Asianet Suvarna News Asianet Suvarna News

ಬಿಜೆಪಿಗರು ದೇಶಭಕ್ತರಲ್ಲ, ದೇಶದ್ರೋಹಿಗಳು, ಭಾರತಮಾತೆಯ ಕೊಂದರು: ರಾಹುಲ್‌ ಗಾಂಧಿ

160 ಜನರ ಬಲಿ ಪಡೆದಿರುವ ಜನಾಂಗೀಯ ಸಂಘರ್ಷಪೀಡಿತ ಮಣಿಪುರ ವಿಚಾರದಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮುಖಂಡ ಹಾಗೂ ಕೇರಳದ ವಯನಾಡ್‌ ಕ್ಷೇತ್ರದ ಸಂಸದ ರಾಹುಲ್‌ ಗಾಂಧಿ ಹರಿತ ವಾಗ್ದಾಳಿ ನಡೆಸಿದ್ದಾರೆ.

BJP politics has killed Bharat mata in Manipur Congress leader Rahul Gandh ,sharp attack against the Narendra Modi government akb
Author
First Published Aug 10, 2023, 6:48 AM IST
  •  ನನಗೆ ಇಬ್ಬರು ತಾಯಂದಿರು. ಒಬ್ಬಳು ಸೋನಿಯಾ, ಇನ್ನೊಬ್ಬಳು ಭಾರತ ಮಾತೆ. ಮಣಿಪುರದಲ್ಲಿ ಭಾರತ ಮಾತೆಯನ್ನೇ ಕೊಲೆ ಮಾಡಿದಿರಿ
  •  ಮಣಿಪುರವನ್ನು ಪ್ರಧಾನಿ ನರೇಂದ್ರ ಮೋದಿ ಭಾರತದ ಅಂಗ ಎಂದು ಪರಿಗಣಿಸಿಲ್ಲ. ಅದಕ್ಕೇ ಅವರು ಈವರೆಗೂ ಮಣಿಪುರಕ್ಕೆ ಭೇಟಿ ನೀಡಿಲ್ಲ
  •  ನೀವು (ಬಿಜೆಪಿ) ಸೀಮೆಎಣ್ಣೆ ಎಲ್ಲೆಡೆ ಎರಚಿದ್ದೀರಿ. ಮೊದಲು ಮಣಿಪುರ ಸುಟ್ಟಿದ್ದೀರಿ, ನಂತರ ಹರಾರ‍ಯಣದಲ್ಲೂ ಅದೇ ಕೆಲಸ ಮಾಡುತ್ತಿದ್ದೀರಿ
  •  ರಾವಣ ಮೇಘನಾದ, ಕುಂಭಕರ್ಣನ ಮಾತು ಮಾತ್ರ ಕೇಳುತ್ತಿದ್ದ. ಅದೇ ರೀತಿ ಪ್ರಧಾನಿ ಮೋದಿ ಅದಾನಿ, ಅಮಿತ್‌ ಶಾ ಮಾತು ಮಾತ್ರ ಕೇಳ್ತಾರೆ
  •  ಬಿಜೆಪಿಯ ರಾಜಕೀಯವು ಮಣಿಪುರವನ್ನಷ್ಟೇ ಅಲ್ಲ, ಮಣಿಪುರದಲ್ಲಿನ ಹಿಂದುಸ್ತಾನವನ್ನೂ ಕೊಂದಿದೆ. ಹಿಂದುಸ್ತಾನವು ಮಣಿಪುರದಲ್ಲಿ ಹತ್ಯೆ ಆಗಿದೆ

ನವದೆಹಲಿ: 160 ಜನರ ಬಲಿ ಪಡೆದಿರುವ ಜನಾಂಗೀಯ ಸಂಘರ್ಷಪೀಡಿತ ಮಣಿಪುರ ವಿಚಾರದಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿತ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ಮುಖಂಡ ಹಾಗೂ ಕೇರಳದ ವಯನಾಡ್‌ ಕ್ಷೇತ್ರದ ಸಂಸದ ರಾಹುಲ್‌ ಗಾಂಧಿ, ‘ಬಿಜೆಪಿ ರಾಜಕೀಯವು ಇಂದು ಮಣಿಪುರದಲ್ಲಿ ಭಾರತ ಮಾತೆಯನ್ನೇ ಹತ್ಯೆ ಮಾಡಿದೆ. ಬಿಜೆಪಿಗರು ದೇಶದ್ರೋಹಿಗಳು’ ಎಂದು ಆಕ್ರೋಶದ ಮಳೆಗರೆದಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣನಿಗೆ ಹೋಲಿಸಿದ್ದಾರೆ. 

ಬುಧವಾರ ಲೋಕಸಭೆಯಲ್ಲಿ (Loksabha) ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್‌, ಮಣಿಪುರಕ್ಕೆ ಭೇಟಿ ನೀಡದ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಕಿಡಿಕಾರಿ ಅವರು ಮಣಿಪುರವನ್ನು ಭಾರತ ಎಂದು ಪರಿಗಣಿಸಿಯೇ ಇಲ್ಲ ಎಂದಿದ್ದಾರೆ.

ತಮ್ಮ ಭಾಷಣದಲ್ಲಿ ಮಣಿಪುರವನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಮಾತಾಡಿದ ರಾಹುಲ್‌ (Rahul Gandhi), ‘ನಾನು ಕೆಲವು ದಿನಗಳ ಹಿಂದೆ ಮಣಿಪುರಕ್ಕೆ ಹೋಗಿದ್ದೆ. ಆದರೆ ಪ್ರಧಾನಿಗಳು ಈವರೆಗೂ ಹೋಗಿಲ್ಲ. ಏಕೆಂದರೆ ಅವರು ಮಣಿಪುರವನ್ನು ಭಾರತದ ಅಂಗ ಎಂದು ಪರಿಗಣಿಸಿಲ್ಲ. ಮಣಿಪುರವನ್ನು ನೀವು (ಬಿಜೆಪಿ) ಇಬ್ಭಾಗ ಮಾಡಿದ್ದೀರಿ’ ಎಂದು ಆರೋಪಿಸಿದರು. ‘ಮಣಿಪುರ ಕ್ಯಾಂಪ್‌ಗೆ ನಾನು ಹೋದಾಗ ಅನೇಕ ಮನಕಲಕುವ ಸಂಗತಿಗಳನ್ನು ನೋಡಿದೆ. ತನ್ನ ಕಣ್ಣೆದುರೇ ಮಗನನ್ನು ಗುಂಡಿಕ್ಕಿ ಸಾಯಿಸಲಾಯಿತು, ಆತನ ಶವದೊಂದಿಗೆ ತಾನು ಇಡೀ ರಾತ್ರಿ ಕಳೆದೆ ಎಂದು ಮಹಿಳೆಯೊಬ್ಬರು ಹೇಳಿದರು. ಇನ್ನೊಬ್ಬ ಮಹಿಳೆಯು ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಹೇಳಲು ಆಗದೇ ಮೂರ್ಛೆ ಹೋದಳು’ ಎಂದರು.

ಮಣಿಪುರ ಸಂಘರ್ಷದಿಂದ 14000 ವಿದ್ಯಾರ್ಥಿಗಳ ಸ್ಥಳಾಂತರ: ಕೇಂದ್ರ ಮಾಹಿತಿ

‘ಇವು ಕೇವಲ 2 ಉದಾಹರಣೆ ಅಷ್ಟೆ. ನೀವು (ಬಿಜೆಪಿಗರು) ಹಿಂದುಸ್ತಾನವನ್ನು ಹತ್ಯೆ ಮಾಡಿದ್ದೀರಿ. ಬಿಜೆಪಿಯ ರಾಜಕೀಯವು ಮಣಿಪುರವನ್ನಷ್ಟೇ ಅಲ್ಲ, ಮಣಿಪುರದಲ್ಲಿನ ಹಿಂದುಸ್ತಾನವನ್ನೂ ಕೊಂದಿದೆ. ಹಿಂದುಸ್ತಾನವು ಮಣಿಪುರದಲ್ಲಿ(Manipur) ಹತ್ಯೆ ಆಗಿದೆ. ಮಣಿಪುರದಲ್ಲಿ ಜನರನ್ನು ಸಾಯಿಸುವ ಮೂಲಕ ಭಾರತ ಮಾತೆಯನ್ನು ಅವರು (ಬಿಜೆಪಿ) ಹತ್ಯೆ ಮಾಡಿದ್ದಾರೆ. ನೀವು ದೇಶಭಕ್ತರಲ್ಲ. ದೇಶದ್ರೋಹಿಗಳು’ ಎಂದು ಪ್ರಹಾರ ನಡೆಸಿದರು.

ಬಿಜೆಪಿ ಆಕ್ಷೇಪ, ಮಣಿಯದ ರಾಗಾ:

ರಾಹುಲ್‌ ಹೇಳಿಕೆಯಿಂದ ಕ್ರುದ್ಧರಾಗಿ ಕೇಂದ್ರ ಸಚಿವ ಕಿರಣ್‌ ರಿಜಿಜು (Kiren rijiju) ಹಾಗೂ ಇತರ ಕೆಲವು ಬಿಜೆಪಿಗರು ಎದ್ದು ನಿಂತು, ಈಶಾನ್ಯ ರಾಜ್ಯ ದುಸ್ಥಿತಿಗೆ ಕಾಂಗ್ರೆಸ್‌ ಕಾರಣ. ಈ ಹೇಳಿಕೆಗೆ ಅವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಆದರೆ ಬಿಜೆಪಿಗರ ಆಕ್ಷೇಪಕ್ಕೆ ಮಣಿಯದ ರಾಹುಲ್‌ ಗಾಂಧಿ ಮಾತು ಮುಂದುವರಿಸಿ, ಮಣಿಪುರದಲ್ಲಿ ಶಾಂತಿ ಮರಳಿಸಲು ಸೇನೆ ಸಶಕ್ತವಾಗಿದೆ. ಆದರೆ ಕೇಂದ್ರ ಸರ್ಕಾರ ಸೇನೆ ನಿಯೋಜಿಸುತ್ತಿಲ್ಲ. ನೀವು ಭಾರತದ ದನಿಯನ್ನು ಕೊಂದಿದಿರಿ. ಅದರರ್ಥ ಭಾರತ ಮಾತೆಯನ್ನು ಮಣಿಪುರದಲ್ಲಿ ಕೊಂದಿರಿ. ನನ್ನ ತಾಯಿ (ಸೋನಿಯಾ) ಇಲ್ಲೇ ಇದ್ದಾಳೆ. ಆದರೆ ಇನ್ನೊಬ್ಬ ತಾಯಿ ಭಾರತ ಮಾತೆಯನ್ನು ಮಣಿಪುರದಲ್ಲಿ ಕೊಂದಿರಿ ಎಂದು ಪುನರುಚ್ಚರಿಸಿದರು.

ಎಲ್ಲೆಡೆ ಸೀಮೆಎಣ್ಣೆ ಎರಚಿದ್ದೀರಿ. ಮೊದಲು ಮಣಿಪುರ ಸುಟ್ಟಿರಿ. ನಂತರ ಹರ್ಯಾಣದಲ್ಲಿ ಇದನ್ನೇ ಮಾಡುತ್ತಿದ್ದೀರಿ ಎಂದು ಇತ್ತೀಚಿನ ನೂಹ್‌, ಗುರುಗ್ರಾಮ ಹಿಂಸೆಯನ್ನು ಉಲ್ಲೇಖಿಸಿದರು.

ಸುಪ್ರೀಂ ನ್ಯಾ. ಚಂದ್ರಚೂಡ್‌ಗೆ ಗನ್ ಕೊಟ್ಟು ಮಣಿಪುರಕ್ಕೆ ಕಳುಹಿಸಬೇಕು ಎಂದ ರಾಜಕೀಯ ವಿಶ್ಲೇಷಕನ ಬಂಧನ

ರಾವಣನಿಗೆ ಮೋದಿ ಹೋಲಿಕೆ:

ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣನಿಗೆ ಹೋಲಿಸಿದ ರಾಹುಲ್‌, ರಾವಣ ಕೇವಲ ಮೇಘನಾದ ಹಾಗೂ ಕುಂಭಕರ್ಣನ ಮಾತು ಕೇಳುತ್ತಿದ್ದ. ಅದೇ ರೀತಿ ಪ್ರಧಾನಿ ಮೋದಿ ಅಮಿತ್‌ ಶಾ (Amit shah) ಹಾಗೂ ಗೌತಮ್‌ ಅದಾನಿ (Gowtham Adani) ಮಾತ್ರ ಕೇಳುತ್ತಾರೆ. ಲಂಕೆಯನ್ನು ಹನುಮಂತ ದಹಿಸಲಿಲ್ಲ. ಆದರೆ ರಾವಣನ ಅಹಂಕಾರವು ಲಂಕಾದಹನ ಮಾಡಿತು ಎಂದು ಪ್ರಹಾರ ನಡೆಸಿದರು. ಇದೇ ವೇಳೆ, ಭಾರತ್‌ ಜೋಡೋ ಯಾತ್ರೆ ವೇಳೆ ಜನರ ಕಷ್ಟದ ಅರಿವಾಯಿತು. ಒಬ್ಬ ರೈತ ತನ್ನ ಹೊಲದಲ್ಲಿನ ಒಣ ಬೆಳೆಯನ್ನು ಕಿತ್ತು ನನಗೆ ತೋರಿಸಿ, ನಮ್ಮ ಬದುಕು ನರಕವಾಗಿದೆ. ಶ್ರೀಮಂತ ಉದ್ಯಮಿಗಳು ನಮ್ಮ ಬದುಕು ಕಿತ್ತುಕೊಂಡಿದ್ದಾರೆ ಎಂದು ಹೇಳಿದ ಎಂದರು.

Follow Us:
Download App:
  • android
  • ios