ಬಿಜೆಪಿ ಪಶ್ಚಿಮ ಬಂಗಾಳದ ಮಾಜಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ವಯಸ್ಸು 60.  ಸ್ವೀಟ್ 60ಯಲ್ಲಿ ಘೋಷ್ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇಂದು ಮದುವೆಯಾಗುತ್ತಿದ್ದಾರೆ. ದಿಲೀಪ್ ಘೋಷ್ ಪ್ರೀತಿ ಶುರುವಾಗಿದ್ದು ಹೇಗೆ? ಇಲ್ಲಿದೆ ರೋಚಕ ಲವ್ ಸ್ಟೋರಿ.

ಕೋಲ್ಕತಾ(ಏ.18) ಪ್ರೀತಿ ಎಲ್ಲಿ ಯಾವಾಗ ಹುಟ್ಟತ್ತೆ ಅನ್ನೋದು ಹೇಳಲು ಸಾಧ್ಯವಿಲ್ಲ. ಹೀಗಾಗಿಯೇ ಪ್ರೀತಿಗೆ ಕಣ್ಣಿಲ್ಲ ಎನ್ನುತ್ತಾರೆ. ವಯಸ್ಸಿನ ಅಂತರವಿಲ್ಲ, ಯಾವುದೂ ಇಲ್ಲ, ಹೇಗೋ ಶುರುವಾಯಿತು ಪ್ರೀತಿ, ಬಿದಿರು ಕೊಳಲಾಗುವ ರೀತಿ ಅನ್ನೋ ಹಾಗೆ. ಇದೀಗ ಪಶ್ಚಿಮ ಬಂಗಾಳದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ , ಮಾಜಿ ಸಂಸದ, ಹಾಗೂ ಮಾಜಿ ಶಾಸಕ ದಿಲೀಪ್ ಘೋಷ್‌ಗೆ ಮದುವೆ ಭಾಗ್ಯ ಒಲಿದು ಬಂದಿದೆ. ದಿಲೀಪ್ ಘೋಷ್ ವಯಸ್ಸು 60. ಇಂದು ಕೋಲ್ಕಾತದಲ್ಲಿ ಸಂಪ್ರದಾಯ ಬದ್ಧವಾಗಿ ದಿಲೀಪ್ ಘೋಷ್ ಮದುವೆಯಾಗುತ್ತಿದ್ದಾರೆ. ದಿಲೀಪ್ ಘೋಷ್ ಕೈಹಿಡುಯುತ್ತಿರುವ ವಧು ಬಿಜೆಪಿ ಕಾರ್ಯಕರ್ಕೆ ರಿಂಕು ಮಜುಮ್ದಾರ್.

ದಿಲೀಪ್ ಘೋಷ್ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಆಗಿ ರಾಜಕೀಯ ಸೇವೆಯಲ್ಲಿ ತೊಡಗಿಸಿಕೊಂಡ ನಾಯಕ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಕೀರ್ತಿ ದಿಲೀಪ್ ಘೋಷ್‌ಗೂ ಸಲ್ಲಲಿದೆ. ರಾಜಕೀಯವನ್ನೇ ಉಸಿರಾಸಿಗಿಸಿದ ದಿಲೀಪ್ ಘೋಷ್ ಮದುವೆ, ಸಂಸಾರದ ಕುರಿತು ಯೋಚನನೆ ಮಾಡಲೇ ಇಲ್ಲ. ಆದರೆ ಸ್ವೀಟ್ 60ಯಲ್ಲಿ ದಿಲೀಪ್ ಘೋಷ್‌ಗೂ ಲವ್ ಆಗಿದೆ. ಪ್ರೀತಿ ಹೆಮ್ಮರವಾಗಿದೆ. ಇದೀಗ ಮಜುವೆಯಾಗುತ್ತಿದ್ದಾರೆ.

ಸುಪ್ರಿಯಾ ಶ್ರೀನಾಥೆ, ದಿಲೀಪ್‌ ಘೋಷ್‌ಗೆ ಚುನಾವಣಾ ಆಯೋಗದಿಂದ ನೋಟಿಸ್‌!

ಪ್ರೀತಿ ಶುರುವಾಗಿದ್ದು ಹೇಗೆ? 
ನ್ಯೂಸ್18 ಬಾಂಗ್ಲಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ದಿಲೀಪ್ ಘೋಷ್ ಕೈಹಿಡಿಯುತ್ತಿರುವ ರಿಂಕು ಮಜುಮ್ದಾರ್ ಈ ಕುರಿತು ಮಾತನಾಡಿದ್ದಾರೆ. ರಿಂಕು ಮಜುಮ್ದಾರ್ 2013ರಿಂದ ಪಶ್ಚಿಮ ಬಂಗಾಳ ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತೆಯಾಗಿ, ಬ್ಲಾಕ್ ಲೆವಲ್‌ಗಳಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದಾರೆ. ಇತ್ತ ದಿಲೀಪ್ ಘೋಷ್ ಬಿಜೆಪಿಯ ಪ್ರಮುಖ ನಾಯಕನಾಗಿ ಬೆಳೆದಿದ್ದಾರೆ ಸಂಸದನಾಗಿರುವಾಗ, ಶಾಸಕನಾಗಿರುವಾಗ ದಿಲೀಪ್ ಘೋಷ್ ಹಾಗೂ ರಿಂಕು ಇಬ್ಬರಿಗೂ ಪರಸ್ಪರ ಪರಿಚಯ ಇರಲಿಲ್ಲ. ದಿಲೀಪ್ ಘೋಷ್ ಬಿಜೆಪಿಯ ನಾಯಕನಾಗಿ ರಿಂಕು ತಿಳಿದುಕೊಂಡಿದ್ದರು.

2021ರಲ್ಲಿ ಮೊದಲ ಭೇಟಿ, ಮಾತುಕತೆ
2021ರ ಚುನಾವಣೆಗೂ ಮೊದಲು ಪಶ್ಚಿಮ ಬಂಗಾಳದ ಬಿಜೆಪಿ ನಡೆಸಿದ ಕಾರ್ಯಕರ್ತರ ಸಭೆಯಲ್ಲಿ ದಿಲೀಪ್ ಘೋಷ್ ಹಾಗೂ ರಿಂಕು ಮಜುಮ್ದಾರ್ ಭೇಟಿಯಾಗಿದ್ದಾರೆ. ಮಾತನಾಡಿದ್ದಾರೆ. ಅಲ್ಲಿಗೆ ಮುಗೀತು. ಬಳಿಕ ಮಾತನಾಡಿದ್ದು 2024ರ ಲೋಕಸಭಾ ಚುನಾವಣೆಯಲ್ಲಿ. ಈ ವೇಳೆ ಸ್ವಲ್ಪ ಜಾಸ್ತಿ ಮಾತನಾಡಿದ್ದಾರೆ. ಈ ವೇಳೆ ರಾಜಕೀಯ, ಪಕ್ಷ ಬಿಟ್ಟು ಬೇರೇನು ಮಾತನಾಡಿಲ್ಲ. 

ಮೊದಲು ಪ್ರಪೋಸ್ ಮಾಡಿದ್ದು ಯಾರು?
ಲೋಕಸಭಾ ಚುನಾವಣೆ ಬಳಿಕ ಇವರ ಮಾತುಕತೆ ಹೆಚ್ಚಾಯಿತು. ಆತ್ಮೀಯರಾಗಿದ್ದಾರೆ. ಇದೇ ವೇಳೆ ರಿಂಕು ಮಜುಮ್ದಾರ್ ಮೊದಲು ಪ್ರಪೋಸ್ ಮಾಡಿದ್ದು ಯಾರು ಅನ್ನೋದು ಬಹಿರಂಗಪಡಿಸಿದ್ದಾರೆ. ರಿಂಕು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದ ಕಾರಣ ಮದುವೆಯಾಗಲು ಬಹುತೇಕರು ಹಿಂದೇಟು ಹಾಕಿದ್ದರು. ಮದುವೆಯಾದ ಬಳಿಕವೂ ತಾನು ರಾಜಕೀಯದಲ್ಲಿ ಮುಂದುವರಿಯುವ ಹಂಬಲ ವ್ಯಕ್ತಪಡಿಸಿದ್ದರು. ಹೀಗಾಗಿ ರಿಂಕು ಮದುವೆ ಸವಾಲಾಗಿತ್ತು. ಇದೇ ವೇಳೆ ತನ್ನ ರಾಜಕೀಯ ಗುರಿ ಎಲ್ಲವನ್ನು ನೋಡಿದರೆ ದಿಲೀಪ್ ಘೋಷ್ ಸರಿಯಾದ ವ್ಯಕ್ತಿ ಎಂದು ಥಟ್ಟನೆ ರಿಂಕು ತಲೆಗೆ ಹೊಳೆದಿದೆ. ಇತ್ತ ದಿಲೀಪ್ ಘೋಷ್ ಕೂಡ ಎಲಿಜಿಬಲ್ ಬ್ಯಾಚ್ಯುಲರ್. ಇದರ ಜೊತೆಗೆ ದಿಲೀಪ್ ಘೋಷ್ ಪ್ರಾಮಾಣಿಕತೆ, ನಾಯಕತ್ವ, ಮಾತುಗಾರಿಗೆ, ಜವಾಬ್ದಾರಿ ತೆಗೆದುಕೊಳ್ಳುವ ರೀತಿ ಇಷ್ಟವಾಗಿತ್ತು. ಹೀಗಿರುವಾಗ ಪ್ರಪೋಸ್ ಯಾಕೆ ಮಾಡಬಾರದು ಎಂದು ರಿಂಕ್ ಹೇಳಿದ್ದಾರೆ.

ಕಳೆದ ಚನಾವಣೆಯಲ್ಲಿ ದಿಲೀಪ್ ಘೋಷ್ ಸೋಲು ಕಂಡಿದ್ದರು. ಇತ್ತ ರಾಜ್ಯಾಧ್ಯಕ್ಷ ಅವಧಿಯೂ ಮುಗಿದಿತ್ತು. ಹೀಗಾಗಿ ಅವರ ಜೊತೆ ಹೆಚ್ಚು ಭೇಟಿಯಾಗಲು ಅವಕಾಶ ಸಿಕ್ಕಿತ್ತು. ಸೋಲು, ಪದವಿ ಇಲ್ಲದಾಗ ಯಾರು ಇರುವುದಿಲ್ಲ. ಹೀಗಾಗಿ ಅವರ ಜೊತೆ ಅತ್ಮೀಯನಾದೆ ಎಂದು ರಿಂಕು ಮಜುಮ್ದಾರ್ ಹೇಳಿದ್ದಾರೆ. ಇದೀಗ ಇವರ ಪ್ರೀತಿ ಮದುವೆಯ ಅರ್ಥ ಪಡೆಯುತ್ತಿದೆ.

ಪ. ಬಂಗಾಳದಲ್ಲಿ ಮತ್ತೆ ಹಿಂಸಾಚಾರ: ಬಿಜೆಪಿ ಸಂಸದನ ಮೇಲೆ ದಾಳಿ, ಪೊಲೀಸರಿಗೂ ಥಳಿತ!