ಒಡಿಶಾದಲ್ಲಿ ಸಂಭವಿಸಿದ ತ್ರಿವಳಿ ರೈಲು ಡಿಕ್ಕಿ ದುರಂತದಲ್ಲಿ ಗಾಯಗೊಂಡ ಕೆಲವರನ್ನು ಸಾಗಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ. ಬಸ್ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ. 

ಒಡಿಶಾ(ಜೂ.03): ಒಡಿಶಾ ರೈಲು ದುರಂತದಲ್ಲಿ ಮಡಿದವರ ಸಂಖ್ಯೆ 280ಕ್ಕೂ ಹೆಚ್ಚು. 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನಿನ್ನೆ(ಜೂ.2) ಸಂಭವಿಸಿದ ಭೀಕರ ಅಪಘಾತದ ಇಡೀ ಭಾರತವನ್ನೇ ಬೆಚ್ಚಿ ಬೀಳಿಸಿದೆ. ರೈಲ್ವೇ ಇತಿಹಾಸದಲ್ಲಿ ಅತೀ ದೊಡ್ಡ ದುರಂತ ಇದಾಗಿದೆ. ನಿನ್ನೆ ರಾತ್ರಿಯಿಂದ ಇಂದು ಸಂಜೆ ವರೆಗೆ ರಕ್ಷಣಾ ಕಾರ್ಯ ಮಾಡಲಾಗಿತ್ತು. ಇಂದು ಬೆಳಗ್ಗೆ ರೈಲಿನಿಂದ ರಕ್ಷಣೆ ಮಾಡಿದ ಹಲವರನ್ನು ಬಸ್‌ನಲ್ಲಿ ಹತ್ತಿಸಿ ಚಿಕಿತ್ಸೆಗೆ ಕಳುಹಿಸಲಾಗಿತ್ತು. ಗಾಯಗೊಂಡವರು ಹಾಗೂ ಇತರ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಈ ಬಸ್ ಒಡಿಶಾ ಬಂಗಾಳ ರಾಷ್ಟ್ರೀಯ ಹೆದ್ದಾರಿ ಮೇದಿನಿಪುರ್ ಬಳಿ ಅಪಘಾತವಾಗಿದೆ. ಬಸ್ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ. ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊರಮಂಡಲ್ ರೈಲು ದುರಂತದಲ್ಲಿ ಗಾಯಗೊಂಡು ರೈಲಿನಲ್ಲಿ ಸಿಲುಕಿಕೊಂಡಿದ್ದ ಹಲವರನ್ನು ಇಂದು ರಕ್ಷಿಸಿ ಆಸ್ಪತ್ರೆ ದಾಖಲಿಸಲಾಗಿದೆ. ಈ ವೇಳೆ ಸಣ್ಣ ಪುಟ್ಟ ಗಾಯಗೊಂಡವರರನ್ನು ಹತ್ತಿದರ ಆಸ್ಪತ್ರೆಗಳು ಭರ್ತಿಯಾಗಿದ್ದ ಕಾರಣ ಬಸ್‌ನಲ್ಲಿ ಒಡಿಶಾ ಪಶ್ಚಿಮ ಬಂಗಾಳದ ಹೆದ್ದಾರಿಯಲ್ಲಿರುವ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಲಾಗಿತ್ತು. ಹೀಗೆ ಸಣ್ಣ ಪುಟ್ಟ ಗಾಯಗೊಂಡ ಪ್ರಯಾಣಿಕರನ್ನು ಖಾಸಗಿ ಬಸ್‌ನಲ್ಲಿ ಹತ್ತಿಸಲಾಗಿತ್ತು. ಈ ಬಸ್‌ಲ್ಲಿ ರೈಲು ದುರಂತದಲ್ಲಿ ಗಾಯಗೊಂಡ ಹಾಗೂ ಇತರ ಪ್ರಯಾಣಿಕರು ಸಂಚರಿಸುತ್ತಿದ್ದರು.

ಸುಖಕರ ಪ್ರಯಾಣಕ್ಕಿಂತ ಕೊರಮಂಡಲ್ ರೈಲು ಅಪಘಾತವಾಗಿದ್ದೇ ಹೆಚ್ಚು, 2002ರಿಂದ ಇಲ್ಲೀವರೆಗೆ 5 ದುರಂತ!

