Asianet Suvarna News Asianet Suvarna News

ಕೆಲಸದ ಒತ್ತಡದಿಂದ ಯುವತಿ ಸಾವು: ಕೇಂದ್ರದಿಂದ ತನಿಖೆ ಎಂದ ಸಚಿವೆ ಶೋಭಾ ಕರಂದ್ಲಾಜೆ- ಎಚ್ಚೆತ್ತುಕೊಂಡ ಕಂಪೆನಿ!

ಕೆಲಸದ ಒತ್ತಡದಿಂದ ಪುಣೆಯ ಚಾರ್ಟೆಡ್​ ಅಕೌಂಟೆಂಟ್​ ಯುವತಿ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಈ ಬಗ್ಗೆ ತನಿಖೆ ನಡೆಸುತ್ತಿದೆ. ಗಲಾಟೆ ಬಳಿಕ  ಎಚ್ಚೆತ್ತುಕೊಂಡ ಕಂಪೆನಿ ಹೇಳಿದ್ದೇನು?
 

Centre probes EY India employees death after mother blames work pressure company apolozes suc
Author
First Published Sep 19, 2024, 1:48 PM IST | Last Updated Sep 19, 2024, 1:48 PM IST

 ಪುಣೆಯ EY ಕಂಪೆನಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ (CA) ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವತಿ ಕೆಲಸದ ಒತ್ತಡದಿಂದಾಗಿ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನಿಖೆ ಕೈಗೊಂಡಿದೆ. ಕಂಪೆನಿಯಲ್ಲಿ ನೀಡಿರುವ ಟಾರ್ಗೆಟ್​ ಮುಟ್ಟಲು ಹಗಲು ರಾತ್ರಿ ಈಕೆ ಕಷ್ಟಪಟ್ಟು ಕೆಲಸ ಮಾಡಿದ್ದೇ ಆಕೆಯ ಸಾವಿಗೆ ಕಾರಣ ಎಂದು ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಎಂಬ 27 ವಯಸ್ಸಿನ ಯುವತಿಯ ಅಮ್ಮ ದೂರಿದ್ದರು. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. 

"ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಅವರ ಸಾವು ದುರಂತ ನಷ್ಟದಿಂದ ತೀವ್ರ ದುಃಖವಾಗಿದೆ. ಅಸುರಕ್ಷಿತ ಮತ್ತು ಶೋಷಣೆಯ ಕೆಲಸದ ವಾತಾವರಣದ ಆರೋಪಗಳ ಬಗ್ಗೆ ಕೇಂದ್ರ ಸರ್ಕಾರ ಸಂಪೂರ್ಣ ತನಿಖೆ ನಡೆಸುತ್ತಿದೆ. ಈ ಸಾವು ಹೇಗೆ ಸಂಭವಿಸಿದೆ ಎಂಬ ಬಗ್ಗೆ ತನಿಖೆ ನಡೆಸ ನ್ಯಾಯ ನೀಡಲು  ನಾವು ಬದ್ಧರಾಗಿದ್ದೇವೆ. ಕಾರ್ಮಿಕ ಸಚಿವಾಲಯವು ಅಧಿಕೃತವಾಗಿ ದೂರನ್ನು ಕೈಗೆತ್ತಿಕೊಂಡಿದೆ ಎಂದು ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ ರಾಜ್ಯ ಖಾತೆ ಸಚಿವೆ  ಶೋಭಾ ಕರಂದ್ಲಾಜೆ ಹೇಳಿದ್ದಾರೆ. ತಮ್ಮ ಎಕ್ಸ್​ ಪೋಸ್ಟ್​ನಲ್ಲಿ ಈ ವಿಷಯವನ್ನು ತಿಳಿಸಿರುವ ಅವರು, ಈ ಬಗ್ಗೆ ಕೇಂದ್ರ ಸಚಿವರಾದ ಮನ್ಸುಖ್​ ಮಾಂಡವೀಯಾ ಅವರಿಗೂ ಟ್ಯಾಗ್​ ಮಾಡಿದ್ದಾರೆ. 

ಟಾರ್ಗೆಟ್​ ತಲುಪೋ ಭರದಲ್ಲಿ ಒತ್ತಡದಿಂದ ಕೆಲಸ ಮಾಡಿ ಯುವತಿಯ ಸಾವು! ಕಂಪೆನಿ ಮಾಡಿದ್ದೇನು ನೋಡಿ..

  ಕೆಲಸಕ್ಕೆ ಸೇರಿ ನಾಲ್ಕೇ ತಿಂಗಳಿನಲ್ಲಿ ಈ ದುರಂತ ಸಂಭವಿಸಿದೆ.  ದುರಂತದ ಸಂಗತಿ ಎಂದರೆ,, ಆಕೆಯ ಅಂತ್ಯಕ್ರಿಯೆಗೆ ಕಂಪೆನಿಯ ಒಬ್ಬರೇ ಒಬ್ಬರು ಅಧಿಕಾರಿಗಳು ಬಂದಿರಲಿಲ್ಲ. ಆದರೆ ಈ ವಿಷಯ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್​ ಆದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕಂಪೆನಿ, ಕೆಲಸದ ವಾತಾವರಣವನ್ನು ಆರೋಗ್ಯಕರವಾಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದೆ. ಯುವತಿಯ ಅಕಾಲಿಕ ಮರಣದಿಂದ ನಾವು ತೀವ್ರವಾಗಿ ದುಃಖಿತರಾಗಿದ್ದೇವೆ, ಕುಟುಂಬಕ್ಕೆ ನಮ್ಮ  ಸಂತಾಪಗಳು ಎಂದಿರುವ ಕಂಪೆನಿ,  ಕುಟುಂಬಕ್ಕೆ ಎಲ್ಲಾ ಸಹಾಯವನ್ನು ನೀಡಲು ಸಿದ್ಧವಾಗಿರುವುದಾಗಿ ಹಾಗೂ  ಉದ್ಯೋಗಿಗಳಿಗೆ ಆರೋಗ್ಯಕರ ಕೆಲಸದ ಸ್ಥಳವನ್ನು ಒದಗಿಸುವುದಾಗಿ ಹೇಳಿದೆ. 
 
