ಪೂರ್ವಾಂಚಲ ಎಕ್ಸ್‌ಪ್ರೇಯ ಸುಲ್ತಾನ್‌ಪುರ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಅತಿವೇಗವಾಗಿ ಹೋಗುತ್ತಿದ್ದ ಬಿಎಂಡಬ್ಲ್ಯು ಕಾರು, ಎದುರಿಂದ ಬಂದ ಕಂಟೇನರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಛಿದ್ರವಾಗಿದ್ದಾರೆ. ಘಟನೆ ಎಷ್ಟು ಭೀಕರವಾಗಿತ್ತೆಂದರೆ, ಬಿಎಂಡಬ್ಲ್ಯು ಕಾರಿನ ಭಾಗಗಳನ್ನು ಗೋಣಿಚೀಲದಲ್ಲಿ ತೆಗೆದುಕೊಂಡು ಹೋಗಲಾಗಿದೆ. 

ಲಕ್ನೋ (ಅ.15): ನಾಲ್ವರೂ ಸಾಯ್ತೇವೆ..! ಬಿಎಂಡಬ್ಲ್ಯು ಕಾರ್‌ನಲ್ಲಿದ್ದ ಬಿಹಾರದ ರೋಹ್ಟಾಸ್‌ನ ಇಂಜಿನಿಯರ್‌ ದೀಪಕ್‌ ಆನಂದ್‌, ಫೇಸ್‌ಬುಕ್‌ನಲ್ಲಿ ಲೈವ್‌ನಲ್ಲಿದ್ದ ವೇಳೆ ಹೇಳಿದ್ದ ಮೊದಲ ಮಾತಾಗಿತ್ತು. ಆ ವೇಳೆ ದೀಪಕ್‌ ಆನಂದ್‌ ತಮ್ಮ ಭಾವ ವೈದ್ಯ ಆನಂದ್‌ ಕುಮಾರ್‌ ಹಾಗೂ ತಮ್ಮ ಇಬ್ಬರು ಸ್ನೇಹಿತರೊಂದಿಗೆ ಶುಕ್ರವಾರ ಸಂಜೆ ಪೂರ್ವಾಂಚಲ ಎಕ್ಸ್‌ಪ್ರೆಸ್‌ ವೇ ಯಲ್ಲಿ ಅತ್ಯಂತ ವೇಗವಾಗಿ ತಮ್ಮ ಬಿಎಂಡಬ್ಲ್ಯು ಕಾರ್‌ಅನ್ನು ಓಡಿಸುತ್ತಿದ್ದರು. ಅಂದಾಜು ಗಂಟೆಗೆ 230 ಕಿಲೋಮೀಟರ್‌ ವೇಗದಲ್ಲಿ ಕಾರು ಹೋಗುತ್ತಿದ್ದ ವೇಳೆ ನಿಯಂತ್ರಿಸುವಲ್ಲಿ ದೀಪಕ್‌ ಆನಂದ್‌ ಸೋಲು ಕಂಡಿದ್ದಾರೆ. ಸುಲ್ತಾನ್‌ಪುರಕ್ಕೆ ತಲುಪುವ ವೇಳೆಗೆ ಎದುರುಗಡೆಯಿಂದ ಬಂದ ಕಂಟೇನರ್‌ಗೆ ಬಿಎಂಡಬ್ಲ್ಯು ಕಾರ್‌ ಢಿಕ್ಕಿ ಹೊಡೆದಿದೆ. ಘಟನೆ ಎಷ್ಟು ಭೀಕರವಾಗಿತ್ತೆಂದರೆ, ಘಟನೆಯಲ್ಲಿ ಕಾರ್‌ನಲ್ಲಿದ್ದ ನಾಲ್ವರೂ ಸಾವು ಕಂಡಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವ ಯಾವ ಅವಕಾಶವೂ ಇದ್ದಿರಲಿಲ್ಲ. ನಾಲ್ವರ ದೇಹಗಳು ಸಂಪೂರ್ಣವಾಗಿ ಛಿದ್ರವಾಗಿದ್ದರೆ, ಬಿಎಂಡಬ್ಲ್ಯು ಮಾತ್ರ ಪುಡಿ-ಪುಡಿಯಾಗಿತ್ತು. ಪೊಲೀಸರು ಗೋಣಿ ಚೀಲದಲ್ಲಿ ಬಿಎಂಡಬ್ಲ್ಯು ಕಾರ್‌ನ ಅವಶೇಷಗಳನ್ನು ತೆಗೆದುಕೊಂಡು ಹೋಗಿದ್ದಾರೆ.

