ಲಾಲು ಪ್ರಸಾದ್‌ ಯಾದವ್‌ ಮಗನ ಕನಸಲ್ಲಿ ಬಂದ್ರಂತೆ ಮುಲಾಯಂ ಸಿಂಗ್‌ ಯಾದವ್‌, ಏನ್‌ ಹೇಳಿದ್ರಂತೆ?

ಲಾಲೂ ಪ್ರಸಾದ್‌ ಯಾದವ್‌ ಅವರ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಅವರ ಕನಸಿನಲ್ಲಿ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಪ್ರಬಲ ನಾಯಕ ದಿವಂಗತ ಮುಲಾಯಂ ಸಿಂಗ್‌ ಯಾದವ್‌ ಬಂದಿದ್ದಾರೆ. ಕನಸಿನಲ್ಲಿ ಬಂದ ಮುಲಾಯಂ ಸಿಂಗ್‌ ಯಾದವ್‌ ಏನೆಲ್ಲಾ ಹೇಳಿದರು ಅನ್ನೋದನ್ನ ತೇಜ್‌ ಪ್ರತಾಪ್‌ ಯಾದವ್ ತಿಳಿಸಿದ್ದಾರೆ.
 

Lalu Prasad Yadav son Tej Pratap Yadav sees late Mulayam Singh Yadav in dream rides bicycle san

ನವದೆಹಲಿ (ಫೆ.23): ಬಿಹಾರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಆರ್‌ಜೆಡಿ ನಾಯಕ ಹಾಗೂ ಲಾಲೂ ಪ್ರಸಾದ್‌ ಯಾದವ್‌ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಬುಧವಾರ ಸೆಕ್ರೆಟರಿಯೇಟ್ ಕಚೇರಿಗೆ ಸೈಕಲ್ ಏರಿ ಬಂದು ಅಚ್ಚರಿ ಮೂಡಿಸಿದರು. ತೇಜ್‌ ಪ್ರತಾಪ್‌ ಯಾದವ್‌ ಸೈಕಲ್‌ನಲ್ಲಿ ಬಂದಿದ್ದಕ್ಕೆ ಕಾರಣವೂ ಇತ್ತು.  ಉತ್ತರ ಪ್ರದೇಶದ ಹಿರಿಯ ಸಮಾಜವಾದಿ ನಾಯಕ ದಿವಂಗತ ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ಕನಸಿನಲ್ಲಿ ಬಂದಿದ್ದರು. ನನ್ನ ರಾಜಕೀಯ ಜೀವನಕ್ಕೆ ಆಶೀರ್ವಾದವನ್ನೂ ನೀಡಿದ್ದರು. ಹಾಗಾಗಿ ಇಂದು ನಾನು ಸೈಕಲ್‌ನಲ್ಲಿ ಕಾರ್ಯಾಲಯಕ್ಕೆ ಬಂದಿದ್ದೇನೆ ಎಂದು ಹೇಳಿದರು. 'ನಾನು ವೃಂದಾವನಕ್ಕೆ ಹೋಗುತ್ತಿದ್ದ ಕನಸನ್ನು ಕಂಡೆ. ಅಲ್ಲಿ ನಾನು ನೇತಾಜಿ (ಮುಲಾಯಂ ಸಿಂಗ್‌ ಯಾದವ್‌) ಅವರನ್ನು ನೋಡಿದೆ. ಅದಾದ ಬಳಿಕ ನಾನು ಸೈಫೈ (ಮುಲಾಯಂ ಅವರ ಸ್ವಕ್ಷೇತ್ರ) ಪ್ರದೇಶಕ್ಕೂ ಹೋಗಿದ್ದೆ. ನಾನು ನಿಮ್ಮನ್ನು ನೋಡಬೇಕು, ನಿಮ್ಮ ಗ್ರಾಮವನ್ನು ನೋಡಬೇಕು ಎಂದು ಬಯಸಿದ್ದೆ ಎಂದು ಅವರಲ್ಲಿ ಹೇಳುತ್ತಿದ್ದೆ' ಎಂದು ತೇಜ್‌ ಪ್ರತಾಪ್‌ ಯಾದವ್‌ ತಾವು ಕನಸಿನಲ್ಲಿ ಕಂಡ ವಿಚಾರಗಳನ್ನು ತಿಳಿಸಿದ್ದಾರೆ. ಆ ಕಾರಣಕ್ಕಾಗಿಯೇ ನಾನು ಸೈಕಲ್‌ ಓಡಿಸಿದೆ. ನನ್ನ ಕಾರ್ಯಾಲಯಕ್ಕೆ ಸೈಕಲ್‌ ಏರಿಯೇ ಹೋಗನೇಕೆಂದು ತೀರ್ಮಾನ ಮಾಡಿದ್ದೆ. ಅರಣವ್ಯವನ್ನು ರಕ್ಷಿಸುವುದು ಮತ್ತು ನೇತಾಜಿ ಅವರ ಸಂದೇಶವನ್ನು ತಲುಪಿಸುವುದು ನನ್ನ ಉದ್ದೇಶವಾಗಿತ್ತು ಎಂದು ತೇಜ್‌ ಪ್ರತಾಪ್‌ ಯಾದವ್‌ ತಿಳಿಸಿದ್ದಾರೆ.


