5 ವರ್ಷದ ಬಾಲಕ 200 ಫೀಟ್ ಆಳದ ಬೋರ್‌ವೆಲ್‌ ಒಳಗೆ ಬಿದ್ದ ಘಟನೆ ಮಧ್ಯಪ್ರದೇಶದ ನಿವಾಡಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾ ಕೇಂದ್ರದಿಂದ 36 ಕಿ.ಮೀ ದೂರದಲ್ಲಿ ಬರಾಹುಭುಜುರ್ಗ್ ಗ್ರಾಮದಲ್ಲಿ ಘಟನೆ ನಡೆದಿದೆ.

ಹರಿಶಿಷನ್ ಕುಶ್ವಾಹ ಎಂಬವರ ಒಉತ್ರ ಪ್ರಹ್ಲಾದ್ ಬೋರ್‌ವೆಲ್ ಒಳಗೆ ಬಿದ್ದ ಬಾಲಕ. ಬೋರ್‌ವೆಲ್‌ ಒಳಗೆ ಕೆಲಸಗಾರರು ಪೈಪ್ ಇಳಿಸುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ ಎಂದು ಪೃಥ್ವಿಪುರ ಪೊಲೀಸ್ ಠಾಣೆಯ ಇನ್‌ಚಾರ್ಜ್ ನರೇಂದ್ರ ತ್ರಿಪಾಠಿ ತಿಳಿಸಿದ್ದಾರೆ.

'ಗಂಡಸಿನ ಸಖ್ಯ ಬೇಕಿಲ್ಲ, ನಾವೇ ಮದುವೆ ಆಗ್ತೇವೆ' ಮನೆ ಬಿಟ್ಟುಹೋದ ಯುವತಿಯರು!

ಬೋರ್‌ವೆಲ್‌ನಲ್ಲಿ 100 ಫೀಟ್‌ನಷ್ಟು ಎತ್ತರ ನೀರು ತುಂಬಿದ್ದು, ಬಾಲಕ ಎಷ್ಟು ಆಳಕ್ಕೆ ಬಿದ್ದಿದ್ದಾನೆ, ಎಷ್ಟು ಆಳದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ ಎಂಬುದು ತಿಳಿದಿಲ್ಲ ಎಂದು ಅವರು ತಿಳಿಸಿದ್ದಾರೆ.

ತಜ್ಞರ ಸಹಾಯದಿಂದ ಜಿಲ್ಲಾಡಳಿತ ಬಾಲಕನನ್ನು ಹೊರ ತೆಗೆಯುವ ಪ್ರಯತ್ನ ನಡೆಸುತ್ತಿದೆ. ಬಾಲಕನನ್ನು ಕಾಪಾಡುವ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಇತ್ತೀಚೆಗಷ್ಟೇ ಬೋರ್‌ವೆಲ್ ಕೊರೆಯಲಾಗಿತ್ತು ಎಂದು ತ್ರಿಪಾಠಿ ತಿಳಿಸಿದ್ದಾರೆ.