ಮೇದಿನಿಪುರ ಬಳಿ ಬಸ್ ಹಾಗೂ ಪಿಕ್ ಅಪ್ ವ್ಯಾನ್ ನಡುವೆ ಡಿಕ್ಕಿ ಸಂಭವಿಸಿದೆ. ಬಸ್ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ. ಇತ್ತ ಪಿಕ್ ಅಪ್ ವಾಹನದಲ್ಲಿದ್ದ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್‌ನಲ್ಲಿದ್ದ ರೈಲು ದುರಂತದ ಗಾಯಾಳುಗಳು ಹಾಗೂ ಇತರ ಪ್ರಯಾಣಿಕರು ಗಾಯಗೊಂಡಿದ್ದಾರೆ. ದುರಂತದಿಂದ ಹೇಗೋ ಬಚಾವ್ ಆಗಿ ಚಿಕಿತ್ಸೆ ಪಡೆಯಲು ತೆರಳುತ್ತಿದ್ದ ಮತ್ತೊಂದು ದುರಂತ ಸಂಭವಿಸಿದೆ.

ಕೋಲ್ಕತಾದ ಶಾಲಿಮಾರ್‌ ರೈಲು ನಿಲ್ದಾಣದಿಂದ ಚೆನ್ನೈಗೆ ಮೇನ್‌ ಲೈನ್‌ನಲ್ಲಿ ಸಂಜೆ 7.30ಕ್ಕೆ ಹೊರಟಿದ್ದ ಕೋರಮಂಡಲ್‌ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 12841), ಒಡಿಶಾದ ಬಹನಗಾ ಬಜಾರ್‌ನಲ್ಲಿರುವ ರೈಲು ನಿಲ್ದಾಣದ ಬಳಿ ಹಳಿತಪ್ಪಿ ಪಕ್ಕದ ಹಳಿಯಲ್ಲಿ ನಿಂತಿದ್ದ ಗೂಡ್‌್ಸ ರೈಲಿಗೆ ಮೊದಲು ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕೋರಮಂಡಲ್‌ ಎಕ್ಸ್‌ಪ್ರೆಸ್‌ನ 12 ಬೋಗಿಗಳು ಹಳಿ ತಪ್ಪಿ ಮೂರನೇ ರೈಲು ಮಾರ್ಗದ ಮೇಲೂ ಬಿದ್ದಿವೆ. ಕೆಲವು ಸಮಯದ ಬಳಿಕ ಇದೇ ಮಾರ್ಗವಾಗಿ ಇನ್ನೊಂದು ಹಳಿಯಲ್ಲಿ ವಿರುದ್ಧ ದಿಕ್ಕಿನಿಂದ ಆಗಮಿಸಿದ ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 12864) ಸಹ ಹಳಿತಪ್ಪಿದ್ದ ಕೋರಮಂಡಲ್‌ನ ಬೋಗಿಗಳಿಗೆ ಡಿಕ್ಕಿ ಹೊಡೆದಿದ್ದು, ನಾಲ್ಕು ಬೋಗಿಗಳು ಹಳಿತಪ್ಪಿವೆ ಎಂದು ರೈಲ್ವೆ ಸಚಿವಾಲಯದ ವಕ್ತಾರ ಅಮಿತಾಭ್‌ ಶರ್ಮಾ ಹೇಳಿದ್ದಾರೆ.

ರೈಲು ದುರಂತದ ಗಾಯಾಳು ಭೇಟಿ ಬಳಿಕ ಪ್ರಧಾನಿ ಮೋದಿ ಮಹತ್ವದ ಸೂಚನೆ, ಜೊತೆಗೊಂದು ಎಚ್ಚರಿಕೆ!

ರೈಲು ಅಪಘಾತದಲ್ಲಿ ಮಡಿದವರಿಗೆ 10 ಲಕ್ಷ ರು., ತೀವ್ರವಾಗಿ ಗಾಯಗೊಂಡವರಿಗೆ 2 ಲಕ್ಷ ರು. ಹಾಗೂ ಸಣ್ಣಪುಟ್ಟದಾಗಿ ಗಾಯಗೊಂಡವರಿಗೆ 50 ಸಾವಿರ ರು.ಗಳ ಪರಿಹಾರವನ್ನು ರೈಲ್ವೆ ಸಚಿವಾಲಯ ಘೋಷಣೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರತ್ಯೇಕವಾಗಿ 2 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