ಬಿಹಾರ ವಿಧಾನಸಭಾ ಚುನಾವಣೆಯು ಮೂರು ಹಂತಗಳಲ್ಲಿ ನಡೆಯುತ್ತಿದೆ. ಎನ್‌ಡಿಎ ಮೈತ್ರಿಕೂಟ ಮತ್ತು ಮಹಾಮೈತ್ರಿ ಕೂಟದ ಪಕ್ಷಗಳು ಗೆಲುವಿಗಾಗಿ ಶತಾಯಗತಾಯ ಪ್ರಯತ್ನ ಪಡುತ್ತಿವೆ. ಈ ನಡುವೆ ಆರ್‌ಜೆಡಿ ನಾಯಕ, ಲಾಲೂ ಪ್ರಸಾದ್‌ ಯಾದವ್‌ ಪುತ್ರ ತೇಜಸ್ವಿ ಯಾದವ್‌ ವಿಶ್ವದ ಅತ್ಯಂತ ಕಿರಿಯ ರಾಜಕಾರಣಿ ಎಂಬ ಪ್ರಶಸ್ತಿ ಪಡೆದಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

fact Check: ರಾಮಮಂದಿರ ಕೆಲಸ ಅರ್ಧ ಮುಗಿಯಿತಾ?

‘ಕೆಲವರು ತಮ್ಮ 30ನೇ ವಯಸ್ಸಿನಲ್ಲೂ ನಕಲಿ ಪ್ರಮಾಣಪತ್ರಗಳನ್ನು ಹಿಡಿದುಕೊಂಡು ಭಿಕ್ಷೆ ಬೇಡುತ್ತಿರುತ್ತಾರೆ. ಇನ್ನು ಕೆಲವರು 30ನೇ ವಯಸ್ಸಿಗೆ 9 ಬಾರಿ ಸೋಲು ಕಂಡರೂ ಲಂಡನ್‌ನಲ್ಲಿ ದಾಖಲೆ ಬರೆಯುತ್ತಾರೆ’ ಎಂದು ಈ ಸಂದೇಶದಲ್ಲಿ ಬರೆಯಲಾಗಿದೆ.

ಆದರೆ ಸುದ್ದಿಸಂಸ್ಥೆಯೊಂದು ಈ ಬಗ್ಗೆ ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ, ತೇಜಸ್ವಿ ಯಾದವ್‌ ಜಗತ್ತಿನ ಅತಿ ಕಿರಿಯ ರಾಜಕಾರಣಿ ಪ್ರಶಸ್ತಿ ಪಡೆದಿಲ್ಲ ಎಂಬುದು ಸ್ಪಷ್ಟವಾಗಿದೆ.

 

2016 ರಲ್ಲಿ ಬಿಹಾರದ ಉಪಮುಖ್ಯಮಂತ್ರಿಯಾಗಿದ್ದ ತೇಜಸ್ವಿ ಯಾದವ್‌ ಲಂಡನ್‌ ಭೇಟಿ ಸಂದರ್ಭದಲ್ಲಿ ಸಿವಿಲ್‌ ಇಂಜಿನಿಯ​ರ್‍ಸ್ ಇನ್‌ಸ್ಟಿಟ್ಯೂಷನ್‌ನ ಸದಸ್ಯರೊಂದಿಗೆ ಸಂವಾದ ನಡೆಸಿದ್ದರು. ಸ್ವತಃ ತೇಜಸ್ವಿ ಯಾದವ್‌ ಸಹ ಈ ಫೋಟೋಗಳನ್ನು ಟ್ವೀಟ್‌ ಮಾಡಿದ್ದರು. ಆಗಿನ ಫೋಟೋಗಳನ್ನೇ ಪೋಸ್ಟ್‌ ಮಾಡಿ ಕಿರಿಯ ರಾಜಕಾರಣಿ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ.