Asianet Suvarna News Asianet Suvarna News

ಗಡಿ ಒಳನುಸುಳುವಿಕೆ ಹೆಚ್ಚಿಸಲು ಪಾಪಿ Pakistan ಪ್ಲ್ಯಾನ್‌: ಗುಪ್ತಚರ ಸಂಸ್ಥೆ ಎಚ್ಚರಿಕೆ

ಒಳನುಸುಳುವಲ್ಲಿ ಯಶಸ್ವಿಯಾಗುವ ಭಯೋತ್ಪಾದಕರಿಗೆ ಸಹಾಯ ಮಾಡಲು ಪಾಕಿಸ್ತಾನವು ಡ್ರೋನ್‌ಗಳ ಮೂಲಕ 300 ಸಣ್ಣ ಶಸ್ತ್ರಾಸ್ತ್ರಗಳನ್ನು ಭಾರತದೊಳಗೆ ಇಳಿಸಿದೆ ಎಂದು ವರದಿಯಾಗಿದೆ.

pakistan planning to intensify infiltration intelsays terror camps launchpads moved closer to loc ash
Author
First Published Sep 1, 2022, 8:02 PM IST

ಪಾಪಿ ಸಮುದ್ರದೊಳಗೆ ಬಿದ್ದರೂ ಮೊಣಕಾಲುದ್ದ ನೀರು ಅನ್ನೋ ಹಾಗೆ, ಪಾಕಿಸ್ತಾನಕ್ಕೆ (Pakistan)  ತನ್ನ ದೇಶದಲ್ಲಿ ಸಾಕಷ್ಟು ತೊಂದರೆಗಳಿದ್ದರೂ, ಆ ಸಮಸ್ಯೆಗಳಿಗೆ ಪರಿಹಾರ ಹುಡುಕೋದು ಬಿಟ್ಟು ಭಾರತದ ಮೇಲೆ ಭಯೋತ್ಪಾದಕರನ್ನು (Terroists) ಛೂ ಬಿಡಲು ಆಗಾಗ್ಗೆ ಪ್ಲ್ಯಾನ್‌ ಮಾಡುತ್ತಲೇ ಇರುತ್ತದೆ. ಜಮ್ಮು ಮತ್ತು ಕಾಶ್ಮೀರದೊಳಗೆ (Jammu and Kashmir) ಒಳನುಸುಳುವಿಕೆಯನ್ನು (Infiltration) ತೀವ್ರಗೊಳಿಸುವ ಪ್ರಯತ್ನದಲ್ಲಿ, ಪಾಕಿಸ್ತಾನವು ತನ್ನ ಎಲ್ಲಾ ಭಯೋತ್ಪಾದಕ ಶಿಬಿರಗಳು (Terror Camps) ಮತ್ತು ಲಾಂಚ್‌ಪ್ಯಾಡ್‌ಗಳನ್ನು (Launchpads) ಗಡಿ ನಿಯಂತ್ರಣ ರೇಖೆಯ (Line of Control) (ಎಲ್‌ಒಸಿ) ಬಳಿ ಸ್ಥಳಾಂತರಿಸಿದೆ ಎಂದು ತಿಳಿದುಬಂದಿದೆ. ಲಷ್ಕರ್- ಇ -ತೈಬಾ (Lashkar - E - Taiba) (ಎಲ್‌ಇಟಿ), ಜೈಶ್-ಇ-ಮೊಹಮ್ಮದ್ (Jaish - E - Mohammed) (ಜೆಇಎಂ), ಮತ್ತು ಹಿಜ್ಬುಲ್ ಮುಜಾಹಿದ್ದೀನ್ (Hijbul Mujahideen) (ಎಚ್‌ಎಂ) ನಂತಹ ಭಯೋತ್ಪಾದಕ ಗುಂಪುಗಳು ಭಾರತದ ಗಡಿಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ತಮ್ಮ ಶಿಬಿರಗಳನ್ನು ಸ್ಥಾಪಿಸಿವೆ ಎಂದು ಗುಪ್ತಚರ ಏಜೆನ್ಸಿಗಳ (Intelligence Agencies) ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.