ಇಂದು ಮುಂಜಾನೆಯ ನಿದ್ರೆಯ ವೇಳೆ ನಾನು, ದಿವಂಗತ ಮುಲಾಯಂ ಸಿಂಗ್‌ ಯಾದವ್‌ ಅವರನ್ನು ಕನಸಿನಲ್ಲಿ ನೋಡಿದೆ. ಅವರನ್ನು ತಬ್ಬಿಕೊಂಡೆ. ತುಂಬಾ ಸಂತೋಷದಿಂದಲೇ ಅವರು ನನಗೆ ಆಶೀರ್ವಾದ ನೀಡಿದ್ದವು. ಅವರು ತೋರಿಸಿದ ಮಾರ್ಗದಲ್ಲಿ ಅವರ ಹೇಳಿಕೊಟ್ಟ ಹಾದಿಯಲ್ಲಿಯೇ ನಾನು ನನ್ನ ಜೀವನಪೂರ್ತಿ ಇರಲು ಪ್ರಯತ್ನಪಡುತ್ತೇನೆ. ಅದಕ್ಕಾಗಿಯೇ ಇಂದು ನಾನು ನನ್ನ ಕಾರ್ಯಾಲಯಕ್ಕೆ ಸೈಕಲ್‌ನಲ್ಲಿ ಬಂದಿದ್ದೇನೆ ಎಂದು ಬಿಹಾರ ಸರ್ಕಾರದ ಸಚಿವ ತಿಳಿಸಿದ್ದಾರೆ. ಸೈಕಲ್‌ ಸಮಾಜವಾದಿ ಪಕ್ಷದ ರಾಜಕೀಯ ಚಿಹ್ನೆಯಾಗಿದೆ ಎನ್ನುವುದನ್ನೂ ಇಲ್ಲಿ ಗಮನಿಸಬೇಕು.

ಮುಲಾಯಂಗೆ ಭಾರತ ರತ್ನ ನೀಡ್ಬೇಕಿತ್ತು, ಪದ್ಮವಿಭೂಷಣ ನೀಡಿ ಅವಮಾನ ಮಾಡಿದ್ದೀರಿ ಎಂದ ಎಸ್‌ಪಿ ನಾಯಕ!

ಇದಕ್ಕೂ ಮುನ್ನ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌, ರಾಜ್ಯದ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವ ವಿಚಾರದಲ್ಲಿ ಯಾವುದೇ ಆತುರವಿಲ್ಲ ಎಂದು ಹೇಳಿದ್ದಾರೆ. ಜೆಡಿಯು ನಾಯಕ ನಿತೀಶ್‌ ಕುಮಾರ್‌ ಅವರೇ ನಮ್ಮ ಮುಖ್ಯಮಂತ್ರಿ ಎಂದು ಆರ್‌ಜೆಡಿ ನಾಯಕ ತಿಳಿಸಿದ್ದಾರೆ.

Mulayam Singh Yadav: ಉಸಿರು ಚೆಲ್ಲಿದ ಪೈಲ್ವಾನನ ಇಂಟ್ರೆಸ್ಟಿಂಗ್ ಕಥೆ!

"ಅವರು ಏನು ತಪ್ಪು ಮಾಡಿದ್ದಾರೆ? ನಿಜಕ್ಕೂ ಅವರು (ನಿತೀಶ್) ತುಂಬಾ ಸಮರ್ಥರು. ಮತ್ತು ಅವರು ಹೆಚ್ಚು ಕಾಲ ಉಳಿಯುತ್ತಾರೆ. ಅವರ ಅನುಭವವು ಶ್ರೀಮಂತವಾಗಿರುತ್ತದೆ. ಮುಖ್ಯಮಂತ್ರಿಯನ್ನು ಬದಲಾಯಿಸಲು ಯಾವುದೇ ಆತುರವಿಲ್ಲ; ಎಂದಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಿಂದ ಜೆಡಿಯು ನಿರ್ಗಮಿಸಿತ್ತು. ಆ ಬಳಿಕ ಜೆಡಿಯು ಹಾಗೂ ಆರ್‌ಜೆಡಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದು, ಇದರಲ್ಲಿ ಮತ್ತೊಮ್ಮೆ ತೇಜಸ್ವಿ ಯಾದವ್‌ ಉಪಮುಖ್ಯಮಂತ್ರಿಯಾಗಿದ್ದಾರೆ.
 

Latest Videos
Follow Us:
Download App:
  • android
  • ios