ತಿರುಪತಿ ಭಕ್ತರಿಗೆ ಗುಡ್‌ನ್ಯೂಸ್ ಕೊಟ್ಟ ಟಿಟಿಡಿ: ವೆಂಕಟೇಶ್ವರನ ದರ್ಶನ ಈಗ ಇನ್ನೂ ಸುಲಭ!
ತಿರುಮಲ ವೆಂಕಟೇಶ್ವರ ಸ್ವಾಮಿ ದರ್ಶನದಲ್ಲಿ ಟಿಟಿಡಿ ಮಹತ್ವದ ಬದಲಾವಣೆಗಳನ್ನು ತಂದಿದೆ. ದರ್ಶನದ ಟಿಕೆಟ್‌ಗಳ ಕೋಟಾವನ್ನು ಹೆಚ್ಚಿಸುವುದರ ಜೊತೆಗೆ ಸಮಯವನ್ನು ಸಂಜೆಗೆ ಬದಲಾಯಿಸಲಾಗಿದೆ. ಈ ಬದಲಾವಣೆಯಿಂದಾಗಿ ಭಕ್ತರು ಅದೇ ದಿನ ತಿರುಮಲ ತಲುಪಿ, ದರ್ಶನ ಮುಗಿಸಿ ವಾಪಸ್ ಹೋಗಲು ಅನುಕೂಲವಾಗಲಿದೆ.

ಆಂಧ್ರಪ್ರದೇಶದ ಪ್ರಸಿದ್ಧ ಯಾತ್ರಾ ಸ್ಥಳ ತಿರುಮಲ. ಈ ಕ್ಷೇತ್ರಕ್ಕೆ ಪ್ರತಿದಿನ ಸಾವಿರಾರು ಜನ ಭೇಟಿ ನೀಡುತ್ತಾರೆ. ಕಲಿಯುಗದ ಪ್ರತ್ಯಕ್ಷ ದೈವ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲುತ್ತಾರೆ. ಸಾಮಾನ್ಯ ಭಕ್ತರಷ್ಟೇ ಅಲ್ಲದೆ ರಾಜಕೀಯ, ಸಿನಿಮಾ ಮತ್ತು ವ್ಯಾಪಾರ ಕ್ಷೇತ್ರದ ಗಣ್ಯರು ಸಹ ಸ್ವಾಮಿಯ ದರ್ಶನಕ್ಕೆ ಬರುತ್ತಾರೆ. ಇದೀಗ ತಿರುಮಲ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಸಂಬಂಧಿಸಿದಂತೆ ಟಿಟಿಡಿ ಮಹತ್ವದ ಬದಲಾವಣೆ ತರಲು ಚಿಂತನೆ ನಡೆಸಿದೆ.
ತಿರುಮಲ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಸಂಬಂಧಿಸಿದಂತೆ ಟಿಟಿಡಿ ಮಹತ್ವದ ಬದಲಾವಣೆ ತರಲು ಚಿಂತನೆ ನಡೆಸಿದೆ. ಪ್ರಸ್ತುತ ಬೆಳಿಗ್ಗೆ ನೀಡುತ್ತಿರುವ ದರ್ಶನದ ಸಮಯವನ್ನು ಸಂಜೆ 4 ಗಂಟೆಗೆ ಬದಲಾಯಿಸುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ.
ವೆಂಕಟೇಶ್ವರ ಸ್ವಾಮಿ ಭಕ್ತರ ಬೇಡಿಕೆಗೆ ಅನುಗುಣವಾಗಿ ದರ್ಶನದ ಟಿಕೆಟ್‌ಗಳ ಕೋಟಾವನ್ನು ಹೆಚ್ಚಿಸಲು ಟಿಟಿಡಿ ನಿರ್ಧರಿಸಿದೆ. ಪ್ರಸ್ತುತ 1500 ಟಿಕೆಟ್‌ಗಳ ಕೋಟಾವನ್ನು 2000ಕ್ಕೆ ಏರಿಸಲು ತೀರ್ಮಾನಿಸಲಾಗಿದೆ. ಇನ್ಮುಂದೆ ಪ್ರತಿದಿನ ಕರೆಂಟ್ ಬುಕಿಂಗ್ ಕೋಟಾದಡಿ ತಿರುಮಲದಲ್ಲಿ 1500 ಟಿಕೆಟ್‌ಗಳು ಮತ್ತು ರೇಣಿಗುಂಟ ವಿಮಾನ ನಿಲ್ದಾಣದಲ್ಲಿ 500 ಟಿಕೆಟ್‌ಗಳನ್ನು ಬಿಡುಗಡೆ ಮಾಡಲು ಟಿಟಿಡಿ ನಿರ್ಧರಿಸಿದೆ.
ಈ ಬದಲಾವಣೆಯಿಂದಾಗಿ ಭಕ್ತರು ಅದೇ ದಿನ ತಿರುಮಲ ತಲುಪಿ, ದರ್ಶನ ಮುಗಿಸಿ ವಾಪಸ್ ಹೋಗಲು ಅನುಕೂಲವಾಗಲಿದೆ. ಇದರಿಂದ ವಸತಿ ಗೃಹಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು ಎಂದು ಟಿಟಿಡಿ ಭಾವಿಸಿದೆ. ಹೀಗೆ ಟಿಕೆಟ್ ಪಡೆದ ದಿನವೇ ಸಂಜೆ ಭಕ್ತರು ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಹೋಗುವಂತೆ ಟಿಟಿಡಿ ಬದಲಾವಣೆ ತರಲಿದೆ.
ಪ್ರಸ್ತುತ ನೀತಿಯಲ್ಲಿ ದರ್ಶನದ ಟಿಕೆಟ್‌ಗಳು ಮೊದಲೇ ಬಿಡುಗಡೆಯಾಗುವುದರಿಂದ ಭಕ್ತರು ಎರಡು ದಿನಗಳವರೆಗೆ ವಸತಿ ಗೃಹಗಳನ್ನು ಬುಕ್ ಮಾಡುತ್ತಿದ್ದಾರೆ ಎಂದು ಟಿಟಿಡಿ ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಅದೇ ದಿನ ಟಿಕೆಟ್‌ಗಳನ್ನು ನೀಡುವ ಮೂಲಕ ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ನೀತಿಯ ಕುರಿತು ಚಿಂತನೆ ನಡೆಸುತ್ತಿದೆ.
ತಿರುಮಲದಲ್ಲಿ ಗರುಡ ಪಂಚಮಿ: ತಿರುಮಲದಲ್ಲಿ ಗರುಡ ಪಂಚಮಿ ಹಬ್ಬದ ಅಂಗವಾಗಿ ಶ್ರೀ ಮಲಯಪ್ಪ ಸ್ವಾಮಿ ತಮ್ಮ ಇಷ್ಟ ವಾಹನವಾದ ಗರುಡನ ಮೇಲೆ ತಿರುಮಾಡ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಭಕ್ತರಿಗೆ ದರ್ಶನ ನೀಡಿದರು. ಮಂಗಳವಾರ ರಾತ್ರಿ 7 ಗಂಟೆಗೆ ಗರುಡ ವಾಹನ ಸೇವೆ ಆರಂಭವಾಯಿತು. ಈ ಕುರಿತು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ.