ಕೇಂದ್ರ ಸರ್ಕಾರದ ಸಾರಿಗೆ ಇಲಾಖೆ ಬೆಂಗಳೂರು ಮತ್ತು ಮುಂಬೈ ನಡುವೆ ಎಕ್ಸ್‌ಪ್ರೆಸ್‌ವೇ ನಿರ್ಮಿಸಲು ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ ನಿತಿನ್ ಗಡ್ಕರಿ  ಹೇಳಿದ್ದಾರೆ.

ಮುಂಬೈ: ಕೇಂದ್ರ ಸರ್ಕಾರದ ಸಾರಿಗೆ ಇಲಾಖೆ ಬೆಂಗಳೂರು ಮತ್ತು ಮುಂಬೈ ನಡುವೆ ಎಕ್ಸ್‌ಪ್ರೆಸ್‌ವೇ ನಿರ್ಮಿಸಲು ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಇದು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಐದು ಗಂಟೆಗಳಷ್ಟು ಕಡಿಮೆ ಮಾಡಲಿದೆ. ಜೊತೆಗೆ ಈ ಎಕ್ಸ್‌ಪ್ರೆಸ್‌ವೇ ಮುಂಬೈ ಪುಣೆ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕ ಕಲ್ಪಿಸಲಿದೆ ಎಂದು ಅವರು ಹೇಳಿದ್ದಾರೆ. 

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಗಡ್ಕರಿ (Nithin Gadkari) ಅವರು ಈ ವಿಚಾರ ಹೇಳಿದ್ದಾರೆ. ನಾವು ಮುಂಬೈ (Mumbai) ಮತ್ತು ಬೆಂಗಳೂರು (Bengaluru)ನಡುವೆ ಹಸಿರು ಎಕ್ಸ್‌ಪ್ರೆಸ್ ಹೆದ್ದಾರಿಯನ್ನು (Green express highway) ಯೋಜಿಸುತ್ತಿದ್ದೇವೆ. ಇದು ಟೆಕ್ ರಾಜಧಾನಿ (Tech Capital) ಮತ್ತು ವಾಣಿಜ್ಯ ರಾಜಧಾನಿ ನಡುವಿನ ಪ್ರಯಾಣವನ್ನು ಐದು ಗಂಟೆಗೆ ಇಳಿಸಲಿದೆ. ಈ ಎಕ್ಸ್‌ಪ್ರೆಸ್‌ವೇ ಬಳಕೆಗೆ ಬಂದ ನಂತರ ಬೆಂಗಳೂರು ಮತ್ತು ಪುಣೆ (Pune) ನಡುವಿನ ಪ್ರಯಾಣದ ಸಮಯವು 3.50 ರಿಂದ 4 ಗಂಟೆಗಳವರೆಗೆ ಕಡಿಮೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಭಾರೀ ಮಳೆಗೆ ಪೂರ್ವಾಂಚಲ ಎಕ್ಸ್‌ಪ್ರೆಸ್‌ ವೇಯಲ್ಲಿ 15 ಫೀಟ್‌ ಆಳದ ಗುಂಡಿ!

ಪ್ರಸ್ತುತ ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ವಾಣಿಜ್ಯ ನಗರಿ (Commercial capital) ಮುಂಬೈ ನಡುವಿನ ದೂರ 981 ಕಿಲೋ ಮೀಟರ್‌. ಪ್ರಸ್ತುತ ಈ ಎರಡು ಮಹಾ ನಗರಗಳ ನಡುವೆ ಪ್ರಯಾಣಿಸಲು ಸುಮಾರು 12 ರಿಂದ 15 ಗಂಟೆಗಳು ಬೇಕಾಗುವುದು.

ಈ ಹಿಂದೆ ಸಚಿವ ನಿತಿನ್ ಗಡ್ಕರಿ ಅವರು ಬೆಂಗಳೂರು ಮತ್ತು ಚೆನ್ನೈ (Chennai) ನಡುವೆ ಎಕ್ಸ್‌ಪ್ರೆಸ್‌ವೇಯನ್ನು ಘೋಷಿಸಿದ್ದರು. ಇದು ಜಾರಿಗೆ ಬಂದಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಕೇವಲ ಎರಡು ಗಂಟೆಗಳ ಅವಧಿಯಲ್ಲಿ ತಲುಪಬಹುದಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಭಾರತವು ಒಟ್ಟು 26 ಹೊಸ ಹಸಿರು ಎಕ್ಸ್‌ಪ್ರೆಸ್‌ವೇಗಳನ್ನು ಹೊಂದಲಿದೆ. ಇದರಿಂದ ದೂರ ದೂರ ಪ್ರಯಾಣಿಸಲು ರಸ್ತೆಮಾರ್ಗಗಳನ್ನು ಆಯ್ಕೆ ಮಾಡುವ ಜನರಿಗೆ ಅನುಕೂಲವಾಗಲಿದೆ. ಅವರ ಪ್ರಯಾಣದ ಸಮಯ ಉಳಿಕೆ ಆಗಲಿದೆ ಎಂದು ಅವರು ಹೇಳಿದರು.

ಪೂರ್ವಾಂಚಲ ಎಕ್ಸ್‌ಪ್ರೆಸ್‌ ವೇಯಲ್ಲಿ 230 ಕಿ.ಮೀ ವೇಗದಲ್ಲಿ ಕಂಟೇನರ್‌ಗೆ ಬಡಿದ BMW, ನಾಲ್ವರು ಛಿದ್ರ!

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಕೂಡ ಗಡ್ಕರಿ ಘೋಷಿಸಿದ 26 ಹಸಿರು ಎಕ್ಸ್‌fಪ್ರೆಸ್‌ವೇಗಳಲ್ಲಿ ಒಂದಾಗಿದೆ. ಇದು ಕಾರ್ಯರೂಪಕ್ಕೆ ಬಂದಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಅಥವಾ ಚೆನ್ನೈನಿಂದ ಬೆಂಗಳೂರಿಗೆ ಎರಡು ಗಂಟೆಗಳಲ್ಲಿ ತಲುಪಬಹುದು. ಮುಂಬರುವ ಭವಿಷ್ಯದಲ್ಲಿ ನಮ್ಮ ರಸ್ತೆಗಳು ಅಮೆರಿಕದ ರಸ್ತೆಗಳಿಗಿಂತ ಕಡಿಮೆಯಲ್ಲಿ ಇರುವುದಿಲ್ಲ ಎಂದು ನಾನು ಪುನರುಚ್ಚರಿಸಲು ಬಯಸುತ್ತೇನೆ ಎಂದು ಗಡ್ಕರಿ ಹೇಳಿದ್ದಾರೆ.