ನಕ್ಸಲರ ಟಾಪ್ ಕಮಾಂಡರ್ ಹಿಡ್ಮಾ, 24 ಯೋಧರು ಹುತಾತ್ಮರಾಗಲು ಈತನೇ ಕಾರಣ!
ದೇಶದಲ್ಲೇ ಅತಿ ಹೆಚ್ಚು ನಕ್ಸಲ್ ಪೀಡಿತವಾಗಿರುವ ಛತ್ತೀಸ್‌ಗಢದ ಸುಕ್ಮಾ ಹಾಗೂ ಬಿಜಾಪುರ ಜಿಲ್ಲೆಯ ಗಡಿಯಲ್ಲಿ ಶನಿವಾರ ಭದ್ರತಾ ಪಡೆ ಹಾಗೂ ನಕ್ಸಲರು ನಡುವಿನ ಹೋರಾಟದಲ್ಲಿ 24 ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೇ ಇನ್ನೂ ಅನೇಕ ಯೋಧರು ನಾಪತ್ತೆಯಾಗಿದ್ದಾರೆ. ಈ ದಾಳಿಯ ರೂವಾರಿ ಕುಖ್ಯಾತ ನಕ್ಸಲ್ ಕಮಾಂಡರ್ ಹಿಡ್ಮಾ ಕೈವಾಡ ಇದೆ ಎನ್ನಲಾಗಿದೆ. ಈತನೇ ಈ ಇಡೀ ಷಡ್ಯಂತ್ರ ಹೆಣೆದಿದ್ದೆನ್ನಲಾಗಿದೆ. ಈತ ದಾಳಿ ವೇಳೆ ಸುಮಾರು 250 ನಕ್ಸಲರ ತಂಡವನ್ನು ಮುನ್ನಡೆಸುತ್ತಿದ್ದನೆಂದೂ ಹೇಳಲಾಗಿದೆ. ಅಷ್ಟಕ್ಕೂ ಈ ಹಿಡ್ಮಾ ಯಾರು? ಇಲ್ಲಿದೆ ವಿವರ
ಹಿಡ್ಮಾನಿಗಿದೆ ಅನೇಕ ಹೆಸರು: ವಾಸ್ತವವಾಗಿ ಈ ನಕ್ಸಲ್ ಕಮಾಂಡರ್‌ನ ಪೂರ್ಣ ಹೆಸರು ಮಾಡವಿ ಹಿಡ್ಮಾಆ. ಈತನನ್ನು ಸಂತೋಷ್, ಇಂದ್‌ಮುಲ್, ಪೋಡಿಯಾಮ್ ಭೀಮಾ ಹೀಗೆ ಅನೇಕ ಹೆಸರಿನಿಂದ ಕರೆಯಲಾಗುತ್ತದೆ. ಈತ ಕಳೆದ ಹದಿಮೂರು ವರ್ಷದಿಂದ ಅನೇಕ ದಾಳಿಯಲ್ಲಿ ಭಾಗಿಯಾಗಿ, ಅನೇಕ ಹತ್ಯೆಗಳನ್ನು ಮಾಡಿದ್ದಾನೆ. ಪೊಲೀಸ್ ಪಡೆ ಈತನನ್ನು ಹಿಡಿದು ಕೊಟ್ಟವರಿಗೆ ಇಪ್ಪತ್ತೈದು ಲಕ್ಷ ನೀಡುವುದಾಘಿ ಘೋಷಿಸಿದ್ದಾರೆ. ಈತನ ಹೆಸರು ಛತ್ತೀಸ್‌ಗಢದ ನಕ್ಸಲರಲ್ಲಿ ಟಾಪ್ ಕಮಾಂಡ್ ಪಟ್ಟಿಯಲ್ಲಿದೆ.
ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದೆ ಈತನ ತಂಡ: ಸುಕ್ಮಾ ಹಾಗೂ ಬಿಜಾಪುರ ಹಿಡ್ಮಾನ ಪ್ರದೇಶ. ಹೀಗಾಗಿ ಇಲ್ಲಿ ನಡೆಯುವ ಎಲ್ಲಾ ನಕ್ಸಲ್ ಚಟುವಟಿಕೆಗಳ ಹಿಂದೆ ಆತನ ಕೈವಾಡವಿರುತ್ತದೆ. ಈ ಪ್ರದೇಶದಲ್ಲಿ ಈವರೆಗೆ ಎಷ್ಟು ದಾಳಿಯಾಗಿವೆಯೋ ಅವೆಲ್ಲದರ ಹಿಂದೆ ಹಿಡ್ಮಾ ಕೈವಾಡವಿದೆ. ಛತ್ತೀಸ್‌ಗಢ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಓಡಾಡಿಕೊಂಡಿರುವ ಈತನ ಬಳಿ ಎಲ್ಲಾ ರೀತಿಯ ಆಧುನಿಕ ಆಯುಧಗಳಿವೆ. ಈತನ ತಂಡದ ಬಳಿ ಯುಬಿಜಿಎಲ್, ರಾಕೆಟ್ ಲಾಂಚರ್, ಎಕೆ 47ನಂತಹ ಆಯುಧಗಳಿವೆ.
ಇಪ್ಪತ್ತು ವರ್ಷದಿಂದ ಶಾಲೆ ತೆರೆದಿಲ್ಲ: ಹಿಡ್ಮಾ ಸುಕ್ಮಾ ಜಿಲ್ಲೆಯ ಪುವರ್ತಿ ಎಂಬ ಹಳ್ಳಿಯಲ್ಲಿ ಜನಿಸಿದ್ದು. ಈ ಹಳ್ಳಿ ಗುಡ್ಡಗಾಡು ಪ್ರದೇಶ ಹಾಗೂ ದಟ್ಟಾರಣ್ಯದ ನಡುವೆ ಇದೆ. ಈ ಹಳ್ಳಿಗೆ ತಲುಪಲು ಪೊಲೀಸರು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ ಈವರೆಗೂ ಯಶಸ್ವಿಯಾಗಿಲ್ಲ. ಇನ್ನು ಹಿಡ್ಮಾ ಜನಿಸಿದ ಹಳ್ಳಿಯಲ್ಲಿ ಸುಮಾರು ಇಪ್ಪತ್ತು ವರ್ಷದಿಂದ ಒಂದೇ ಒಂದು ಶಾಲೆ ತೆರೆದಿಲ್ಲ ಎನ್ನಲಾಘಿದೆ. ಇಲ್ಲಿ ಯಾವೊಬ್ಬ ಶಿಕ್ಷಕ ಹೋಗಲು ತಯಾರಿಲ್ಲ. ಆಸುಪಾಸಿನ ಹಳ್ಳಿಗಳಲ್ಲೂ ಹಿಡ್ಮಾ ಆದೇಶವೇ ಪಾಲಿಸಲಾಗುತ್ತದೆ.
ಕಲಿತದ್ದು ಹತ್ತನೇ ತರಗತಿಯಾದರೂ ಇಂಗ್ಲೀಷ್ ನಿರರ್ಗಳವಾಗಿ ಮಾತನಾಡುತ್ತಾನೆ: ಹಿಡ್ಮಾನಿಗೆ ಸುಮಾರು ನಲ್ವತ್ತು ವರ್ಷ ವಯಸ್ಸಾಗಿರಬಹುದೆನ್ನಲಾಗಿದೆ. ಆತನಿದ್ದ ಪ್ರದೇಶದಲ್ಲಿ ನಕ್ಸಲರ ಹತೋಟಿ ಹಾಗೂ ಮಾವೋವಾದಿಗಳ ಅಧಿಕಾರ ನಡೆಯುತ್ತಿದ್ದಾಗ ಹಿಡ್ಮಾ ಹುಟ್ಟಿ ಬೆಳೆದಿದ್ದಾನೆನ್ನಲಾಗಿದೆ. ಹತ್ತನೇ ತರಗತಿವರೆಗೂ ಓದಿರುವ ಹಿಡ್ಮಾ ಆಂಗ್ಲ ಭಾಷೆಯನ್ನು ನಿರರ್ಗಳವಾಗಿ ಮಾತನಾಡಬಲ್ಲ. ಓದಿನಲ್ಲಿ ಆಸಕ್ತಿಯೂ ಈತನಿಗಿತ್ತೆನ್ನಲಾಗಿದೆ. ಸ್ಮಾರ್ಟ್ ಫೋನ್ ಬಳಸುವ ಹಿಡ್ಮಾ ತಾನೆಲ್ಲೇ ಹೋದರೂ ನೋಟ್ ಪುಸ್ತಕವೊಂದನ್ನು ಕೊಂಡೊಯ್ಯುತ್ತಾನೆ. ಇದರಲ್ಲಾತ ತನ್ನ ಇಡೀ ಚಟುವಟಿಕೆಗಳ ಬಗ್ಗೆ ಬರೆದಿಡುತ್ತಾನೆ.
ಕಳೆದ ವರ್ಷ ಮಾರ್ಚ್‌ನಲ್ಲಿ ಹಿಡ್ಮಾ ಸುಕ್ಮಾಆ ಪ್ರದೇಶದಲ್ಲಿ ನಡೆಸಿದ್ದ ದಾಳಿಯಲ್ಲಿ ಹದಿನೇಳು ಯೀಧರನ್ನು ಬಲಿ ಪಡೆದಿದ್ದ. ಅಲ್ಲದೇ 2019ರಲ್ಲಿ ಬಿಜೆಪಿ ನಾಯಕ ಭೀಮಾ ಮಾಧವಿ, ಅವರ ಚಾಲಕ ಹಾಗೂ ಮೂವರು ಅಂಗ ರಕ್ಷಕರನ್ನು ನಕ್ಸಲರು ಹತ್ಯೆಗೈದಿದ್ದರು.