Asianet Suvarna News Asianet Suvarna News

5 ವರ್ಷದಲ್ಲಿ 7.5 ಲಕ್ಷ ಭಾರತೀಯರಿಂದ ಪೌರತ್ವ ತ್ಯಾಗ

* 2016-21ರ ಅವಧಿಯಲ್ಲಿ 6000 ವಿದೇಶಿಯರಿಗೆ ಭಾರತೀಯ ಪೌರತ್ವ

* 5 ವರ್ಷದಲ್ಲಿ 7.5 ಲಕ್ಷ ಭಾರತೀಯರಿಂದ ಪೌರತ್ವ ತ್ಯಾಗ

* ಇವರೆಲ್ಲಾ ವೈಯಕ್ತಿಕ ಕಾರಣಗಳನ್ನು ನೀಡಿ ಭಾರತೀಯ ಪೌರತ್ವ ತ್ಯಾಗ

More than 7 5 lakh have given up their citizenship in last 5 years pod
Author
Bangalore, First Published May 7, 2022, 6:48 AM IST

ನವದೆಹಲಿ(ಮೇ.07): 2016-21ರ ಅವಧಿಯಲ್ಲಿ 7.5 ಲಕ್ಷ ಭಾರತೀಯರು ತಮ್ಮ ಭಾರತೀಯ ಪೌರತ್ವ ತ್ಯಜಿಸಿದ್ದಾರೆ. ಇದೇ ಅವಧಿಯಲ್ಲಿ 6000 ವಿದೇಶಿಯರಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂಬ ವಿದೇಶಾಂಗ ಸಚಿವಾಲಯದ ದಾಖಲೆಗಳಿಂದ ತಿಳಿದುಬಂದಿದೆ.

ಇವರೆಲ್ಲಾ ವೈಯಕ್ತಿಕ ಕಾರಣಗಳನ್ನು ನೀಡಿ ಭಾರತೀಯ ಪೌರತ್ವ ತ್ಯಜಿಸಿದ್ದು, 106 ಬೇರೆ ಬೇರೆ ದೇಶಗಳಿಗೆ ತೆರಳಿದ್ದಾರೆ. ಈ ಪೈಕಿ ಅತಿ ಹೆಚ್ಚು ಜನರು ಅಮೆರಿಕ, ಇಂಗ್ಲೆಂಡ್‌, ಕೆನಡಾ, ಆಸ್ಪ್ರೇಲಿಯಾಕ್ಕೆ ತೆರಳಿದ್ದಾರೆ. ಈ ನಾಲ್ಕು ದೇಶಗಳಿಗೆ ತೆರಳಿದವರೇ ಪಾಲೇ ಶೇ.82ರಷ್ಟಿದೆ. ಇನ್ನು ಪಾಕಿಸ್ತಾನಕ್ಕೆ ತೆರಳಲೆಂದು ಭಾರತೀಯ ಪೌರತ್ವ ತ್ಯಜಿಸಿದವರ ಸಂಖ್ಯೆ 31, ಚೀನಾಕ್ಕೆ ತೆರಳಿದವರ ಸಂಖ್ಯೆ 2174.

ಕಳೆದ 5 ವರ್ಷಗಳ ಪೈಕಿ 2019ರಲ್ಲಿ ಅತಿ ಹೆಚ್ಚು ಅಂದರೆ 1.44 ಲಕ್ಷ ಜನರು, 2016ರಲ್ಲಿ 1.41 ಲಕ್ಷ ಜನರು ಭಾರತೀಯ ಪೌರತ್ವ ತ್ಯಜಿಸಿದ್ದಾರೆ.

ಇನ್ನು ಇದೇ ಅವಧಿಯಲ್ಲಿ 5891 ವಿದೇಶಿಯರು ಭಾರತೀಯ ಪೌರತ್ವ ಪಡೆದುಕೊಂಡಿದ್ದಾರೆ. ಜೊತೆಗೆ 2021ರ ಡಿಸೆಂಬರ್‌ ಅಂತ್ಯದ ವೇಳೆಗೆ ಭಾರತೀಯ ಪೌರತ್ವ ಕೋರಿದ್ದ 7306 ಪಾಕಿಸ್ತಾನಿಯರು, 1152 ಆಫ್ಘನ್ನರು ಸೇರಿದಂತೆ 10635 ವಿದೇಶಿಯರ ಪೌರತ್ವ ಅರ್ಜಿ ಇನ್ನೂ ಬಾಕಿ ಇದೆ ಎಂದು ಅಂಕಿ ಅಂಶಗಳು ಹೇಳಿವೆ.

15 ವರ್ಷಗಳಲ್ಲಿ 16 ಚೀನಿಯರಿಗೆ ಭಾರತೀಯ ಪೌರತ್ವ

 

ಕಳೆದ 15 ವರ್ಷಗಳಲ್ಲಿ 16 ಚೀನಿಯರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಇನ್ನೂ 10 ಚೀನಿಯರು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದು ಅವರ ಅರ್ಜಿಗಳು ಬಾಕಿ ಇವೆ ಎಂದು ಕೇಂದ್ರ ಸಚಿವ ನಿತ್ಯಾನಂದ ರಾಯ್‌ ತಿಳಿಸಿದ್ದಾರೆ. ರಾಜ್ಯಸಭೆಗೆ ತಿಳಿಸಿದರು. 2017ರಿಂದ ಇವರೆಗೆ 16 ಚೀನಿಯರಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಲಿಖಿತ ಪ್ರಶ್ನೆಗೆ ಅವರು ಉತ್ತರಿಸಿದರು.

ಭಾರತದ ಪೌರತ್ವ ಪಡೆಯುವ ಎಲ್ಲರಿಗೂ ಕೆಲವು ವಿದೇಶಿ ಕಾಯ್ದೆಗಳಿವೆ. 1946ರ ವಿದೇಶಿ ಕಾಯ್ದೆ, 1939ರ ವಿದೇಶಿ ನೊಂದಣಿ ಕಾಯ್ದೆ, 1920ರ ಪಾಸ್‌ಪೋರ್ಟ್‌ ಕಾಯ್ದೆ ಮತ್ತು 1955ರ ಪ1939ರ ಪೌರತ್ವ ಕಾಯ್ದೆಯಿದ್ದು ಇದರ ನಿಯಮದಡಿ ಅವರು ನಿಬಂಧನೆಗಳಿಗೆ ಕೆಲವು ಒಳಗಾಗಿರುತ್ತಾರೆ ಎಂದು ಅವರು ತಿಳಿಸಿದರು.

Follow Us:
Download App:
  • android
  • ios