Bihar Viral Video : ಬಿಹಾರದಲ್ಲಿ ವಿಧಾಸಭೆ ಚುನಾವಣೆ ಬರೀ ರಾಜಕೀಯ ಪಕ್ಷದಲ್ಲಿ ಕಾವು ಏರಿಸಿಲ್ಲ. ಸಂಸಾರದಲ್ಲೂ ಗಲಾಟೆ ಶುರು ಮಾಡಿದೆ. ವೋಟಿನ ವಿಚಾರಕ್ಕೆ ದಂಪತಿ ಬಡಿದಾಡಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ. 

ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಇಲ್ಲಿ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿದೆ. ರಾಜಕೀಯ ಪಕ್ಷವನ್ನು ಆಯ್ಕೆ ಮಾಡ್ಕೊಳ್ಳುವ, ತಮ್ಮಿಷ್ಟದ ಅಭ್ಯರ್ಥಿಗೆ ಮತ ಹಾಕುವ ಹಕ್ಕನ್ನು ಭಾರತದ ಪ್ರತಿಯೊಬ್ಬ ವ್ಯಕ್ತಿ ಪಡೆದಿದ್ದಾನೆ. ಹಿಂದೆ ಅನೇಕ ಕುಟುಂಬದಲ್ಲಿ ಯಜಮಾನನ ಮಾತೇ ವೇದವಾಕ್ಯವಾಗಿತ್ತು. ಯಜಮಾನ ಹೇಳಿದ ಪಕ್ಷಕ್ಕೆ ಇಡೀ ಮನೆ ಬದ್ಧವಾಗಿರುತ್ತಿತ್ತು. ಚುನಾವಣೆ ದಿನ, ವೃದ್ಧರು, ಮನೆಯ ಹಿರಿಯರು, ಪತ್ನಿ – ಮಕ್ಕಳಿಗೆ ಯಜಮಾನ ಯಾರಿಗೆ ಮತ ನೀಡ್ಬೇಕು ಎಂಬುದನ್ನು ಸೂಚಿಸುತ್ತಿದ್ದ. ಅವನ ಮಾತಿಗೆ ಎದುರಾಡದೆ ಕುಟುಂಬಸ್ಥರು ಮತ ಹಾಕ್ತಿದ್ದರು. ಆದ್ರೆ ಅಲ್ಲಿಯೂ ಕೆಲ ಕುಟುಂಬಗಳು ರಾಜಕೀಯ ವಿಷ್ಯಕ್ಕೆ ಬೇರೆಯಾಗಿದ್ದಿದೆ, ದೂರವಾಗಿದ್ದಿದೆ. ಅಣ್ಣ ಒಂದು ಪಕ್ಷವಾದ್ರೆ ತಮ್ಮ ಇನ್ನೊಂದು ಪಕ್ಷ. ಪತಿ ಹಾಗೂ ಪತ್ನಿ ಮಧ್ಯೆಯೂ ಈ ಪಕ್ಷದ ಗಲಾಟೆ ಹಿಂದಿನಿಂದ ನಡೆದುಕೊಂಡು ಬಂದಿದೆ. ಈಗ ಇಂಥಹದ್ದೇ ಮತ್ತೊಂದು ಗಲಾಟೆ ವಿಡಿಯೋ ವೈರಲ್ ಆಗಿದೆ. ಪತ್ನಿ ಹಾಗೂ ಪತಿ ಬೇರೆ ಬೇರೆ ಪಕ್ಷಕ್ಕೆ ವೋಟ್ ಹಾಕಿದ್ದಲ್ಲದೆ ಕೈ ಕೈ ಮಿಲಾಯಿಸಿದ್ದಾರೆ.

ಪತಿ – ಪತ್ನಿ ಜಗಳಕ್ಕೆ ಕಾರಣವಾಯ್ತು ಚುನಾವಣೆ :

ಘಟನೆ ಬಿಹಾರದಲ್ಲಿ ನಡೆದಿದೆ. ಸದ್ಯ ಬಿಹಾರದಲ್ಲಿ ವಿಧಾನಸಭೆ ಚುನಾವಣೆ (Bihar Assembly Election) ಕಣ ರಂಗೇರಿದೆ. ಪ್ರಚಾರದ ಅಬ್ಬರ ಮುಗಿದಿದ್ದು, ಮತದಾನ ನಡೆಯುತ್ತಿದೆ. ರಾಜ್ಯದ ಚುಕ್ಕಾಣಿ ಯಾರ ಕೈಗೆ ಸೇರಲಿದೆ ಎನ್ನುವ ಗಂಭೀರ ಚರ್ಚೆ ಮನೆ ಮನೆಯಲ್ಲಿ ನಡೆಯುತ್ತಿದೆ. ಆದ್ರೆ ಇಲ್ಲೊಬ್ಬ ದಂಪತಿ ಮಾತ್ರ ಚರ್ಚೆ ನಡೆಸದೆ ಬಡಿದಾಡಿಕೊಂಡಿದ್ದಾರೆ. ಮತದಾನ ಮಾಡಿ ಮನೆಗೆ ಬಂದ ದಂಪತಿ, ಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಪತಿ ಹಾಗು ಪತ್ನಿ ಯಾರಿಗೆ ಮತ ಹಾಕಿದ್ದೇವೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. ಪತಿ, ತಾನು ಆರ್ ಜೆಡಿಗೆ ಮತ ಹಾಕಿರೋದಾಗಿ ಹೇಳಿದ್ದಾನೆ. ಪತ್ನಿ, ಬಿಜೆಪಿಗೆ ಮತ ಹಾಕಿರೋದಾಗಿ ಹೇಳಿದ್ದಾಳೆ. 

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'Amruthavarshini' ನಟಿ ರಜಿನಿಯ ರೊಮಾಂಟಿಕ್​ ವಿಡಿಯೋ ವೈರಲ್​

ಪತ್ನಿ ಬಾಯಿಂದ ಬಿಜೆಪಿ ಹೆಸರು ಕೇಳ್ತಿದ್ದಂತೆ ಪತಿ ಕೋಪ ನೆತ್ತಿಗೇರಿದೆ. ಹೆಂಡ್ತಿಗೆ ಹೊಡೆದಿದ್ದಾನೆ. ಪತ್ನಿ ಕೂಡ ಜಗಳಕ್ಕೆ ಇಳಿದಿದ್ದಾಳೆ. ಮನೆಯಲ್ಲಿ ಶುರುವಾದ ರಂಪ ಬೀದಿಗೆ ಬಂದಿದೆ. ಬೀದಿಯಲ್ಲಿ ಎಲ್ಲರ ಮುಂದೆ ಪತಿ, ಪತ್ನಿಗೆ ಹೊಡೆದಿದ್ದಾನೆ. ಮಧ್ಯ ಪ್ರವೇಶ ಮಾಡಿದ ಸ್ಥಳೀಯರು ಇಬ್ಬರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

ಸಿಹಿ ಕಹಿ ಚಂದ್ರು-ಗೀತಾ ದಾಂಪತ್ಯಕ್ಕೆ 35 ವಸಂತಗಳ ಸಂಭ್ರಮ: ಖುಷಿ ಹಂಚಿಕೊಂಡ ಜೋಡಿ!

ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ಇದ್ರ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ ಪತಿ, ಪತ್ನಿಗೆ ಹೊಡೆಯುತ್ತಿರೋದನ್ನು ನೀವು ನೋಡ್ಬಹುದು. ವಿಡಿಯೋವನ್ನು ಸಾವಿರಕ್ಕೂ ಹೆಚ್ಚು ಬಾರಿ ನೋಡಲಾಗಿದೆ. ನೂರಾರು ಮಂದಿ ಕಮೆಂಟ್ ಮಾಡಿದ್ದಾರೆ. ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಮನೆ ರಿಸಲ್ಟ್ ಹೊರ ಬಿದ್ದಿದೆ ಅಂತ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಮದುವೆಗೆ ಮುನ್ನ ರಾಜಕೀಯದ ಬಗ್ಗೆ ಮಾತನಾಡುವ ಅಗತ್ಯವಿದೆ. ಪತಿ – ಪತ್ನಿಯಾಗುವವರು ರಾಜಕೀಯದ ಬಗ್ಗೆ ಮೊದಲೇ ತಮ್ಮ ಅಭಿಪ್ರಾಯ, ಪಾರ್ಟಿಗಳ ಬಗ್ಗೆ ಮಾತನಾಡ್ಕೊಂಡ್ರೆ ಇಂಥ ಘಟನೆ ನಡೆಯೋದಿಲ್ಲ ಅಂತ ಕೆಲವರು ಹೇಳಿದ್ದಾರೆ. ಮದುವೆಗಿಂತ ರಾಜಕೀಯ ಪಕ್ಷಗಳು ದಂಪತಿಗೆ ಮುಖ್ಯವಾಯ್ತು, ಬಿಜೆಪಿಗೆ ಮತ ನೀಡಿ, ಆರ್ ಜೆಡಿ ಸ್ಟೈಲ್ ನಲ್ಲಿ ಏಟು ತಿಂದಿದ್ದಾಳೆ ಪತ್ನಿ ಅಂತ ಕಮೆಂಟ್ ಮಾಡಿದ್ದಾರೆ ಜನರು. ಗಂಡನ ಮುಂದೆ ಸುಳ್ಳು ಹೇಳಿದ್ರೆ ಏಟು ಬೀಳ್ತಿರಲಿಲ್ಲ, ಆರ್ ಜೆಡಿ ಏನು ಮಾಡುತ್ತೆ ಅನ್ನೋದಕ್ಕೆ ಇದೊಂದು ಉದಾಹರಣೆ, ಈಗಿನ ಮಾಡರ್ನ್ ಹುಡುಗಿಯರು ಪತಿಪರಮೇಶ್ವರನ ವಿರುದ್ಧ ಹೋಗಿ, ಸಂಸ್ಕೃತಿಗೆ ಅಡ್ಡಿಯಾಗ್ತಿದ್ದಾರೆ ಎಂಬೆಲ್ಲ ಕಮೆಂಟ್ ಗಳು ಬಂದಿವೆ.

Scroll to load tweet…