ಜಂತರ್ ಮಂತರ್‌ ಸಿಜೆಪಿ ಪ್ರತಿಭಟನೆ ತಡೆಯಲು ಸರ್ಕಾರ 40 ಸಾವಿರ ಭದ್ರತಾ ಪಡೆ ನಿಯೋಜಿಸಿದ್ದು ಅದರ ಯಶಸ್ಸನ್ನು ತೋರಿಸುತ್ತದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಅಲ್ಲದೆ, ಬಿಹಾರ ಎಂಎಲ್‌ಸಿ ಚುನಾವಣೆ ಹಿನ್ನೆಲೆ ಜೆಡಿಯು ನಾಯಕ ನೀರಜ್ ಕುಮಾರ್, NDA ಮೈತ್ರಿಕೂಟದ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.

Prashant Kishor on Delhi Protest: ಪ್ರತಿಭಟನೆಗೆ ಎಷ್ಟು ಜನ ಸೇರಿದ್ದರು ಎಂಬುದು ಮುಖ್ಯವಲ್ಲ. ಈ ಪ್ರತಿಭಟನೆ ತಡೆಯಲು ಸರ್ಕಾರ 40 ಸಾವಿರ ಅರೆಸೈನಿಕ ಪಡೆಗಳನ್ನು ನಿಯೋಜಿಸಬೇಕಾಯಿತು ಎಂದು ಜಂತರ್ ಮಂತರ್ ಪ್ರತಿಭಟನೆ(Jantar Mantar protest)ಗೆ ಜನ್ ಸೂರಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್(Prashant Kishor) ಪ್ರತಿಕ್ರಿಯಿಸಿದ್ದಾರೆ

ಜಂತರ್‌ ಮಂತರ್ ಕುರಿತು ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಶಾಂತ್ ಕಿಶೋರ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಜಂತರ್ ಮಂತರ್ ಪ್ರತಿಭಟನೆ ಯಶಸ್ವಿ

ಪ್ರತಿಭಟನೆಗೆ ಎಷ್ಟು ಜನ ಬಂದರು ಎಂಬುದರ ಮೇಲೆ ಪ್ರತಿಭಟನೆ ಯಶಸ್ವಿಯಾಯ್ತೇ ಇಲ್ಲವೇ ಎಂದು ಹಲವರು ನೋಡುತ್ತಿದ್ದರೆ. ಆದರೆ ಎಷ್ಟು ಜನರು ಬಂದ್ರೂ ಎಂಬುದು ಮುಖ್ಯವಲ್ಲ. ಪ್ರತಿಭಟನೆ ತಡೆಯಲು 40 ಸಾವಿರ ಅರೆಸೈನಿಕ ಪಡೆಗಳನ್ನು ಬೀದಿಗೆ ನಿಲ್ಲಿಸಲಾಗಿತ್ತು. ಇದು ಸಾರ್ವಜನಿಕರ ಪ್ರತಿಭಟನೆ ಎಷ್ಟು ಪ್ರಬಲವಾಗಿದೆ, ಸರ್ಕಾರ ಎಷ್ಟು ಭಯಭೀತವಾಗಿದೆ, ಪ್ರತಿಭಟನೆ ಎಷ್ಟು ಯಶಸ್ವಿಯಾಗಿದೆ ಎಂಬುದನ್ನು ತೋರಿಸಿತು ಎಂದರು.

CJP ಪ್ರತಿಭಟನೆಗೆ ದೇಶಾದ್ಯಂತ ಬೆಂಬಲ

ದೆಹಲಿಯ ಜಂತರ್ ಮಂತರ್‌ನಲ್ಲಿ ಅಕ್ಟೋಬರ್ 10ರಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಪ್ರತಿಭಟನೆಗೆ ಕರೆ ನೀಡಿತ್ತು. ಈ ಕರೆಗೆ ಓಗೊಟ್ಟು ದೇಶಾದ್ಯಂತ ಜನರು ಆಗಮಿಸುವ ನಿರೀಕ್ಷೆಯಿತ್ತು. ಆದರೆ ಪ್ರತಿಭಟನೆ ನಡೆಯದಂತೆ ತಡೆಯಲಾಯಿತು. ರೈಲು, ಮೆಟ್ರೋ ನಿಲ್ದಾಣ ಬಂದ್ ಮಾಡಿದ್ರು. ಪ್ರತಿಭಟನೆಗೆ ಮೊದಲೇ ತಡರಾತ್ರಿ ದೆಹಲಿ ಪೊಲೀಸರು 7000 ಕ್ಕೂ ಹೆಚ್ಚು ಜನರನ್ನು ಬಂಧಿಸಿ ಬಿಡುಗಡೆ ಮಾಡಿದರು

'ನೀರಜ್ ಕುಮಾರ್ ವೈದ್ಯರಲ್ಲ'

ಇನ್ನು ಬಿಹಾರ ಎಂಎಲ್‌ಸಿ ಚುನಾವಣೆಯಲ್ಲಿ ಜ್ವರ ಗುಣಪಡಿಸುವ ಬಗ್ಗೆ ಜೆಡಿಯು ಅಭ್ಯರ್ಥಿ ನೀರಜ್ ಕುಮಾರ್ ನೀಡಿದ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಶಾಂತ್ ಕಿಶೋರ್, ನೀರಜ್ ಕುಮಾರ್ ಈಗ ನಿರುದ್ಯೋಗಿ. ಅವರು ವೈದ್ಯರಾಗಲು ಸಾಧ್ಯವಿಲ್ಲ. ಜೆಡಿಯು ಪಕ್ಷದ ನಿಷ್ಠಾವಂತ ಎಂದು ಹೇಳಿಕೊಳ್ಳುವ ನೀರಜ್ ಕುಮಾರ್ ಜೆಡಿಯು ನಾಯಕರ ವಿರುದ್ಧವೇ ಮಾತನಾಡ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಇನ್ನು ಎನ್ ಡಿಎ ಸಮನ್ವಯ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಶಾಂತ್ ಕಿಶೋರ್, ಬಂಕಿಪುರದಲ್ಲಿ ನಡೆದ 480 ಸದಸ್ಯರ ಸಭೆಯು ಅವರಲ್ಲಿನ ಆತಂಕ ತೋರಿಸಿದೆ. ಎಂಎಲ್ ಸಿ ಚುನಾವಣೆ ಬಗ್ಗೆ ಆತಂಕಗೊಂಡಿದ್ದಾರೆ. ಎನ್ ಡಿಎ ವಿಧಾನಸಭೆ ಸಭೆಯನ್ನು ಕರೆಯಲಿ ಅಥವಾ ವಿಧಾನ ಪರಿಷತ್ತಿನ ಸಭೆಯನ್ನು ಕರೆಯಲಿ, ಬಿಹಾರದ ವಿದ್ಯಾವಂತ ಶಿಕ್ಷಕರು ಮತ್ತು ಪದವೀಧರ ಮತದಾರರು 7 ನೇ ತರಗತಿಯ ವಿಫಲ ಸಿಎಂ ಅಭ್ಯರ್ಥಿಗಳನ್ನು ಸೋಲಿಸಲು ದೃಢನಿಶ್ಚಯ ಮಾಡಿದ್ದಾರೆ ಎಂದರು.

ಬಿಹಾರದ 8 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ

ಬಿಹಾರದಲ್ಲಿ ಎಂಟು ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಪ್ರಶಾಂತ್ ಕಿಶೋರ್ ಪ್ರಸ್ತುತ ಈ ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ. ಜನ್ ಸೂರಜ್ ಎಲ್ಲಾ ಎಂಟು ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.