ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತಾ ಪಠಣ, ಕೋಲ್ಕತಾದ ಬ್ರಿಗೇಟ್ ಪರೇಡ್ ಮೈದಾನದಲ್ಲಿ ಸೇರಿದ ಹಿಂದೂ ಮಹಾಸಾಗರ ಭಗವದ್ಗೀತೆ ಪಠಣ ಮಾಡಿ ಸ್ಪಷ್ಟ ಸಂದೇಶ ರವಾನಿಸಿದ್ದರೆ.
ಕೋಲ್ಕತಾ (ಡಿ.07) ಪಶ್ಚಿಮ ಬಂಗಾಳ ಬಾಬ್ರಿ ಮಸೀದಿಗೆ ಅಡಿಗಲ್ಲು ವಿಚಾರದಲ್ಲಿ ದೇಶಾದ್ಯಂತ ಸದ್ದು ಮಾಡಿದೆ. ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್‌ನಿಂದ ಅಮಾತುಗೊಂಡ ಶಾಸಕ ಮುರ್ಶಿದಾಬಾದ್‌ನಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿ ಭಾರಿ ವಿವಾದ ಸೃಷ್ಟಿಸಿದ್ದಾರೆ. ಆಯೋಧ್ಯೆ ಬಾಬ್ರಿ ಮಸೀದಿ ಧ್ವಂಸಗೊಂಡ ದಿನದಂತೆ ಅಡಿಗಲ್ಲು ಹಾಕಿ ವಿವಾದ ಹುಟ್ಟುಹಾಕಿದ್ದರು. ಈ ವಿವಾದದ ಮರುದಿನ ಕೋಲ್ಕತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಪಶ್ಟಿಮ ಬಂಗಾಳದ ಹಿಂದೂಗಳ ಸಂಗಮವಾಗಿದೆ. ಭಗವದ್ಗೀತಾ ಪಠಣ ಕಾರ್ಯಕ್ರಮದಲ್ಲಿ 5 ಲಕ್ಷ ಹಿಂದೂಗಳು ಪಾಲ್ಗೊಂಡಿದ್ದಾರೆ. ಈ ದಾಖಲೆ ಸಂಗಮವನ್ನು ಬಂಗಾಳದ ಬಿಜೆಪಿ ಕೊಂಡಾಡಿದೆ. ಇಷ್ಟೇ ಅಲ್ಲ ಪಶ್ಚಿಮ ಬಂಗಾಳದ ಹಿಂದೂಗಳು ಎಚ್ಚೆತ್ತುಕೊಂಡಿದ್ದಾರೆ ಎಂದಿದೆ.
ಸನಾತನ ಸಂಸ್ಕೃತಿ ಸಾಂಸದ್ ಆಯೋಜನೆ
ಸನಾತನ ಸಂಸ್ಕೃತಿ ಸಾಂಸದ್ ಸಂಘಟನೆ ಈ ಭಗವದ್ಗೀತೆ ಪಠಣ ಕಾರ್ಯಕ್ರಮ ಆಯೋಜಿಸಿದೆ. ಪಶ್ಚಿಮ ಬಂಗಾಳದಲ್ಲಿರುವ ಹಿಂದೂಗಳಲ್ಲಿ ಒಗ್ಗಟ್ಟು ಮೂಡಿಸಲು ಮಹತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಹಿಂದೂಗಳ ಅತ್ಯಂತ ಪವಿತ್ರ ಗ್ರಂಥ ಭಗವದ್ಗೀತೆ. ಭಗವದ್ಗೀತೆ ಎಲ್ಲಾ ಹಿಂದೂಗಳನ್ನು ಒಗ್ಗೂಡಿಸುತ್ತದೆ. ಭಗವದ್ಗೀತೆ ಪಠಣದಿಂದ ದೇಶಕ್ಕೆ ಒಳಿತಾಗಲಿದೆ ಎಂದು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂತರು ಹೇಳಿದ್ದಾರೆ.
ಬಂಗಾಳದಲ್ಲಿ ಹಿಂದೂಗಳ ಬಿರುಗಾಳಿ ಎಂದ ಬಿಜೆಪಿ
ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಭಗವದ್ಗೀತೆ ಪಠಣ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದಿದೆ. 5 ಲಕ್ಷ ಹಿಂದೂಗಳು ಪಾಲ್ಗೊಂಡು ಗೀತೆ ಪಠಿಸಿದ್ದಾರೆ. ವಾದ್ಯಘೋಷಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು. ಈ ಕಾರ್ಯಕ್ರಮದ ಕುರಿತು ಮಾತನಾಡಿದ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ದಿಲೀಪ್ ಘೋಷ್, ಅದ್ಭುತ ಕಾರ್ಯಕ್ರಮ ಕೋಲ್ಕತಾದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಹಿಂದೂಗಳು ಎಚ್ಚೆತ್ತುಕೊಂಡಿದ್ದಾರೆ. ಹಿಂದೂಗಳು ಒಗ್ಗಾಟ್ಟಾಗಿದ್ದಾರೆ. ಕಳೆದ ವರ್ಷ ಸಿಲಿಗುರಿಯಲ್ಲಿ ಭಗವದ್ಗೀತೆ ಪಠಣ ಕಾರ್ಯಕ್ರಮ ಆಯೋಜಿಸಲಾಗಿತ್ತ. ಈ ವೇಳೆ 1 ಲಕ್ಷ ಮಂದಿ ಪಾಲ್ಗೊಂಡಿದ್ದಾರೆ. ಈ ಬಾರಿ 5 ಲಕ್ಷಕ್ಕೆ ಏರಿಕೆಯಾಗಿದೆ ಎಂದು ದಿಲೀಪ್ ಘೋಷ್ ಸಂತಸ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ಹಮ್ಮಿಕೊಳ್ಳಲು ಪ್ಲಾನ್
ಸಿಲಿಗುರಿ ಬಳಿಕ ಕೋಲ್ಕಾತದಲ್ಲಿ ಭಗವದ್ಗೀತಾ ಪಠಣ ಕಾರ್ಯಕ್ರಮ ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ಇತರ ಸಾಧು ಸಂತರು, ಹಿಂದೂ ಸಂಘಟನೆಗಳ ನೆರವಿನೊಂದಿಗೆ ಇತರ ನಗರಗಳಲ್ಲಿ ಭಗವದ್ಗೀತಾ ಪಠಣ ಕಾರ್ಯಕ್ರಮ ಆಯೋಜಿಸಲು ಸನಾತನ ಸಂಸ್ಕೃತಿ ಸಾಂಸದ್ ಸಂಘಟನೆ ಮುಂದಾಗಿದೆ.


