ಜೈಪುರ[ಮೇ. 18] ಮಧ್ಯಪ್ರದೇಶದ 14 ವರ್ಷದ ಹೆಣ್ಣುಮಗಳ ಮೇಲೆ ರಾಜಸ್ಥಾನದ ಮೂರು ಜನ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ವ್ಯಕ್ತಿಗಳು ಅತ್ಯಾಚಾರ ಎಸಗಿದ್ದಾರೆ.

ಜೈಪುರದ ಪೊಲೀಸರು 9 ಜನ ಆರೋಪಿಗಳನ್ನು ವಶಕ್ಕೆ ಪಡೆದಾಗ ಈ ಆಘಾತಕಾರಿ ಸುದ್ದಿ ಬಹಿರಂಗವಾಗಿದೆ. ಭರತ್ ಪುರ್, ಕೌರೋಲಿ, ದೋಲಾಪುರ್ ಮತ್ತು ಜೈಪುರದ ಆರೋಪಿಗಳನ್ನು  ಪೋಸ್ಕೋ ಕಾಯ್ದೆಯಡಿ ವಶಕ್ಕೆ ಪಡೆದಾಗ ಇಂಥದ್ದೊಂದು ದುರಂತ ನಡೆದ ಸಂಗತಿ ಗೊತ್ತಾಗಿದೆ.

ಮಧ್ಯಪ್ಗರದೇಶದ ನರ್ಸಿಂಗ್ ಪುರ್ ಜಿಲ್ಲೆಯ ಸಂತ್ರಸ್ತ ಬಾಲಕಿಯ ತಂದೆ ಅಂಧ, ತಾಯಿ ಮಾನಸಿಕ ಸ್ಥಿಮಿತ ಕಳೆದುಕೊಂಡವರು. ಮೂರು ತಿಂಗಳ ಹಿಂದೆ ಈ ಕುಟುಂಬಕ್ಕೆ ಸಂಬಂಧಿಕರು ಬಾಲಕಿಯನ್ನು 1.5 ಲಕ್ಷ ಕ್ಕೆ ಮಾರಾಟ ಮಾಡಿಸುತ್ತಾರೆ.

ಎಚ್‌ಐವಿ ಪೀಡಿತೆ ಎಂದು ಹೇಳಿ ಅತ್ಯಾಚಾರದಿಂದ ಪಾರಾದ ದಿಟ್ಟ ಮಹಿಳೆ!

ಅಲ್ಲಿಂದ ಆಕೆಯನ್ನು ರಾಜಸ್ಥಾಬದ ಭರತ್ ಪುರ್ ಗೆ ಕರೆದುಕೊಂಡು ಬಂದು ಮಾರಾಟ ಮಾಡಲಾಗುತ್ತದೆ. ಅಲ್ಲಿ ಬಾಲಕಿ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ಅಲ್ಲಿಂದ ಆಕೆ ಮತ್ತೆ ಮಾರಾಟಕ್ಕೆ ಒಳಗಾಗುತ್ತಾಳೆ.

ಪ್ರಕರಣಕ್ಕೆ ಸಂಬಂಧಿಸಿ ಜೀತೇಂದ್ರ, ಭುಪೇಂದ್ರ, ರಾಧೆ ಶ್ಯಾಮ್ ಎನ್ನುವರನ್ನು  ವಶಕ್ಕೆ ಪಡೆಯಲಾಗಿದ್ದು ಬಾಲಕಿಯ ಹೇಳಿಕೆ ಮತ್ತು ಆಕೆ  ಹೊಂದಿರುವ ಪೋನ್ ನಂಬರ್ ಗಳನ್ನು ಆಧರಿಸಿ ಹೆಚ್ಚಿನ ತನಿಖೆ ಮಾಡಲಾಗುತ್ತಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.