ಉಲ್ಫಾ ಉಗ್ರ ಸಂಘಟನೆ, ಕೇಂದ್ರ ಮತ್ತು ಅಸ್ಸಾಂ ಸರ್ಕಾರಗಳ ನಡುವೆ ಶುಕ್ರವಾರ ತ್ರಿಪಕ್ಷೀಯ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದರಿಂದ 44 ವರ್ಷಗಳಿಂದ ಅಸ್ಸಾಂನಲ್ಲಿ ನಡೆಯುತ್ತಿರುವ ಪ್ರತ್ಯೇಕತೆ ಹೋರಟಕ್ಕೆ ತೆರೆ ಬೀಳುವ ಆಶಾಭಾವನೆ ಎದುರಾಗಿದೆ.

ನವದೆಹಲಿ (ಡಿಸೆಂಬರ್ 30, 2023): ಅಸ್ಸಾಂನಲ್ಲಿನ ದಶಕಗಳಷ್ಟು ಹಳೆಯದಾದ ಹಿಂಸಾಚಾರವನ್ನು ಕೊನೆಗೊಳಿಸುವ ಉದ್ದೇಶದಿಂದ ಯುನೈಟೆಡ್‌ ಲಿಬರೇಷನ್‌ ಫ್ರಂಟ್‌ ಆಫ್‌ ಅಸೋಂ (ಉಲ್ಫಾ) ಉಗ್ರ ಸಂಘಟನೆ, ಕೇಂದ್ರ ಮತ್ತು ಅಸ್ಸಾಂ ಸರ್ಕಾರಗಳ ನಡುವೆ ಶುಕ್ರವಾರ ತ್ರಿಪಕ್ಷೀಯ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದರಿಂದ 44 ವರ್ಷಗಳಿಂದ ಅಸ್ಸಾಂನಲ್ಲಿ ನಡೆಯುತ್ತಿರುವ ಪ್ರತ್ಯೇಕತೆ ಹೋರಟಕ್ಕೆ ತೆರೆ ಬೀಳುವ ಆಶಾಭಾವನೆ ಎದುರಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಮ್ಮುಖದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಉಲ್ಫಾ (ರಾಜ್‌ಖೋವಾ ಬಣ) ಮುಖ್ಯಸ್ಥ ಅರಬಿಂದ ರಾಜ್‌ಖೋವಾ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು. 

ಕ್ರಿಮಿನಲ್‌ ನ್ಯಾಯ ವ್ಯವಸ್ಥೆಗೆ ಹೊಸ ದಿಕ್ಕು: ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಒಪ್ಪಂದದ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಇಂದು ಅಸ್ಸಾಂ ಜನರ ಪಾಲಿಗೆ ಬಹುದೊಡ್ಡ ಐತಿಹಾಸಿಕ ದಿನ. ಉಲ್ಪಾ ಹಿಂಸಾಚಾರದಿಂದ ರಾಜ್ಯದ ಜನ ಸಾಕಷ್ಟು ನಲುಗಿದ್ದಾರೆ. 10,000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಿಂಸಾಚಾರ ತೊರೆದು ಸಮಾಜದ ಮುಖ್ಯ ವಾಹಿನಿಗೆ ಬರಲು ಒಪ್ಪಿರುವ ಉಲ್ಫಾ ಪ್ರತ್ಯೇಕತಾವಾದಿಗಳಿಗೆ ಕೇಂದ್ರ ಸರ್ಕಾರ ದೊಡ್ಡ ಪ್ಯಾಕೇಜ್‌ ಘೋಷಿಸಲಿದೆ. ಅದರ ಪ್ರತಿ ಅಂಶ ಜಾರಿಗೂ ಸರ್ಕಾರ ಬದ್ಧ. ಶಾಂತಿ ಮಾತುಕತೆಯ ಪರಿಣಾಮ ರಾಜ್ಯದಲ್ಲಿ ಹಿಂಸಾಚಾರ ಪ್ರಮಾಣದಲ್ಲಿ ಶೇ. 87ರಷ್ಟು,ಸಾವಿನ ಸಂಖ್ಯೆಯಲ್ಲಿ ಶೇ. 90ರಷ್ಟು ಮತ್ತು ಅಪಹರಣ ಪ್ರಕರಣಗಳಲ್ಲಿ ಶೇ. 84 ರಷಷ್ಟು ಪ್ರಕರಣಗಳಲ್ಲಿ ಇಳಿಕೆಯಾಗಿದೆ’ ಎಂದು ಹೇಳಿದರು.

