CAA Implemention ಕೋವಿಡ್ ಅಂತ್ಯಗೊಂಡ ಬೆನ್ನಲ್ಲೇ ಪೌರತ್ವ ಕಾಯ್ದೆ ಜಾರಿ, ಅಮಿತ್ ಶಾ ಘೋಷಣೆ!
- ಕೊರೋನಾ ಅಂತ್ಯಗೊಂಡ ಬಳಿಕ ಸಿಎಎ ಜಾರಿ ಎಂದ ಅಮಿತ್ ಶಾ
- ತಪ್ಪು ಮಾಹಿತಿ ನೀಡಿ ಮತ ಪಡೆಯಲು ಯತ್ನಿಸುತ್ತಿದೆ ಬ್ಯಾನರ್ಜಿ ಸರ್ಕಾರ
- ಮತಕ್ಕಾಗಿ ಒಳನುಸುಳಲು ಅವಕಾಶ ಮಾಡಿಕೊಟ್ಟ ದೀದಿ ಸರ್ಕಾರ
ಕೋಲ್ಕತಾ(ಮೇ.05): ಕೊರೋನಾ ಬಳಿಕ ಸೈಲೆಂಟ್ ಆಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಇದೀಗ ಮತ್ತೆ ಸದ್ದು ಮಾಡಲು ಆರಂಭಿಸಿದೆ. ಪಶ್ಚಿಮ ಬಂಗಳಾ ಪ್ರವಾಸದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಎ ಜಾರಿ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ.
ಸಿಲ್ಗುರಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಮಿತ್ ಶಾ, ಸಿಎಎ ಜಾರಿ ಮಾಡುವುದಾಗಿ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಸರ್ಕಾರ ಅಕ್ರಮವಾಗಿ ಒಳನುಸಳಲು ಅವಕಾಶ ಮಾಡಿಕೊಡುತ್ತಿದ್ದಾರೆ. ಈ ಮೂಲಕ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ. ಭಾರತದ ಭದ್ರತೆ ವಿಚಾರದಲ್ಲಿ ರಾಜಿ ಇಲ್ಲ. ಮತ್ತೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ.
ಸಂಸ್ಕೃತಿಯಿಂದ ಒಟ್ಟಾಗಿರುವ ಏಕೈಕ ದೇಶ ಭಾರತ, ಅಮಿತ್ ಶಾ!
ಕೊರೋನಾ ಅಲೆ ಮುಗಿದ ಬೆನ್ನಲ್ಲೇ ಪೌರತ್ವ ಕಾಯ್ದೆ ಜಾರಿಯಾಗಲಿದೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಸುಳ್ಳು ಮಾಹಿತಿ ಹರಡುತ್ತಿರುವ ಸಿಎಂ ಮಮತಾ ಬ್ಯಾನರ್ಜಿಗೆ ಸ್ಪಷ್ಟ ಉತ್ತರ ನೀಡುತ್ತಿದ್ದೇನೆ. ಸಿಎಎ ಮತ್ತೆ ಜಾರಿಯಾಗಲಿದೆ. ಅಕ್ರಮ ನುಸುಳುಕೋರರ ವಿರುದ್ಧ ಕೇಂದ್ರ ಕಠಿಣ ಕ್ರಮ ಕೈಗೊಳ್ಳಲಿದೆ. ಈ ದೇಶ ನಮ್ಮವರಿಗೆ ಹೊರತು ಅಕ್ರಮ ನಸುಳುಕೋರರಿಗಲ್ಲ ಎಂದು ಅಮಿತ್ ಹೇಳಿದ್ದಾರೆ.
ಸಿಎಎ ವಿರುದ್ಧದ ದೇಶದಲ್ಲಿ ಈಗಾಗಲೇ ಹಲವು ಪ್ರತಿಭಟನಗಳು ನಡೆದಿದೆ. ಈ ಪ್ರತಿಭಟನೆ ಗಲಭೆ, ದಂಗೆ ಹಾಗೂ ಕೋಮಸಂಘರ್ಷವಾಗಿ ಮಾರ್ಪಟ್ಟಿದೆ. ದೆಹಲಿಯಿಂದ ಮಂಗಳೂರಿನವರೆಗೂ ಸಿಎಎ ವಿರುದ್ಧ ಗಲಭೆ ನಡೆದಿದೆ. ಸಿಎಎ ವಿರುದ್ಧ ಕೆಲ ಸಂಘಟನೆಗಳು, ವಿಪಗಳು ಪಿತೂರಿ ನಡೆಸಿದೆ ಅನ್ನೋ ಆರೋಪಗಳು ಇವೆ. ದಂಗೆಗಳ ತನಿಖೆಯಲ್ಲಿ ಸಿಎಎ ವಿರುದ್ಧದ ಪಿತೂರಿ ಕೂಡ ಬೆಳಕಿಗೆ ಬಂದಿದೆ.
