ಸಿಂಧು ನದಿ ನೀರು ಒಪ್ಪಂದವನ್ನು ಭಾರತ ಅಮಾನತಿನಲ್ಲಿ ಇರಿಸಿದ ಸುಮಾರು 1 ವಾರದ ನಂತರ ಭಾರತವು ಸಿಂಧುವಿನ ಉಪನದಿ ಚಿನಾಬ್‌ನಿಂದ ಪಾಕಿಸ್ತಾನಕ್ಕೆ ನೀರು ಹರಿಸುವುದನ್ನು ನಿಲ್ಲಿಸಿದೆ. ಇದರಿಂದ ಪಾಕಿಸ್ತಾನಕ್ಕೆ ನದಿ ನೀರು ಹರಿವು ದಾಖಲೆ ಪ್ರಮಾಣದಲ್ಲಿ ಇಳಿದಿದೆ.

ಇಸ್ಲಾಮಾಬಾದ್ (ಮೇ.7): ಸಿಂಧು ನದಿ ನೀರು ಒಪ್ಪಂದವನ್ನು ಭಾರತ ಅಮಾನತಿನಲ್ಲಿ ಇರಿಸಿದ ಸುಮಾರು 1 ವಾರದ ನಂತರ ಭಾರತವು ಸಿಂಧುವಿನ ಉಪನದಿ ಚಿನಾಬ್‌ನಿಂದ ಪಾಕಿಸ್ತಾನಕ್ಕೆ ನೀರು ಹರಿಸುವುದನ್ನು ನಿಲ್ಲಿಸಿದೆ. ಇದರಿಂದ ಪಾಕಿಸ್ತಾನಕ್ಕೆ ನದಿ ನೀರು ಹರಿವು ದಾಖಲೆ ಪ್ರಮಾಣದಲ್ಲಿ ಇಳಿದಿದೆ.

ಚಿನಾಬ್ ನದಿಯಲ್ಲಿ ನೀರಿನ ಹರಿವು ಭಾನುವಾರ 35,000 ಕ್ಯೂಸೆಕ್‌ ಇತ್ತು. ಅದು ಸೋಮವಾರ ಬೆಳಿಗ್ಗೆ ಸುಮಾರು 3,100 ಕ್ಯೂಸೆಕ್‌ಗಳಿಗೆ ಇಳಿದಿದೆ ಎಂದು ಪಾಕ್‌ ಜಲಾನಯನ ಕಚೇರಿಯೊಂದು ಹೇಳಿದೆ.

ಈ ನಡುವೆ, ಚಿನಾಬ್ ನದಿ ಈ ಮುನ್ನ 25-30 ಅಡಿ ಎತ್ತರದಲ್ಲಿ ಹರಿಯುತ್ತಿತ್ತು, ಆದರೆ ಈಗ ಇಲ್ಲಿ ಕೇವಲ 1.5-2 ಅಡಿ ನೀರು ಮಾತ್ರ ಉಳಿದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಇದನ್ನೂ ಓದಿ: ನೀರು ಸ್ಥಗಿತದ ಬೆನ್ನಲ್ಲೇ ಒಣಗಿದ ಚೆನಾಬ್‌, ಪಾಕ್‌ ಮಾಧ್ಯಮಗಳಲ್ಲಿ ಸುದ್ದಿಯಾದ ಭಾರತದ ಜಲಬಾಂಬ್‌!

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪಾಕಿಸ್ತಾನದ ಅಧಿಕಾರಿಗಳು, ’ಭಾರತವು ಪ್ರಸ್ತುತ ಚಿನಾಬ್ ಜಲಾನಯನ ಪ್ರದೇಶದಲ್ಲಿರುವ ತನ್ನ ಅಣೆಕಟ್ಟುಗಳು/ಜಲವಿದ್ಯುತ್ ಯೋಜನೆಗಳನ್ನು ತುಂಬಿಸಲು ನೀರನ್ನು ಬಳಸಿಕೊಳ್ಳುತ್ತಿದೆ. ಇದು ಸಿಂಧು ಜಲ ಒಪ್ಪಂದದ ಗಂಭೀರ ಉಲ್ಲಂಘನೆ’ ಎಂದು ಕಿಡಿಕಾರಿದೆ.