ರೈಲ್ ಇಂಡಿಯಾ ತಾಂತ್ರಿಕ & ಆರ್ಥಿಕ ಸೇವೆ (RITES) 2025ನೇ ಸಾಲಿಗೆ 154 ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಡಿಸೆಂಬರ್ 30, 2025 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ರೈಲ್ ಇಂಡಿಯಾ ತಾಂತ್ರಿಕ & ಆರ್ಥಿಕ ಸೇವೆ (RITES) 2025ನೇ ಸಾಲಿಗೆ ಮಹತ್ವದ ಅಧಿಸೂಚನೆ ಬಿಡುಗಡೆ ಮಾಡಿದ್ದು, ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ:
ಹುದ್ದೆಯ ಹೆಸರು: ಹಿರಿಯ ತಾಂತ್ರಿಕ ಸಹಾಯಕ
ಹುದ್ದೆಗಳ ಸಂಖ್ಯೆ: 154
ಉದ್ಯೋಗ ಸ್ಥಳ: ಅಖಿಲ ಭಾರತa
ಅಧಿಕೃತ ವೆಬ್‌ಸೈಟ್: https://rites.com
ಪ್ರಮುಖ ದಿನಾಂಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 30-2025
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಡಿಸೆಂಬರ್ 30-2025
ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಡಿಪ್ಲೊಮಾ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಅಭ್ಯರ್ಥಿಯು ಗಗರಿಷ್ಠ ವಯಸ್ಸು ಡಿಸೆಂಬರ್ 30-2025ಕ್ಕೆ ಗರಿಷ್ಠ 40 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ:
ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ : 10 ವರ್ಷ
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ: 300 ರು.
ಇಡಬ್ಲ್ಯೂಎಸ್, ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ: 100 ರು.
ಪಾವತಿ ವಿಧಾನ: ಆನ್‌ಲೈನ್ ಮೂಲಕ
ವೇತನ ಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅಧಿಸೂಚನೆ ಪ್ರಕಾರ ಮಾಸಿಕ 29,735 ವೇತನ ನೀಡಲಾಗುತ್ತದೆ.
ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ
ದಾಖಲೆ ಪರಿಶೀಲನೆ
ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ:
ಅಧಿಕೃತ ವೆಬ್‌ಸೈಟ್ https://rites.com/ ಗೆ ಭೇಟಿ ನೀಡಿ.
ನಿಮಗೆ ಸಂಬಂಧಿಸಿದ RITES ವಿಭಾಗವನ್ನು ಆಯ್ಕೆಮಾಡಿ.
ಹಿರಿಯ ತಾಂತ್ರಿಕ ಸಹಾಯಕ ಹುದ್ದೆಯ ಅಧಿಸೂಚನೆಯನ್ನು ಓದಿ ಅರ್ಹತೆ ಪರಿಶೀಲಿಸಿ.
ಆನ್‌ಲೈನ್ ಅರ್ಜಿ ನಮೂನೆಯ ಲಿಂಕ್ ತೆರೆಯಿರಿ.
ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
ಶುಲ್ಕ ಪಾವತಿ ಮಾಡಿ.


