ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ , ಬೆಂಗಳೂರು ಸೇರಿದಂತೆ ದೇಶಾದ್ಯಂತ ಪ್ರಯಾಣಿಕರು ಪರಿತಪಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಭಾರತೀಯ ರೈಲ್ವೇ ಈ ಪ್ರಯಾಣಿಕರಿಗೆ ವಿಶೇಷ ನೆರವು ನೀಡುತ್ತಿದೆ. 

ನವದೆಹಲಿ (ಡಿ.06) ಇಂಡಿಗೋ ವಿಮಾನ ಪ್ರಯಾಣ ರದ್ದು, ವಿಳಂದದಿಂದ ದೇಶಾದ್ಯಂತ ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಸಾವಿರಕ್ಕೂ ಹೆಚ್ಚು ದೇಶಿ ವಿಮಾನ ಪ್ರಯಾಣ ರದ್ದಾಗಿದೆ. ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ, ಇಂಡಿಗೋ ವಿರುದ್ದ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಇತ್ತ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಇಂದು ಸಂಜೆ ತುರ್ತು ಸಭೆ ಕರೆದಿದೆ. ಇಂಡಿಗೋ ಅಸಮರ್ಥ ವ್ಯವಸ್ಥೆಗೆ ದುಬಾರಿ ದಂಡ ವಿಧಿಸಲು ಮುಂದಾಗಿದೆ. ಇಷ್ಟೇ ಅಲ್ಲ ಎಲ್ಲಾ ಪ್ರಯಾಣಿಕರಿಗೆ ಸಂಪೂರ್ಣ ಮೊತ್ತ ರೀಫಂಡ್ ಮಾಡುವಂತೆ ಸೂಚಿಸಿದೆ. ಈ ಕ್ರಮಗಳ ನಡುವೆ ವಿಮಾನ ನಿಲ್ದಾಣದಲ್ಲಿ ಪ್ರಾಯಣಿಕು ತುಂಬಿ ತುಳುತ್ತಿದ್ದಾರೆ. ಸಂಕಷ್ಟದಲ್ಲಿರುವ ವಿಮಾನ ಪ್ರಯಾಣಿಕರ ನೆರವಿಗೆ ಇದೀಗ ಭಾರತೀಯ ರೈಲ್ವೇ ಧಾವಿಸಿದೆ.

ಪರದಾಡುತ್ತಿರುವ ವಿಮಾನ ಪ್ರಯಾಣಿಕರಿಗೆ ರೈಲ್ವೇ ನೆರವು

ದೇಶದ ಪ್ರಮುಖ ನಗರ ಸೇರಿದಂತೆ ಹಲವೆಡೆ ಇಂಡಿಗೋ ವಿಮಾನ ರದ್ದು ಗಂಭೀರ ಪರಿಣಾಮ ಬೀರಿದೆ. ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಭಾರತೀಯ ರೈಲ್ವೇ ವಿಮಾನ ಪ್ರಯಾಣಿಕರ ನೆರವಿಗೆ ಧಾವಿಸಿದೆ. ಪ್ರಯಾಣಕರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಕೋಚ್ ಸೌಲಭ್ಯ ನೀಡಲಾಗಿದೆ. ಹೀಗಾಗಿ ಕೊನೆಯೆ ಕ್ಷಣದಲ್ಲೂ ರೈಲು ಬುಕಿಂಗ್ ಮಾಡಲು ಹಾಗೂ ಸ್ಲೀಪರ್ ಕೋಚ್, ಆಸನ ವ್ಯವಸ್ಥೆ ಮಾಡಿದೆ.

ಬೆಂಗಳೂರು, ಮಂಗಳೂರು ಸೇರಿ ವಿವಿದೆಡೆ ಹೆಚ್ಚುವರಿ ಕೋಚ್

ರೈಲುಗಳ ಸಂಖ್ಯೆ ಹೆಚ್ಚಳ ಜೊತಗೆ ಕೋಚ್ ಸಂಖ್ಯೆಯೂ ಹೆಚ್ಚಳ ಮಾಡಲಾಗಿದೆ. ಪ್ರಮುಖವಾಗಿ ಬೆಂಗಳೂರು-ಅಗರ್ತಲಾ ಹಮ್‌ಸಫರ್ ಎಕ್ಸ್‌ಪ್ರೆಸ್, ಮಂಗಳೂರು -ತಿರುವನಂತಪುರಂ ಎಕ್ಸ್‌ಪ್ರೆಸ್, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್, ಮುಂಬೈ-ಮಂಗಳೂರು ಸೇರಿದಂತೆ ವಿವಿಧ ರೈಲುಗಳ ಎಸಿ ಕೋಚ್, ಸ್ಲೀಪರ್ ಕೋಚ್ ಹಾಗೂ ಸಾಮಾನ್ಯ ಬೋಗಿಗಳ ಸಂಖ್ಯೆ ಹೆಚ್ಚಿಸಲಾಗಿದೆ.

ವಿಶೇಷ ರೈಲು ವ್ಯವಸ್ಥೆ

ರೈಲುಗಳ ಕೋಚ್ ಸಂಖ್ಯೆ ಹೆಚ್ಚಳ ಮಾತ್ರವಲ್ಲ, ಸೆಂಟ್ರಲ್ ವೆಸ್ಟರ್ನ್, ನಾರ್ತ್ ವೆಸ್ಟರ್ನ್ ಹಾಗೂ ಈಸ್ಟ್ ವೆಸ್ಟರ್ನ್ ರೈಲ್ವೇಗಳಿಂದ ವಿಶೇಷ ರೈಲು ಬಿಡಲಾಗಿದೆ. ಪ್ರಮುಖವಾಗಿ ಕೆಲ ಮಾರ್ಗದಳಲ್ಲಿ ವಿಶೇಷ ರೈಲುಗಳ ಜೊತೆಗೆ ಹೆಚ್ಚವರಿ ರೈಲುಗಳು ಸೇವೆ ನೀಡಲಾಗುತ್ತಿದೆ. ಈ ಪೈಕಿ ಬೆಂಗಳೂರು ಪುಣೆ, ಪುಣೆ-ದೆಹಲಿ, ಮುಂಬೈ-ನವದೆಹಲಿ, ಮುಂಬೈ-ಗೋವಾ, ಲಖನೌ-ಮುಂಬೈ, ನಾಗ್ಪುರ-ಮುಂಬೈ, ಗೋರಖಪುರ -ಮುಂಬೈ ಸೇರಿದಂತೆ ಹಲವು ಮಾರ್ಗಗಳಲ್ಲಿ ವಿಶೇಷ ರೈಲು ಸೇವೆ ವ್ಯವಸ್ಥೆ ಮಾಡಲಾಗಿದೆ. ಈಸ್ಟರ್ನ್ ರೈಲ್ವೇ ಈಗಾಗಲೇ ಹೌರಾ -ದೆಹಲಿ ನಡುವೆ ವಿಶೇಷ ರೈಲು ವ್ಯವಸ್ಥೆ ಮಾಡಿದೆ.ಈ ರೈಲು ಡಿಸೆಂಬರ್ 6ಕ್ಕೆ ನಿರ್ಗಮಿಸಿದರೆ, ಡಿಸೆಂಬರ್ 8ಕ್ಕೆ ಮರಳಲಿದೆ. ಮುಂಬೈ ಮಡ್‌ಗಾಂವ ವಿಶೇಷ ರೈಲು ಡಿಸೆಂಬರ್ 7ಕ್ಕೆ ಹೊರಡಲಿದೆ. ಡಿಸೆಂಬರ್ 8ಕ್ಕೆ ಮರಳಲಿದೆ.

ಇಂಡಿಗೋ ವಿಮಾನ ರದ್ದುಗೊಂಡ ಕಾರಣ ಪ್ರಯಾಣಿಕರ ಅನೂಕೂಲಕ್ಕಾಗಿ ಭಾರತೀಯ ರೈಲ್ವೇ ವಿವಿಧ ಝೋನ್‌ಗಳಲ್ಲಿ 37 ವಿವಧ ರೈಲುಗಳಿಗೆ 116 ಕೋಚ್‌ಗಳನ್ನು ಸೇರಿಸಿದೆ. ಇಷ್ಟೇ ಅಲ್ಲ 114 ಟ್ರಿಪ್ ಪ್ಲಾನ್ ಮಾಡಿದದ್ದು ಸರಿಸಮುಮಾರು 4.9 ಲಕ್ಷ ಪ್ರಯಾಣಿಕರ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ.