Asianet Suvarna News Asianet Suvarna News

ಪ. ಬಂಗಾಳದಲ್ಲಿ ಮತ್ತೆ ಹಿಂಸಾಚಾರ: ಬಿಜೆಪಿ ಸಂಸದನ ಮೇಲೆ ದಾಳಿ, ಪೊಲೀಸರಿಗೂ ಥಳಿತ!

* ಭವಾನಿಪುರ ಕ್ಷೇತ್ರದ ಉಪ ಚುನಾವಣೆಗೆ ಕ್ಷಣಗಣನೆ

* ಚುನಾವಣೆಗೂ ಮುನ್ನ ಮತ್ತೆ ಭುಗಿಲೆದ್ದ ಹಿಂಸಾಚಾರ

* ಬಿಜೆಪಿ ಸಂಸದನ ಮೇಲೆ ದಾಳಿ, ಪೊಲೀಸರಿಗೂ ಥಳಿತ

Bhabanipur bypoll Ruckus during BJP campaign Dilip Ghosh security men pull out guns pod
Author
Bangalore, First Published Sep 27, 2021, 4:21 PM IST

ಕೋಲ್ಕತ್ತಾ(ಸೆ.27): ಭವಾನಿಪುರ(Bhabanipur) ವಿಧಾನಸಭಾ ಉಪಚುನಾವಣೆಯ(Bypoll) ಪ್ರಚಾರಕ್ಕಾಗಿ ಆಗಮಿಸಿದ ಬಿಜೆಪಿ ಸಂಸದ ದಿಲೀಪ್ ಘೋಷ್(Dilip Ghosh) ಅವರ ಮೇಲೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳು ಪೊಲೀಸರನ್ನೂ ಥಳಿಸಿದ್ದಾರೆ. ದಿಲೀಪ್ ಘೋಷ್ ಅವರ ಭದ್ರತಾ ಸಿಬ್ಬಂದಿ ರಿವಾಲ್ವರ್ ತೋರಿಸಿ ಅವರ ಜೀವ ಉಳಿಸಿದ್ದಾರೆ. ಸೆಪ್ಟೆಂಬರ್ 30 ರಂದು ಭವಾನಿಪುರದಲ್ಲಿ ಮತದಾನ ನಡೆಯಲಿದೆ ಎಂಬುವುದು ಉಲ್ಲೇಖನೀಯ. ಇನ್ನು ಇಂದು, ಸೋಮವಾರ ಚುನಾವಣಾ ಪ್ರಚಾರ ನಡೆಸಲು ಕೊನೆಯ ದಿನವಾಗಿದೆ. ಇನ್ನು ಈ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ(Mamata Banerjee) ಗೆಲುವು ಬಹಳ ಮುಖ್ಯವಾಗಿದೆ, ಅವರು ಸೋತರೆ, ಅವರು ಮುಖ್ಯಮಂತ್ರಿ ಸ್ಥಾನವನ್ನು ತೊರೆಯಬೇಕಾಗುತ್ತದೆ.

ಜೀವ ಉಳಿಸಲು ಓಡಿ ಬಂದ ಸಂಸದ ದಿಲೀಪ್ ಘೋಷ್ 

ಭವಾನಿಪುರ ವಿಧಾನಸಭೆಗೆ ಉಪಚುನಾವಣೆಯಲ್ಲಿ ಟಿಎಂಸಿಯಿಂದ(TMC) ಮಮತಾ ಬ್ಯಾನರ್ಜಿ ಸ್ಪರ್ಧಿಸುತ್ತಿದ್ದಾರೆ. ಅವರ ವಿರುದ್ಧ ಬಿಜೆಪಿ ಪ್ರಿಯಾಂಕಾ ಟಿಬ್ರೆವಾಲ್‌ರನ್ನು ಕಣಕ್ಕಿಳಿಸಿದೆ. ಪ್ರಿಯಾಂಕಾ ಪರವಾಗಿ ಪ್ರಚಾರ ಮಾಡಲು ದಿಲೀಪ್ ಘೋಷ್ ಭವಾನಿಪುರಕ್ಕೆ ಬಂದಿದ್ದರು, ಈ ಸಮಯದಲ್ಲಿ ಟಿಎಂಸಿ ಕಾರ್ಯಕರ್ತರು ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಪ್ರೇಕ್ಷಕರು ಕೋಪಗೊಳ್ಳುವುದನ್ನು ನೋಡಿ ಘೋಷ್ ಭದ್ರತಾ ಸಿಬ್ಬಂದಿ ರಿವಾಲ್ವರ್ ತೋರಿಸಿ, ಬಳಿಕ ಅವರನ್ನು ಸುರಕ್ಷಿತವಾಗಿ ಅಲ್ಲಿಂದ ಸ್ಥಳಾಂತರಿಸಿದ್ದಾರೆ.

ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಹಠದಲ್ಲಿ ಮಮತಾ

ಈ ಘಟನೆಗೆ ಸಂಬಂಧಿಸಿದಂತೆ ರಾಜಕೀಯ ವಲಯದಲ್ಲಿ ಭಾರೀ ಸಂಚನ ಸೃಷ್ಟಿಯಾಗಿದೆ. ನಂದಿಗ್ರಾಮದಿಂದ ಮಮತಾ ಬ್ಯಾನರ್ಜಿಯನ್ನು(mamata Banerjee) ಸೋಲಿಸಿದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಈ ಬಗ್ಗೆ ಮಾತನಾಡುತ್ತಾ ಇಲ್ಲಿನ ಪರಿಸ್ಥಿತಿ ತುಂಬಾ ಸೂಕ್ಷ್ಮವಾಗಿದೆ. ಚುನಾವಣಾ ಆಯೋಗ ಏನನ್ನೂ ಮಾಡುತ್ತಿಲ್ಲ. ಚುನಾವಣಾ ಆಯೋಗ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲಿ ಪ್ರಜಾಪ್ರಭುತ್ವದಂತೆ ಚುನಾವಣೆಗೆ ಯಾವುದೇ ವಾತಾವರಣವಿಲ್ಲ ಎಂದಿದ್ದಾರೆ.

ಕೂಡ ಪೊಲೀಸರಿಗೆ ಥಳಿಸಿದ ಮಮತಾ 'ಬೆಂಬಲಿಗರು'

ಘಟನೆಯ ವಿಡಿಯೋವನ್ನು ದಿಲೀಪ್ ಘೋಷ್ ಟ್ವೀಟ್ ಮಾಡಿದ್ದು, ಮಮತಾ ಸಹೋದರರು ಭವಾನಿಪುರದಲ್ಲಿ ಪೊಲೀಸರನ್ನು ಥಳಿಸಿದ್ದಾರೆ. ಎಲ್ಲಿ ಪೊಲೀಸರು, ಸಾರ್ವಜನಿಕ ಪ್ರತಿನಿಧಿಗಳ ಮೇಲೆ ದಾಳಿ ಮಾಡಲಾಗುತ್ತಿದೆ, ಅಲ್ಲಿ ಸಾಮಾನ್ಯ ಜನರ ಸ್ಥಿತಿ ಏನು? ಇದು ಮತ ಚಲಾಯಿಸಲು ಬರದಂತೆ ಜನರನ್ನು ಬೆದರಿಸುವ ರೂಪವಲ್ಲದೆ ಬೇರೇನೂ ಅಲ್ಲ ಎಂದು ಬರೆದಿದ್ದಾರೆ.

ಈ ಬಗ್ಗೆ ಮತ್ತೊಂದು ಟ್ವಿಟ್ ಮಾಡಿರುವ ಸಂಸದ ದಿಲೀಪ್ ಘೋಷ್ ಯಾವಾಗ ಮುಖ್ಯಮಂತ್ರಿಗಳ ತವರು ಪ್ರದೇಶವಾದ ಭವಾನಿಪುರದಲ್ಲಿ ಸಾರ್ವಜನಿಕ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಯುತ್ತದೆಯೋ, ಆಗ ಈ ರಾಜ್ಯದಲ್ಲಿ ಸಾಮಾನ್ಯ ಮನುಷ್ಯನ ಜೀವನ ಎಷ್ಟು ಸುರಕ್ಷಿತವಾಗಿರಬಹುದು? ಎಂದೂ ಪ್ರಶ್ನಿಸಿದ್ದಾರೆ.

Follow Us:
Download App:
  • android
  • ios