ಸಂಚಾರ್ ಸಾಥಿ ಆ್ಯಪ್ ಗದ್ದಲದ ನಡುವೆಯೇ ಇದೀಗ, ಮೊಬೈಲ್ ಫೋನ್ ಬಳಕೆದಾರರನ್ನು ಉಪಗ್ರಹ ಆಧರಿತವಾಗಿ ಟ್ರ್ಯಾಕ್ ಮಾಡುವ ವಿಚಾರವಾಗಿ ಇದೀಗ ಕೇಂದ್ರ ಸರ್ಕಾರ ವಿವಾದಕ್ಕೆ ಗುರಿಯಾಗುವ ನಿರೀಕ್ಷೆ ಇದೆ.
ನವದೆಹಲಿ : ಸಂಚಾರ್ ಸಾಥಿ ಆ್ಯಪ್ ಗದ್ದಲದ ನಡುವೆಯೇ ಇದೀಗ, ಮೊಬೈಲ್ ಫೋನ್ ಬಳಕೆದಾರರನ್ನು ಉಪಗ್ರಹ ಆಧರಿತವಾಗಿ ಟ್ರ್ಯಾಕ್ ಮಾಡುವ ವಿಚಾರವಾಗಿ ಇದೀಗ ಕೇಂದ್ರ ಸರ್ಕಾರ ವಿವಾದಕ್ಕೆ ಗುರಿಯಾಗುವ ನಿರೀಕ್ಷೆ ಇದೆ.
ಎಲ್ಲಾ ಮೊಬೈಲ್‌ಗಳಲ್ಲಿ ‘ಲೊಕೇಷನ್’ ಸೌಲಭ್ಯವನ್ನು ಕಡ್ಡಾಯ ‘ಆನ್’
ಎಲ್ಲಾ ಮೊಬೈಲ್‌ಗಳಲ್ಲಿ ‘ಲೊಕೇಷನ್’ ಸೌಲಭ್ಯವನ್ನು ಕಡ್ಡಾಯವಾಗಿ ‘ಆನ್’ ಆಗಿರುವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಮೊಬೈಲ್ ಫೋನ್ ಉತ್ಪಾದಕರ ಜತೆ ಚರ್ಚೆ ನಡೆಸುತ್ತಿದೆ. ಕಾನೂನು ಜಾರಿ ಸಂಸ್ಥೆಗಳಿಗೆ ಅಪರಾಧಿಗಳನ್ನು ಪತ್ತೆಹಚ್ಚಲು ಹಾಗೂ ಸಂಕಷ್ಟದಲ್ಲಿರುವವರನ್ನು ಶೀಘ್ರ ಹುಡುಕಲು ವಿಪತ್ತು ನಿರ್ವಹಣಾ ಅಧಿಕಾರಿಗಳಿಗೆ ಅನುಕೂಲವಾಗುವಂತೆ ಮೊಬೈಲ್ ಸೇವಾದಾರರ ಜತೆಗೆ ಸರ್ಕಾರ ಕೆಲ ವರ್ಷಗಳಿಂದ ಮಾತುಕತೆ ನಡೆಸುತ್ತಿದ್ದು, ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(ಸಿಒಎಐ) ಸರ್ಕಾರದ ಮುಂದೆ ಲೊಕೇಷನ್ ಆಧರಿತ ಟ್ರ್ಯಾಕಿಂಗ್‌ನ ಪ್ರಸ್ತಾಪ ಇಟ್ಟಿವೆ.
ಪ್ರಸ್ತಾಪಕ್ಕೆ ವಿರೋಧ
ಆದರೆ ಸ್ಯಾಮ್‌ಸಂಗ್, ಗೂಗಲ್, ಆ್ಯಪಲ್‌ನಂಥ ಮೊಬೈಲ್ ಉತ್ಪಾದಕ ಕಂಪನಿಗಳು ಖಾಸಗಿಯಾಗಿ ಇಂಥ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿವೆ. ಹ್ಯಾಕರ್‌ಗಳು, ಇತರರು ಇದನ್ನು ದುರುಪಯೋಗಪಡಿಸಿಕೊಂಡು ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ತರುವ ಆತಂಕ ವ್ಯಕ್ತಪಡಿಸಿವೆ.
ಸದ್ಯ ಯಾವುದೇ ವ್ಯಕ್ತಿ ಅಥವಾ ಅಪರಾಧಿಯನ್ನು ಟ್ರ್ಯಾಕ್ ಮಾಡಬೇಕಿದ್ದರೆ ಮೊಬೈಲ್ ಆಪರೇಟರ್‌ಗಳು ನೀಡುವ ಮೊಬೈಲ್ ಟವರ್ ಆಧರಿತ ಮಾಹಿತಿಯನ್ನಷ್ಟೇ ಅವಲಂಬಿಸಬೇಕಾಗುತ್ತದೆ. ಇದರಿಂದ ತಕ್ಷಣಕ್ಕೆ ಆ ವ್ಯಕ್ತಿ ಎಲ್ಲಿದ್ದಾನೆ ಎಂದು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಆದರೆ, ಉಪಗ್ರಹ ಆಧರಿತ ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿಯನ್ನು ಸುಲಭವಾಗಿ ಪತ್ತೆಹಚ್ಚಬಹುದು ಎಂಬುದು ಸರ್ಕಾರದ ಭಾವನೆ. ಸದ್ಯ ಈ ಪ್ರಸ್ತಾಪ ಚರ್ಚೆ ಹಂತದಲ್ಲಷ್ಟೇ ಇದೆ.