ಸಿಎಎ ವಿರುದ್ಧ ಪಿತೂರಿ
ಅಷ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ದೇಶದ ಹಿಂದುಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಪೌರತ್ವ ನೀಡುವ ಉದ್ದೇಶವನ್ನುಹೊಂದಿರುವ ಪೌರತ್ವ (ತಿದ್ದುಪಡಿ) ಮಸೂದೆಯನ್ನು 2019ರಲ್ಲಿ ಕೇಂದ್ರಸರ್ಕಾರ ಜಾರಿಮಾಡಿತು. ಇದು ಅಲ್ಪಸಂಖ್ಯಾತರನ್ನು ಹೊರಗಟ್ಟುವ ಹುನ್ನಾರ, ಕೋಮುವಾದ ರಾಜಕಾರಣ ಎಂಬ ಆರೋಪಗಳನ್ನು ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ಮಾಡಿದವು. ಅಸಲಿಗೆ ಈ ಮೇಲೆ ಉದಾಹರಿಸಿದ, ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ ಅಲ್ಲಿನ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೂ ತಿಳಿದಿತ್ತು. ಸ್ವತಃ ಮನಮೋಹನಸಿಂಗ್ ಅವರು, ಪ್ರಧಾನಿಯಾಗುವುದಕ್ಕೂ ಮೊದಲು ಈ ದೇಶಗಳಿಂದ ದೌರ್ಜನ್ಯಕ್ಕೊಳಗಾಗಿರುವ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲು ಸಿಎಎ, ಎನ್‌ಆರ್‌ಸಿ ಜಾರಿ ಮಾಡುವಂತೆ ಕೋರಿದ್ದರು. ಆದರೆ ತನ್ನದೇ ನಿಲುವನ್ನು ಬದಲಿಸಿಕೊಂಡ ಪಕ್ಷ, ಮೋದಿ ಸರ್ಕಾರ ಜಾರಿ ಮಾಡಿದೆ ಎಂಬ ಏಕೈಕ ಉದ್ದೇಶದಿಂದ ಅದರ ವಿರುದ್ಧ ನಿಂತಿತು.
ಕೇಂದ್ರದಿಂದ ಮಹತ್ವದ ಹೆಜ್ಜೆ, ದೆಹಲಿ 3 ಮುನ್ಸಿಪಲ್ ಕಾರ್ಪೋರೇಶನ್ ಏಕೀಕರಿಸುವ ತಿದ್ದುಪಡಿ ಮಸೂದೆ ಅಂಗಿಕಾರ!
ಪೌರತ್ವ ಕಾಯ್ದೆ ಹೋರಾಟಕ್ಕೆ ಪಿಎಫ್‌ಐ ಹಣ
ಕೇರಳ ಮೂಲದ ವಿವಾದಿತ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹಾಗೂ ಅದರ ವಿದ್ಯಾರ್ಥಿ ಸಂಘಟನೆಯಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಖಾತೆಗಳಲ್ಲಿ ವಿವಿಧ ಮೂಲಗಳಿಂದ 100 ಕೋಟಿ ರು. ಹಣ ಸಂಗ್ರಹವಾಗಿರುವುದು ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ಹೇಳಿದೆ. ಅಲ್ಲದೆ, ಸಿಎಎ ವಿರೋಧಿ ಪ್ರತಿಭಟನೆಗಳು ಹಾಗೂ ಇತ್ತೀಚಿನ ಬೆಂಗಳೂರು ಗಲಭೆಗಳಲ್ಲಿ ಪಿಎಫ್‌ಐ ಪಾತ್ರ ಕಂಡುಬಂದಿದೆ ಎಂಬ ಗಂಭೀರ ಆರೋಪವನ್ನು ಇ.ಡಿ. ಮಾಡಿದೆ.