ಹೆಸರು ಹೇಳಲು ಬಯಸದ ವೆಂಕಟೇಶ್ವರನ ಭಕ್ತರೊಬ್ಬರು ಉದ್ಯಮವೊಂದನ್ನು ಸ್ಥಾಪಿಸಿ ಯಶಸ್ವಿಯಾಗಿದ್ದರು. ಇತ್ತೀಚೆಗೆ ಆ ಕಂಪನಿಯಲ್ಲಿನ ಶೇ.60ರಷ್ಟು ಷೇರು ಮಾರಾಟ ಮಾಡಿದ ಪರಿಣಾಮ ಅವರಿಗೆ 6000-7000 ಕೋಟಿ ರು. ಹಣ ಸಿಕ್ಕಿತ್ತು.
ಅಮರಾವತಿ (ಆ.20): ವಿಶ್ವದ ಅತ್ಯಂತ ಶ್ರೀಮಂತ ದೇಗುಲಗಳ ಪೈಕಿ ಒಂದಾದ ತಿರುಪತಿ ತಿಮ್ಮಪ್ಪನಿಗೆ ಉದ್ಯಮಿಯೊಬ್ಬರು ಭರ್ಜರಿ 140 ಕೋಟಿ ರು. ಮೌಲ್ಯದ 121 ಕೇಜಿ ಯಷ್ಟು ಚಿನ್ನವನ್ನು ಕಾಣಿಕೆಯಾಗಿ ನೀಡಲು ಮುಂದೆ ಬಂದಿದ್ದಾರೆ. ಇದು ಒಬ್ಬರೇ ವ್ಯಕ್ತಿಯೊಬ್ಬರು ತಿರುಪತಿಗೆ ನೀಡುತ್ತಿರುವ ಅತಿ ದೊಡ್ಡ ಪ್ರಮಾಣದ ಚಿನ್ನದ ಕಾಣಿಕೆ ಎನ್ನಲಾಗಿದೆ.
ಹೆಸರು ಹೇಳಲು ಬಯಸದ ವೆಂಕಟೇಶ್ವರನ ಭಕ್ತರೊಬ್ಬರು ಉದ್ಯಮವೊಂದನ್ನು ಸ್ಥಾಪಿಸಿ ಯಶಸ್ವಿಯಾಗಿದ್ದರು. ಇತ್ತೀಚೆಗೆ ಆ ಕಂಪನಿಯಲ್ಲಿನ ಶೇ.60ರಷ್ಟು ಷೇರು ಮಾರಾಟ ಮಾಡಿದ ಪರಿಣಾಮ ಅವರಿಗೆ 6000-7000 ಕೋಟಿ ರು. ಹಣ ಸಿಕ್ಕಿತ್ತು. ತಮಗೆ ಈ ಸಂಪತ್ತು ಸಿಗಲು ಕಾರಣನಾದ ಭಗವಂತನಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ತಿಮ್ಮಪ್ಪನಿಗೆ ಚಿನ್ನವನ್ನು ಕಾಣಿಕೆಯಾಗಿ ನೀಡಲು ಆ ಉದ್ಯಮಿ ನಿರ್ಧರಿಸಿದ್ದಾರೆ.
ನಿತ್ಯದ ಪೂಜೆಗೆ ತಿಮ್ಮಪ್ಪನಿಗೆ 120 ಕೆಜಿ ಚಿನ್ನ ಬಳಸಲಾಗುತ್ತದೆ ಎಂಬ ಮಾಹಿತಿ ಹೊಂದಿದ್ದ ಉದ್ಯಮಿ ಅದಕ್ಕಿಂತ 1 ಕೆಜಿ ಹೆಚ್ಚಿನ ಚಿನ್ನ ಉಡುಗೊರೆಯಾಗಿ ನೀಡಲು ಬಯಸಿದ್ದಾರೆ ಎಂದು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ತಿರುಪತಿ ತಿಮ್ಮಪ್ಪನ ಬಳಿ ಹಾಲಿ 11300 ಕೆಜಿಯಷ್ಟು ಕಾಣಿಕೆಯಾಗಿ ಬಂದ ಚಿನ್ನದ ಸಂಗ್ರ ಹವಿದ್ದು, ಅದನ್ನು ಬ್ಯಾಂಕ್‌ನಲ್ಲಿ ಠೇವಣಿ ರೂಪದಲ್ಲಿ ಇಡಲಾಗಿದೆ. ಇದರ ಹೊರತಾಗಿ 19000 ಕೋಟಿ ರು. ಹಣವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ರೂಪದಲ್ಲಿ ಇಡಲಾಗಿದೆ.
