Asianet Suvarna News Asianet Suvarna News

ಗ್ರಾಹಕರನ್ನು ಸೆಳೆಯಲು ಮತ್ತೆ ಭರ್ಜರಿ ಆಫರ್​ ನೀಡಿದ ಜಿಯೋ! 91 ರೂ.ಗಳಿಂದ ಶುರುವಾಗ್ತಿದೆ ಬಂಪರ್​ ಯೋಜನೆ

ರೀಚಾರ್ಜ್ ಯೋಜನೆಗಳ ಬೆಲೆಯನ್ನು ಏರಿಕೆ ಮಾಡಿ ಹಲವಾರು ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿರುವ ಜಿಯೋ ನೆಟ್​ವರ್ಕ್​, ಈಗ ತನ್ನ ಗ್ರಾಹಕರಿಗೆ ಕೆಲವೊಂದು ಭರ್ಜರಿ ಆಫರ್​ ನೀಡಿದೆ. ಅದರ ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ.
 

The Jio network now given some great offers to its customers starting from 91 rupees plan here full details suc
Author
First Published Sep 17, 2024, 2:58 PM IST | Last Updated Sep 17, 2024, 2:58 PM IST

ಕೆಲ ವರ್ಷಗಳ ಹಿಂದೆ ಯಾರೂ ಊಹಿಸದ ರೀತಿಯಲ್ಲಿ ಒಂದು ವರ್ಷದವರೆಗೆ ಉಚಿತ ಇಂಟರ್​ನೆಟ್​ ಸೌಲಭ್ಯ ನೀಡುವ ಮೂಲಕ ಇಡೀ ವಿಶ್ವದ ಹುಬ್ಬೇರಿಸಿದ್ದು ಮುಖೇಶ್​ ಅಂಬಾನಿಯವರ ಜಿಯೋ ನೆಟ್​ವರ್ಕ್​. ಇಂಟರ್​ನೆಟ್​ ಕ್ರಾಂತಿಯನ್ನು ಹುಟ್ಟುಹಾಕುವ ಮೂಲಕ ಬೇರೆಲ್ಲಾ ನೆಟ್​ವರ್ಕ್​ಗಳನ್ನು ಮಕಾಡೆ ಮಲಗಿಸುವ ಪಣ ತೊಟ್ಟಿದ್ದರೂ,  ಏರ್​ಟೇಲ್​ನಂಥ ಕಂಪೆನಿಗಳು ಕೂಡ ಅನಿವಾರ್ಯವಾಗಿ ದರ ಕಡಿತ ಮಾಡಿ ಸುಧಾರಿಸಿಕೊಂಡರೆ, ಬಹುತೇಕ ಕಂಪೆನಿಗಳು ಮುಚ್ಚಿ ಹೋದವು ಇಲ್ಲವೇ ಬೇರೆ ನೆಟ್​ವರ್ಕ್​ ಜೊತೆ ಸೇರಿಕೊಂಡವು. ಆದರೆ ಕಳೆದ ತಿಂಗಳು ದರ ಹೆಚ್ಚು ಮಾಡುವ ಮೂಲಕ ಜಿಯೋ ಗ್ರಾಹಕರಿಗೆ ಶಾಕ್​ ನೀಡಲಾಗಿತ್ತು. ಏರ್​ಟೆಲ್​ಗೆ ಹೋಲಿಸಿದರೆ ಜಿಯೋ ದರಗಳು ಇಂದಿಗೂ ಕಡಿಮೆಯಾಗಿಯೇ ಇದ್ದರೂ, ದರ ಏರಿಕೆಯನ್ನು ಬಹಳಷ್ಟು ಮಂದಿ ವಿರೋಧಿಸಿದರು. ಅದೂ ಅನಂತ್​ ಅಂಬಾನಿಯವರ ಮದುವೆಯ ಸಮಯದಲ್ಲಿಯೇ ದರ ಏರಿಕೆ ಮಾಡಿದ್ದಕ್ಕೆ ಸಾಕಷ್ಟು ಟ್ರೋಲ್​ಗೂ ಒಳಗಾದರು.