ಪಾಕಿಸ್ತಾನದ ಐಎಸ್‌ಐ (ISI) ನೇರವಾಗಿ ಲಾಂಚ್‌ಪ್ಯಾಡ್‌ಗಳನ್ನು ನಿರ್ವಹಿಸುತ್ತಿದೆ ಮತ್ತು ಅವರು ವಾಸ್ತವವಾಗಿ, ಎಲ್ಒಸಿ ಉದ್ದಕ್ಕೂ ಶಿಬಿರಗಳನ್ನು ಸ್ಥಾಪಿಸಲು ಭಯೋತ್ಪಾದಕ ಗುಂಪುಗಳಿಗೆ ಸಹಾಯ ಮಾಡಿದ್ದಾರೆ ಮತ್ತು ಭಯೋತ್ಪಾದಕರಿಗೆ ತರಬೇತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಳನುಸುಳುವಲ್ಲಿ ಯಶಸ್ವಿಯಾಗುವ ಭಯೋತ್ಪಾದಕರಿಗೆ ಸಹಾಯ ಮಾಡಲು ಪಾಕಿಸ್ತಾನ ಡ್ರೋನ್‌ಗಳ (Drone) ಮೂಲಕ 300 ಸಣ್ಣ ಶಸ್ತ್ರಾಸ್ತ್ರಗಳನ್ನು ಭಾರತದೊಳಗೆ ಇಳಿಸಿದೆ ಎಂದು ವರದಿಯಾಗಿದೆ." ಹೈಬ್ರಿಡ್ ಹತ್ಯೆ" ಗಾಗಿ ಎಲ್ಲಾ ಶಸ್ತ್ರಾಸ್ತ್ರಗಳು ಶ್ರೀನಗರ ಮತ್ತು ಸುತ್ತಮುತ್ತ ಇವೆ ಎಂದೂ ಮಾಹಿತಿ ತಿಳಿದುಬಂದಿದೆ. ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್‌ನ ಸುಮಾರು 50 ವಿದೇಶಿ ಭಯೋತ್ಪಾದಕರು ಈಗಾಗಲೇ ಭಾರತದೊಳಕ್ಕೆ ನುಸುಳಿದ್ದಾರೆ ಮತ್ತು ಶ್ರೀನಗರದಲ್ಲಿ ತಂಗಿದ್ದಾರೆ. ಹಾಗೂ ಭಾರತದ ವಿರುದ್ಧ ಕ್ರಮದ ಆದೇಶಕ್ಕಾಗಿ ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನು ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್‌: 3 ಎಲ್‌ಇಟಿ ಉಗ್ರರನ್ನು ಹತ್ಯೆಗೈದ ಭದ್ರತಾ ಪಡೆ

3 POK ಕ್ಲಸ್ಟರ್‌ಗಳಲ್ಲಿ ಭಯೋತ್ಪಾದನಾ ಶಿಬಿರಗಳು
ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಇತ್ತೀಚಿನ ಒಳನುಸುಳುವಿಕೆ ವಿಫಲವಾದ ಪ್ರಯತ್ನಗಳು ಭಾರತದ ಗಡಿಯ ಸಮೀಪದಲ್ಲಿ ಭಯೋತ್ಪಾದನಾ ಲಾಂಚ್‌ಪ್ಯಾಡ್‌ಗಳನ್ನು ಸ್ಥಾಪಿಸುವ ಪಾಕಿಸ್ತಾನದ ಪ್ರಯತ್ನದ ಕಡೆಗೆ ಸೂಚಿಸುತ್ತವೆ ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ. ತಾಲಿಬಾನ್ ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನ ತೊರೆದ ಹೆಚ್ಚಿನ ಸಂಖ್ಯೆಯ ತರಬೇತಿ ಪಡೆದ ಕಾರ್ಯಕರ್ತರು ಪೇಶಾವರ, ಬಹವಲ್ಪುರ ಮತ್ತು ಮುಜಾಫರಾಬಾದ್‌ನಲ್ಲಿ ಕುಳಿತು ಒಳನುಸುಳಲು ಕಾಯುತ್ತಿದ್ದಾರೆ ಎಂದೂ ಮೂಲಗಳು ತಿಳಿಸಿವೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶದಲ್ಲಿ ಮನ್ಶೇರಾ, ಮುಜಾಫರಾಬಾದ್ ಮತ್ತು ಕೋಟ್ಲಿ ಎಂಬ ಮೂರು ಗುಂಪುಗಳಲ್ಲಿ ಭಯೋತ್ಪಾದಕ ಶಿಬಿರಗಳನ್ನು ನಡೆಸಲಾಗುತ್ತಿದೆ ಮತ್ತು ಲಷ್ಕರ್- ಇ -ತೈಬಾ, ಜೈಶ್-ಇ-ಮೊಹಮ್ಮದ್, ಅಲ್-ಬದರ್ ಮತ್ತು ಹರ್ಕತ್-ಉಲ್-ಮುಜಾಹಿದ್ದೀನ್ ನಿಯಂತ್ರಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. 

ಜಮ್ಮು ಕಾಶ್ಮೀರದಲ್ಲಿ ಇನ್ಮುಂದೆ ಸ್ಥಳೀಯರಲ್ಲದವರಿಗೂ ಮತ ಹಕ್ಕು..! ಮುಫ್ತಿ ವಿರೋಧ

ಈ ಮಧ್ಯೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪ್ರದೇಶದಲ್ಲಿ ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಜೈಶ್-ಇ-ಮೊಹಮ್ಮದ್ ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ. ಉಗ್ರರನ್ನು ಸೋಪೋರ್ ನಿವಾಸಿ ಮೊಹಮ್ಮದ್ ರಫಿ ಮತ್ತು ಪುಲ್ವಾಮಾ ನಿವಾಸಿ ಕೈಸರ್ ಅಶ್ರಫ್ ಎಂದು ಗುರುತಿಸಲಾಗಿದ್ದು, ಎನ್‌ಕೌಂಟರ್‌ನಲ್ಲಿ ಗಾಯಗೊಂಡ ನಾಗರಿಕನನ್ನು ಶ್ರೀನಗರ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

Follow Us:
Download App:
  • android
  • ios