ಫೇಸ್‌ಬುಕ್‌ನಲ್ಲಿ ಫೇಕ್ ಅಕೌಂಟ್ ಮಾಡಿ ಮಗನೊಂದಿಗೆ ಡೇಟಿಂಗ್ ಕೊನೆಗೂ ಅಪ್ಪನನ್ನು ಪತ್ತೆ ಮಾಡಿದ ಮಗ ಇದು ಹುಡುಗಿ ಅಲ್ಲ ನನ್ನಪ್ಪ ಎಂದು ತಿಳಿದು ಮಗ ಗಾಬರಿ
ನಕಲಿ ಫೇಸ್‌ಬುಕ್ ಖಾತೆ ಮಾಡಿ ಹುಡುಗಿ ವೇಷದಲ್ಲಿ ಯುವಕರನ್ನು ಯಾಮಾರಿಸಿದ ಹಲವು ಸ್ಟೋರಿಗಳನ್ನು ನೀವು ಈಗಾಗಲೇ ಕೇಳಿರಬಹುದು. ಆದರೆ ಇಲ್ಲಿ ಒಬ್ಬರು ತಂದೆಯೇಫೇಸ್‌ಬುಕ್‌ನಲ್ಲಿ ಹುಡುಗಿ ಹೆಸರಲ್ಲಿ ಖಾತೆ ಕ್ರಿಯೇಟ್ ಮಾಡಿ ಮಗನನ್ನು ಯಾಮಾರಿಸಿದ್ದಾರೆ. ಹಾಲಿವುಡ್ ಸಿನಿಮಾ ನಿರ್ಮಾಪಕ(Hollywood filmmaker) 31 ವರ್ಷದ ಜೇಮ್ಸ್ ಮೊರೊಸಿನ್ ೯James Morosini) ಅವರೇ ಹೀಗೆ ತಮ್ಮ ತಂದೆಯಿಂದಲೇ ಯಾಮಾರಿದ ಯುವಕ
ಇವರು ಇತ್ತೀಚೆಗೆ ಈ ಬಗ್ಗೆ ವಿಚಾರ ಹಂಚಿಕೊಂಡಿದ್ದು, ತನ್ನ ಫೇಕ್ ಫೇಸ್‌ಬುಕ್ (Facebook) ಫ್ರೆಂಡ್ ಸ್ವತಃ ತಮ್ಮ ತಂದೆಯೇ ಆಗಿದ್ದರು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ. ಇವರ ತಂದೆ ಫೇಸ್‌ಬುಕ್‌ನಲ್ಲಿ ಯುವ ತರುಣಿಯ ಫೋಟೋ ಹಾಕಿ ಒಂದು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದರಂತೆ. ಆದರೆ ಇದನ್ನರಿಯದ ಜೇಮ್ಸ್ ಮೊರೊಸಿನ್ ಹುಡುಗಿ ಎಂದು ಚಾಟಿಂಗ್ ನಡೆಸಿದ್ದಾರೆ. ಜೇಮ್ಸ್ ಮೊರೊಸಿನ್ ಅವರ ತಂದೆ ಬೆಕ್ಕಾ (Becca) ಎಂಬ ಹೆಸರಿನಲ್ಲಿ ಖಾತೆ ಕ್ರಿಯೇಟ್ ಮಾಡಿದ್ದರು. ಬೆಕ್ಕಾ ಅವರ ಖಾತೆಯಲ್ಲಿ ಅವರ ಬಗ್ಗೆ ಇದ್ದ ಹವ್ಯಾಸಗಳು ಆಸಕ್ತಿಗಳು ಪರಸ್ಪರ ಹೊಂದಾಣಿಕೆಯಾಗಿದ್ದು, ಅದರ ಆಧಾರದಲ್ಲಿ ಜೇಮ್ಸ್ ಅವರೊಂದಿಗೆ ಆನ್‌ಲೈನ್ ಮುಖೇನ ಸಂಬಂಧವನ್ನು ಹೊಂದಿದ್ದರು.
Meta Exposes Spy Firms: ಖಾಸಗಿ ಪತ್ತೆದಾರಿ ಸಂಸ್ಥೆಗಳ 1,500 ನಕಲಿ ಖಾತೆ ಬ್ಯಾನ್ ಮಾಡಿದ ಫೇಸ್‌ಬುಕ್!
ಈ ನಡುವೆ ಜೇಮ್ಸ್ ಅವರಿಗೆ ಈ ಬೆಕ್ಕಾ ಹೆಸರಿನ ಖಾತೆಯನ್ನು ತನ್ನ ತಂದೆಯೇ ನಿರ್ವಹಿಸುತ್ತಿರುವುದು ತಿಳಿದು ಬಂದು ಶಾಕ್ ಆಗಿದೆ. ಅಲ್ಲದೇ ಬೆಕ್ಕಾ ಜೊತೆ ಅವರು ಸಂಪರ್ಕವನ್ನು ಕಡಿದುಕೊಂಡಿದ್ದಾರೆ. ತನ್ನ ತಂದೆ ತನ್ನನ್ನು ಪರೀಕ್ಷಿಸಲು ನಕಲಿ ಪ್ರೊಫೈಲ್ ಅನ್ನು ರಚಿಸಿದ್ದರು ಎಂದು ಅವರು ಹೇಳಿದರು. ಅಲ್ಲದೇ ನಾನು ಹೇಗೆ ಇದ್ದೇನೆ ಎಂಬುದನ್ನು ತಿಳಿಯುವ ಸಲುವಾಗಿ ಅವರು ಹೀಗೆ ಮಾಡಿದ್ದಾರೆ ಎಂದು ಜೇಮ್ಸ್ ಮೊರೊಸಿನ್ ಹೇಳಿದ್ದಾರೆ.
ಇತ್ತೀಚೆಗೆ ಫೇಸ್‌ಬುಕ್ ನಕಲಿ ಖಾತೆಗಳ ಹಾವಳಿ ಹೆಚ್ಚಾಗಿದೆ. ಫೇಸ್‌ಬುಕ್‌ನಲ್ಲಿ ಉದ್ಯಮಿಗಳು ರಾಜಕಾರಣಿಗಳು ಚಲನಚಿತ್ರ ನಟಿಯರು ಸೇರಿದಂತೆ ಖ್ಯಾತನಾಮರ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಅವರ ಪರಿಚಿತರಲ್ಲಿ ಹಣ ನೀಡುವಂತೆ ಸಂದೇಶ ಕಳುಹಿಸಿ ಹಣ ಕೀಳುವ ಮೋಸದ ಜಾಲಕ್ಕೆ ಈಗಾಗಲೇ ಅನೇಕರು ಬಲಿಯಾಗಿದ್ದಾರೆ. ಕಳೆದ ವರ್ಷ ಫೇಸ್‌ಬುಕ್ ನಕಲಿ ಖಾತೆ ಮೂಲಕ ಎಲ್ಲರನ್ನೂ ವಂಚಿಸುತ್ತಿದ್ದ ಯುವತಿಯನ್ನು ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದರು.
ಫೇಸ್‌ಬುಕ್‌ನಲ್ಲಿ ನಕಲಿ ಖಾತೆ : ನಂಬಿಸಿ ಲಕ್ಷಾಂತರ ಹಣ ಪಡೆದು ಹಲವರ ವಂಚಿಸುತ್ತಿದ್ದ ಯುವತಿ ಬಂಧನ
ರಾಮನಗರ ಜಿಲ್ಲೆ ಮಾಗಡಿಯ ಮೇಘ ಅಲಿಯಾಸ್ ಹರಿಣಿ (25) ಬಂಧಿತ ಯುವತಿ. ಈಕೆ ಬೆಂಗಳೂರಿನ ಅಂದರಹಳ್ಳಿ 3ನೇ ಕ್ರಾಸ್ ನಿವಾಸಿಯಾಗಿದ್ದು, ಫೇಸ್‌ಬುಕ್‌ನಲ್ಲಿ ಚಿನ್ನುಗೌಡ ಚಿನ್ನುಗೌಡ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿಕೊಂಡಿದ್ದಳು. ಅಲ್ಲಿ ನಂತರ ರವಿ ಎಂಬಾತನನ್ನು ಪರಿಚಯಿಸಿಕೊಂಡಿದ್ದಳು. ಮೈಸೂರಿನ ವಿಜಯನಗರ ವಾಟರ್ ಟ್ಯಾಂಕ್ ಬಳಿ ತಮ್ಮನ್ನು ನೋಡಿರುವುದಾಗಿ ಪರಿಚಯಿಸಿಕೊಂಡ ಮೇಘ, ತಾನು ಶ್ರೀಮಂತಳ ಮಗಳಾಗಿದ್ದು, ಎರಡು ಪೆಟ್ರೋಲ್ ಬಂಕ್ ಇದೆ ಎಂದು ನಂಬಿಸಿದ್ದಳು. ಅಲ್ಲದೇ ರವಿಯ ತಾಯಿ ಕುತ್ತಿಗೆಯಲ್ಲಿ ಹಾಕಿದ್ದ ಸರ ಮತ್ತು ಕಿವಿಯ ಓಲೆಯ ಡಿಸೈನ್ ಚೆನ್ನಾಗಿದ್ದು, ಅದರಂತೆಯೇ ಒಂದು ಜೊತೆ ಮಾಡಿಸಿಕೊಳ್ಳುತ್ತೇನೆ. ಆದ್ದರಿಂದ ಡಿಸೈನ್ ತೋರಿಸಲು ಆ ಒಡವೆಯನ್ನೂ ಕಳುಹಿಸಿಕೊಡುವಂತೆ ಕೋರಿದ್ದಳು.
ಇದನ್ನು ನಂಬಿದ ರವಿಯು ತನ್ನ ತಾಯಿ ಬಳಿ ಇದ್ದ 85 ಗ್ರಾಂ. ಚಿನ್ನದ ಸರ ಮತ್ತು ಒಂದು ರೇಷ್ಮೆ ಸೀರೆ ಕೂಡ ಕಳುಹಿಸಿಕೊಟ್ಟಿದ್ದರು. ಹೀಗೆ ಒಟ್ಟಾರೆ 480 ಗ್ರಾಂ ಒಡವೆ ಪಡೆದ ಆಕೆಯು ಹಲವು ದಿನವಾದರೂ ಹಿಂದಿರುಗಿಸದೆ, ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು.