Asianet Suvarna News Asianet Suvarna News

Top 10 News ರಾವತ್ ಪಾರ್ಥೀವ ಶರೀರವಿದ್ದ ವಾಹನ ಅಪಘಾತ, ಗಂಗೂಲಿ ವಿರುದ್ದ ಫ್ಯಾನ್ಸ್ ಆಕ್ರೋಶ!

ಬಿಪಿನ್ ರಾವತ್ ಪಾರ್ಥೀವ ಶರೀರ ಕೊಂಡಯ್ಯುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ. ಬಿಪಿನ್ ರಾವತ್ ಹೆಲಿಕಾಪ್ಟರ್‌ ಪತನಕ್ಕೆ ಕಾರಣವೇನು? ವಿರಾಟ್ ಕೊಹ್ಲಿಯಿಂದ ಕಸಿದು ನಾಯಕತ್ವ ರೋಹಿತ್ ಶರ್ಮಾಗೆ ನೀಡಿದ ಬಿಸಿಸಿಐ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ. ಮದುವೆ ಮುಕ್ಕಾಲು ಖರ್ಚು ಕತ್ರಿನಾ ನೋಡಿಕೊಳ್ಳಲಿದ್ದಾರೆ. ರಾವತ್ ಕೊನೆಯ ಮಾತು, ಮಹೀಂದ್ರ ಡಿಸ್ಕೌಂಟ್ ಆಫರ್ ಸೇರಿದಂತೆ ಡಿಸೆಂಬರ್ 9ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

CDS General Bipin rawat death to Virat Kohli fans top 10 news of December 9 ckm
Author
Bengaluru, First Published Dec 9, 2021, 5:01 PM IST
  • Facebook
  • Twitter
  • Whatsapp

Final Salute To Bipin Rawat: ಪ್ರಾರ್ಥಿವ ಶರೀರ ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್‌ ಅಪಘಾತ!

CDS General Bipin rawat death to Virat Kohli fans top 10 news of December 9 ckm

ಸಿಡಿಎಸ್ ಬಿಪಿನ್ ರಾವತ್ ಅವರ ಮೃತದೇಹವನ್ನು ತಮಿಳುನಾಡಿನಿಂದ ದೆಹಲಿಗೆ ವಿಮಾನ ನಿಲ್ದಾಣಕ್ಕೆ ಕೊಂಡೊಯ್ದ ಆಂಬುಲೆನ್ಸ್ ಮಾರ್ಗಮಧ್ಯೆ ಲಘು ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಅಪಘಾತವು ದೊಡ್ಡದಲ್ಲದಿದ್ದರೂ, ಯಾರಿಗೂ ಗಂಭೀರ ಗಾಯಗಳಾಗಿಲ್ಲ. 

IAF Chopper Crash: ನೀಲಗರಿ ಬೆಟ್ಟದಲ್ಲಿ ಹೊಂಚು ಹಾಕಿತ್ತು ಸಾವು: ಹೆಲಿಕಾಪ್ಟರ್‌ ಪತನಕ್ಕೆ ಕಾರಣವೇನು?

CDS General Bipin rawat death to Virat Kohli fans top 10 news of December 9 ckm

ರಾಷ್ಟ್ರ ರಕ್ಷಕ ಸಿಡಿಎಸ್‌ ಜನರಲ್‌ ಬಿಪಿನ್‌ ರಾವತ್ ದುರ್ಮರಣ ಹೊಂದಿದ ವಾಯುಸೇನೆಯ ಹೆಲಿಕಾಪ್ಟರ್‌ ಪತನಕ್ಕೆ ಕಾರಣವೇನು. ನೀಲಗಿರಿ ಪರ್ವತ ( Nilagiri Hills) ಹಾದಿಯಲ್ಲಿ ಹೆಲಿಕಾಪ್ಟರ್‌ ತೆರಳಿದ್ದೇ ತಪ್ಪಾಯ್ತಾ?  ಕಾಡಿನ ಮಧ್ಯೆ ಹೆಲಿಕಾಪ್ಟರ್‌ ಪತನಕ್ಕೆ ಸಿಗುತ್ತಿವೆ ಹಲವು ಕಾರಣಗಳು.ಅಸಲಿ ಮಿಸ್ಟೇಕ್‌ ಯಾರದ್ದು? ದೆಹಲಿ ಟು ಕೂನುರ್‌ Via ಕೊಯಮತ್ತೂರ್‌ ಮಾರ್ಗ ಮಧ್ಯೆ ಆಗಿದಾದ್ದರೇನು?

