ದೀಪಾವಳಿ ಹಬ್ಬದ ಸಂದರ್ಭ ಸಾರ್ವಜನಿಕ ಪ್ರದೇಶದಲ್ಲಿ ಪಟಾಕಿ ಉರಿಸುವುದು, ಸುಡುವುವನ್ನು ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪರೇಷನ್ ನಿಷೇಧಿಸಿದೆ. ಕೊರೋನಾ ವೈರಸ್ ಕಾರಣದಿಂದ ಮತ್ತು ಚಳಿಗಾಲವೂ ಆರಂಭವಾಗಿರುವುದರಿಂದ ಈ ಆದೇಶ ನೀಡಲಾಗಿದೆ.

ಬಿಎಂಸಿಯ ಯಾವುದೇ ಆದೇಶವನ್ನು ಉಲ್ಲಂಘಿಸಿದರೂ ದಂಡ ವಿಧಿಸಲಾಗುತ್ತದೆ. ಈ ನಿಟ್ಟಿನಲ್ಲಿ ಶೀಘ್ರವೇ ನಿಯಮಾವಳಿಗಳನ್ನು ಪ್ರಕಟಿಸಲಾಗುತ್ತದೆ ಎಂದು ಕಮಿಷನರ್ ರೇಶ್ ಕಕನಿ ತಿಳಿಸಿದ್ದಾರೆ.

200 ಫೀಟ್ ಆಳದ ಬೋರ್‌ವೆಲ್‌ಗೆ ಬಿದ್ದ ಪುಟ್ಟ ಬಾಲಕ, 100 ಫೀಟ್ ತನಕ ತುಂಬಿದೆ ನೀರು

ಪಟಾಕಿ ಸುಡುವುದರಿಂದ ಇದು ಮುಖ್ಯವಾಗಿ ಕೊರೋನಾ ರೋಗಿಗಳಿಗೆ ತೊಂದರೆಯಾಗಲಿದೆ. ಗಾಳಿಯ ಗುಣಮಟ್ಟ ಹಾಳಾಗುವುದರಿಂದ ಕೊರೋನಾ ರೋಗಿಗಳಲ್ಲಿ ಇನ್ಫೆಕ್ಷನ್ ಸಮಸ್ಯೆ ಹೆಚ್ಚಾಗಲಿದೆ.

Fact Check : ತೇಜಸ್ವಿ ಯಾದವ್‌ಗೆ ಜಗತ್ತಿನ ಅತಿ ಕಿರಿಯ ರಾಜಕಾರಣಿ ಪ್ರಶಸ್ತಿ?

ಮಹಾರಾಷ್ಟ್ರದಲ್ಲಿ ಸದ್ಯ ಅತ್ಯಂತ ಹೆಚ್ಚಿನಕೊರೋನಾ ಸಾವು ವರದಿಯಾಗುತ್ತಿದೆ. ಪುಣೆ, ಥಾನೆ, ಮುಂಬೈ, ನಾಸಿಕ್, ನಾಗ್ಪುರ, ಚಂದ್ರಪುರ, ರಾಯ್‌ಘಡ ಮತ್ತು ಸತಾರದಲ್ಲಿ ಅತ್ಯಂತ ಕೆಚ್ಚು ಕೊರೋನಾ ಸೋಂಕಿತರಿದ್ದಾರೆ. ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ 16,98,198 ಜನರು ಸೋಂಕಿತರಾಗಿದ್ದು, ಮಾರ್ಚ್‌ 9ರ ನಂತರ 44,548 ಜನರು ಮೃತಪಟ್ಟಿದ್ದಾರೆ.