Asianet Suvarna News Asianet Suvarna News

ಕುತಂತ್ರ ರಾಜಕಾರಣದ ವಿರುದ್ಧ ಹೋರಾಡಲಾಗದು... ದಿಢೀರ್ ರಾಜೀನಾಮೆ ನೀಡಿದ ಪುದುಚೇರಿ ಸಾರಿಗೆ ಸಚಿವೆ

ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಸಾರಿಗೆ ಸಚಿವೆಯಾಗಿದ್ದ ಚಂದ್ರ ಪ್ರಿಯಾಂಕಾ ಅವರು ದಿಢೀರ್ ರಾಜೀನಾಮೆ ನೀಡಿದ್ದು, ಇದು ಸಾರ್ವಜನಿಕರು ಸೇರಿದಂತೆ ಅವರ ಆಪ್ತ ರಾಜಕೀಯ ನಾಯಕರಲ್ಲಿಯೂ ಅಚ್ಚರಿ ಮೂಡಿಸಿದೆ.

cannot be fought aganist Insidious politics Puducherry Transport Minister chandra Priyankha sudden resigned Minister Post akb
Author
First Published Oct 10, 2023, 3:17 PM IST

ಪುದುಚೇರಿ: ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಸಾರಿಗೆ ಸಚಿವೆಯಾಗಿದ್ದ ಚಂದ್ರ ಪ್ರಿಯಾಂಕಾ ಅವರು ದಿಢೀರ್ ರಾಜೀನಾಮೆ ನೀಡಿದ್ದು, ಇದು ಸಾರ್ವಜನಿಕರು ಸೇರಿದಂತೆ ಅವರ ಆಪ್ತ ರಾಜಕೀಯ ನಾಯಕರಲ್ಲಿಯೂ ಅಚ್ಚರಿ ಮೂಡಿಸಿದೆ. ಕೇಂದ್ರಾಡಳಿತ  ಪ್ರದೇಶದ ಸಾರಿಗೆ ವಲಯದಲ್ಲಿ  ಸಾರ್ವಜನಿಕ ಸಾರಿಗೆ ಕ್ಷೇತ್ರವನ್ನು ಸುಧಾರಿಸಲು ಮತ್ತು ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲತೆಯನ್ನು ಹೆಚ್ಚಿಸಲು ಅವರು ತಮ್ಮ ಅಧಿಕಾರವಧಿಯಲ್ಲಿ ಹಲವಾರು ಗಮನಾರ್ಹ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹೆಸರುಗಳಿಸಿದ್ದರು. 

ಆದರೆ ಪ್ರಿಯಾಂಕಾ (chandra Priyankha) ಅವರ ನಿರ್ಗಮನದಿಂದ ಪುದುಚೇರಿ ಸಾರಿಗೆ ಕ್ಷೇತ್ರದ ಜೊತೆ ಪುದುಚೇರಿ ಸರ್ಕಾರದ ಸಂಪುಟದಲ್ಲಿ ಮಹತ್ತರ ಬದಲಾವಣೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಚಂದ್ರ ಪ್ರಿಯಾಂಕಾ ಅವರು 2016ರಲ್ಲಿ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು.  41 ವರ್ಷಗಳಲ್ಲೇ ಇವರು ಪುದುಚೇರಿಯ ಮೊದಲ ಮಹಿಳಾ ಸಚಿವರೆನಿಸಿದ್ದರು.  ತಮ್ಮ ರಾಜೀನಾಮೆ ಪತ್ರದಲ್ಲಿ ಕ್ಷೇತ್ರದ ಜನರ ಕ್ಷಮೆ ಕೇಳಿರುವ ಅವರು ರಾಜಕೀಯದ ವಿರುದ್ಧ ಹೋರಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.  ಇನ್ನು ಸಚಿವೆಯ ರಾಜೀನಾಮೆ ಪುದುಚೇರಿ ಸರ್ಕಾರದ ರಾಜಕೀಯ ಸ್ಥಿರತೆ ಬಗ್ಗೆಯೂ ಚಿಂತಿಸುವಂತೆ ಮಾಡಿದೆ. ಅಲ್ಲದೇ ರಾಜೀನಾಮೆ ನಂತರ ಪುದುಚೇರಿ ಸರ್ಕಾರದ ಸಂಪುಟದಲ್ಲಿ ಮಹತ್ವದ ಬದಲಾವಣೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ. 

ಗನ್‌ ತೋರಿಸಿ ಕ್ಯಾಶಿಯರ್‌ ಬೆದರಿಸಿ ಹಣ ದೋಚಿದ 12 ವರ್ಷದ ಬಾಲಕ: ಸಿಸಿ ...

ಇನ್ನು ಮುಂದೆ ಕುತಂತ್ರ ರಾಜಕಾರಣದ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಇದಕ್ಕಾಗಿ ಕ್ಷೇತ್ರದ ಜನರ  ಕ್ಷಮೆ ಕೇಳುವೆ. ಸಮಾಜದ ಕಟ್ಟಕಡೆಯ ಮಹಿಳೆಯರು ರಾಜಕೀಯಕ್ಕೆ ಬಂದರೆ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬ ಮಾತಿದೆ. ಆದಾಗ್ಯೂ, ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜನರಿಗಾಗಿ ಹಗಲಿರುಳು ದುಡಿದಿದ್ದೇನೆ . ಜನರ ನೀಡಿದ ಶಕ್ತಿಯಿಂದ ರಾಜಕೀಯಕ್ಕೆ ಬಂದರೂ, ಕುತಂತ್ರ ರಾಜಕಾರಣದಲ್ಲಿ ಮತ್ತು ಹಣದ ಮಹಾಭೂತದ ಮುಂದೆ ಹೋರಾಡುವುದು ಅಷ್ಟು ಸುಲಭವಲ್ಲ ಎಂಬುದನ್ನು ನಾನಿಲ್ಲಿ ಅರಿತುಕೊಂಡೆ. ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ (Resignation Letter) ತಿಳಿಸಿದ್ದಾರೆ.

ನಿಮಗೂ ಬಂತ್ತಾ ಸಂದೇಶ: ಸರ್ಕಾರ ಕಳಿಸಿದ ಎಮರ್ಜೆನ್ಸಿ ಅಲರ್ಟ್‌ ಮೆಸೇಜ್‌...!

ಪ್ರಿಯಾಂಕಾ ಸಾರಿಗೆ ಸಚಿವರಾಗಿದ್ದ ಅವಧಿಯಲ್ಲಿ ಸಾರ್ವಜನಿಕ ಸಾರಿಗೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ವಿವಿಧ ಕ್ರಮಗಳನ್ನು ಪರಿಚಯಿಸಿದ್ದರು. ಟಿಕೆಟ್‌ ಪ್ರಕ್ರಿಯೆ ಸುಲಭಗೊಳಿಸಲು ಅವರು ಹೊಸ ತಂತ್ರಜ್ಞಾನಗಳ ಅನುಷ್ಠಾನಗೊಳಿಸಿದ್ದರು. ಸಾರ್ವಜನಿಕ ಸಾರಿಗೆ ವಾಹನಗಳಿಗೆ ಕಟ್ಟುನಿಟ್ಟಾದ ಸುರಕ್ಷತಾ ನಿಯಮಗಳನ್ನು ಪರಿಚಯಿಸಿದ್ದು ಪ್ರಿಯಾಂಕಾ ಅವರ ಅಧಿಕಾರಾವಧಿಯಲ್ಲಿನ ಮತ್ತೊಂದು ಮಹತ್ವದ ಸಾಧನೆಯಾಗಿದೆ. 

ಪಂಚರಾಜ್ಯ ಚುನಾವಣೆ: ಮಧ್ಯ ಪ್ರದೇಶ, ಛತ್ತೀಸ್‌ಗಢ ಕೈ ಪಾಲು, ರಾಜಸ್ಥಾನ ಬಿಜೆಪಿಗೆ: ಸಮೀಕ್ಷೆ

ಹೆಚ್ಚುವರಿಯಾಗಿ, ಟ್ರಾಫಿಕ್ ದಟ್ಟಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಸಾರಿಗೆ ವಲಯವು ಎದುರಿಸುತ್ತಿರುವ ಹಲವು ಸವಾಲುಗಳನ್ನು ಎದುರಿಸಲು ಪ್ರಿಯಾಂಕಾ ಸಕ್ರಿಯವಾಗಿ ಗಮನಹರಿಸಿದ್ದಾರೆ.  ಇದರ ಜೊತೆ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಹೊಸ ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು.  ಪ್ರಿಯಾಂಕಾ ರಾಜೀನಾಮೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ, 

Follow Us:
Download App:
  • android
  • ios