Bihar Exit Polls ಬಿಹಾರ ಚುನಾವಣೆ ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಗೆ ಗೆಲುವು , ಬಹುತೇಕ ಎಜೆನ್ಸಿಗಳ ಎಕ್ಸಿಟ್ ಪೋಲ್ ಫಲಿತಾಂಶ ಬಹಿರಂಗವಾಗಿದ್ದು, ಎಲ್ಲಾ ಮತಗಟ್ಟೆ ಸಮೀಕ್ಷೆ ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದಿದೆ.

ನವದೆಹಲಿ (ನ.11) ಬಿಹಾರ ವಿಧಾನಸಭೆ ಚುನಾವಣೆ ಅಂತ್ಯಗೊಂಡಿದೆ. ಎರಡು ಹಂತದಲ್ಲಿ ನಡೆದ ಮತದಾನ ಇಂದು ಅಂತ್ಯಗೊಂಡಿದೆ. ಬಿಹಾರ ಚುನಾವಣೆ ದೇಶದ ಇತರ ಚುನಾವಣೆಗಳ ಮೇಲೂ ಪರಿಣಾಮ ಬೀರಲಿದೆ. ಕಾರಣ ಆಪರೇಶನ್ ಸಿಂದೂರ್ ನಡೆದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಹೀಗಾಗಿ ಇಡೀ ದೇಶವೇ ಕುತೂಹಲದಿಂದ ನೋಡುತ್ತಿದೆ. ಇದೀಗ ಬಹುತೇಕ ಮತಗಟ್ಟೆ ಸಮೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದೆ. ಎಲ್ಲಾ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎಗೆ ಬಹುಮತ ನೀಡಿದೆ.ಕಾಂಗ್ರೆಸ್, ಆರ್‌ಜೆಡಿ ಸೇರಿದಂತೆ ಇತರ ಪಕ್ಷಗಳ ಮಹಾಘಟನಬಂದನ್ ಮತ್ತೆ ಸೊರಗಿದೆ. ಆದರೆ ತೀವ್ರ ಹೋರಾಟದ ಹಾದಿ ಹಿಡಿದು ಬಂದ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷ ಗರಿಷ್ಠ 5 ಸ್ಥಾನ ನೀಡಿದ್ದರೆ, ಬಹುತೇಕ ಸಮೀಕ್ಷೆಗಳು ಶೂನ್ಯ ಸ್ಥಾನ ನೀಡಿದೆ.

ಮತಗಟ್ಟೆ ಸಮೀಕ್ಷೆಗಳು ಯಾವ ರೀತಿ ಸ್ಥಾನ ನೀಡಿದೆ. ಇಲ್ಲಿದೆ ಪ್ರಮುಖ ಮತಗಟ್ಟೆ ಸಮೀಕ್ಷೆಗಳ ಫಲಿತಾಂಶ

ಪೀಪಲ್ಸ್ ಫಲ್ಸ್ ಮತಗಟ್ಟೆ ಸಮೀಕ್ಷೆ

  • ಎನ್‌ಡಿಎ: 133-159
  • ಮಹಾಘಟನಬಂಧನ: 75-101
  • ಜೆಎಸ್‌ಪಿ: 0-5
  • ಇತರರು: 2-8

ಟೈಮ್ಸ್ ನೌ ಮತಗಟ್ಟೆ ಸಮೀಕ್ಷೆ

  • ಎನ್‌ಡಿಎ: 135-150
  • ಮಹಾಘಟನಬಂಧನ: 88-100
  • ಜೆಎಸ್‌ಪಿ: 0-01

ಮ್ಯಾಟ್ರಿಜ್ ಮತಗಟ್ಟೆ ಸಮೀಕ್ಷೆ

  • ಎನ್‌ಡಿಎ: 147-167
  • ಮಹಾಘಟನಬಂಧನ: 70-90
  • ಇತರರು: 0-02

ದೈನಿಕ್ ಭಾಸ್ಕರ್ ಮತಗಟ್ಟೆ ಸೆಮೀಕ್ಷೆ

  • ಎನ್‌ಡಿಎ: 145-160
  • ಮಹಾಘಟನಬಂಧನ: 73-91
  • ಜೆಎಸ್‌ಪಿ: 0-03
  • ಇತರರು: 5-7

ಪೀಪಲ್ಸ್ ಇನ್‌ಸೈಟ್ ಮತಗಟ್ಟೆ ಸೆಮೀಕ್ಷೆ

  • ಎನ್‌ಡಿಎ:133-148
  • 87-102
  • ಜೆಎಸ್‌ಪಿ:0-2
  • ಇತರರು:3-6

ಪೋಲ್ ಆಫ್ ಫೋಲ್

  • ಎನ್‌ಡಿಎ: 138-155
  • ಮಹಾಘಟನಬಂಧನ: 82-98
  • ಇತರರು: 0-02

ಬಿಹಾರ ಚುನಾವಣೆ ತೀವ್ರ ಕುತೂಹಲ ಕೆರಳಿಸಿದ ಚುನಾವಣೆಯಾಗಿದೆ. ಬಿಹಾರದ ಬೆನ್ನಲ್ಲೇ ಕೆಲ ರಾಜ್ಯಗಳ ಚುನಾವಣೆ ನಡೆಯಲಿದೆ. ಹೀಗಾಗಿ ಬಿಹಾರ ಚುನಾವಣೆ ಫಲಿತಾಂಶ ಇತರ ರಾಜ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಬಿಹಾರದ 242 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಸರ್ಕಾರ ರಚಿಸಲು 122 ಸ್ಥಾನದ ಅವಶ್ಯತೆ ಇದೆ. ಎನ್‌ಡಿಎ ಹಾಗೂ ಜೆಡಿಯು ತಲಾ 101 ಸ್ಥಾನಗಳಿಗೆ ಸ್ಪರ್ಧಿಸಿತ್ತು.