ಮಗಳ ಸಾವಿನ ಕುರಿತು ತಿಳಿಸಿದ್ದ ಅನ್ನಾ ಅವರ ತಾಯಿ, ಮಗಳು ದಿನವೂ ದಣಿದು ಮನೆಗೆ ಬರುತ್ತಿದ್ದಳು. ಕೆಲವೊಮ್ಮೆ ತನ್ನ ಬಟ್ಟೆಗಳನ್ನು ಬದಲಾಯಿಸದೆ ಹಾಸಿಗೆಯ ಮೇಲೆ ಕುಸಿದು ಬೀಳುತ್ತಿದ್ದಳು. ಟಾರ್ಗೆಟ್​ ರೀಚ್​ ಆಗಲು  ತುಂಬಾ ಶ್ರಮಿಸುತ್ತಿದ್ದಳು. ಅವಳು  ಹೋರಾಟಗಾರ್ತಿ, ಸುಲಭವಾಗಿ ಬಿಟ್ಟುಕೊಡುತ್ತಿರಲಿಲ್ಲ. ಕೆಲಸ ಬಿಡುವಂತೆ ಹೇಳಿದರೂ ಕೇಳಲಿಲ್ಲ ಎಂದು ದುಃಖಿತರಾಗಿದ್ದಾರೆ ತಾಯಿ. "ಅತಿಯಾದ ಕೆಲಸದ ಹೊರೆಯಿಂದಾಗಿ ಅನೇಕ ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ. ಆದರೆ ಮಗಳು ಎಷ್ಟೇ ಕಷ್ಟವಾದರೂ ಕೆಲಸ ಮುಂದುವರೆಸಿದಳು. ಕಂಪೆನಿಯ ಕೆಲಸದ ಜೊತೆ ಆಕೆಗೆ ಇತರ ಕೆಲಸಗಳನ್ನೂ ನೀಡಲಾಗಿತ್ತು.  ಇದರಿಂದಾಗಿ ಅನ್ನಾ ತಡರಾತ್ರಿಯವರೆಗೆ ಮತ್ತು ವಾರಾಂತ್ಯದಲ್ಲಿಯೂ ಕೆಲಸ ಮಾಡುತ್ತಿದ್ದಳು. ಒಮ್ಮೆ ತಡರಾತ್ರಿಯವರೆಗೂ ಕೆಲಸ ಮಾಡಿದರೂ ಬೆಳಿಗ್ಗೆ ಬೇಗ ಕರೆಯಲಾಗಿತ್ತು. ಅವಳಿಗೆ ವಿಶ್ರಾಂತಿ ಅಥವಾ ಚೇತರಿಸಿಕೊಳ್ಳಲು ಯಾವುದೇ ಸಮಯವೇ ಇರಲಿಲ್ಲ. ಈ ಬಗ್ಗೆ ಮಗಳು ಕಂಪೆನಿಯಲ್ಲಿ ಹೇಳಿದಾಗ  ವಜಾ ಮಾಡುವುದಾಗಿ ಬೆದರಿಸಿದರು. ಆದ್ದರಿಂದ ಅವಳು ಎಲ್ಲವನ್ನೂ ಸಹಿಸಿಕೊಂಡು ಕೆಲಸ ಮಾಡುತ್ತಿದ್ದಳು ಎಂದು ತಾಯಿ ಮಗಳ ಸಾವಿನ ಕುರಿತು ಹೇಳಿದ್ದಾರೆ. ಜೊತೆಗೆ, ಸಂಪೂರ್ಣ ಮಾಹಿತಿಯನ್ನು ಪತ್ರ ಮುಖೇನ ಕಂಪೆನಿಗೂ ಕಳುಹಿಸಿ, ಇತರ ಉದ್ಯೋಗಿಗಳ ಜೀವ ಕಾಪಾಡುವಂತೆ ತಿಳಿಸಿದ್ದರು. ಆದರೆ ಮಗಳು ಯಾವ ರೀತಿ ಸಾವನ್ನಪ್ಪಿದ್ದಾರೆ ಎನ್ನುವ ಬಗ್ಗೆ ಅವರು ಮಾಹಿತಿ ನೀಡಲಿಲ್ಲ. 

ಗ್ರಾಹಕರನ್ನು ಸೆಳೆಯಲು ಮತ್ತೆ ಭರ್ಜರಿ ಆಫರ್​ ನೀಡಿದ ಜಿಯೋ! 91 ರೂ.ಗಳಿಂದ ಶುರುವಾಗ್ತಿದೆ ಬಂಪರ್​ ಯೋಜನೆ

Latest Videos
Follow Us:
Download App:
  • android
  • ios