10 ಜನರ ಬಲಿ ಪಡೆದ ರೈಲು ಅವಘಡ ನಡೆದು ಸರಿಯಾಗಿ ಒಂದು ತಿಂಗಳಿಗೆ ಮತ್ತೊಂದು ರೈಲು ದುರಂತ
10 ಜನರ ಬಲಿ ಪಡೆದ ಕಾಂಚನಾಜುಂಗಾ ಎಕ್ಸ್‌ಪ್ರೆಸ್ ರೈಲು ದುರಂತ ನಡೆದು ಸರಿಯಾಗಿ ಒಂದು ತಿಂಗಳಿಗೆ ದೇಶದಲ್ಲಿ ಮತ್ತೊಂದು ರೈಲು ದುರಂತ ಸಂಭವಿಸಿದ್ದು ನಾಲ್ವರು ಸಾವನ್ನಪ್ಪಿದ್ದಾರೆ.
ಗೊಂಡಾ: 10 ಜನರ ಬಲಿ ಪಡೆದ ಕಾಂಚನಾಜುಂಗಾ ಎಕ್ಸ್‌ಪ್ರೆಸ್ ರೈಲು ದುರಂತ ನಡೆದು ಸರಿಯಾಗಿ ಒಂದು ತಿಂಗಳಿಗೆ ದೇಶದಲ್ಲಿ ಮತ್ತೊಂದು ರೈಲು ದುರಂತ ಸಂಭವಿಸಿದೆ. ಉತ್ತರ ಪ್ರದೇಶದ ಗೊಂಡಾದಲ್ಲಿ ಚಂಢೀಗರ್ ಟು ದಿಬ್ರೂಗರ್ ಎಕ್ಸ್‌ಪ್ರೆಸ್ ರೈಲಿನ 12 ಬೋಗಿಗಳು ಹಳಿ ತಪ್ಪಿದೆ. ಈ ದುರಂತದಲ್ಲಿ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದು ಅನೇಕರು ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ರಕ್ಷಣಾ ತಂಡ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಕಳೆದ ತಿಂಗಳು ಜೂನ್ 17ರಂದೇ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ .ಸೀಲ್ದಾಹ್‌ಗೆ ಹೊರಟಿದ್ದ ಪ್ರಯಾಣಿಕ ರೈಲು ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 10 ಜನ ಪ್ರಯಾಣಿಕರು ಸಾವನ್ನಪ್ಪಿದ್ದರು. ಈ ಘಟನೆ ನಡೆದು ಸರಿಯಾಗಿ ಒಂದು ತಿಂಗಳು ಕಳೆದಿದೆ ಅಷ್ಟೇ ಅಷ್ಟರಲ್ಲಿ ಈಗ ಉತ್ತರ ಪ್ರದೇಶ ಗೊಂಡಾದಲ್ಲಿ ಮತ್ತೊಂದು ರೈಲು ದುರಂತ ನಡೆದಿದೆ.
WB Train Accident Update: ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ಟ್ರೈನ್ ಡಿಕ್ಕಿ: ಮೃತರ ಸಂಖ್ಯೆ 15ಕ್ಕೆ ಏರಿಕೆ
ಇಂದು ನಡೆದ ಈ ರೈಲು ಅವಘಡದಲ್ಲಿ ಚಂಢೀಗರ್ ದಿಬ್ರುಗರ್ ಎಕ್ಸ್‌ಪ್ರೆಸ್ ರೈಲಿನ ಹಲವು ಕೋಚ್‌ಗಳು ಹಳಿ ತಪ್ಪಿದ್ದು, ಈ ಅವಘಡದಲ್ಲಿ ಓರ್ವ ಸಾವನ್ನಪ್ಪಿದ್ದು ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಉತ್ತರ ಪ್ರದೇಶದ ಝಿಲಾಹಿ ಹಾಗೂ ಗೊಂಡಾದ ನಡುವೆ ಬರುವ ಪಿಕೌರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 15904 ಸಂಖ್ಯೆಯ ಈ ರೈಲು ಚಂಢೀಗಡದಿಂದ ಅಸ್ಸಾಂನ ದಿಬ್ರುಗರ್‌ಗೆ ಆಗಮಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಅಪ್ಪಂದಿರ ದಿನಕ್ಕೆ ಪುತ್ರಿ ಜೊತೆ ಕಳೆಯಲು ಡ್ಯೂಟಿ ಬದಲಿಸಿದ ಅಧಿಕಾರಿ ರೈಲು ಅಪಘಾತದಲ್ಲಿ ಸಾವು!
ಹಳಿ ತಪ್ಪಿದ 12 ಕೋಚ್‌ಗಳಲ್ಲಿ 4 ಕೋಚುಗಳು ಎಸಿ ಕಂಪಾರ್ಟ್‌ಮೆಂಟ್‌ಗಳಾಗಿದ್ದು, ಝುಲಾಹಿ ರೈಲು ನಿಲ್ದಾಣಕ್ಕೆ ಕೆಲವೇ ಕಿಲೋ ಮೀಟರ್ ದೂರಗಳಿರುವಾಗ ಈ ದುರಂತ ಸಂಭವಿಸಿದೆ.