Scroll to load tweet…


ಆಕ್ಸಿಡೆಂಟ್‌ ಆಗುವ ಮುನ್ನ ನಾಲ್ವರಲ್ಲೊಬ್ಬ ಫೇಸ್‌ಬುಕ್‌ ಲೈವ್‌ ಕೂಡ ಮಾಡಿದ್ದಾರೆ. ಈ ವೇಳೆ ಕಾರ್‌ನ ಸ್ಪೀಡೋಮೀಟರ್‌ನತ್ತಲೂ (speedometer ) ಕ್ಯಾಮೆರಾವನ್ನು ಹಾಯಿಸಿದ್ದಾರೆ. ಈ ವಿಡಿಯೋದಲ್ಲಿ ಅವರ ಮಾತುಗಳು ಕೂಡ ದಾಖಲಾಗಿದ್ದು, ಫೇಸ್‌ಬುಕ್‌ನಲ್ಲಿ ಎಲ್ಲವೂ ಲೈವ್‌ ಆಗುದೆ. ಆದರೆ, ವಿಡಿಯೋ ಲೈವ್‌ (FB Live) ಆದ ಕೆಲ ಹೊತ್ತಿನಲ್ಲಿಯೇ ಆದ ಘಟನೆ ರಣಭೀಕರವಾಗಿತ್ತು. ವಿಡಿಯೋದ ಆರಂಭದಲ್ಲಿ 1.25 ಕೋಟಿ ರೂಪಾಯಿಯ ಬಿಎಂಡಬ್ಲ್ಯು ಕಾರು 62-63 ಕಿಲೋಮೀಟರ್‌ ವೇಗದಲ್ಲಿ ಚಲಿಸುತ್ತಿತ್ತು. ಆದರೆ, ಕೆಲ ಹೊತ್ತಿನಲ್ಲಿಯೇ ಕಾರ್‌ನ ವೇಗ ವರ್ಧಿಯಾಗಿದ್ದು ಗಂಟೆಗೆ 230 ಕಿಲೋಮೀಟರ್‌ ತಲುಪುತ್ತದೆ. ಫೇಸ್‌ಬುಕ್‌ ಲೈವ್‌ನಲ್ಲಿ ಪ್ರಕಟವಾದ ಸಂಪೂರ್ಣ ವಿಡಿಯೋ, ಆಕ್ಸಿಂಡೆಂಟ್‌ನಲ್ಲಿ ಕೊನೆಗೊಂಡಿಲ್ಲ. ಆದರೆ, ಅತಿವೇಗದಿಂದಾಗಿಯೇ ಈ ನಾಲ್ವರು ಸಾವು ಕಂಡಿದ್ದಾರೆ ಎನ್ನುವುದನ್ನು ಅವರು ಮಾಡಿರುವ ವಿಡಿಯೋಗಳು ಹಾಗೂ ಕಾರ್‌ನ ಗತಿ ಕಂಡವರು ಹೇಳಬಹುದಾಗಿದೆ.

