3 ತಿಂಗಳ ಹೆಣ್ಣು ಮಗುವನ್ನು 7 ಬಾರಿ ಮಾರಾಟ: ಆರೋಪಿಗಳ ಬಂಧನ

  • ಮಕ್ಕಳ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಗಳ ಬಂಧನ
  • 3 ತಿಂಗಳ ಹೆಣ್ಣು ಮಗುವನ್ನು 7 ಬಾರಿ ಮಾರಾಟ
  • ಹೆಣ್ಣು ಮಗು ಎಂಬ ಕಾರಣಕ್ಕೆ ದ್ವೇಷಿಸುತ್ತಿದ್ದ ತಂದೆ
Child trafficking Andhra Pradesh Police have arrested 11 people who sold three month child seven time akb

ಅಮರಾವತಿ(ಮಾ.30): ಮಕ್ಕಳ ಕಳ್ಳಸಾಗಣೆ ಪ್ರಕರಣವೊಂದನ್ನು ಬಯಲು ಮಾಡಿರುವ ಆಂಧ್ರ ಪೊಲೀಸರು (Andhra Police) ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರನ್ನು ಬಂಧಿಸಿದ್ದಾರೆ. ಆರೋಪಿಗಳು ಮೂರು ತಿಂಗಳ ಮಗುವನ್ನು ಕೇವಲ ಎರಡು ತಿಂಗಳಲ್ಲಿ ಬರೋಬರಿ ಏಳು ಬಾರಿ ಮಾರಾಟ ಮಾಡಿದ್ದರು. ಮಗುವನ್ನು ಮೊದಲ ಬಾರಿ 70 ಸಾವಿರಕ್ಕೆ ಮಾರಾಟ ಮಾಡಲಾಗಿತ್ತು. ನಂತರ ಏಳನೇ ಬಾರಿ ಮಾರಾಟ ಮಾಡುವಾಗ ಮಗುವಿಗೆ 2.5 ಲಕ್ಷ ನಿಗದಿಪಡಿಸಲಾಗಿತ್ತು. ಹೆಣ್ಣು ಮಗುವಿನ (Girl Baby) ಜನನದ ನಂತರ ಮಗುವಿನ ತಂದೆ ತನ್ನ ಪತ್ನಿ ಹೆಣ್ಣು ಹೆತ್ತಳೆಂದು ಬೇಸರಗೊಂಡು ಮಗುವಿನ ಮಾರಾಟಕ್ಕೆ ಯತ್ನಿಸಿದ್ದ ಎಂದು ಪೊಲೀಸರ(Police) ತನಿಖೆ ವೇಳೆ ತಿಳಿದು ಬಂದಿದೆ. 

ಕಳೆದ ವರ್ಷ ಕೋವಿಡ್ ಸಮಯದಲ್ಲಿ ಶಾಲೆ ಇಲ್ಲದೆ ಅಲೆದಾಡುತ್ತಿರುವ ಮಕ್ಕಳನ್ನು ಕಳ್ಳಸಾಗಣೆ (Child trafficking) ಮಾಡಿ ಕಠಿಣ ದುಡಿಮೆಗೆ ಇಳಿಸುವ ಕಳ್ಳಸಾಗಣೆ ದಂಧೆ ಉಲ್ಬಣಿಸಿದೆ ಎಂಬ ಭಯಾನಕ ಸತ್ಯ ಬೆಚ್ಚಿ ಬೀಳಿಸಿತ್ತು.  ಎನ್‌ಜಿಒವೊಂದರ ಮುಖ್ಯಸ್ಥರು ಈ ಕಳ್ಳಸಾಗಣೆ ಜಾಲದ ಕಠೋರ ಸಂಗತಿಗಳ ಕುರಿತು ಮಾಹಿತಿ ಬಿಚ್ಚಿಟ್ಟಿದ್ದರು. ಹಿಂದೆ ಕೋವಿಡ್‌ ಪೂರ್ವದಲ್ಲಿ ರೈಲುಗಳು ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿದ್ದವು. ಈ ಮೂಲಕವೇ ಕಳ್ಳಸಾಗಣೆದಾರರು ಮಕ್ಕಳನ್ನು ನಿರ್ದಿಷ್ಟ ತಾಣಕ್ಕೆ ರೈಲುಗಳ ಮೂಲಕ ಸಾಗಿಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ರೈಲುಗಳ ಸಂಚಾರ ಸಮಯ ಏರುಪೇರಾಗಿದೆ. ಇದಕ್ಕೆ ತಕ್ಕಂತೆ ಮಕ್ಕಳ ಕಳ್ಳಸಾಗಣೆಯ ವಿಧಾನ ಕೂಡ ಬದಲಾಗಿದೆ. ರೈಲಿನ ಬದಲು ಈಗ ಲಕ್ಷುರಿ ಬಸ್‌ಗಳನ್ನು ಪಾತಕಿಗಳು ಬಳಸುತ್ತಿದ್ದಾರೆ ಎಂಬ ಮಾಹಿತಿಯನ್ನು ಅವರು ಹೊರ ಹಾಕಿದ್ದರು. 

