ನಕ್ಸಲ್ ದಾಳಿಗೆ ಹುತಾತ್ಮರಾದ ಯೋಧರಿಗೆ ಕೊಹ್ಲಿ ಸೇರಿ ಕ್ರಿಕೆಟಿಗರ ಸಂತಾಪ!

ಚತ್ತೀಸಘಡದ ಬಿಜಾಪುರದಲ್ಲಿ ನಡೆದ ಅತೀ ಭೀಕರ ನಕ್ಸಲ್ ದಾಳಿಗೆ 22 ಯೋಧರು ಹುತಾತ್ಮಾರಾಗಿದ್ದಾರೆ. ಘಟನೆ ಕುರಿತು ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಹುತಾತ್ಮರಾದ ಗಣ್ಯರಿಗೆ ಪ್ರಧಾನಿ ಮೋದಿ ಸೇರಿದಂತೆ ಇಡೀ ದೇಶವೇ ನಮನ ಸಲ್ಲಿಸಿದೆ. ಇದೀಗ ವಿರಾಟ್ ಕೊಹ್ಲಿ ಸೇರಿದಂತೆ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.

Jawans Martyred in Chhatisgarh virat kohli to Virender sehwag cricketers Pays Tribute ckm

ನವದೆಹಲಿ(ಎ.04): ಪುಲ್ವಾಮಾ ದಾಳಿ ಬಳಿಕ ಭಾರತದಲ್ಲಿ ನಡೆದ ಅತೀ ದೊಡ್ಡ ದಾಳಿ ಇದಾಗಿದೆ. ಚತ್ತೀಸಘಡದ ಸುಕ್ಮ-ಬಿಜಾಪುರ್ ಅರಣ್ಯ ಪ್ರದೇಶದಲ್ಲಿ ಭಾರತೀಯ ಯೋಧರು ಹಾಗೂ ನಕ್ಸಲರ ನಡುವಿನ ಗುಂಡಿನ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದಾರೆ. 30 ಯೋಧರು ನಾಪತ್ತೆಯಾಗಿದ್ದಾರೆ. ನಕ್ಸಲ್ ನಿಗ್ರಹ ಪಡೆ ಹಾಗೂ ಸಿಆರ್‌ಪಿಎಫ್ ಜಂಟಿಯಾಗಿ ಕಾರ್ಯಚರಣೆ ನಡೆಸಿದ ವೇಳೆ ಈ ಘಟನೆ ನಡೆದಿದೆ.

22 ಯೋಧರು ಹುತಾತ್ಮ, 30 ಮಂದಿ ನಾಪತ್ತೆ; ಚತ್ತೀಸ್‌ಘಡದಲ್ಲಿ ಅತೀ ಭೀಕರ ನಕ್ಸಲ್ ದಾಳಿ!.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇಡೀ ದೇಶವೇ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿದೆ. ಸುಕ್ಮಾ-ಬಿಜಾಪುರ್ ಅರಣ್ಯ ಪ್ರದೇಶದಲ್ಲಿ ನಕ್ಸಲರು ಅಡಗಿದ್ದಾರೆ ಅನ್ನೋ ಮಾಹಿತಿ ಪಡೆದ ನಕ್ಸಲ್ ನಿಗ್ರಹ ಪಡೆ, ಸಿಆರ್‌ಪಿಎಫ್ ಜೊತೆ ಕಾರ್ಯಚರಣೆ ನಡೆಸಿತ್ತು. ನಕ್ಸಲ್ ಅಡಗುತಾಣದೆ ಮೇಲೆ ದಾಳಿ ಮಾಡಿದ ಯೋಧರಿಗೆ ನಕ್ಸಲರು ಪ್ರತಿ ದಾಳಿ ನಡೆಸಿದ್ದಾರೆ. ಸುಮಾರು 500ಕ್ಕೂ ಹೆಚ್ಚು ನಕ್ಸಲ್ ಏಕಾಏಕಿ ದಾಳಿ ಮಾಡಿದ್ದಾರೆ. ಇದೀಗ ಈ ದಾಳಿಯಲ್ಲಿ ಹುತಾತ್ಮ ಯೋಧರಿಗೆ ಟೀಂ ಇಂಡಿಯಾ ವಿರಾಟ್ ಕೊಹ್ಲಿ, ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸೇರಿದಂತೆ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.

 

Absolutely tragic to hear about the loss of lives of our brave jawans. My condolences to the bereaved families. 🙏

— Virat Kohli (@imVkohli) April 4, 2021

Heart breaking to hear the news of loss of 22 security personnel and injuries to many in the #NaxalAttack in Sukma in Chhattisgarh. Nation is indebted to the jawans who laid down their lives. Naman to the martyrs.

— Virender Sehwag (@virendersehwag) April 4, 2021

Nation bows down to the sacrifice of our bravehearts. Enemy within is as barbaric as enemy outside. Won’t let this sacrifice go in vain. #NaxalAttack

— Gautam Gambhir (@GautamGambhir) April 4, 2021
Latest Videos
Follow Us:
Download App:
  • android
  • ios