಿಗಳನ್ನು ಛೇದಿಸಲು, ಶತ್ರು ದೇಶದ ನೌಕೆ ಅಥವಾ ಇತರೆ ಸ್ಥಳಗಳ ಮೇಲೆ ಅತ್ಯಂತ ಕರಾರುವಾಕ್ ದಾಳಿ ನಡೆಸಲು ನೆರವಾಗಲಿದೆ.
ಇದನ್ನೂ ಓದಿ: ಅದಾನಿ ಗೆಳೆತನದ ವಿದೇಶಿ ಕಂಪನಿಗೆ ರಕ್ಷಣಾ ಗುತ್ತಿಗೆ? ರಾಷ್ಟ್ರೀಯ ಭದ್ರತೆ ಅಪಾಯದಲ್ಲಿ ಎಂದು ವಿಪಕ್ಷ ಹೊಸ ಆರೋಪ