ಪುಣೆ :  ಅನೇಕ ಬಾರಿ ಆಟೋ ಚಾಲಕರು, ಬಸ್ ಚಾಲಕರ ಪ್ರಮಾಣಿಕತೆಯ ಬಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಅದರಂತೆ ಪುಣೆಯ ಆಟೋ ಚಾಲಕರೋರ್ವರು ಕೂಡ ತಮ್ಮ ಪ್ರಾಮಾಣಿಕತೆ ಮೆರೆದಿದ್ದು, ಪ್ರಯಾಣಿಕರೋರ್ವರು ತಮ್ಮ ಆಟೋದಲ್ಲಿ ಮರೆತು ಹೋಗಿದ್ದ 4 ಲಕ್ಷ ರು. ಚೆಕ್ ಮರಳಿಸಿದ್ದಾರೆ. 

ಅವಿನಾಶ್ ಬೊಕಾರೆ ಎನ್ನುವ  ವ್ಯಕ್ತಿಯ ಆಟೋದಲ್ಲಿ  ಡಿಸೆಂಬರ್ 14ರಂದು ವ್ಯಕ್ತಿಯೋರ್ವರು 4 ಲಕ್ಷ ರು. ಮೌಲ್ಯದ ಚೆಕ್ ಮರೆತು ತೆರಳಿದ್ದರು. ಇದನ್ನು ಕಂಡ ಅವಿನಾಶ್ ಪೊಲೀಸರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. 

ಬ್ಯಾಗ್ ಮರೆತು ತೆರಳಿದ್ದ ಪ್ರಯಾಣಿಕರನ್ನೇ ಹುಡುಕಲು ಯತ್ನಿಸಿದ್ದು, ಆ ವ್ಯಕ್ತಿ ಪತ್ತೆಯಾಗದಿದ್ದಾಗ ಪೊಲೀಸರಿಗೆ ಅದನ್ನು ನೀಡಿದ್ದಾರೆ. ಪೊಲೀಸರು ಬ್ಯಾಗ್ ಮಾಲಿಕ ಯುವರಾಜ್ ಮಾನೆಯನ್ನು ಪತ್ತೆ ಹಚ್ಚಿ ಅವರಿಗೆ ಹಸ್ತಾಂತರಿಸಿದ್ದಾರೆ. 

ಪುಣೆಯ ಆಟೋ ಚಾಲಕ ಅವಿನಾಶ್ ಈ ರೀತಿಯ ಬ್ಯಾಗ್ ಮರಳಿಸಿದ ವಿಚಾರ ಸುದ್ದಿಯಾಗುತ್ತಿದ್ದಂತೆ ಅವರ ಪ್ರಮಾಣಿಕತೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬ್ಯಾಗ್ ಮಾಲಿಕ ಮಾನೇ ಕೂಡ ಅವರಿಗೆ ತಮ್ಮ ಧನ್ಯವಾಧ ತಿಳಿಸಿದ್ದಾರೆ.