ಕೃಷ್ಣನ ವಿಶ್ವರೂಪದ ಕನಸಿನ ಲೈವ್‌ ವಿಡಿಯೋ ಹಂಚಿಕೊಂಡ ತೇಜ್‌ಪ್ರತಾಪ್‌, 'ಇದಕ್ಕೆ ಆಸ್ಕರ್‌ ಕೂಡ ಕಮ್ಮಿನೇ..' ಎಂದ ಜನ!

ಕೆಲ ದಿನಗಳ ಹಿಂದೆ ಮುಲಾಯಂ ಸಿಂಗ್‌ ಯಾದವ್‌ ಕನಸಿನಲ್ಲಿ ಬಂದಿದ್ದು ಎನ್ನುವ ಕಾರಣಕ್ಕೆ ತಮ್ಮ ಕಚೇರಿಗೆ ಸೈಕಲ್‌ನಲ್ಲಿ ಹೋಗಿದ್ದ ಬಿಹಾರದ ಸಚಿವ ತೇಜ್‌ಪ್ರತಾಪ್‌ ಯಾದವ್‌, ಈಗ ತಮ್ಮ ಕನಸಿನಲ್ಲಿ ಭಗವಾನ್‌ ಶ್ರೀಕೃಷ್ಣನ ಸರ್ವರೂಪ ದರ್ಶನವಾಗಿರುವ ಲೈವ್‌ ವಿಡಿಯೋ ಹಂಚಿಕೊಂಡಿದ್ದಾರೆ. ಜನ ಮಾತ್ರ ಟಿಕ್‌ ಟಾಕ್‌ ವಿಡಿಯೋ ಮಾಡೋ ವ್ಯಕ್ತಿನಾ ಸಚಿವನ ಮಾಡಿದ್ದಕ್ಕೆ ತಲೆಕೆಡಿಸಿಕೊಂಡಿದ್ದಾರೆ.
 

Bihar Minister Tej Pratap Sarvaroopa of Shri Krishna shared live video of dream san

ಪಾಟ್ನಾ (ಮಾ.23): ತಮ್ಮ ವಿಶಿಷ್ಟ ಮ್ಯಾನರಿಸಂ ಕಾರಣದಿಂದಾಗಿ ಬಿಹಾರ ಮೈತ್ರಿ ಸರ್ಕಾರದಲ್ಲಿ ಪರಿಸರ ಹಾಗೂ ಅರಣ್ಯ ಖಾತೆ ಸಚಿವ ಹಾಗೂ ಲಾಲೂ ಪ್ರಸಾದ್‌ ಯಾದವ್‌ ಅವರ ಹಿರಿಯ ಪುತ್ರ ತೇಜ್‌ಪ್ರತಾಪ್‌ ಯಾದವ್‌ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ತಮ್ಮ ಕನಸಿನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಬಂದಿದ್ದರು ಎನ್ನುವ ಕಾರಣಕ್ಕೆ ತಮ್ಮ ಕಚೇರಿಗೆ ಸೈಕಲ್‌ ತುಳಿದುಕೊಂಡು ಹೋಗುವ ಮೂಲಕ ತೇಜ್‌ಪ್ರತಾಪ್‌ ಯಾದವ್‌ ಸುದ್ದಿಯಾಗಿದ್ದರು. ಈಗ ತೇಜ್‌ ಪ್ರತಾಪ್‌ ಯಾದವ್‌ ಮತ್ತೊಂದು ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದರಲ್ಲಿ ತಮಗೆ ಬಿದ್ದ ಕನಸಿನ ಲೈವ್‌ ವಿಡಿಯೋವನ್ನು ಜನರಿಗೆ ತೋರಿಸಿದ್ದಾರೆ. ಈ ವಿಡಿಯೋದಲ್ಲಿ ನಿದ್ರೆ ಮಾಡುತ್ತಿರುವ ತೇಜ್‌ಪ್ರತಾಪ್‌ ಯಾದವ್‌ ತಮ್ಮ ಕನಸಿನಲ್ಲಿ ಮಹಾಭಾರತ ಯುದ್ಧದದ ಸಮಯದಲ್ಲಿ ಭಗವಾನ್ ಕೃಷ್ಣ ತೋರಿದ್ದ ಸರ್ವರೂಪವನ್ನು ನೋಡಿದ್ದಾರೆ. ಕನಸಿನಲ್ಲಿ ಕೃಷ್ಣನ ಮಹಾಸ್ವರೂಪವನ್ನು ಕಂಡು ತೇಜ್‌ಪ್ರತಾಪ್‌ ಬೆಚ್ಚಿಬಿದ್ದಿದ್ದಾರೆ.

ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ತೇಜ್ ಪ್ರತಾಪ್,  'ವಿಶ್ವರೂಪ ದರ್ಶನ ಯೋಗವು ಕಿರೀಟದಿಂದ ಅಲಂಕೃತವಾದ ತಟ್ಟೆಯಿಂದ ಮತ್ತು ಗದೆಯಿಂದ ಕೂಡಿದ ಆಯುಧಗಳನ್ನು ಹೊಂದಿರುವ ಪ್ರಕಾಶಮಾನ ಪ್ರಪಂಚವಾಗಿ ನಾನು ನಿನ್ನ ರೂಪವನ್ನು ಎಲ್ಲೆಡೆ ನೋಡುತ್ತೇನೆ. ಎಲ್ಲಾ ದಿಕ್ಕುಗಳಿಂದ ಹೊರಹೊಮ್ಮುವ ಸೂರ್ಯನ ಬೆಳಕಿನಂತೆ ಹೊಳೆಯುವ ಈ ಬೆಂಕಿಯಲ್ಲಿ ನಿನ್ನ ಮಹಿಮೆಯನ್ನು ನೋಡುವುದು ಕಷ್ಟ' ಎಂದು ಬರೆದುಕೊಂಡಿದ್ದಾರೆ.

ಆಸ್ಕರ್‌ ಕೂಡ ಕಮ್ಮಿನೇ ಎಂದ ಜನ: ಈ ವಿಡಿಯೋ ಟ್ವೀಟ್‌ ಮಾಡಿದ ಬೆನ್ನಲ್ಲಿಯೇ ಅಂದಾಜು 7 ಕೋಟಿ ವೀವ್ಸ್‌ಗಳು ಬಂದಿವೆ. 1 ಸಾವಿರ ಮಂದಿ ರೀಟ್ವೀಟ್‌ ಮಾಡಿದ್ದು, 771 ಮಂದಿ ಕೋಟ್‌ ಟ್ವೀಟ್‌ ಮಾಡಿದ್ದಾರೆ. ಅಂದಾಜು 7 ಸಾವಿರ ಮಂದಿ ಲೈಕ್‌ ಒತ್ತಿದ್ದಾರೆ.

'ನೀವು ಮಾಡಿರೋ ಅಕ್ಟಿಂಗ್‌ಗೆ ಆಸ್ಕರ್‌ ಕೂಡ ಕಮ್ಮಿನೇ..' ಎಂದು ಒಬ್ಬ ವ್ಯಕ್ತಿ ಟ್ವೀಟ್‌ ಮಾಡಿದ್ದರೆ, ನೀವ್ಯಾಕೆ ಟಿಕ್‌ ಟಾಕ್‌ನಲ್ಲಿ ಟ್ರೈ ಮಾಡಬಾರದು ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ. 'ಪ್ರಭು ಶ್ರೀಕೃಷ್ಣ, ಈವರೆಗೂ ಅರ್ಜುನ, ಭೀಷ್ಮ, ವಿದುರ ಹಾಗೂ ಸಂಜಯನಿಗೆ ಮಾತ್ರವೇ ನೀವು ಕಾಣಿಸಿಕೊಳ್ತಾ ಇದ್ರಿ. ಈಗ ತೇಜ್‌ಪ್ರತಾಪ್‌ ಅವರಿಗೂ ಕಾಣಿಸಿಕೊಳ್ಳುತ್ತಿದ್ದೀರಿ. ಧನ್ಯ' ಎಂದು ಇನ್ನೊಬ್ಬರು ಲೇವಡಿ ಮಾಡಿದ್ದಾರೆ.

'ಭಗವಾನ್‌ ಶ್ರೀ ಕೃಷ್ಣ ಇಂಥ ವಿಶ್ವರೂಪವನ್ನು ಅರ್ಜುನನಿಗೆ ಮಾತ್ರವೇ ತೋರಿಸಿದ್ದ. ಅವರು ಬಿಟ್ಟರೆ ತೇಜ್‌ ಪ್ರತಾಪ್‌ಗೆ ಸರ್ವರೂಪದ ದರ್ಶನವಾಗಿದೆ. ಜೈ ಶ್ರೀಕೃಷ್ಣ' ಎಂದು ಬರೆದುಕೊಂಡಿದ್ದಾರೆ. 'ಇಂಥ ಒಬ್ಬ ವ್ಯಕ್ತಿ ಬಿಹಾರದ ರಾಜಕಾರಣದಲ್ಲಿ ಇರೋದು ಮಾತ್ರವಲ್ಲ ಸಚಿವ ಕೂಡ ಆಗಿದ್ದಾನೆ ಅನ್ನೋದು ನಮ್ಮ ದೌರ್ಭಾಗ್ಯ' ಎಂದು ಇನ್ನೊಬ್ಬರು ಬರೆದಿದ್ದಾರೆ.