ಇದರ ಬೆನ್ನಲ್ಲೇ ಕೆಲ ಗ್ರಾಹಕರು ಪೋರ್ಟ್ ಮಾಡಲು ಶುರು ಮಾಡಿರುವ ಕಾರಣ, ಮತ್ತೆ ಗ್ರಾಕರನ್ನು ಸೆಳೆಯಲು ಮುಖೇಶ್​ ಅಂಬಾನಿ ಮುಂದಾಗಿದ್ದಾರೆ. ರೀಚಾರ್ಜ್ ಯೋಜನೆಗಳ ಬೆಲೆಯನ್ನು ರಿಲಯನ್ಸ್ ಜಿಯೋ ಈಗ ಕೆಲ ದಿನಗಳ ಹಿಂದೆ ಬದಲಾಯಿಸಿದೆ.  ಸಾಕಷ್ಟು ಟ್ರೆಂಡ್‌ನಲ್ಲಿರುವ ಕೆಲವು ಯೋಜನೆಗಳ ಬಗ್ಗೆ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.  ಎಲ್ಲರ ಗಮನ ಸೆಳೆದಿರುವುದು ಜಿಯೋ 91 ಯೋಜನೆ. ಇದರ ಕುರಿತು ಹೇಳುವುದಾದರೆ,  ಇದು ಜಿಯೋ ಫೋನ್ ಬಳಕೆದಾರರಿಗೆ ಮಾತ್ರ. ನೀವೂ ಜಿಯೋ ಫೋನ್ ಬಳಕೆದಾರರಾಗಿದ್ದರೆ  ಅನಿಯಮಿತ ಧ್ವನಿ ಕರೆ, 50 SMS, 100 MB ದೈನಂದಿನ ಡೇಟಾವನ್ನು ಪಡೆಯಬಹುದಾಗಿದೆ. ಇಷ್ಟೇ ಅಲ್ಲದೇ,  ಅದರಲ್ಲಿ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರತ್ಯೇಕ ಪ್ರವೇಶವನ್ನು ಕೂಡ ಪಡೆಬಹುದು. ಗ್ರಾಹಕರು ಬಯಸಿದರೆ,  My Jio ಅಪ್ಲಿಕೇಶನ್‌ನಿಂದ ಈ ರೀಚಾರ್ಜ್ ಅನ್ನು ಸಹ ಖರೀದಿಸಬಹುದು.

ಅಪ್ರಾಪ್ತ ಮಕ್ಕಳ ಭವಿಷ್ಯ ಭದ್ರ, ನಾಳೆಯಿಂದ ಶುರುವಾಗಲಿದೆ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ

  ಜಿಯೋ 449 ರೀಚಾರ್ಜ್ ಯೋಜನೆ: ಇದು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಪ್ರತಿದಿನ 3GB ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು 100 SMS ನೀಡಲಾಗುತ್ತದೆ. ಹೆಚ್ಚಿನ ವೇಗದ ಡೇಟಾ ಮಿತಿ ಮುಗಿದ ನಂತರ, ನಿಮಗೆ 64Kbps ವೇಗದಲ್ಲಿ ಇಂಟರ್ನೆಟ್ ನೀಡಲಾಗುತ್ತದೆ. ನೀವು ಈ ಯೋಜನೆಯನ್ನು ಖರೀದಿಸಿದರೆ, ನೀವು ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಸಹ ಪಡೆಯುತ್ತೀರಿ.