ಈ ಒಪ್ಪಂದವು ಸ್ಥಳೀಯ ಜನರಿಗೆ ಸಾಂಸ್ಕೃತಿಕ ರಕ್ಷಣೆ ಮತ್ತು ಭೂಮಿಯ ಹಕ್ಕುಗಳನ್ನ ಒದಗಿಸುವುದರ ಜೊತೆಗೆ ಅಸ್ಸಾಂಗೆ ಸಂಬಂಧಿಸಿದ ದೀರ್ಘಕಾಲದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಇತ್ಯರ್ಥ ಪಡಿಸುತ್ತದೆ ಎಂದು ಕೇಂದ್ರ ಸರ್ಕಾರದ ಹೇಳಿಕೆ ತಿಳಿಸಿದೆ. ಇಂಥದ್ದೊಂದು ಒಪ್ಪಂದದ ಕುರಿತು ಉಲ್ಪಾ ಉಗ್ರರು ಮತ್ತು ಸರ್ಕಾರದ ನಡುವೆ 12 ವರ್ಷಗಳಿಂದ ಹಿಂಬಾಗಿಲ ಮಾತುಕತೆ ನಡೆಯುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಸತ್ತಲ್ಲಿ ಈವರೆಗೆ 40 ಬಾರಿ ಭದ್ರತಾ ಲೋಪ: ರಾಜಕೀಯ ಬೇಡ; ಅಮಿತ್‌ ಶಾ ಮೊದಲ ಪ್ರತಿಕ್ರಿಯೆ

ಬರುವಾ ಬಣದ ಸಮ್ಮತಿ ಇಲ್ಲ: ಈ ನಡುವೆ ಉಲ್ಪಾದಲ್ಲಿ ಪರೇಶ್‌ ಬರುವಾ ಎಂಬಾತನ ಬಣವೂ ಇದ್ದು, ಈ ಬಣವು ಒಪ್ಪಂದದ ಭಾಗವಾಗುವುದಿಲ್ಲ. ಏಕೆಂದರೆ ಸರ್ಕಾರದ ಈ ಆಫರ್‌ಗೆ ಬರುವಾ ಬಣದ ಸಮ್ಮತಿಯಿಲ್ಲ. 

ಆದರೆ ರಾಜ್‌ಖೋವಾ ಗುಂಪಿನ ಇಬ್ಬರು ಉನ್ನತ ನಾಯಕರಾದ ಅನುಪ್‌ ಚೇಟಿಯಾ ಮತ್ತು ಶಶರ್‌ ಚೌಧರಿ ಕಳೆದ ವಾರದಿಂದಲೇ ದಿಲ್ಲಿಯಲ್ಲಿ ಬೀಡುಬಿಟ್ಟು ಸರ್ಕಾರದ ಜತೆಗಿನ ಶಾಂತಿ ಒಪ್ಪಂದಕ್ಕೆ ಅಂತಿಮ ಸ್ಪರ್ಶ ನೀಡಿದ್ದಾರೆ. 

Article 370: ಸುಪ್ರೀಂಕೋರ್ಟ್‌ ತೀರ್ಪಿನ ಬಗ್ಗೆ ಮೋದಿ, ಅಮಿತ್‌ ಶಾ, ಕಾಶ್ಮೀರಿ ನಾಯಕರು ಹೇಳಿದ್ದೀಗೆ..

44 ವರ್ಷದ ಸಂಘರ್ಷ: ‘ಸಾರ್ವಭೌಮ ಅಸ್ಸಾಂ’ ಬೇಡಿಕೆಯೊಂದಿಗೆ 1979 ರಲ್ಲಿ ಉಲ್ಪಾವನ್ನು ರಚಿಸಲಾಗಿತ್ತು. ಅಂದಿನಿಂದ, ಅದು ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿದೆ. ಇದರಲ್ಲಿ ಸುಮಾರು 4 ಸಾವಿರ ಉಗ್ರರು ಇದ್ದಾರೆ. ಉಲ್ಫಾ ಹಿಂಸಾಚಾರ 10,000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಹೀಗಾಗಿ ಕೇಂದ್ರ ಸರ್ಕಾರವು 1990ರಲ್ಲಿ ಉಲ್ಪಾವನ್ನು ನಿಷೇಧಿತ ಸಂಘಟನೆ ಘೋಷಿಸಿತ್ತು. ಆದರೆ ಬಳಿಕ ಸಂಘಟನೆ 2 ಬಾರಿ ಒಳಜಗಳದ ಕಾರಣ ವಿಭಜನೆ ಆಗಿತ್ತು.

ಈ ನಡುವೆ, 2011ರಲ್ಲಿ ಮಹತ್ವದ ತಿರುವು ಲಭಿಸಿತು. ಉಲ್ಪಾ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಕದನ ವಿರಾಮ ಒಪ್ಪಂ ಏರ್ಪಟ್ಟಿತು. ನಂತರ ರಾಜ್‌ಖೋವಾ ಬಣವು 2011ರ ಸೆಪ್ಟೆಂಬರ್ 3 ರಿಂದ ಸೆಪ್ಟೆಂಬರ್ 3 ರ ಸರ್ಕಾರದೊಂದಿಗೆ ಶಾಂತಿ ಮಾತುಕತೆ ಆರಂಭಿಸಿತ್ತು. ಆದರೆ ಚೀನಾ - ಮ್ಯಾನ್ಮಾರ್ ಗಡಿಯಲ್ಲಿ ನೆಲೆಸಿರುವ ಪರೇಶ್‌ ಬರುವಾ ನೇತೃತ್ವದ ಬಣ ಈ ಮಾತುಕತೆಗೆ ಅಸಮ್ಮತಿ ಸೂಚಿಸಿತ್ತು.