IAF Chopper Crash: ದುರಂತದಲ್ಲಿ ಮಡಿದ ಹರ್ಜಿಂದರ್ ಸಿಂಗ್ ಕರ್ನಾಟಕದ ಅಳಿಯ!

CDS General Bipin rawat death to Virat Kohli fans top 10 news of December 9 ckm

ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಸಿಡಿಎಸ್‌ ಬಿಪಿನ್ ರಾವತ್ ಸೇರಿ ಹದಿಮೂರು ಮಂದಿ ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಮೃತಪಟ್ಟವರಲ್ಲಿ ಬಿಪಿನ್ ರಾವತ್ ಆಪ್ತ ಕಾರ್ಯದರ್ಶಿ ಹರ್ಜಿಂದರ್ ಕೂಡಾ ಒಬ್ಬರು. ಸದ್ಯ ಬಂದ ಮಾಹಿತಿ ಅನ್ವಯ ಹರ್ಜಿಂದರ್ ಸಿಂಗ್ ಕರ್ನಾಟಕದ ಜೊತೆ ನಂಟು ಹೊಂದಿದ್ದಾರೆ.

Sonia Gandhi Birthday: ಹೆಲಿಕಾಪ್ಟರ್ ದುರಂತ, ಹುಟ್ಟುಹಬ್ಬ ಆಚರಣೆ ಬೇಡ ಎಂದ ಸೋನಿಯಾ, ಮೋದಿ ಟ್ವೀಟ್ ವಿಶ್

CDS General Bipin rawat death to Virat Kohli fans top 10 news of December 9 ckm

ತಮಿಳುನಾಡಿನ ಕೂನೂರ್​​ನಲ್ಲಿ ಹೆಲಿಕಾಪ್ಟರ್​ ಪತನದಲ್ಲಿ ಸಿಡಿಎಸ್​ ಬಿಪಿನ್​ ರಾವತ್ (Bipin Rawat) ಸೇರಿ 13 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ (Congress president ) ಸೋನಿಯಾ ಗಾಂಧಿ ಇಂದು ತಮ್ಮ ಹುಟ್ಟುಹಬ್ಬ (Sonia Gandhi) ಆಚರಣೆ ಮಾಡಿಕೊಳ್ಳದೆ ಇರಲು ತೀರ್ಮಾನಿಸಿದ್ದಾರೆ.

CDS Helicopter Crash: ಜೀವಂತವಾಗಿದ್ರು ಬಿಪಿನ್ ರಾವತ್, ಫೈರ್‌ ಮ್ಯಾನ್‌ ಬಳಿ ಹೇಳಿದ ಕೊನೆಯ ಮಾತಿದು!

CDS General Bipin rawat death to Virat Kohli fans top 10 news of December 9 ckm

ತಮಿಳುನಾಡಿನ ಕುನೂರಿನಲ್ಲಿ ಬುಧವಾರ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮಾತ್ರ ಬದುಕುಳಿದಿದ್ದಾರೆ.

Virat Kohli Captaincy ತಲೆದಂಡ, ಬಿಸಿಸಿಐ ವಿರುದ್ದ ತಿರುಗಿಬಿದ್ದ ವಿರಾಟ್ ಫ್ಯಾನ್ಸ್‌..!

CDS General Bipin rawat death to Virat Kohli fans top 10 news of December 9 ckm

 ಭಾರತ ಕ್ರಿಕೆಟ್‌ ಕಂಡ ಅತ್ಯಂತ ಆಕ್ರಮಣಕಾರಿ ಹಾಗೂ ಯಶಸ್ವಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರನ್ನು ಬಿಸಿಸಿಐ (BCCI) ಏಕಾಏಕಿ ಭಾರತ ಏಕದಿನ ಕ್ರಿಕೆಟ್‌ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿದ್ದು, ರೋಹಿತ್ ಶರ್ಮಾಗೆ ಸೀಮಿತ ಓವರ್‌ಗಳ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ. 