ಜಿಯೋ 448 ರೀಚಾರ್ಜ್ ಯೋಜನೆ: ಜಿಯೋ 448 ರೂಗಳ ಹೊಸ ಯೋಜನೆಯನ್ನು ಸಹ ನೀಡುತ್ತಿದೆ. ಇದರಲ್ಲಿ ಪ್ರತಿದಿನ 100 ಎಸ್‌ಎಂಎಸ್ ಲಭ್ಯವಿರುತ್ತದೆ, ಪ್ರತಿದಿನ 2 ಜಿಬಿ ಡೇಟಾ ಲಭ್ಯವಿದೆ. ಇದರೊಂದಿಗೆ ನಿಮಗೆ ಅನಿಯಮಿತ ಧ್ವನಿ ಕರೆಯನ್ನು ಸಹ ನೀಡಲಾಗುತ್ತಿದೆ. ಈ ಯೋಜನೆಯು 12 OTT ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡುತ್ತದೆ. ಇದು Jio TV ಅಪ್ಲಿಕೇಶನ್, SonyLIV, Zee5 ನ ಹೆಸರುಗಳನ್ನು ಒಳಗೊಂಡಿದೆ.
ಜಿಯೋ 399 ರೀಚಾರ್ಜ್ ಯೋಜನೆ: ಜಿಯೋ 399 ರೀಚಾರ್ಜ್ ಯೋಜನೆ, ಅನಿಯಮಿತ ಕರೆ, 100 SMS, 2.5GB ದೈನಂದಿನ ಡೇಟಾವನ್ನು ಇದರಲ್ಲಿ ನೀಡಲಾಗುತ್ತಿದೆ. ಆದಾಗ್ಯೂ, ಇದರಲ್ಲಿ ನೀವು ಇಂಟರ್ನೆಟ್ ವೇಗದ ಬಗ್ಗೆ ಚಿಂತಿಸಬೇಕಾಗಿಲ್ಲ. ಇದು ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಸಹ ನೀಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಇದು ನಿಮಗೆ ಉತ್ತಮ ಆಯ್ಕೆಯಾಗಿದೆ ಎಂದು ಹೇಳಬಹುದು.

ಜಿಯೋ 349 ರೀಚಾರ್ಜ್ ಯೋಜನೆ: ಜಿಯೋದ ಈ ಯೋಜನೆಯನ್ನು ಹೀರೋ 5ಜಿ ಯೋಜನೆ ಎಂದೂ ಕರೆಯುತ್ತಾರೆ. ಇದರಲ್ಲಿ ನೀವು ಪ್ರತಿದಿನ 100 SMS ಪಡೆಯುತ್ತೀರಿ. ಇದರ ಮಾನ್ಯತೆ 28 ದಿನಗಳು ಮತ್ತು ನೀವು ಪ್ರತಿದಿನ 2GB ಡೇಟಾವನ್ನು ಪಡೆಯುತ್ತೀರಿ. ಇದು ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಹೊಂದಿದೆ, ಅದು ವಿಭಿನ್ನವಾಗಿದೆ. ಈ ಯೋಜನೆಯನ್ನು ಕಂಪನಿಯು ಹೀರೋ 5G ಎಂದು ಟ್ಯಾಗ್ ಮಾಡಿದೆ.

ಜಿಯೋ 329 ರೀಚಾರ್ಜ್ ಯೋಜನೆ: ಜಿಯೋದ ಈ ಯೋಜನೆಯು 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದಲ್ಲದೇ, ಪ್ರತಿದಿನ 100 ಎಸ್‌ಎಂಎಸ್‌ಗಳು ಲಭ್ಯವಿದ್ದು, ಪ್ಲಾನ್‌ನ 1.5 ಜಿಬಿ ಡೇಟಾ ಪ್ರವೇಶವನ್ನು ಕಂಪನಿಯು ನೀಡುತ್ತಿದೆ. ಇದರಲ್ಲಿ, ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡಲಾಗಿದೆ, ಇದು ಜಿಯೋ ಕ್ಲೌಡ್ ಮತ್ತು ಜಿಯೋ ಸಾವನ್ ಪ್ರೊ ಅನ್ನು ಸಹ ಒಳಗೊಂಡಿದೆ. ನೀವು ಜಿಯೋ ಸಿನಿಮಾವನ್ನು ಸಹ ಪ್ರವೇಶಿಸಬಹುದು, ಆದರೆ ಈ ಪ್ರೀಮಿಯಂ ಲಭ್ಯವಿಲ್ಲ. 
 

ಫೋರ್ಬ್ಸ್ ಲಿಸ್ಟಲ್ಲಿರುವ ವಿಶ್ವದ ಅತ್ಯಂತ ದುಬಾರಿ ಐಷಾರಾಮಿ ಮನೆಗಳಿವು ಅಂಬಾನಿ ಮನೆಗೆ ಎಷ್ಟನೇ ಸ್ಥಾನ?

Latest Videos
Follow Us:
Download App:
  • android
  • ios