ಲೈವ್‌ನಲ್ಲಿ ಮಾತನಾಡುವ ವೇಳೆಯಲ್ಲೂ ಸ್ಪೀಡ್‌ ಬಗ್ಗೆ ಚರ್ಚೆ: ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡುವ ವೇಳೆಯಲ್ಲೂ ಸ್ಪೀಡ್‌ನ ಬಗ್ಗೆ ಚರ್ಚೆಯಾಗಿದೆ. ಇದರಲ್ಲಿ ಅವರು, 'ಸ್ಪೀಡ್‌ ಬರ್ತಾ ಇಲ್ಲ...130..200 ಅನ್ನು ಕ್ರಾಸ್‌ ಮಾಡ್ತೇನೆ... ಇದೇ ಸ್ಪೀಡ್‌ನಲ್ಲಿ 300 ಕೂಡ ಕ್ರಾಸ್‌ ಮಾಡ್ತೇನೆ..ಎಲ್ಲರೂ ಸೀಟ್‌ ಬೆಲ್ಟ್‌ ಹಾಕಿಕೊಳ್ಳಿ.. (ರಸ್ತೆಯ ದೃಶ್ಯ)..ಇದು ನೇರವಾಗದೆ...ಇಲ್ಲಿಂದನೇ ಕಿಲ್ಲಿಂಗ್‌ ಆರಂಭಿಸ್ತೇನೆ... ಸ್ಪೀಡ್‌ ಬರ್ತಾ ಇದೆ ಅಲ್ವಾ (ಕ್ಯಾಮೆರಾದಲ್ಲಿ)..170..200 ರೆಕಾರ್ಡ್‌ ಮಾಡು... ಹಾ ಬರ್ತಾ ಇದೆ (ಬೈಗುಳ)..50 ಸಾವಿರ ರೂಪಾಯಿ ಮಾತ್ರ ಸ್ಪೀಡ್ ಕೊಡಬೇಡಿ....ನಡೆ...ಫುಲ್ ಸ್ಪೀಡ್ ನಲ್ಲಿ...ಬ್ರೇಕ್ ಹಾಕಬೇಡಿ...ಬ್ರೇಕ್ ಮಾಡಬೇಡಿ...ಚಲ್ಲೇ...ಚಲ್. ..ಬಿಡು (ಎಕ್ಸಲೇಟರ್‌)... ಬಿಟ್ಟರೆ ಹತ್ತುವುದಿಲ್ಲ..... ' ಇದಾದ ಬಳಿಕ ವಿಡಿಯೋದಲ್ಲಿ ಮೌನ ಆವರಿಸಿದೆ. ಅಪಘಾತದ ವೇಳೆ ಭೋಲಾ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ.

ಗರ್ಭಿಣಿಗೆ ಡಿಕ್ಕಿ ಹೊಡೆದ ಟ್ರಕ್‌, ಗರ್ಭದಿಂದ ಹೊರಬಂತು ಜೀವಂತ ಮಗು!

ಕುಟುಂಬದವರ ಪ್ರಕಾರ ಡಾ.ಆನಂದಕುಮಾರ್ ಅವರಿಗೆ ದುಬಾರಿ ಕಾರು, ಬೈಕ್ ಗಳೆಂದರೆ ಒಲವು. ಅವರ ಬಳಿ 16 ಲಕ್ಷ ಮೌಲ್ಯದ ಬೈಕ್ (Bike) ಕೂಡ ಇತ್ತು. ಇತ್ತೀಚೆಗೆ ಸುಮಾರು ರೂ.ಗೆ ಹೊಸ ಬಿಎಂಡಬ್ಲ್ಯು ಕಾರ್‌ ಖರೀದಿಸಿದ್ದರು. ಅದರ ಸರ್ವೀಸ್‌ಗಾಗಿ (BMW Car) ಲಕ್ನೋಗೆ ಹೋಗುವ ಹಾದಿಯಲ್ಲಿ ಈ ಘಟನೆ ನಡೆದಿದೆ. ಅವರ ಸಂಬಂಧಿ, ಜಾರ್ಖಂಡ್ ನಿವಾಸಿ ಎಂಜಿನಿಯರ್ ದೀಪಕ್ ಆನಂದ್, ಸ್ನೇಹಿತ ಅಖಿಲೇಶ್ ಸಿಂಗ್ ಮತ್ತು ಇನ್ನೊಬ್ಬ ಸ್ನೇಹಿತ ಭೋಲಾ ಕುಶ್ವಾಹ ಕಾರ್‌ನಲ್ಲಿದ್ದರು. ಅಪಘಾತದ ವೇಳೆ ಭೋಲಾ ಕಾರು ಓಡಿಸುತ್ತಿದ್ದ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನೊಳಗೆ ಕುಳಿತಿದ್ದ ನಾಲ್ವರು ಹಾಗೂ ಬಿಎಂಡಬ್ಲ್ಯು ಇಂಜಿನ್ ಕೂಡ ಹೊರಬಿದ್ದಿದೆ. ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬ ವ್ಯಕ್ತಿಯ ತಲೆ ಸಂಪೂರ್ಣವಾಗಿ ಕಟ್‌ ಆಗಿದೆ. ಸಾವಿಗೀಡಾದವರ ತಲೆ ಮತ್ತು ಕೈ 20-30 ಮೀಟರ್ ದೂರ ಬಿದ್ದಿದೆ. ಕಾರ್‌ ಸ್ಫೋಟಗೊಂಡಿದ್ದು, ಅಪಘಾತದ ನಂತರ ಬಿಎಂಡಬ್ಲ್ಯು ಕಾರನ್ನು ಗೋಣಿಚೀಲದಲ್ಲಿ ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ.

ಹಂಪ್ಸ್‌ಗಳು ಮಾಯ, ಪ್ರಧಾನಿ ಮೋದಿ ಬಂದು ಹೋದ ರಸ್ತೆ ಈಗ ಆಕ್ಸಿಡೆಂಟ್‌ ಝೋನ್!

ಡಾ.ಆನಂದ್ ಕುಮಾರ್ (Anand Kumar) ಅವರು ಡೆಹ್ರಿ ಬ್ಲಾಕ್‌ನ ಮಹಾದೇವ ನಿವಾಸಿಯಾಗಿದ್ದರು. ಅವರು ಜಮುಹರ್‌ನ ಎನ್‌ಎಂಸಿಎಚ್‌ನಲ್ಲಿ ಕುಷ್ಠರೋಗ ವಿಭಾಗದಲ್ಲಿ ಎಚ್‌ಓಡಿ ಆಗಿದ್ದರು. ಆನಂದ್ ಪ್ರಕಾಶ್ ಕಳೆದ ವರ್ಷ ಔರಂಗಾಬಾದ್ ಜಿಲ್ಲೆಯ ಹುಡುಗಿಯನ್ನು ವಿವಾಹವಾಗಿದ್ದರು. ಆನಂದ್ ಕುಮಾರ್ ಪ್ರಸಿದ್ಧ ವೈದ್ಯ ಮತ್ತು ಜೆಡಿಯು ನಾಯಕ ನಿರ್ಮಲ್ ಕುಮಾರ್ (JDU Leader Nirmal Kumar) ಅವರ ಕಿರಿಯ ಮಗ. ಡಾ.ನಿರ್ಮಲ್ ಕುಮಾರ್ ಅವರು ಪ್ರಸ್ತುತ ಪಕ್ಷದ ಕಡೆಯಿಂದ ಔರಂಗಾಬಾದ್ ಲೋಕಸಭೆಯ ಉಸ್ತುವಾರಿ ವಹಿಸಿದ್ದಾರೆ. ಅಪಘಾತ (Road Accident) ಸಂಭವಿಸಿದ ಸ್ಥಳದಲ್ಲಿ ಮಾರ್ಗವನ್ನು ಬದಲಾಯಿಸಲಾಗಿದೆ. ಏಳು ದಿನಗಳ ಹಿಂದೆ ಇದೇ ಸ್ಥಳದಲ್ಲಿ ಮಳೆಯಿಂದಾಗಿ ರಸ್ತೆ ಕುಸಿದಿತ್ತು. ವಾರದ ಹಿಂದೆ ಗುರುವಾರ 5 ಅಡಿ ಆಳ ಹಾಗೂ 15 ಅಡಿ ಉದ್ದದ ಹೊಂಡದಲ್ಲಿ ಕಾರು ಸಿಲುಕಿಕೊಂಡಿತ್ತು. ಅದನ್ನು ದುರಸ್ತಿ ಮಾಡಲಾಗಿದೆ, ಆದರೆ ಇನ್ನೂ ಮಾರ್ಗವನ್ನು ಬದಲಾಯಿಸಲಾಗಿದೆ. ಹಾಗಾಗಿ ವೇಗವಾಗಿ ಬಂದ ಬಿಎಂಡಬ್ಲ್ಯು ಕಂಟೇನರ್‌ಗೆ ಮುಂಭಾಗದಿಂದ ಡಿಕ್ಕಿ ಹೊಡೆದಿದೆ.