ಬಸ್‌ ಕಿಟಕಿಗಳಿಗೆ ಬಣ್ಣದ ಪೇಪರ್‌ ಅಂಟಿಸಿದ ಐಷಾರಾಮಿ ಬಸ್‌ಗಳಲ್ಲಿ (Luxury Bus)ಮಕ್ಕಳನ್ನು ತುಂಬಿಕೊಂಡು ಹೊತ್ತಲ್ಲದ ಹೊತ್ತಿನಲ್ಲಿ ಮಕ್ಕಳನ್ನು ಸಾಗಿಸಲಾಗುತ್ತಿದೆ. ಇದನ್ನು ಪತ್ತೆ ಮಾಡಿ, ಮುಗ್ಧ ಮಕ್ಕಳನ್ನು ರಕ್ಷಿಸುವುದು ಸರಕಾರಿ ಸಂಸ್ಥೆ ಮತ್ತು ಎನ್‌ಜಿಒಗಳಿಗೆ ಕಷ್ಟಕರವಾಗಿದೆ ಎಂಬ ಮಾಹಿತಿ ತಿಳಿದು ಬಂದಿತ್ತು.

ಹಿಂದೆ ನಮಗೆ ರೈಲುಗಳ ಟೈಮಿಂಗ್‌ ಗೊತ್ತಿತ್ತು. ನಿಲ್ದಾಣಗಳ ಮಾಹಿತಿ ಪಕ್ಕಾ ಇತ್ತು. ಮುಖ್ಯವಾಗಿ ಇಂತಹ ಕಡೆ ಒಬ್ಬಂಟಿಯಾಗಿ ಅಲೆದಾಡುವ ಮಕ್ಕಳ ಮೇಲೆ ನಾವು ಸುಲಭವಾಗಿ ನಿಗಾ ಇರಿಸಬಹುದಾಗಿತ್ತು. ಆದರೆ ಈಗ ಲಕ್ಷುರಿ ಬಸ್‌ಗಳಲ್ಲಿ ಅವಿತಿಟ್ಟು ಸಾಗಿಸುವ ಮಕ್ಕಳನ್ನು ಪತ್ತೆ ಮಾಡುವುದು ಹೇಗೆ? ನಿತ್ಯ ಸಂಚರಿಸುವ ಲಕ್ಷಾಂತರ ಬಸ್ಸುಗಳ ಪೈಕಿ ಮಕ್ಕಳನ್ನು ಕಳ್ಳಸಾಗಣೆ ಮಾಡುವ ನಿರ್ದಿಷ್ಟ ಬಸ್‌ ಗುರುತಿಸಿ ತಡೆಯುವುದು ಸುಲಭದ ಕೆಲಸ ಅಲ್ಲ. ಇದರಿಂದಾಗಿ ಇತ್ತೀಚೆಗೆ ಮಕ್ಕಳ ಕಳ್ಳಸಾಗಣೆ ಹೆಚ್ಚಿದೆ ಎಂದುಸೆಂಟರ್‌ ಡೈರೆಕ್ಟ್ ಎಂಬ ಎನ್‌ಜಿಒ (NGO) ನಿರ್ದೇಶಕ ಸುರೇಶ್‌ ಕುಮಾರ್‌ (Suresh Kumar) ಹೇಳಿದ್ದರು.

14 ವರ್ಷದ ಬಾಲಕಿ 1.5 ಲಕ್ಷಕ್ಕೆ ಮಾರಾಟ.. ರೇಪ್ ಮಾಡಿದ ಕಾಮುಕರೆಷ್ಟೋ?

ಕಳ್ಳಸಾಗಣೆಯ ಲಕ್ಷುರಿ ಬಸ್ಸುಗಳ ಚಾಲಕರಿಗೆ ವೇಳಾಪಟ್ಟಿ ಇರುವುದಿಲ್ಲ. ಅವರು ಚಾಲಾಕಿಗಳು, ಹಗಲು ರಹಸ್ಯ ಸ್ಥಳದಲ್ಲಿ ನಿಲ್ಲಿಸಿ ರಾತ್ರಿ ವೇಳೆ ಮಕ್ಕಳನ್ನು ತುಂಬಿಸಿಕೊಂಡು ಪರಾರಿಯಾಗುತ್ತಾರೆ. ಸಂಶಯ ಬಂದ ಮಾರ್ಗಗಳಲ್ಲಿ ಅವರು ಸಂಚರಿಸುವುದೇ ಇಲ್ಲ. ಎಲ್ಲಾದರೂ ಅಧಿಕಾರಿಗಳು ಕೈಅಡ್ಡ ಹಾಕಿ ತಡೆದರೆ ನಿಲ್ಲಿಸುವುದು ಅಪರೂಪ. ನುಗ್ಗಿಸಿಕೊಂಡು ಪರಾರಿಯಾಗುತ್ತಾರೆ. ಇತ್ತೀಚೆಗೆ ಬಿಹಾರದಲ್ಲಿ(Bihar) ಲಕ್ಷುರಿ ಬಸ್ಸುಗಳಲ್ಲಿ ಸಾಗಿಸುತ್ತಿದ್ದ 75 ಮಕ್ಕಳನ್ನು ರಕ್ಷಣೆ (Rescue) ಮಾಡಲಾಗಿದೆ. ಆದರೆ ನೂರಾರು ಮಕ್ಕಳ ಕಳ್ಳಸಾಗಣೆ ಕಣ್ತಪ್ಪಿ ಹೋಗಿದೆ' ಎಂದು ಅಧಿಕಾರಿಗಳು ಹೇಳಿದ್ದಾರೆ. 

500 ರು.ಗೆ ತಾನು ಹೆತ್ತ ಮಗಳನ್ನೇ ಮಾರಲು ಮುಂದಾದ ಮಹಿಳೆ : ಕಳ್ಳಸಾಗಣೆ ಸುಳಿವು

Latest Videos
Follow Us:
Download App:
  • android
  • ios