Asianet Suvarna News Asianet Suvarna News

Sonia Gandhi Birthday: ಹೆಲಿಕಾಪ್ಟರ್ ದುರಂತ, ಹುಟ್ಟುಹಬ್ಬ ಆಚರಣೆ ಬೇಡ ಎಂದ ಸೋನಿಯಾ, ಮೋದಿ ಟ್ವೀಟ್ ವಿಶ್

  • ಸೋನಿಯಾ ಗಾಂಧಿಗೆ 75 ವರ್ಷದ ಹುಟ್ಟುಹಬ್ಬ
  • ಸೇನಾ ಹೆಲಿಕಾಪ್ಟರ್ ದುರಂತದ ಕಾರಣ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳದಿರಲು ತೀರ್ಮಾನ
  • ಟ್ವೀಟ್ ಮೂಲಕ ಶುಭಾಶಯ ತಿಳಿಸಿದ ಮೋದಿ
Congress president sonia gandhi calls off  birthday celebrations over CDS bipin Rawat  demise  pm modi wishes gow
Author
Bengaluru, First Published Dec 9, 2021, 2:03 PM IST

ನವದೆಹಲಿ(ಡಿ.9): ತಮಿಳುನಾಡಿನ ಕೂನೂರ್​​ನಲ್ಲಿ ಹೆಲಿಕಾಪ್ಟರ್​ ಪತನದಲ್ಲಿ ಸಿಡಿಎಸ್​ ಬಿಪಿನ್​ ರಾವತ್ (Bipin Rawat) ಸೇರಿ 13 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ (Congress president ) ಸೋನಿಯಾ ಗಾಂಧಿ ಇಂದು ತಮ್ಮ ಹುಟ್ಟುಹಬ್ಬ (Sonia Gandhi) ಆಚರಣೆ ಮಾಡಿಕೊಳ್ಳದೆ ಇರಲು ತೀರ್ಮಾನಿಸಿದ್ದಾರೆ.  ಕಾಂಗ್ರೆಸ್‌ ಅಧ್ಯಕ್ಷರಾಗಿ ದೀರ್ಘಕಾಲ ಸೇವೆ ಸಲ್ಲಿಸಿರುವ ಸೋನಿಯಾ ಗುರುವಾರ ತಮ್ಮ 75ನೇ ಜನ್ಮದಿನವನ್ನು ಆಚರಿಸಿಕೊಳ್ಳಬೇಕಿತ್ತು. ಈ ವಿಚಾರವನ್ನು ಎಐಸಿಸಿ (AICC) ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಟ್ವೀಟ್ ಮೂಲಕ   " ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ  ಕಟ್ಟುನಿಟ್ಟಾಗಿ ಯಾವುದೇ ಆಚರಣೆಗಳನ್ನು  ಮಾಡದಂತೆ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಮನವಿ ಮಾಡಿಕೊಂಡಿದ್ದಾರೆ" ತಿಳಿಸಿದ್ದಾರೆ.

ಈ ಬಗ್ಗೆ ಲೋಕಸಭಾ ಸಂಸದರಾದ ಮಾಣಿಕ್ಕಮ್​ ಟಾಗೋರ್​ ಅವರು ಕೂಡ ಮಾಹಿತಿ ನೀಡಿದ್ದು, ಜನರಲ್ ರಾವತ್​ ಮತ್ತು 11 ಯೋಧರ ನಿಧನದ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಂಭ್ರಮ ಆಚರಣೆಗಳನ್ನು ರದ್ದುಗೊಳಿಸಲು ಸೋನಿಯಾ ಗಾಂಧಿ ತೀರ್ಮಾನಿಸಿರುವುದು ಅವರ ಸೂಕ್ಷ್ಮತೆಗೆ ಸಾಕ್ಷಿ ಎಂದು ಟ್ವೀಟ್ ಮಾಡಿದ್ದಾರೆ.

 

ಮೋದಿ ಶುಭಾಶಯ ಟ್ವೀಟ್: ಇನ್ನು ಸೋನಿಯಾ ಅವರ ಹುಟ್ಟುಹಬ್ಬದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ. 'ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ,' ಎಂದು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. 

 

ಇದೇ ಮೊದಲಲ್ಲ: ಸೋನಿಯಾ ಗಾಂಧಿ ಹುಟ್ಟುಹಬ್ಬ ಆಚರಣೆ ಮಾಡದೆ ಇರಲು ತೀರ್ಮಾನಿಸಿರುವುದು ಇದೇ ಮೊದಲಲ್ಲ, 2020ರಲ್ಲೂ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ ದೂರ ಉಳಿದಿದ್ದರು. ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮತ್ತು ಕೋವಿಡ್ -19 ವೈರಸ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅನೇಕರು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಂತಹವರ ನೆರವಿಗೆ ನಿಲ್ಲುತ್ತೇನೆ ಎಂದು ಕಳೆದ ವರ್ಷ ಕೂಡ ಹುಟ್ಟು ಹಬ್ಬ ಆಚರಿಸಿಕೊಂಡಿರಲಿಲ್ಲ.

Army Helicopter Crash: ಅತೀ ಚಿಕ್ಕ ವಯಸ್ಸಿನಲ್ಲೇ ದುರಂತ ಅಂತ್ಯ ಕಂಡ ಬಿಪಿನ್‌ರ ಇಬ್ಬರು ವೈಯಕ್ತಿಕ ಭದ್ರತಾ ಅಧಿಕಾರಿಗಳು

ಸೋನಿಯಾ 1946ರ ಡಿಸೆಂಬರ್ 9 ರಂದು ಇಟಲಿಯಲ್ಲಿ ಜನಿಸಿದರು. ತಮ್ಮ ಮೂಲ ಶಿಕ್ಷಣದ ನಂತರ ಇವರು ವಿದೇಶಿ ಭಾಷೆಗಳ ಶಿಕ್ಷಣ ಸಂಸ್ಥೆಗೆ ಸೇರಿ ಇಂಗ್ಲಿಷ್, ಫ್ರೆಂಚ್ ಹಾಗೂ ರಶಿಯನ್ ಭಾಷೆಗಳನ್ನು ಕಲಿತಿದ್ದಾರೆ. ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಕೋರ್ಸ್ ಕಲಿಯುತ್ತಿರುವಾಗ ಇವರು ರಾಜೀವ ಗಾಂಧಿಯವರನ್ನು ಭೇಟಿಯಾಗಿ,  ಪ್ರೀತಿಯಾಯಿತು. ಬಳಿಕ1968ರ ಜನವರಿ 26 ರಂದು ಇವರಿಬ್ಬರ ನಿಶ್ಚಿತಾರ್ಥ ನಡೆಯಿತು. 1968 ರ ಫೆಬ್ರವರಿ 25 ರಂದು ನವದೆಹಲಿಯಲ್ಲಿ ರಾಜೀವ್ - ಸೋನಿಯಾ ಮದುವೆಯಾದರು. ಇವರಿಗೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಎಂಬ ಇಬ್ಬರು ಮಕ್ಕಳಿದ್ದಾರೆ.

IAF Chopper Crash: ಟೇಕಾಫ್‌ನಿಂದ ಪತನದವರೆಗೆ, ಸಂಸತ್‌ನಲ್ಲಿ ಸಂಪೂರ್ಣ ಮಾಹಿತಿ

ಬಾಲ್ಯ-ಹುಟ್ಟು-ಶಿಕ್ಷಣ: ವಿವಾಹವಾದ ಮೇಲೆ ಒಬ್ಬ ಶಿಕ್ಷಕರಿಂದ ಹಾಗೂ ನಂತರ ತರಬೇತಿ ಸಂಸ್ಥೆಯೊಂದರ ಮೂಲಕ ಹಿಂದಿ ಕಲಿತುಕೊಂಡಿದ್ದಾರೆ ಸೋನಿಯಾ. ರಾಜೀವ ಮತ್ತು ರಾಜೀವ್ಸ್ ವರ್ಲ್ಡ್ ಎಂಬ ಎರಡು ಕೃತಿಗಳನ್ನು ಇವರು ರಚಿಸಿದ್ದು, 1992 ರಿಂದ 1964 ರ ಅವಧಿಯಲ್ಲಿ ಪಂಡಿತ ಜವಾಹರಲಾಲ ನೆಹರು ಹಾಗೂ ಮಗಳು ಇಂದಿರಾ ಗಾಂಧಿ ಅವರ ನಡುವಿನ ಪತ್ರ ವ್ಯವಹಾರ ಆಧರಿಸಿದ ಎರಡು ಕೃತಿಗಳಾದ ’ಫ್ರೀಡಂಸ್ ಡಾಟರ್’ ಹಾಗೂ ’ಟು ಅಲೋನ್, ಟು ಟುಗೆದರ್’ ಎಂಬ ಕೃತಿಗಳನ್ನು ಸಂಪಾದಿಸಿದ್ದಾರೆ. 

ಬಾಲ್ಯದಲ್ಲಿ ಇವರಿಗೆ ಫುಟಬಾಲ್ ಅತಿ ಇಷ್ಟದ ಕ್ರೀಡೆಯಾಗಿತ್ತು. ಮದುವೆಗೂ ಮುನ್ನ ಇವರು ನಟ ಅಮಿತಾಭ್ ಬಚ್ಚನ್ ಅವರ ವೆಲ್ಲಿಂಗ್ಟನ್ ಕ್ರೆಸೆಂಟ್ ಹೌಸನಲ್ಲಿ ಕೆಲ ಸಮಯ ವಾಸ ಮಾಡಿದ್ದರು.  ತೈಲವರ್ಣ ಚಿತ್ರಕಲೆಗಳನ್ನು ಸಂರಕ್ಷಿಸುವ ಕುರಿತಂತೆ ದೆಹಲಿಯ ನ್ಯಾಷನಲ್ ಮ್ಯೂಸಿಯಂನಿಂದ ಡಿಪ್ಲೊಮಾ ಪಡೆದುಕೊಂಡಿರುವ ಸೋನಿಯಾ ಪರಿಸರ, ಹಿಂದುಳಿದವರ ಅಭ್ಯುದಯ, ಮಹಿಳಾ ಸಬಲೀಕರಣ, ಮಕ್ಕಳ ಹಕ್ಕುಗಳ ವಿಷಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ.

Follow Us:
Download App:
  • android
  • ios