ಲಾಲು ಪ್ರಸಾದ್‌ ಯಾದವ್‌ ಮಗನ ಕನಸಲ್ಲಿ ಬಂದ್ರಂತೆ ಮುಲಾಯಂ ಸಿಂಗ್‌ ಯಾದವ್‌, ಏನ್‌ ಹೇಳಿದ್ರಂತೆ?

ಇಂಥ ನಟನೆಗೆ ಆಸ್ಕರ್‌ಗಿಂತ ಕಡಿಮೆ ಅವಾರ್ಡ್‌ ನೀವು ಯಾವುದೇ ಕಾರಣಕ್ಕೂ ತೆಗೆದುಕೊಳ್ಳಬೇಡಿ..' ಎಂದು ಮುಕೇಶ್‌ ಜಿಂದಾಲ್‌ ಎನ್ನುವ ವ್ಯಕ್ತಿ ವ್ಯಂಗ್ಯ ಮಾಡಿದ್ದಾನೆ. 'ಕಲ್ಕಿಯ ಅವತಾರ ಈಗಾಗಲೇ ಆಗಿದೆ ಎಂದು ಭಗವಾನ್‌ ಶ್ರೀಕೃಷ್ಣ ತನ್ನ ಮಹಾರೂಪವನ್ನು ತೋರಿಸುವ ಮೂಲಕ ತೇಜ್‌ಪ್ರತಾಪ್‌ಗೆ ತಿಳಿಸಿದ್ದಾರೆ. ಈಗ ನಮ್ಮ ತೇಜು ಅಣ್ಣ ಅದನ್ನು ಖಚಿತ ಮಾಡಿದರೆ ನಾವೆಲ್ಲರೂ ಧನ್ಯರಾಗ್ತವೇ' ಎಂದು ಕಾಮೆಂಟ್‌ನಲ್ಲಿ ಬರೆಯಲಾಗಿದೆ.

Bihar Cabinet: ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದ ಲಾಲೂ ಪ್ರಸಾದ್‌ ಹಿರಿಯ ಪುತ್ರ ತೇಜ್‌ ಪ್ರತಾಪ್‌!

'ಇಲ್ಲಿಯವರೆಗೆ ಭೂಮಿಯ ಮೇಲೆ ಕೇವಲ 5 ಜನರು ಮಾತ್ರ ಶ್ರೀಕೃಷ್ಣನ ವಿಶ್ವರೂಪವನ್ನು ನೋಡಿದ್ದಾರೆ. ಅರ್ಜುನ, ಹನುಮಾನ್, ಬಾರ್ಬರಿಕ, ಸಂಜಯ ಮತ್ತು ವ್ಯಾಸ. ತೇಜು ಅಣ್ಣ 6ನೇ ಸ್ಥಾನ ಪಡೆದಿದ್ದಾರೆ. ಅಣ್ಣನಲ್ಲಿ ಏನಾದರೂ ದೈವಿಕತೆಯಿದೆ ಎಂದು ಯಾವಾಗಲೂ ತಿಳಿದಿತ್ತು. ಅವರು ನಿಜವಾದ ಹಿಂದೂ ಹೃದಯ ಸಾಮ್ರಾಟ್. ಅವರು 2024 ರಲ್ಲಿ ನಮ್ಮ ಪ್ರಧಾನಿಯಾಗುವುದನ್ನು ನೋಡುವ ಭರವಸೆ ಇದೆ' ಎಂದು  ದಿ ಸ್ಕಿನ್‌ ಡಾಕ್ಟರ್‌ ಹ್ಯಾಂಡಲ್‌ ಕಾಮೆಂಟ್‌ ಮಾಡಿದೆ. ಇನ್ನೂ ಕೆಲವರು 17 ಸಾವಿರದ ಟಿಶರ್ಟ್‌ ಧರಿಸಿದ ನಿಮಗೆ ಭಗವಾನ್‌ ಶ್ರೀಕೃಷ್ಣ ವಿಶ್ವರೂಪ ದರ್ಶನ ಮಾಡಿದ್ದನ್ನು ನಾವು ನಂಬಲೇಬೇಕು ಎಂದು ಇನ್ನೊಬ್ಬರು ಬರೆದಿದ್ದಾರೆ.
 

Latest Videos
Follow Us:
Download App:
  • android
  • ios