ನವದೆಹಲಿ(ಎ.05): ಚತ್ತೀಸಘಡದಲ್ಲಿ ಯೋಧರ ಮೇಲಿನ ಅತೀ ಭೀಕರ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ದೇಶದಲ್ಲಿ ಗೌರವ ನಮನ ಸಲ್ಲಿಸಲಾಗುತ್ತಿದೆ. ಜೊತೆ ಜೊತೆಗೆ ನಕ್ಸಲರು, ಮಾವೋವಾದಿಗಳ ವಿರುದ್ಧ ಆಕ್ರೋಶ ಕೂಡ ಹೆಚ್ಚಾಗುತ್ತಿದೆ. ಚತ್ತೀಸಘಡದಲ್ಲಿ ನಡೆದ ಕಾರ್ಯಚರಣೆ ವೇಳೆ 22 ಯೋಧರು ಹುತಾತ್ಮರಾಗಿದ್ದಾರೆ. ಇದರಲ್ಲಿ ಸಿಆರ್‌ಪಿಎಫ್ ಯೋಧರ ರಾಕೇಶ್ವರ್ ಸಿಂಗ್ ಮನ್ಹಾಸ್ ಮಾವೋವಾದಿಗಳು ಹಿಡಿದಿಟ್ಟುಕೊಂಡಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿದೆ.

22 ಯೋಧರು ಹುತಾತ್ಮ, 30 ಮಂದಿ ನಾಪತ್ತೆ; ಚತ್ತೀಸ್‌ಘಡದಲ್ಲಿ ಅತೀ ಭೀಕರ ನಕ್ಸಲ್ ದಾಳಿ!.

ಕಾರ್ಯಚರಣೆ ಬಳಿಕ ಜಮ್ಮ ಕಾಶ್ಮೀರ ಮೂಲದ ರಾಕೇಶ್ವರ್ ಸಿಂಗ್ ಮನ್ಹಾಸ್ ನಾಪತ್ತೆಯಾಗಿದ್ದಾರೆ. ಇದೀಗ ಚತ್ತೀಸಘಡದ ಸ್ಥಳೀಯ ವರದಿಗಾರನಿಂಗ ಅಪರಿಚಿತ ಕರೆಯೊಂದು ಬಂದಿದೆ. ಈ ವೇಳೆ ಭಾರತೀಯ ಯೋಧನೋರ್ವನನ್ನು ಹಿಡಿದಿಟ್ಟುಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ. ಯೋಧ ಸುರಕ್ಷಿತ, ಆದರೆ ನಮ್ಮ ಸೆರೆಯಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ನಕ್ಸಲ್ ದಾಳಿಗೆ ಹುತಾತ್ಮರಾದ ಯೋಧರಿಗೆ ಕೊಹ್ಲಿ ಸೇರಿ ಕ್ರಿಕೆಟಿಗರ ಸಂತಾಪ!.

ವರದಿಗಾರ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಅಪರಿಚಿತ ಕರೆಯಲ್ಲಿ ಒತ್ತೆಯಾಳು ಯೋಧನ ಬಿಡುಗಡೆಗೆ ಯಾವುದೇ ಬೇಡಿಕೆ ಇಟ್ಟಿಲ್ಲ. ಹೀಗಾಗಿ ಈ ಕರೆ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇತ್ತ ಸಿಆರ್‌ಪಿಎಫ್ ಅಧಿಕಾರಿಗಳು ರಾಕೇಶ್ವರ್ ಸಿಂಗ್ ಮನ್ಹಾಸ್ ಮನೆಗೆ ಭೇಟಿ ನೀಡಿದ್ದಾರೆ.

ಈ ವೇಳೆ ಚತ್ತೀಸಘಡದ ವರದಿಗಾನ ಜೊತೆ ಫೋನ್ ಮೂಲಕ ಮಾತನಾಡಿದ ರಾಕೇಶ್ವರ್ ಸಿಂಗ್ ಪತ್ನಿ ಮೀನಾ ಮನ್ಹಾಸ್, ಪತಿ ಕುರಿತು ಮಾಹಿತಿಗಳನ್ನು ಪಡೆದಿದ್ದಾರೆ. ಇದೇ ವೇಳೆ ವರದಿಗಾರ ಪತಿಯ ಬಿಡುಗಡೆಗೆ ಮನವಿ ಮಾಡುವ ವಿಡಿಯೋವೊಂದನ್ನು ಕಳುಹಿಸುವಂತೆ ಹೇಳಿದ್ದಾರೆ. ಈ ವಿಡಿಯೋವನ್ನು ಕರೆ ಬಂದ ನಂಬರ್‌ಗೆ ಕಳುಹಿಸುವುದಾಗಿ ಹೇಳಿದ್ದಾನೆ.

ನಕ್ಸಲರ ಟಾಪ್ ಕಮಾಂಡರ್ ಹಿಡ್ಮಾ, 24 ಯೋಧರು ಹುತಾತ್ಮರಾಗಲು ಈತನೇ ಕಾರಣ!

ಇದೇ ವೇಳೆ ಪತ್ನಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ್ದಾರೆ. ಪಾಕಿಸ್ತಾನದಿಂದ ಅಭಿನಂದನ್ ವರ್ಧಮಾನ್‌ನನ್ನು ಮುಕ್ತ ಮಾಡಿದ್ದೀರಿ. ಇದೀಗ ನನ್ನ ಪತಿಯನ್ನು ನಕ್ಸಲರ ಬಂಧನದಿಂದ ಮುಕ್ತಗೊಳಿಸಿ, ಸುರಕ್ಷಿತವಾಗಿ ಮನೆ ಸೇರಿಸಿ ಎಂದು ಮೋದಿಗೆ ಮನವಿ ಮಾಡಿದ್ದಾರೆ. ಇದೇ ವೇಳೆ ರಾಕೇಶ್ವರ್ ಸಿಂಗ್ ಪುತ್ರಿ ಕೂಡ ತಂದೆಯನ್ನು ಸುರಕ್ಷಿತವಾಗಿ ಬಿಡಿಸಿಕೊಡಿ ಎಂದು ಮನವಿ ಮಾಡಿದ್ದಾರೆ