Katrina Kaif Wedding: ಅದ್ಧೂರಿ ಮದುವೆಯ ಮುಕ್ಕಾಲು ಖರ್ಚು ಕತ್ರೀನಾದ್ದು ?

CDS General Bipin rawat death to Virat Kohli fans top 10 news of December 9 ckm

Katrina Kaif Wedding: ಬಾಲಿವುಡ್ ಜೋಡಿಯ ಅದ್ಧೂರಿ ಮದುವೆ. ಕೋಟಿ ಕೋಟಿ ಸಂಪಾದಿಸೋ ಜೋಡಿ ಮದುವೆಗಾಗಿ ಹೇಗೆ ಖರ್ಚು ಮಾಡಿರುತ್ತಾರೆ ? ಕತ್ರೀನಾ ಮದುವೆಯಲ್ಲಿ ಖರ್ಚು ಹೆಣ್ಣಿನ ಕಡೆಯದಾ ?

Twitter Trends‌ in India: 2021ರಲ್ಲಿ ಟ್ವೀಟರ್‌ನಲ್ಲಿ ಅತಿ ಹೆಚ್ಚು ಚರ್ಚೆಗೊಳಗಾದ ವಿಷಯ ಯಾವುದು ಗೊತ್ತಾ?

CDS General Bipin rawat death to Virat Kohli fans top 10 news of December 9 ckm

ಭಾರತದಲ್ಲಿ 2021ರಲ್ಲಿ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಟ್ವೀಟರ್‌ನಲ್ಲಿ (Twitter) ಅತಿ ಹೆಚ್ಚು ಚರ್ಚಿಸಲಾದ ವಿಷಯಗಳ ಬಗ್ಗೆ  ಸಂಸ್ಥೆ ಗುರುವಾರ ಮಾಹಿತಿ ಬಹಿರಂಗಪಡಿಸಿದೆ. 2021ರ ಟ್ರೆಂಡ್‌ಗಳಲ್ಲಿ ಭಾರತದಲ್ಲಿ COVID-19 ಪರಿಹಾರಕ್ಕೆ  ದೇಣಿಗೆ ನೀಡಿದ ಕುರಿತ ಆಸ್ಟ್ರೇಲಿಯಾದ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್ ( Pat Cummins) ಅವರ ಟ್ವೀಟ್  ದೇಶದಲ್ಲಿ ಹೆಚ್ಚು ಮರುಟ್ವೀಟ್ ಮಾಡಲಾಗಿದೆ ಎಂದು ಟ್ವೀಟರ್‌ ತಿಳಿಸಿದೆ.

Mahindra car offers:ಡಿಸೆಂಬರ್ ತಿಂಗಳಲ್ಲಿ ಭರ್ಜರಿ ಡಿಸ್ಕೌಂಟ್, ಗರಿಷ್ಠ 81,500 ರೂಪಾಯಿ ಉಳಿಸಿ!

CDS General Bipin rawat death to Virat Kohli fans top 10 news of December 9 ckm

ಮಹೀಂದ್ರ & ಮಹೀಂದ್ರ(Mahindra) ತನ್ನ ಆಯ್ದ ಕಾರುಗಳ(Cars) ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ(Offers). 2021ರ ವರ್ಷಾಂತ್ಯದ ರಿಯಾಯಿತಿ ಘೋಷಿಸಿರುವ ಮಹೀಂದ್ರ ಗ್ರಾಹಕರಿಗೆ ಕಾರು ಖರೀದಿ ಕನಸನ್ನು ಮತ್ತಷ್ಟು ಸುಲಭಗೊಳಿಸಿದೆ. ಸೆಪ್ಟೆಂಬರ್ ತಿಂಗಳಲ್ಲೂ ಮಹೀಂದ್ರ ಕೆಲ ಆಫರ್ ಘೋಷಿಸಿತ್ತು. ಆದರೆ ಈ ಬಾರಿ ಘೋಷಿಸಿರುವ ವರ್ಷಾಂತ್ಯದ ರಿಯಾಯಿತಿಯಲ್ಲಿ(December Offers) ಗರಿಷ್ಠ 81,500 ರೂಪಾಯಿ ಪ್ರಯೋಜನ ಪಡೆದುಕೊಳ್ಳುವ ಅವಕಾಶವಿದೆ.

Follow Us:
Download App:
  • android
  • ios